19/10/2025
ದಿನಾಂಕ : 19.10.2025 ರಂದು ಬಿಲ್ಲವ ಸಮಾಜ ಸೇವಾ ಸಂಘ (ರಿ) ವಗ್ಗ ಘಟಕದ ಕಾವಳಪಡೂರು 1ನೇ ವಾರ್ಡ್ ವತಿಯಿಂದ ಸಮಾಜಮುಖಿ ದೃಷ್ಟಿಯಿಂದ ಒಂದು ಮಹತ್ವದ ಸೇವಾ ಚಟುವಟಿಕೆ ನಡೆಸಲಾಯಿತು. ವಗ್ಗ – ಪಚ್ಚಾಜೆ – ಮಾಂಗಜೆ ಮಾರ್ಗದ ಸುಮಾರು 3 ಕಿಲೋಮೀಟರ್ ದಟ್ಟವಾದ ರಸ್ತೆ ಭಾಗದಲ್ಲಿ ಹುಲ್ಲು ತೆಗೆಯುವ ಸ್ವಚ್ಛತಾ ಕಾರ್ಯ ಮತ್ತು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಸಂಘದ ಸದಸ್ಯರ ನೇತೃತ್ವದಲ್ಲಿ ಶ್ರದ್ಧೆಯಿಂದ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಸ್ಥಳೀಯ ಯುವಕರು ತೀವ್ರ ಸೂರ್ಯನ ತಾಪವನ್ನೂ ಲೆಕ್ಕಿಸದೇ, ಗ್ರಾಮಸ್ಥರ ಸಂಚಾರ ಸುಗಮವಾಗುವಂತೆ ಶ್ರಮಿಸಿದರು. ರಸ್ತೆ ನಿರ್ವಹಣೆಯ ಈ ಕಾರ್ಯದಿಂದ ಸ್ಥಳೀಯ ಜನರಿಗೆ ತುಂಬಾ ಅನುಕೂಲವಾಗಿದ್ದು, ಗ್ರಾಮಸ್ಥರಿಂದ ಸಂಘದ ಈ ಮುಂದಾಳತ್ವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸೇವಾ ಕೈಂಕರ್ಯದಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಯುವಕರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡು, ಶ್ರಮದ ಸೇವೆ ಸಲ್ಲಿಸಿದರು.