02/09/2026
1."‘ಜಯನಗರ ಕಾಂಪ್ಲೆಕ್ಸ್’ ಅನ್ನೋದು ನಮ್ಮ ಭಾವನೆ, ನಿಮ್ಮ ಚುನಾವಣಾ ಪ್ರಣಾಳಿಕೆ ಅಲ್ಲ! ೧೨ ವರ್ಷದಿಂದ ನಮಗೆ ನೀಡ್ತಿರೋದು ಬರೀ ಸುಳ್ಳು ಭರವಸೆಗಳ ‘ಹಾಲು-ಜೇನು’. ಎಲ್ಲಿ ಹೋಯ್ತು ಹೊಸ ಪುಟ್ಟಣ್ಣ ಥಿಯೇಟರ್?"
2."ಮಕ್ಳ ಮದುವೆ ಮಾಡ್ಬಹುದು, ಆದ್ರೆ ನಿಮ್ಮ ಕಾಂಪ್ಲೆಕ್ಸ್ ಕಟ್ಟಡ ಮುಗಿಯಲ್ಲ! 1970ರ ದಶಕದ ನಮ್ಮ ಹೆಮ್ಮೆಯನ್ನ ಮಣ್ಣು ಪಾಲು ಮಾಡಿದ್ರಿ. ಈಗ ಬರೀ ಕಂಬ ನಿಲ್ಲಿಸಿ, ನಮಗೆ ಮೂಗಿಗೆ ತುಪ್ಪ ಸವರುತ್ತಿದ್ದೀರಾ?"
3. "12 ವರ್ಷ ಅಂದ್ರೆ ಒಂದು ‘ಯುಗ’ ಆಗೋಯ್ತು. ಕಾಂಪ್ಲೆಕ್ಸ್ ಮುಚ್ಚಿದಾಗಿದ್ದ ಮಗು ಈಗ ಎಸ್.ಎಸ್.ಎಲ್.ಸಿ ಪಾಸಾಗಿದೆ. ಆದ್ರೆ ನಿಮ್ಮ ಸರಕಾರದ ‘ಕೆಲಸ ಪ್ರಗತಿಯಲ್ಲಿದೆ’ ಬೋರ್ಡ್ ಮಾತ್ರ ಹಾಗೇ ಇದೆ."
4. "ನಮ್ಮ ಜಯನಗರದ ಇತಿಹಾಸನ ಕಟೌಟ್ ಮಾಡಿಟ್ಟಿದ್ದೀರಾ ಅಷ್ಟೇ. ‘ಹೊಸ ಪುಟ್ಟಣ್ಣ ಥಿಯೇಟರ್’ ಅಂತ ಹೆಸ್ರು ಮಾತ್ರ, ಒಳಗಡೆ ಬರೀ ಇಲಿಗಳ ಸಂಸಾರ. ಇದು ನಮ್ಮ ಹೆಮ್ಮೆಯಾ ಅಥವಾ ನಿಮ್ಮ ನಾಚಿಕೆಗೇಡಿತನವಾ?"
5. "ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದು ಯಾವ ‘ಮಹಲ್’ ಕಟ್ತಿದ್ದೀರಾ? ನೂರಾರು ಕುಟುಂಬಗಳ ಜೀವನ ಬೀದಿಗೆ ಬಿಟ್ಟು, ಸರಕಾರ ಬರೀ ಕಡತಗಳಲ್ಲಿ ಕಾಂಪ್ಲೆಕ್ಸ್ ಕಟ್ಟುತ್ತಿದೆ. ನಮಗೆ ಕಟ್ಟಡ ಬೇಕು, ನಿಮ್ಮ ಕಮಿಷನ್ ಅಲ್ಲ." 6. ‘ಪುಟ್ಟಣ್ಣ ಥಿಯೇಟರ್’ ಅಂದ್ರೆ ಕನ್ನಡ ಚಿತ್ರರಂಗದ ದೇವಾಲಯ. ಆ ದೇವಾಲಯನ ಕೆಡವಿ, 12 ವರ್ಷದಿಂದ ನಮಗೆ ಬರೀ ‘ಶೂನ್ಯ’ ತೋರಿಸಿದ್ದೀರಾ. ಸರಕಾರಕ್ಕೆ ಕನ್ನಡದ ಬಗ್ಗೆ ನಿಜವಾಗಲೂ ಗೌರವ ಇದೆಯಾ?"