K V Ramprasad

K V Ramprasad Chairman, Karnataka Arya Vysya Community Development Corporation, Government of Karnataka

ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣದ ರೂವಾರಿಗಳು, ಮಾಜಿ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪಅವರ ಪುಣ್ಯ ಸ್ಮರಣೆಯಂದು ಗೌರವದ ನಮನಗಳ...
08/08/2026

ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣದ ರೂವಾರಿಗಳು, ಮಾಜಿ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪ
ಅವರ ಪುಣ್ಯ ಸ್ಮರಣೆಯಂದು ಗೌರವದ ನಮನಗಳು.

ರಾಷ್ಟ್ರಗೀತೆಯ ರಚನೆಕಾರರು, ನೊಬೆಲ್ ಪ್ರಶಸ್ತಿ ವಿಜೇತ ಮೇರು ಸಾಹಿತಿ, ಗುರುದೇವ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.   ...
07/08/2026

ರಾಷ್ಟ್ರಗೀತೆಯ ರಚನೆಕಾರರು, ನೊಬೆಲ್ ಪ್ರಶಸ್ತಿ ವಿಜೇತ ಮೇರು ಸಾಹಿತಿ, ಗುರುದೇವ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗು  ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಡಾ. ಜಿ. ಪರಮೇಶ್ವರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
06/08/2026

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗು ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಡಾ. ಜಿ. ಪರಮೇಶ್ವರ್
ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ , ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರ...
04/08/2026

ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ , ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ಅವರು ಭೇಟಿ ನೀಡಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು.

ಸಮಸ್ತ ಜನತೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸರ್ವರ ಮೇಲೆಯೂ ಅಮ್ಮನ...
04/08/2026

ಸಮಸ್ತ ಜನತೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸರ್ವರ ಮೇಲೆಯೂ ಅಮ್ಮನ ಕೃಪೆ, ದಯೆ ಇರಲಿ ಹಾಗೂ ಎಲ್ಲೆಡೆ ಸುಖಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಆಗಲಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ.
ಎಲ್ಲರಿಗೂ ಶುಭವಾಗಲಿ

ಬಡವರ ಬಂಧು, ನುಡಿದಂತೆ ನಡೆದ ಜನಪ್ರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶ...
03/08/2026

ಬಡವರ ಬಂಧು, ನುಡಿದಂತೆ ನಡೆದ ಜನಪ್ರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಂತನು ಅವರಿಗೆ ದೀರ್ಘಾಯುಸ್ಸು, ಉತ್ತಮ ಆರೋಗ್ಯ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಿ, ಸಮಾಜಸೇವೆಯನ್ನು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.

ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸಿದ ಮಹಾನ್ ಕ್ರಾಂತಿಕಾರಿ, ರಾಜರ್ಷಿ ...
03/08/2026

ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸಿದ ಮಹಾನ್ ಕ್ರಾಂತಿಕಾರಿ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
ಪ್ರಗತಿಪರ ಕಾನೂನುಗಳು ಹಾಗೂ ನವೀನ ಆಲೋಚನೆಗಳ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ ಅವರ ಜನಪರ ನಿರ್ಧಾರಗಳು ಇಂದಿಗೂ ಜೀವಂತ.
#ನಾಲ್ವಡಿಕೃಷ್ಣರಾಜಒಡೆಯರ್ #ರಾಜರ್ಷಿನಾಲ್ವಡಿ

ಇಂದು ಮಾನ್ಯ ಶ್ರೀ ಕೆ.ವಿ.ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ  ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ...
02/08/2026

ಇಂದು ಮಾನ್ಯ ಶ್ರೀ ಕೆ.ವಿ.ರಾಮ್ ಪ್ರಸಾದ್ ರವರು, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ನ ಸತ್ಯ ಸಾಯಿ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರೊಂದಿಗೆ ನಡೆದ "ದಿವ್ಯ ಸಂಜೆ ಸಂವಾದ" ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ಪಡೆದರು

ಇಂದು,  ಮನೆ ಮನೆಗೆ ವಾಸವಿ ಸೇನಾ ಟ್ರಸ್ಟ್‌ (ರಿ.) ವತಿಯಿಂದ ಬೆಂಗಳೂರಿನ ಜೆ.ಪಿ.ನಗರದ ಶುಭ್ ಕನ್ವೆನ್ಷನ್ ಹಾಲ್‌ನಲ್ಲಿ 4ನೇ ಸಾಮೂಹಿಕ ಷಷ್ಠಿಪೂರ್...
02/08/2026

ಇಂದು, ಮನೆ ಮನೆಗೆ ವಾಸವಿ ಸೇನಾ ಟ್ರಸ್ಟ್‌ (ರಿ.) ವತಿಯಿಂದ ಬೆಂಗಳೂರಿನ ಜೆ.ಪಿ.ನಗರದ ಶುಭ್ ಕನ್ವೆನ್ಷನ್ ಹಾಲ್‌ನಲ್ಲಿ 4ನೇ ಸಾಮೂಹಿಕ ಷಷ್ಠಿಪೂರ್ತಿ ಶಾಂತಿ ಹಾಗೂ 2ನೇ ಸಾಮೂಹಿಕ ಭೀಮರಥ ಶಾಂತಿ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ರವರು ಭಾಗವಹಿಸಿ, ಸಾಮೂಹಿಕ ಷಷ್ಠಿಪೂರ್ತಿ ಶಾಂತಿ ಹಾಗೂ ಭೀಮರಥ ಶಾಂತಿ ಕಾರ್ಯಕ್ರಮಕ್ಕೆ ವಿಧಿವತ್ತಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರು, ಅಧ್ಯಕ್ಷ ಮಂಡಳಿಯ ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಆರ್ಯವೈಶ್ಯ ಸಮುದಾಯದ ಹಿರಿಯರು, ದಂಪತಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

ಇಂದು ವಾಸವಿ ಕ್ಲಬ್ಸ್ ಇಂಟರ್‌ನ್ಯಾಷನಲ್ (ರಿ.) ವತಿಯಿಂದ ಆಯೋಜಿಸಲಾದ ವಿಶೇಷ ಏಕವಿಂಶತಿ ಸಂಕಷ್ಟಹರ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ  ಮಾನ್ಯ ಶ್ರೀ ...
02/08/2026

ಇಂದು ವಾಸವಿ ಕ್ಲಬ್ಸ್ ಇಂಟರ್‌ನ್ಯಾಷನಲ್ (ರಿ.) ವತಿಯಿಂದ ಆಯೋಜಿಸಲಾದ ವಿಶೇಷ ಏಕವಿಂಶತಿ ಸಂಕಷ್ಟಹರ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಕೆ.ವಿ. ರಾಮ್ ಪ್ರಸಾದ್ ,ಅಧ್ಯಕ್ಷರು , ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ರವರು ಭಾಗವಹಿಸಿದರು.

ಶ್ರೀ ಪರಾಭವ ನಾಮ ಸಂವತ್ಸರದ ಆಷಾಢ ಕೃಷ್ಣ ಪಕ್ಷದ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದಂಪತಿಗಳು, ಮಹಿಳೆಯರು, ಕನ್ಯೆಯರು ಹಾಗೂ ಯುವಕರು ಭಕ್ತಿ-ಶ್ರದ್ಧೆಯಿಂದ ಶ್ರೀ ಸಂಕಷ್ಟಹರ ಗಣಪತಿಯ ಪೂಜೆಯಲ್ಲಿ ಪಾಲ್ಗೊಂಡರು. ಈ ಪವಿತ್ರ ಪೂಜೆಯಲ್ಲಿ ಭಾಗವಹಿಸಿ ಶ್ರೀ ಸಂಕಷ್ಟಹರ ಗಣಪತಿಯ ಕೃಪೆಗೆ ಪಾತ್ರರಾಗಬೇಕೆಂದು ಎಲ್ಲ ಭಕ್ತಾದಿಗಳಿಗೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.

Address

Karnataka Regional Chapter Building, No:16-J, 1st Floor, Millers Tank Bed Area, Thimmaiah Road, Vasanthnagar
Bangalore
560052

Alerts

Be the first to know and let us send you an email when K V Ramprasad posts news and promotions. Your email address will not be used for any other purpose, and you can unsubscribe at any time.

Shortcuts

Share

Category