05/05/2026
👉🏽ಹೇಳಿಕೆ: ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು
ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆಗಳು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ, ಒಂದರ ಹಿಂದೆ ಮತ್ತೊಂದು ಆಘಾತಕಾರಿ ಫಲಿತಾಂಶಗಳನ್ನು ನೀಡಿವೆ. ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತಮಿಳುನಾಡು ಚಲನಚಿತ್ರತಾರೆ ಜೋಸೆಫ್ ವಿಜಯ್ ಚಂದ್ರಶೇಖರ್ ನೇತೃತ್ವದಲ್ಲಿ ಹೊಸ ಪಕ್ಷವಾದ ಟಿವಿಕೆ ಉದಯಗೊಂಡಿದ್ದು, ಕಳೆದ ಆರು ದಶಕಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯ ಪರ್ಯಾಯ ರಾಜಕೀಯ ಪ್ರಾಬಲ್ಯವನ್ನು ಕೊನೆಗೊಳಿಸಿದೆ.
ಪಶ್ಚಿಮ ಬಂಗಾಳದಲ್ಲಿ 90 ಲಕ್ಷಗಿಂತಲೂ ಹೆಚ್ಚು ಮತ್ತು ತಮಿಳುನಾಡಿನಲ್ಲಿ 70 ಲಕ್ಷಗಿಂತಲೂ ಹೆಚ್ಚು ಮತದಾರರನ್ನು ಸಾಮೂಹಿಕವಾಗಿ ಹೊರಗಿಟ್ಟ ನಂತರ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳ ಅತ್ಯಂತ ವಿಚಿತ್ರವಾದ ಪುನರ್ವಿಂಗಡಣೆಯ (delimitation) ನಂತರ ಫಲಿತಾಂಶಗಳು ಬಂದಿರುವುದನ್ನು ನಾವು ಗಮನಿಸಬೇಕು. ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ 'ತಾರ್ಕಿಕ ವ್ಯತ್ಯಾಸ'ದ (logical discrepancy) ಹೆಸರಿನಲ್ಲಿ ಹೆಚ್ಚುವರಿ ಫಿಲ್ಟರ್‌ಗಳನ್ನು ಸೇರಿಸಲಾಯಿತು ಮತ್ತು 30 ಲಕ್ಷ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಯಿತು. ಈ ಮತದಾರರ ಹೊರದಬ್ಬುವಿಕೆಯ ಜೊತೆಗೆ, ಕೇಂದ್ರ ಸರ್ಕಾರವು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾರೀ ಮಾತ್ರದ ಹಸ್ತಕ್ಷೇಪ ಮತ್ತು ಅಭೂತಪೂರ್ವ ಅರೆಸೈನಿಕ ಪಡೆಗಳ ನಿಯೋಜನೆಯ ಸಂದರ್ಭದಲ್ಲಿ ನಡೆಸಲಾಗಿದೆ.
ಲೆಕ್ಕಾಚಾರ ಭರಿತ ಈ ಚುನಾವಣೆಯಲ್ಲಿ ಬಾಂಗ್ಲಾದೇಶದ "ನುಸುಳುಕೋರರ" ನೆಪವನ್ನು ಬಳಸಿಕೊಂಡು ಮತದಾರರಲ್ಲಿ ಕೋಮು ದ್ವೇಷ ಪ್ರೇರಿತ ಪ್ರಚಾರ ಮತ್ತು ಇತರ ಇಸ್ಲಾಮೋಫೋಬಿಕ್ ಮಿತ್ಯಗಳನ್ನು ಟಿಎಂಸಿಯ ದುರಾಡಳಿತದ ವಿರುದ್ಧ ಜನರನ್ನು ಕ್ರೋಢೀಕರಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅನಿರೀಕ್ಷಿತ ವಿಜಯಕ್ಕೆ ಕಾರಣವಾಗಿದೆ.
ಫಲಿತಾಂಶದಿಂದ ಹುರಿದುಂಬಿದ ಬಿಜೆಪಿಯು ಅಧಿಕಾರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಮತ್ತು ಕೇಂದ್ರೀಕರಿಸಲು, ಮತದಾನದ ಹಕ್ಕನ್ನು ಕಳೆದುಕೊಳ್ಳುವುದು ಮತ್ತು ಜನಾಂಗೀಯ ಹಿಂಸಾಚಾರವನ್ನು ಹೆಚ್ಚಿಸಿ, ಜನರ ಪ್ರತಿರೋಧವನ್ನು ಹತ್ತಿಕ್ಕಲು ರಾಜಕೀಯ ದಮನವನ್ನು ಹೆಚ್ಚಿಸುತ್ತಾ ತನ್ನ ದುಷ್ಟ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಎಡ ಮತ್ತು ಪ್ರಗತಿಪರ ಶಕ್ತಿಗಳು ಒಗ್ಗಟ್ಟಿನಿಂದ ಈ ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲು ಜನರೊಂದಿಗೆ ನಿಲ್ಲಬೇಕು.
ಸಿಪಿಐ(ಎಂಎಲ್) ಲಿಬರೇಶನ್