30/08/2026
🌺 ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ 🌺
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥ 🙏
ಪವಿತ್ರ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ವಿ.ವಿ.ಪುರಂ ಹಾಗೂ ಗಾಂಧಿಬಜಾರ್‌ನಲ್ಲಿರುವ ಶ್ರೀ ವ್ಯಾಸರಾಜ ಮಠಕ್ಕೆ ಭೇಟಿ ನೀಡಿ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು, ಪೂಜೆ ಹಾಗೂ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದದ್ದು ಅತ್ಯಂತ ಪುಣ್ಯಕರ ಹಾಗೂ ಆಧ್ಯಾತ್ಮಿಕ ಅನುಭವವಾಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪಾಕಟಾಕ್ಷವು ಎಲ್ಲರ ಮೇಲೂ ಸದಾ ಇರಲಿ. ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶ್ರೀ ಗುರು ರಾಘವೇಂದ್ರಾಯ ನಮಃ! 🙏
🌺Sri Raghavendra Swamy Aradhana Mahotsava 🌺
Pujyaya Raghavendraya Satyadharma Rataya Cha |
Bhajatam Kalpavrukshaya Namatam Kamadhenave || 🙏
On the auspicious occasion of the sacred Sri Raghavendra Swamy Aradhana Mahotsava, I had the divine opportunity to visit Sri Vyasa Raja Mutt at V.V. Puram and Gandhi Bazaar, seek the sacred darshan and blessings of Sri Guru Raghavendra Swamy, and participate in the pooja and Aradhana Mahotsava. It was a deeply blessed and spiritually fulfilling experience.
May the divine grace and blessings of Sri Raghavendra Swamy always be upon everyone. I pray that He blesses the people of our state with happiness, peace, good health and prosperity.
Sri Gururaghavendraya Namaha! 🙏