22/01/2026
🔬📚 ವಿಜ್ಞಾನ ಸಾಹಿತ್ಯ & ಸಂವಹನ ಶಿಬಿರ | ಉದ್ಘಾಟನೆ ಮತ್ತು ಗೋಷ್ಠಿಗಳು
• ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ ಆಯೋಜಿಸಲಾದ ವಿಜ್ಞಾನ ಸಾಹಿತ್ಯ ಮತ್ತು ಸಂವಹನ ಶಿಬಿರವು ಅರ್ಥಪೂರ್ಣ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಯಿತು.
ಶಿಬಿರದಲ್ಲಿ ಡಾ. ಆನಂದ್ ಆರ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸ್ವಾಗತಿಸಿದರು, ಪ್ರೊ. ರಾಜಾಸಾಬ್ ಎ.ಎಚ್. ಅಧ್ಯಕ್ಷರು, ಕವಿತಂಅ, ಮುಖ್ಯ ಅತಿಥಿಗಳಾದ ಶ್ರೀ ಎಲ್. ಎನ್. ಮುಕುಂದರಾಜ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್, ಕಾರ್ಯಾಗಾರದ ನಿರ್ದೇಶಕರಾದ ಡಾ. ವಸುಂಧರಾ ಭೂಪತಿ ಇವರು ಪುಸ್ತಕ ಬಿಡುಗಡೆ ಮೂಲಕ ಉದ್ಘಾಟಿಸಿ ವಿಜ್ಞಾನವನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಾಹಿತ್ಯದ ಪಾತ್ರವನ್ನು ವಿವರಿಸಿದರು. ಕಾರ್ಯಾಗಾರದಲ್ಲಿ ಗಣ್ಯರು ವಿಜ್ಞಾನ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಯ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಮಾ ಸತೀಶ್, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಂಚಾಲಕರು ನೆರವೇರಿಸಿದರು. ಅಕಾಡೆಮಿಯ ಶ್ರೀ ಉಮೇಶ ಘಾಟಗೆ, ವೈಜ್ಞಾನಿಕಾಧಿಕಾರಿ ವಂದನಾರ್ಪಣೆಯನ್ನು ಸಲ್ಲಿಸಿದರು.
ಅನಂತರ ನಡೆದ ಗೋಷ್ಠಿಗಳಲ್ಲಿ ವಿಜ್ಞಾನ–ಸಾಹಿತ್ಯದ ವಿವಿಧ ಆಯಾಮಗಳು ಆಳವಾಗಿ ಚರ್ಚಿಸಲ್ಪಟ್ಟವು:
🔹 ಗೋಷ್ಠಿ – 1: ಕನ್ನಡದಲ್ಲಿ ವಿಜ್ಞಾನ ಸಂವಹನೆ – ಇಂದಿನ ಸವಾಲುಗಳು 🎤 ಡಾ. ಗುರುರಾಜ ಎಸ್. ದಾವಣಗೆರೆ
🔹 ಗೋಷ್ಠಿ – 2: ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ 🎤 ಡಾ. ಎಂ. ಎಸ್. ಆಶಾದೇವಿ
🔹 ಗೋಷ್ಠಿ – 3: ವೈಜ್ಞಾನಿಕ ಕಥನ ಕೌತುಕ 🎤 ಡಾ. ಕೆ. ಎನ್. ಗಣೇಶಯ್ಯ
🔹 ಗೋಷ್ಠಿ – 4: ವಿಜ್ಞಾನ ಮತ್ತು ಸಾಹಿತ್ಯ 🎤 ಶ್ರೀಮತಿ ನೇಮಿಚಂದ್ರ
ಗೋಷ್ಠಿಗಳ ಮಧ್ಯೆ ನಡೆದ ಭೋಜನ ಹಾಗೂ ಟೀ/ಕಾಫಿ ವಿರಾಮಗಳು ಭಾಗವಹಿಸಿದವರ ನಡುವೆ ಸಂವಾದ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿದ್ದವು.
ಶಿಬಿರವು ವಿಜ್ಞಾನವನ್ನು ಕನ್ನಡ ಸಾಹಿತ್ಯದ ಮೂಲಕ ಸಮಾಜದೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವ ದಿಶೆಯಲ್ಲಿ ಮಹತ್ವದ ಪ್ರಯತ್ನವಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು 🙏💐
Karnataka Science and Technology Academy Ksta GoK ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
#ವಿಜ್ಞಾನಸಂವಹನೆ #ವಿಜ್ಞಾನಸಾಹಿತ್ಯ #ಕರ್ನಾಟಕಸಾಹಿತ್ಯಅಕಾಡೆಮಿ #ಕರ್ನಾಟಕವಿಜ್ಞಾನಮತ್ತುತಂತ್ರಜ್ಞಾನಅಕಾಡೆಮಿ