Dr G Manjunath Gowda

Dr G Manjunath Gowda Contact information, map and directions, contact form, opening hours, services, ratings, photos, videos and announcements from Dr G Manjunath Gowda, Social service, Mahalakshmi layout, Bangalore.
(1)

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು,ಮಹಾಲಕ್ಷ್ಮೀ ಲೇಔಟ್ ಮಂಡಲlಸೆನೆಟ್‌ ಸದಸ್ಯರು, ಆರ್‌ಜಿಯುಎಚ್‌ಎಸ್ | ರಾಷ್ಟ್ರವಾದಿ | ಸಾರ್ವಜನಿಕ ಸೇವೆಗೆ ಸದಾ ಬದ್ಧರು | ವೈದ್ಯರು |

BJP Yuva Morcha President, Mahalakshmi Layout Mandala |Senate Member, RGUHS Nationalist | Doctor |

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತಿಭಾವದಿಂದ ಶ್ರೀ ಗಣೇಶನಿಗೆ ಪೂಜೆ...
17/09/2026

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತಿಭಾವದಿಂದ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ, ಭಕ್ತರು ಹಾಗೂ ಸಾರ್ವಜನಿಕರೊಂದಿಗೆ ಸಂಭ್ರಮ ಹಂಚಿಕೊಂಡೆ.

ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ. ಕ್ಷೇತ್ರದ ಪ್ರತಿಯೊಂದು ಮನೆ-ಮನದಲ್ಲೂ ಸಂತೋಷ ಮತ್ತು ಸೌಹಾರ್ದತೆ ಸದಾ ನೆಲೆಸಲಿ ಎಂದು ಪ್ರಾರ್ಥಿಸಿದೆ.

#ಗಣೇಶೋತ್ಸವ2026 BJP Karnataka K Gopalaiah

ಮಹಾಲಕ್ಷ್ಮೀ ಲೇಔಟ್‌ನ ನಂದಿನಿ ಬಡಾವಣೆಯಲ್ಲಿ ನಿನ್ನೆ  ಆಯೋಜಿಸಿದ್ದ 3ನೇ ವರ್ಷದ ಸಾಮೂಹಿಕ ಹಿಂದೂ ಮಹಾಗಣಪತಿ ಗಣೇಶೋತ್ಸವದ ಉದ್ಘಾಟನಾ ಹಾಗೂ ಪೂಜಾ ...
17/09/2026

ಮಹಾಲಕ್ಷ್ಮೀ ಲೇಔಟ್‌ನ ನಂದಿನಿ ಬಡಾವಣೆಯಲ್ಲಿ ನಿನ್ನೆ ಆಯೋಜಿಸಿದ್ದ 3ನೇ ವರ್ಷದ ಸಾಮೂಹಿಕ ಹಿಂದೂ ಮಹಾಗಣಪತಿ ಗಣೇಶೋತ್ಸವದ ಉದ್ಘಾಟನಾ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರೊಂದಿಗೆ ಭಾಗವಹಿಸಿ, ವಿಘ್ನವಿನಾಶಕ ಶ್ರೀ ಮಹಾಗಣಪತಿಯ ದರ್ಶನಾಶೀರ್ವಾದ ಪಡೆದೆ.

ಭಕ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಒಗ್ಗಟ್ಟಿನ ಸೊಬಗನ್ನು ಸಾರುವ ಈ ಗಣೇಶೋತ್ಸವವು ಎಲ್ಲರ ಮನೆ-ಮನಗಳಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸಿದೆ.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಡಾ. ನಾಗೇಂದ್ರ, ಮಾಜಿ ಕಾರ್ಪೊರೇಟರ್ ಶ್ರೀ ರಾಜೇಂದ್ರ ಕುಮಾರ್, ಶ್ರೀ ಸುರಭಿ ನಾಗರಾಜ್, ಶ್ರೀ ಮಲ್ನಾಡ್ ನಾಗರಾಜ್, ಶ್ರೀ ನಾರಾಯಣಸ್ವಾಮಿ, ಶ್ರೀ ವಿನೋದ್ ಕುಮಾರ್, ಶ್ರೀ ವೆಂಕಟೇಶ್ ಮೂರ್ತಿ, ಸಂಘದ ಅಧ್ಯಕ್ಷರಾದ ಶ್ರೀ ಮಲ್ಲೇಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

#ಗಣೇಶೋತ್ಸವ2026 BJP Karnataka

ಸಂಗೀತಕ್ಕೆ ಹೊಸ ಆಯಾಮ, ಸೇವೆಗೆ ಹೊಸ ಅರ್ಥ, ಮಾನವೀಯತೆಗೆ ಹೊಸ ಎತ್ತರ ನೀಡಿದ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಅವರಿಗೆ ಪುಣ್ಯಸ್ಮರಣೆಯಂದು ಭಕ್...
17/09/2026

ಸಂಗೀತಕ್ಕೆ ಹೊಸ ಆಯಾಮ, ಸೇವೆಗೆ ಹೊಸ ಅರ್ಥ, ಮಾನವೀಯತೆಗೆ ಹೊಸ ಎತ್ತರ ನೀಡಿದ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಅವರಿಗೆ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.

ಅವರ ಜೀವನ ಮತ್ತು ಸಾಧನೆಗಳು ನಾಡಿನ ಕೋಟ್ಯಂತರ ಜನರಿಗೆ ಸದಾ ಪ್ರೇರಣೆಯಾಗಿರಲಿ.

ಕೋಟ್ಯಂತರ ಭಾರತೀಯರ ಆಶಯಗಳಿಗೆ ಧ್ವನಿಯಾಗಿ, ದೇಶದ ಅಭಿವೃದ್ಧಿಯ ಕನಸುಗಳಿಗೆ ದಿಕ್ಕಾಗಿ, ಭಾರತವನ್ನು ವಿಶ್ವ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಮುನ...
17/09/2026

ಕೋಟ್ಯಂತರ ಭಾರತೀಯರ ಆಶಯಗಳಿಗೆ ಧ್ವನಿಯಾಗಿ, ದೇಶದ ಅಭಿವೃದ್ಧಿಯ ಕನಸುಗಳಿಗೆ ದಿಕ್ಕಾಗಿ, ಭಾರತವನ್ನು ವಿಶ್ವ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಸುತ್ತಿರುವ ಯುಗ ಪುರುಷ, ವಿಶ್ವನಾಯಕ, ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ.

ರಾಷ್ಟ್ರಭಕ್ತಿಯೇ ಉಸಿರು, ಜನಸೇವೆಯೇ ಧ್ಯೇಯವಾಗಿಸಿಕೊಂಡಿರುವ ಆದರಣೀಯ ಪ್ರಧಾನಮಂತ್ರಿಗಳಿಗೆ ಜನ್ಮದಿನದ ಹಾರ್ದಿಕ ಶುಭ ಕಾಮನೆಗಳು.

ತಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಇನ್ನಷ್ಟು ಎತ್ತರಕ್ಕೆ ಹಾಗೂ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಎಂಬುದೇ ಕೋಟ್ಯಾಂತರ ಭಾರತೀಯರ ಆಶಯ.


Narendra Modi

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ರವಿ ಬಡಾವಣೆ ಹಾಗೂ ನಂದಿನಿ ಲೇಔಟ್‌ನಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಘ್...
16/09/2026

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ರವಿ ಬಡಾವಣೆ ಹಾಗೂ ನಂದಿನಿ ಲೇಔಟ್‌ನಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಘ್ನವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಭಕ್ತರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು, ಎಲ್ಲರಿಗೂ ಶ್ರೀ ಗಣೇಶನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಿದೆ.

#ಗಣೇಶೋತ್ಸವ2026 BJP Karnataka K Gopalaiah

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ರವಿ ಬಡಾವಣೆ ಹಾಗೂ ನಂದಿನಿ ಲೇಔಟ್‌ನಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಘ್...
16/09/2026

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ರವಿ ಬಡಾವಣೆ ಹಾಗೂ ನಂದಿನಿ ಲೇಔಟ್‌ನಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಘ್ನವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಭಕ್ತರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು, ಎಲ್ಲರಿಗೂ ಶ್ರೀ ಗಣೇಶನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಿದೆ.

#ಗಣೇಶೋತ್ಸವ2026

Environmental protection is not merely a responsibility—it is a commitment to the generations that will inherit our plan...
16/09/2026

Environmental protection is not merely a responsibility—it is a commitment to the generations that will inherit our planet.

On Ozone Day, let us strengthen our resolve to adopt sustainable practices and work together towards a cleaner, greener and healthier Earth.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರ, ಕಮಲಾನಗರ, ಬೋವಿ ಪಾಳ್ಯ ಹಾಗೂ ಎಜಿಬಿ ಲೇಔಟ್ ಗಳಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ...
15/09/2026

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರ, ಕಮಲಾನಗರ, ಬೋವಿ ಪಾಳ್ಯ ಹಾಗೂ ಎಜಿಬಿ ಲೇಔಟ್ ಗಳಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿಘ್ನವಿನಾಶಕ ಶ್ರೀ ಗಣೇಶನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ಗಣೇಶೋತ್ಸವದ ಸಂಭ್ರಮವನ್ನು ಹಂಚಿಕೊಂಡೆ.

ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆಯೊಂದಿಗೆ ಆಚರಿಸುವ ಗಣೇಶೋತ್ಸವವು ನಮ್ಮೆಲ್ಲರನ್ನು ಮತ್ತಷ್ಟು ಒಗ್ಗೂಡಿಸಲಿ. ಶ್ರೀ ಗಣೇಶನು ಎಲ್ಲರ ಮನೆ-ಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

BJP Karnataka K Gopalaiah

ಮಹಾಲಕ್ಷ್ಮೀ ಲೇಔಟ್‌ನ ರಾಜಾಜಿನಗರ 1ನೇ ಬ್ಲಾಕ್ ಸರ್ಕಲ್‌ನಲ್ಲಿ ಇಂದು ನಡೆದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯ ಅಂಗವಾಗಿ ಅವರ ಪ್...
15/09/2026

ಮಹಾಲಕ್ಷ್ಮೀ ಲೇಔಟ್‌ನ ರಾಜಾಜಿನಗರ 1ನೇ ಬ್ಲಾಕ್ ಸರ್ಕಲ್‌ನಲ್ಲಿ ಇಂದು ನಡೆದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಇಂಜಿನಿಯರ್ಸ್ ಡೇ ಆಚರಣೆಯಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರೊಂದಿಗೆ ಭಾಗವಹಿಸಿದೆ.

ತಮ್ಮ ದೂರದೃಷ್ಟಿ, ಶಿಸ್ತು, ಕಾರ್ಯನಿಷ್ಠೆ ಹಾಗೂ ಅಪಾರ ತಾಂತ್ರಿಕ ಜ್ಞಾನದಿಂದ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ ಸರ್ ಎಂ.ವಿ. ಅವರ ಜೀವನ ಮತ್ತು ಸಾಧನೆಗಳು ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿದಾಯಕ.

ಈ ಸಂದರ್ಭದಲ್ಲಿ ಹಿರಿಯ ಹಾಗೂ ನಿವೃತ್ತ ಎಂಜಿನಿಯರ್‌ಗಳು, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್, ಮಂಡಲ ಅಧ್ಯಕ್ಷ ಡಾ. ನಾಗೇಂದ್ರ, ಮಾಜಿ ಕಾರ್ಪೊರೇಟರ್‌ಗಳು, ಕಾರ್ಯಪಾಲಕ ಇಂಜಿನಿಯರ್ ಹೇಮಂತ್ ಕುಮಾರ್, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

BJP Karnataka

Address

Mahalakshmi Layout
Bangalore
560086

Website

Alerts

Be the first to know and let us send you an email when Dr G Manjunath Gowda posts news and promotions. Your email address will not be used for any other purpose, and you can unsubscribe at any time.

Shortcuts

Share

Category