18/08/2021
ಪ್ರವಾಹ ಪರಿಹಾರಕ್ಕಾಗಿ ನಮ್ಮ ನಾಯಕರ ನೇತೃತ್ವದಲ್ಲಿ ಸಿಎಂ ಗೆ ಭೇಟಿ ಮಾಡಲಾಯಿತು.
ಪ್ರವಾಹದಿಂದ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ಕೋರಿ ಮಾಜಿ ಸಚಿವ ಪ್ರಕಾಶ ಹುಕ್ಕೇರಿಯವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಪ್ರತಿ ವರ್ಷ ಸಂಭವಿಸುವ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅನೇಕ ಸೇತುವೆಗಳು ಬೇಗನೆ ಮುಳುಗಡೆ ಆಗುತ್ತವೆ. ಮಲಿಕವಾಡ, ಇಂಗಳಿ, ಯಡೂರ ಸೇರಿದಂತೆ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಒಳಪಡುವ ಅನೇಕ ಸೇತುವೆಗಳನ್ನು ಎತ್ತರಿಸಿದರೆ ಪ್ರವಾಹ ಬಂದಾಗ ಜನರು ಒಡಾಟ ಮಾಡಲು ಕಷ್ಟ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.
ಇನ್ನೂ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಅನೇಕ ರಸ್ತೆಗಳು ಹಾಳಾಗಿವೆ, ಕೆಲವು ರಸ್ತೆಗಳಂತೂ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೊಗಿವೆ, ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಹಿನ್ನೆಲೆ, ಅಕ್ಟೊಬರ್ ತಿಂಗಳಲ್ಲಿ ಕಬ್ಬು ಸಾಗಣಿಕೆ ಪ್ರಾರಂಭ ಆಗುತ್ತದೆ ಅಷ್ಟರೊಳಗೆ ಈ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು, ಇಲ್ಲದಿದ್ದರೆ ರೈತರು ಬೆಳೆದ ಕಬ್ಬು, ಕಾರ್ಖಾನೆಗೆ ಕಳುಹಿಸಲು ಸಮಸ್ಯೆ ಆಗುತ್ತದೆ, ರಸ್ತೆ ಅಭಿವೃದ್ಧಿಗಾಗಿ ಆದಷ್ಟು ಬೇಗ ಅನುದಾನ ಮಂಜೂರು ಮಾಡಬೆಕೇಂದು ಮುಖ್ಯಂತ್ರಿಗಳಿಗೆ ಮನವರಿಕೆ ಮಾಡಲಾಯಿತು ಮಾಡಿದರು.
ಇನ್ನೂ ಅತಿವೃಷ್ಟಿಯಿಂದ ಕೇವಲ ನದಿ ಪಾತ್ರದ ಜನರ ಬೆಳೆಹಾನಿ ಆಗಿಲ್ಲ, ಬೆಳಗಾವಿ ಜಿಲ್ಲೆಯ ಅನೇಕ ರೈತರು ಅಧಿಕ ಇಳುವರಿಗಾಗಿ ಹೆಚ್ಚು ಖರ್ಚು ಮಾಡಿ ಬೆಳೆದ ಸೋಯಾಬಿನ್, ಮೆಕ್ಕೆ, ಕಬ್ಬು, ಜೋಳ ಹೀಗೆ ಬಹಳಷ್ಟು ಬೆಳೆ ನಾಶವಾಗಿರುವ ಹಿನ್ನಲೆ ರೈತರು ಕಂಗಾಲಾಗಿದ್ದೂ, ಸೂಕ್ತ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಬಾರಿ ಸೇರಿದಂತೆ ಕಳೆದ 2019 ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಒಂದು ಸಾವಿರಕ್ಕೂ ಅಧಿಕ ಜನರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ, ಅನೇಕ ಜನರು ಸಾರ್ವಜನಿಕ ಕಟ್ಟಡ ಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ, ಅಲ್ಲಿನ ಹೃದಯ ವಿದ್ರಾವಕ ದೃಶ್ಯಗಳನ್ನು ಉಹಿಸಲು ಸಾಧ್ಯವಿಲ್ಲ, ದಯವಿಟ್ಟು ಪಾರದರ್ಶಕವಾಗಿ ಸರ್ವೇ ಕಾರ್ಯ ಮಾಡಿ ಮನೆ ಕಳೆದುಕಡ ಪ್ರತಿಯೊಬ್ವರಿಗೂ ಮನೆ ಸಿಗುವಂತಾಗಬೇಕು ಎಂದು ಮಾಜಿ ಸಚಿವ ಪ್ರಕಾಶ ಹುಕ್ಕೇರಿಯವರು ಸಿಎಂ ಗಮನ ಸೆಳೆದರು.