17/06/2016
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ 29ನೇ ವಾರದ ಸ್ವಚ್ಛತಾ ಕಾರ್ಯಕ್ರಮವು ದಿನಾಂಕ : 16/06/2016 ಗುರುವಾರದಂದು ಬಿ.ಮೂಡಾ ಗ್ರಾಮದ ಪಲ್ಲಮಜಲು ವಠಾರದಲ್ಲಿ ಪುರಸಭಾ ಅಧ್ಯಕ್ಷರಾದ ಪಿ.ರಾಮಕೃಷ್ಣ ಆಳ್ವರವರ ನೇತೃತ್ವದಲ್ಲಿ ಜರಗಿತು. 17 ಮತ್ತು 19ನೇ ವಾರ್ಡ್ ನ 297 ಮನೆಗಳಿಗೆ ತ್ಯಾಜ್ಯ ಸಂಗ್ರಹಣಾ ಬಕೆಟ್ ಗಳನ್ನು ವಿತರಿಸಲಾಯಿತು. ಮುಖ್ಯಾಧಿಕಾರಿ ಎಂ. ಎಚ್. ಸುಧಾಕರ್, ಪುರಸಭಾ ಸದಸ್ಯೆ ಮಮ್ತಾಜ್, ಮತ್ತು ಸಿಬ್ಬಂದಿಯವರು, ಸ್ಥಳೀಯರಾದ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.