BMTC

BMTC The Official Page of Bangalore Metropolitan Transport Corporation (BMTC)

16/08/2026

ಮಾಗಡಿಗೆ ನೂತನ ವೇಗದೂತ (Express) ಬಸ್ ಸೇವೆಗಳಿಗೆ ಚಾಲನೆ

ಮಾಗಡಿ, ಆಗಸ್ಟ್ 16: ಪ್ರಯಾಣಿಕರ ಅನುಕೂಲತೆ ಹಾಗೂ ಗುಣಮಟ್ಟದ ಸಾರ್ವಜನಿಕ ಸಾರಿಗೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಮಾಗಡಿಗೆ ನೂತನ ವೇಗದೂತ (Express) ಬಸ್ ಸೇವೆಗಳಿಗೆ ಇಂದು ಚಾಲನೆ ನೀಡಲಾಯಿತು.

ಮಾನ್ಯ ಪೌರಾಡಳಿತ ಸಚಿವರಾದ ಶ್ರೀ ಹೆಚ್.ಸಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಾಗಡಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಚಿವರಾದ ಶ್ರೀ ಹೆಚ್.ಸಿ. ಬಾಲಕೃಷ್ಣ ಅವರು, ಮಾಗಡಿಯಲ್ಲಿ ಬಿಎಂಟಿಸಿಗೆ ಸುಮಾರು 4 ಎಕರೆ ಜಾಗವನ್ನು ಒದಗಿಸಿಕೊಡಲಾಗುವುದು. ಆದಷ್ಟು ಬೇಗ ಮಾಗಡಿಯಲ್ಲಿ ಬಿಎಂಟಿಸಿ ಘಟಕವನ್ನು ಸ್ಥಾಪಿಸಿ, ಮಾಗಡಿ–ಬೆಂಗಳೂರು ಮಾರ್ಗಕ್ಕೆ ಮಾತ್ರ ಸೀಮಿತವಾಗದೆ, ಮಾಗಡಿಯಿಂದ ರಾಮನಗರ, ನೆಲಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಿಕೇತ್ ರಾಜ್.ಎಂ., ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶ್ರೀ ಚಂದ್�

16/08/2026
15/08/2026

🇮🇳 Glimpses of the 80th Independence Day Celebrations at BMTC Central Office 🇮🇳

A proud celebration marked by flag hoisting and honouring BMTC Ex-Servicemen on duty, distribution of Vidya Sahaya Nidhi scholarships to meritorious children of employees, and presentation of Good Service Appreciation Certificates.

A heartfelt celebration of patriotism, service and excellence at BMTC. 🇮🇳🚌✨

14/08/2026

ದಿನಾಂಕ 14.08.2026 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಕರಾರಸಾನಿಗಮ ಮತ್ತು ಬೆಂ.ಮ.ಸಾ.ಸಂಸ್ಥೆ ವತಿಯಿಂದ ಸೇವೆಯಲ್ಲಿರುವಾಗ ಅಪಘಾತ ಹಾಗೂ ಸಹಜ ಮರಣ ಹೊಂದಿದ ಸಿಬ್ಬಂದಿಗಳ ಅವಲಂಭಿತರಿಗೆ ಗುಂಪು ವಿಮಾ ಯೋಜನೆ ಹಾಗೂ ಕಾರ್ಪೊರೇಟ್ ಸ್ಯಾಲರಿ ಪ್ಯಾಕೇಜ್‌ ವಿಮಾ ಚೆಕ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಬಿ ಎಸ್ ಸುರೇಶ್ (ಭೈರತಿ) ಸಾರಿಗೆ ಸಚಿವ ರವರು ಮೃತ ಅವಲಂಬಿತರಿಗೆ ಚಿಕ್ ವಿತರಣೆ ಮಾಡಿದರು.

BMTC TENDER ALERT.
05/08/2026

BMTC TENDER ALERT.

01/08/2026

ನಿವೃತ್ತಿ ಸನ್ಮಾನ ಸಮಾರಂಭ

ಇಂದು ನಡೆದ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ **ಶ್ರೀ ವಿ. ಎಸ್. ಆರಾಧ್ಯ** ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇಲಾಖಾ ಮುಖ್ಯಸ್ಥರು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಅಧಿಕಾರಿಗಳು, ನಿವೃತ್ತ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಗೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರನ್ನು ಆತ್ಮೀಯವಾಗಿ ಸನ್ಮಾನಿಸಿ, ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು. ಅವರ ನಿವೃತ್ತ ಜೀವನವು ಸುಖ, ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲೆಂದು ಹಾರೈಸಲಾಯಿತು.

ನಮ್ಮ ಸಂಸ್ಥೆಯ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ ಎಲ್ಲಾ ನಿವೃತ್ತ ನೌಕರರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಗೌರವಪೂರ್ವಕ ಶುಭಾಶಯಗಳು.

26/07/2026

Address

BMTC Shanthinagar
Bangalore
560027

Alerts

Be the first to know and let us send you an email when BMTC posts news and promotions. Your email address will not be used for any other purpose, and you can unsubscribe at any time.

Contact The Organization

Send a message to BMTC:

Shortcuts

Share