Bescom

Bescom Bangalore electricity supply company

15/11/2024
22/05/2022

Share Facebook Twitter LinkedIn Pinterest Email ಬೆಂಗಳೂರು : ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ ಬೆಸ್ಕಾಂ ನ 4152 ಕ್ಕೂ ಹೆಚ್.....

ವಿದ್ಯುತ್ ಖಾಸಗೀಕರಣದಿಂದ ಬಡ ವರು ಮತ್ತು ರೈತರಿಗೆ ಸಂಕಷ್ಟ,ಬಂಡವಾಳ ಶಾಯಿಗಳನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಧಿಕ್...
03/08/2021

ವಿದ್ಯುತ್ ಖಾಸಗೀಕರಣದಿಂದ ಬಡ ವರು ಮತ್ತು ರೈತರಿಗೆ ಸಂಕಷ್ಟ,ಬಂಡವಾಳ ಶಾಯಿಗಳನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರವಿರಲಿ,
ಪರಿವರ್ತನೆಯ ಹೆಸರಲ್ಲಿ
ಪ್ರವರ್ತಕರ ಹೆಸರಲ್ಲಿ
*ಪರಬ್ರಹ್ಮನೆಂದು ಬಂದವರು*
*ಪ್ರೈವೇಟೈಸೇಶನ್ ಮಾಡಲು ಹೊರಟಿಹರು...*

ಬದಲಾವಣೆ ಮಾಡಲೆಂದು
ಬಂದವರು
ಬವಣೆಗಳನಂಚಿ ನಸುನಗುತಿಹರು...
ಬಂಡವಾಳಕಾಗಿ
ಬಲ್ಲಿದರ ಮರ್ಜಿಗಾಗಿ
*ಖಾಸಗೀಕರಣದ ಕರಿನೆರಳನು ತಂದಿಹರು.‌....*

ಅಬ್ಬರಿಸಿದಾಗ ಚಪ್ಪಾಳೆ
ಕೆಕ್ಕರಿಸಿದಾಗ ಚಪ್ಪಾಳೆ
ಗರಿಗರಿ ಜುಬ್ಬವ ನೋಡಿ ಚಪ್ಪಾಳೆ
ನೋಟ್ಬಂದಿಗೂ ಚಪ್ಪಾಳೆ
ಮನ್-ಕೀ-ಬಾತಿಗೂ ಗಡಚಿಕ್ಕುವ ಚಪ್ಪಾಳೆ
ಮತ್ತೊಮ್ಮೆ ಆರಿಸಿ ಬರಲೂ ಬೇಕಿತ್ತು
ನಮ್ಮೆಲ್ಲರ ಚಪ್ಪಾಳೆ
*ಸದ್ದಿಲ್ಲದೇ ದೇಶಮಾರಲು* *ಹೊರಟವರಿಗೇಕೆ ಈ ಚಪ್ಪಾಳೆ..!?*

LICಯೂ ಖಾಸಗಿ
BHELಕೂಡಾ ಖಾಸಗಿ
ವಿಮೆ ರಕ್ಷಣಾ ವಲಯಗಳೂ ಖಾಸಗಿ
ಹರಿಯುವ ರೈಲು-ನಿಲ್ಲುವ ನಿಲ್ದಾಣ
ಹಾರುವ ವಿಮಾನ-ಇಳಿಯುವ ನಿಲ್ದಾಣ
ಕಲ್ಲಿದ್ದಲು ಗಣಿಗಳೂ ಖಾಸಗಿ
ಇದೀಗ
ವಿದ್ಯುತ್ ವಲಯಗಳೂ ಖಾಸಗಿ
*ಎಲ್ಲವೂ ಖಾಸಗಿಯಾದ ಮೇಲೆ*
*ನೀವು ಕಿಸಿಯುವುದೇನಿದೆ....?!*

ಜನಪರ ಕಾಳಜಿಗಷ್ಟೇ ನಮ್ಮ ಬೆಂಬಲ
ಜನತಾ ಕರ್ಪ್ಯೂಗಷ್ಟೇ ನಮ್ಮ ಬೆಂಬಲ
ಜನಪರ ಸರ್ಕಾರಗಳ ನಿರ್ಧಾರಗಳಿಗಷ್ಟೇ
ನಮ್ಮ ಬೆಂಬಲ
ಜನರ ಹೆಸರಿನಲ್ಲಿ
*ಝಣಝಣ ಕಾಂಚಾಣಕ್ಕಾಗಿ*
*ಮಾಡಲು ಹೊರಟಿರುವ ಖಾಸಗೀಕರಣಕ್ಕೆ ನಮ್ಮ ಬೆಂಬಲವಿಲ್ಲ*

*ಕಾರ್ಮಿಕ ವಿರೋಧೀ ನೀತಿಗಿಲ್ಲ ನಮ್ಮ ಬೆಂಬಲ*
ಜೈ ಎಂದವರು
ಧಿಕ್ಕಾರ ಕೂಗುವ ಮುನ್ನ
ಅರಿತುಕೊಳ್ಳಿ
*ಖಾಸಗೀಕರಣಕ್ಕೆ ಧಿಕ್ಕಾರವಿರಲಿ*

ಅಧಿಸೂಚನೆ-ಭೂಗತ ಓಎಫ್ ಸಿ ಮತ್ತು ಮೆಲುಮಾರ್ಗದ ದಾರಿಯ ಹಕ್ಕುಗಳನ್ನು ಗುತ್ತಿಗೆ ನೀಡಲು ಆಸಕ್ತ ಸಂಸ್ಥೆಗಳಿಂದ ಒಳಹರಿವುಗಳನ್ನು ಆಹ್ವ.....

01/10/2020

*ಕವಿಪ್ರನಿ ನೌಕರರ ಸಂಘ 659 ಸದಸ್ಯರಿಗೆ ನಮಸ್ಕಾರ*🙏🏼

ಮಾನ್ಯರೆ,

*ವಿತರಣಾ ಕಂಪೆನಿಗಳ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ STANDARD BID DOCUMENT ವಿಚಾರವಾಗಿ ಸಂಪೂರ್ಣವಾಗಿ ವಿರೋಧಿಸುವ ಬಗ್ಗೆ* ಬೆಂಗಳೂರಿನಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಮತ್ತು ಒಕ್ಕೂಟದ ಪದಾಧಿಕಾರಿಗಳು ಚರ್ಚಿಸಿದ್ದು ಮುಂದಿನ ನಮ್ಮ ಹೋರಾಟದ ರೂಪುರೇಷೆಗಳ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಲಾಗಿದ್ದು ಅದರಂತೆ , ಮಾನ್ಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈ ಕೆಳಕಂಡ ಮಾರ್ಗಸೂಚಿಗಳನ್ನು ನೀಡಲಾಯಿತು.

1. *ಕೆಇಬಿ ಸಂಘಗಳ ಒಕ್ಕೂಟದ ಮೂಲಕ ಅಕ್ಟೋಬರ್ 5 ರಂದು ಉತ್ತರಪ್ರದೇಶದಲ್ಲಿ AIPEF ನ ವತಿಯಿಂದ ನಡೆಯುತ್ತಿರುವ ಕೆಲಸ ಬಹಿಷ್ಕಾರ ಪ್ರತಿಭಟನೆಗೆ (work boycott) ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು.. ಒಕ್ಕೂಟಗಳ ಜೊತೆಗೆ ಮಾತುಕತೆ ನಡೆಸಿ ಪ್ರತಿಭಟನೆಯ ಸ್ವರೂಪವನ್ನು ತಿಳಿಸಲಾಗುವುದು.*

2. ಒರಿಸ್ಸಾ ಮತ್ತು ದೆಹಲಿಯಲ್ಲಿ ಅದಾಗಲೇ ಖಾಸಗೀಕರಣದಿಂದ ಆಗಿರುವ ವೈಫಲ್ಯಗಳ ಬಗ್ಗೆ ತಿಳಿಸಲು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸುವ ಬಗ್ಗೆ ಒಕ್ಕೂಟಗಳ ಚರ್ಚೆಯಲ್ಲಿ ಅದಾಗಲೇ ತೀರ್ಮಾನವಾಗಿದೆ.

2. ಇದರ ಹೊರತಾಗಿ ಖಾಸಗೀಕರಣದಿಂದಾಗುವ ಅಪಾಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಟಿವಿ ಪೇಪರ್ ಮತ್ತು ಇನ್ನಿತರ ಸಮೂಹ ಮಾಧ್ಯಮಗಳಲ್ಲಿ ಪ್ರಕಟಣೆ ನೀಡುವುದು.

3. ಸಂಘದ ಹಿರಿಯ ನಿವೃತ್ತ ಇಂಜಿಯರುಗಳು ಮತ್ತು ಇತರೆ ಹಿರಿಯ ಅನುಭವಿ ಅಧಿಕಾರಿಗಳನ್ನು ಸೇರಿಸಿ ಒಕ್ಕೂಟಕ್ಕೆ ಸಲಹಾ ಸಮಿತಿಯನ್ನು ರಚಿಸಿ ಅವರ ಸಲಹೆಗಳಂತೆ ಹೋರಾಟವನ್ನು ರೂಪಿಸುವುದು.

4. ರಾಜ್ಯ ರೈತ ಸಂಘ ಸೇರಿದಂತೆ ಇನ್ನಿತರ ಸಮಾನ ಮನಸ್ಕ ಸಂಘಗಳ ಜೊತೆಗೆ ಅದಾಗಲೇ ಮಾತುಕತೆ ನಡೆಯುತ್ತಿದ್ದು ಅವರುಗಳನ್ನೂ ನಮ್ಮ ಹೋರಾಟದ ಬೆಂಬಲಕ್ಕೆ ನಿಲ್ಲುವಂತೆ
ಮಾಡುವುದು

5. *ಸರಕಾರದ ಮುಂದೆ HOLDING COMPANY ನಿರ್ಮಿಸುವ ಶಿಫಾರಸ್ಸನ್ನು ಕವಿಪ್ರನಿನಿ ವತಿಯಿಂದ ಇರಿಸಿದ್ದು ಇಲಾಖೆಯ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೋಲ್ಡಿಂಗ್ ಕಂಪೆನಿ ಸ್ಥಾಪನೆಯಾದಲ್ಲಿ ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಒಂದೇ ರೀತಿಯ ಸೇವಾ ಸೌಲಭ್ಯಗಳು ದೊರೆಯುವುದರಿಂದ ಈಗಿರುವ ತಾರತಮ್ಯ ನಿವಾರಣೆ ಆಗುತ್ತದೆ. ಆದಷ್ಟು ಶೀಘ್ರವಾಗಿ HOLDING COMPANY ರಚಿಸಲು ಒತ್ತಡ ತರಲಾಗುವುದು.*

*ಕೊನೆಯದಾಗಿ ಅಕ್ಟೋಬರ್ 5 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅಧಿಕೃತ ಕರೆ ನೀಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.*

ಮೇಲಿನ ಅಂಶಗಳನ್ನು ಹೊರತುಪಡಿಸಿ ತಮ್ಮಲ್ಲಿ ಇನ್ನಾವುದೇ ಇತರೆ ಸಲಹೆಗಳಿದ್ದರೆ ನೀಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಕೋರುತ್ತೇನೆ‌.

ಕೆ.ಬಲರಾಮ್
ಪ್ರಧಾನ ಕಾರ್ಯದರ್ಶಿ
ಕವಿಪ್ರನಿ ನೌಕರರ ಸಂಘ _659

12/05/2020
Aadhar card  number and RD number
28/01/2020

Aadhar card number and RD number

Address

Bescom Office Chandapura
Bangalore
560099

Alerts

Be the first to know and let us send you an email when Bescom posts news and promotions. Your email address will not be used for any other purpose, and you can unsubscribe at any time.

Share