SDPO Nanjangudu

SDPO Nanjangudu Contact information, map and directions, contact form, opening hours, services, ratings, photos, videos and announcements from SDPO Nanjangudu, Police station, Ballary city, Bellary.

*ಸರ್ಕಾರಿ ಸೇವೆಯ 20 ವರ್ಷಗಳು*        2001ರಲ್ಲಿ MCA ಮುಗಿಸಿ ಸಿವಿಲ್ ಸರ್ವಿಸ್ ಗೆ ತಯಾರಿ ನಡೆಸುತ್ತಿದ್ದ ಸಮಯ ಅಬಕಾರಿ ಇಲಾಖೆಯ ಉಪ ನಿರೀಕ್ಷ...
21/05/2024

*ಸರ್ಕಾರಿ ಸೇವೆಯ 20 ವರ್ಷಗಳು*

2001ರಲ್ಲಿ MCA ಮುಗಿಸಿ ಸಿವಿಲ್ ಸರ್ವಿಸ್ ಗೆ ತಯಾರಿ ನಡೆಸುತ್ತಿದ್ದ ಸಮಯ ಅಬಕಾರಿ ಇಲಾಖೆಯ ಉಪ ನಿರೀಕ್ಷಕರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ನನಗೆ ಕೆಲಸದ ಅನಿವಾರ್ಯತೆ ಇತ್ತಾದರೂ ಸಿವಿಲ್ ಸರ್ವಿಸ್ ತಯಾರಿಗೆ ತೊಂದರೆ ಆಗಬಾರದೆಂದು ಅರ್ಜಿ ಹಾಕುವ ಮನಸ್ಸು ಇರಲಿಲ್ಲ.‌ ಗೆಳೆಯರೆಲ್ಲ ಅರ್ಜಿ ಹಾಕುತ್ತಿದ್ದರು, ಸ್ನೇಹಿತ ಮೇಘರಾಜು ನನಗೊಂದು ಅರ್ಜಿ ಮತ್ತು ಶುಲ್ಕ ತುಂಬಿದ ಚಲನ್ ಅನ್ನು ತಂದುಕೊಟ್ಟ. ಒಲ್ಲದ ಮನಸ್ಸಿನಿಂದಲೆ ಅರ್ಜಿ ಹಾಕಿದೆ ಪರೀಕ್ಷೆಯನ್ನು ಬರೆದೆ ಸಂದರ್ಶನ ಇಲ್ಲದ ಕಾರಣ ಸೆಲೆಕ್ಟ್ ಕೂಡ ಆದೆ.‌ ಮಹಿಳಾ ಮೀಸಲಾತಿ ಕಾರಣ ಕೆಲವರು ಕೋರ್ಟ ಮೆಟ್ಟಲೇರಿದ್ದರಿಂದ ನೇಮಕಾತಿ 2 ವರ್ಷ ತಡವಾಗಿ, ದಿನಾಂಕ: 19-05-2004 ರಂದು ಅಬಕಾರಿ ಆಯುಕ್ತರ ಕಛೇರಿಯಲ್ಲಿ ಕರ್ತವ್ಯಕ್ಕೆ ಸೇರಿದೆ. ಆರಂಭಿಕ ತರಭೇತಿಯ ನಂತರ ಹೊಸಕೋಟೆ ತಾಲ್ಲೂಕಿನ ಜಾರಿ ಮತ್ತು ತನಿಖಾ ಅಬಕಾರಿ ಉಪ ನಿರೀಕ್ಷಕನಾಗಿ ವೃತ್ತಿ ಜೀವನ ಆರಂಬಿಸಿದೆ.

ಹೊಸಕೋಟೆ : ಅಬಕಾರಿ ಪುಟಗಳಲ್ಲಿ ಅತ್ಯಂತ ಕುಖ್ಯಾತಿ ಪಡೆದ ಹೆಸರುಗಳಲ್ಲಿ ಕಮರಿಪೇಟೆ ಬಿಟ್ಟರೆ ಹೊಸಕೋಟೆ ನಂತರದ ಸ್ಥಾನ. ಹೊಸಕೋಟೆಯ ಬೈಲನರಸಾಪುರ, ಕಟ್ಟಗೇನಹಳ್ಳಿ, ಮೇಡಿ ಮಲ್ಲಸಂದ್ರ ಮತ್ತು ಮಠ ಮಲ್ಲಸಂದ್ರ ಹೆಸರುಗಳು ಪ್ರಮುಖವಾದವು. ಪ್ರತಿ ದಿನ ಒಂದಲ್ಲ‌ ಒಂದು ದಾಳಿ, ಆರೋಪಿ ತಲಾಸ್, ನಕಲಿ ಮದ್ಯ, ಕಳ್ಳ ಭಟ್ಟಿ, ಸೇಂದಿ ದಾಳಿ ಇಂತಹ ಕೆಲಸಗಳೆ.

ಹೊಸಕೋಟೆ ತಾಲ್ಲೂಕಿನಲ್ಲಿ ದಿನಾಂಕ : 09-02-2005 ರಿಂದ ದಿನಾಂಕ : 25-01-2010 ರವರೆಗೆ ಕೆಲಸ ಮಾಡಿದ್ದು, ಪ್ರಭಾರ ಅಬಕಾರಿ ನಿರೀಕ್ಷಕನಾಗಿ, ಪ್ರಭಾರ ಅಬಕಾರಿ ಉಪ ಅಧೀಕ್ಷಕ ನಾಗಿಯೂ ಕೆಲಸ ನಿರ್ವಹಿಸಿದ್ದು ವಿಶೇಷ. 13-1/2 ವರ್ಷದ ಅಬಕಾರಿ ಇಲಾಖಾ ಸೇವೆಯಲ್ಲಿ ತುಂಬಾ ತೃಪ್ತಿದಾಯಕ ಸೇವೆ ಎಂದರೆ‌ ಹೊಸಕೋಟೆಯ ಸೇವೆಯೆ. 5 ವರ್ಷದ ಅವದಿಯಲ್ಲಿ ಅಬಕಾರಿ ಇಲಾಖೆಯ ಕಪ್ಪು ಪಟ್ಟಿಯಿಂದ ಹೊಸಕೋಟೆ ದೂರ ಆಗಿತ್ತು. 2008ನೇ ಸಾಲಿನ ಮೇ ಮಾಹೆಯಲ್ಲಿ ಕಳ್ಳ‌ಭಟ್ಟಿ ದುರಂತ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು, ಹೊಸಕೋಟೆ ತಾಲ್ಲೂಕಿನಲ್ಲೂ 14 ಸಾವುಗಳು ಉಂಟಾಗಿದ್ದವು. ಕೋಲಾರ, ಹೊಸಕೋಟೆ, ಆನೆಕಲ್, ಬೆಂಗಳೂರು ನಗರದ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಗಳಲ್ಲಿ ದುರಂತ‌ ಸಂಭವಿಸಿತ್ತು.‌ ಈ ಸಂಬಂಧವಾಗಿ ಸದರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಿಸುತ್ತಿದ್ದ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಅಬಕಾರಿ ಇಲಾಖೆಯ ಡಿಎಸ್ಪಿ ಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ನನ್ನನ್ನು ಮತ್ತು ರವಿಶಂಕರ್ (ಡಿಎಸ್ಪಿ) ರವರನ್ನು ಹೊರತುಪಡಿಸಿ. ಆ ಸಮಯದಲ್ಲಿ ಶ್ರೀ. ಚಿಕ್ಕಮಠ್ ಐ ಎ ಎಸ್, ಸಾಹೇಬರ್ ಅಬಕಾರಿ ಕಮೀಷನರ್ ಇದ್ದು ಅವರು ವರ್ಗಾವಣೆಗೊಂಡು ಶ್ರೀ. ಯೋಗೇಂದ್ರ ತ್ರಿಪಾಠಿ ಐ ಎ ಎಸ್, ರವರು ಬಂದರು. ತ್ರಿಪಾಠಿ ಸಾಹೇಬರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಣ್ಣ ಪುಟ್ಟ ತಪ್ಪು ಕಂಡು ಬಂದರೂ ಅಲ್ಲಿನ ಅಧಿಕಾರಿಗಳನ್ನ ಮುಲಾಜಿಲ್ಲದೆ ಅಮಾನತು ಮಾಡುತ್ತಿದ್ದರು, ಅಂತೆಯೆ ಹೊಸಕೋಟೆಗೂ ಬಂದು ಕಛೇರಿಗೆ ಬರುವ ಮೊದಲೆ ಬೈಲನರಸಾಪುರಕ್ಕೆ ಭೇಟಿ ಕೊಟ್ಟು ಬಂದಿದ್ದರು. ಬಂದವರು ಸಭೆ ನಡೆಸಿ ನನಗೆ ಪ್ರಭಾರ ನಿರೀಕ್ಷಕನಾಗಿ ಕೆಲಸ ಮಾಡಲು ಸೂಚಿಸಿ ಹೋದದು ವಿಶೇಷ.
ಪ್ರಭಾರ ಅಬಕಾರಿ ನಿರೀಕ್ಷಕನಾಗಿ ಬೈಲನರಸಾಪುರದ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲು ವರದಿ ಸಲ್ಲಿಸಿದ್ದೆ, ಗೂಂಡಾ ಕಾಯ್ದೆ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ, ಆದರೆ ಅಬಕಾರಿ ಇಲಾಖೆಗೆ ನನ್ನದು ಪ್ರಥಮ ಪ್ರಕರಣಗಳು. ಶ್ರೀ. ಬಸವರಾಜ ಕಣಜಿ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ವರದಿ ಸಲ್ಲಿಸಲಾಗಿತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಶ್ರೀ. ರಾಜು ಐ ಎ ಎಸ್ ರವರು ಇದ್ದರು, ರಾಜು ಸಾಹೇಬರು ಎಷ್ಟು ಸೂಕ್ಷ್ಮ ಎಂಬುದಕ್ಕೆ - ಅಬಕಾರಿ ಇಲಾಖೆ ಪ್ರಾರಂಭದಿಂದ ಒಂದು ಸಿ ಎಲ್ 2 ಲೈಸೆನ್ಸ್ ಇತ್ತು, ಅದರ ನಕಾಶೆಯಲ್ಲಿ ಸಿ ಎಲ್ 9 ಎಂದು ನಮೂದಾಗಿದ್ದು ಸುಮಾರು 30 ವರ್ಷ ರಿನೀವಲ್ ಆಗ್ತಾ ಇತ್ತು ಅದನ್ನು ರಾಜು ಸಾಹೇಬರು ರಿನೀವಲ್ ಗೆ ಹೋದ ಸಂದರ್ಭದಲ್ಲಿ ಪತ್ತೆ ಮಾಡಿ ರೆಡ್ ಇಂಕ್ ನಲ್ಲಿ ಗುರುತು ಮಾಡಿ ಸರಿಪಡಿಸಲು ವಾಪಸ್ಸು ಕಳುಹಿಸಿದ್ದರು. ನಾನು ಇಂದಿಗೂ ಯಾವುದೇ ಸಹಿ ಮಾಡುವ ಮುಂಚೆ ಸಹೇಬರನ್ನ ನೆನೆಪಿಸಿಕೊಳ್ಳುತ್ತೇನೆ. ಅವರು ಈ ಗೂಂಡಾ ಕಾಯ್ದೆ ಯಡಿಯಲ್ಲಿ ಆರೋಪಿಯನ್ನ ಜೈಲಿಗೆ ಕಳುಹಿಸಿದ್ದರು. ಅಬಕಾರಿ ಅಧಿಕಾರಿ ವರ್ಗವೆ ನಮ್ಮ ಇಲಾಖೆಯಲ್ಲಿ ಗೂಂಡಾ ಕಾಯ್ದೆ ಜಾರಿ ಸಾಧ್ಯ ಇಲ್ಲ ಎನ್ನುತ್ತಿದ್ದರು, ತದನಂತರ ಇದೆ ಅಧಿಕಾರಿಗಳು ಸಲಹಾ ಸಮಿತಿ ಮುಂದೆ‌ ನಿಲ್ಲಲ್ಲ ಅನ್ನುವುದಕ್ಕೆ ಶುರು ಮಾಡಿದರು.
ಈ ಮಧ್ಯೆ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬರುತ್ತಾ ಇದ್ದೆ, ಆರೋಪಿ ಮೇಲೆ ಅನೇಕ ಅಬಕಾರಿ ಪ್ರಕರಣಗಳು ಇದ್ದವು, ಅವನಿಗೂ ಗೂಂಡಾ ಕಾಯ್ದೆ ಎಂದರೆ‌ ಭಯ, ಕೆ ಎ‌ 01 ಜಿ 371 ಜೀಪಿನಲ್ಲಿ ಬರಬೇಕಾದರೆ ಧೈರ್ಯ ಮಾಡಿ ಕೇಳಿದ ಗೂಂಡಾ ಕಾಯ್ದೆ ಅಂದರೆ ಏನು ಎಷ್ಟು ವರ್ಷ ಜೈಲಿನಲ್ಲಿ ಇರಬೇಕು ಇತ್ಯಾದಿ, ಅವನ ಆತಂಕ ಇದ್ದದ್ದು ಎಷ್ಟು ವರ್ಷ ಜೈಲಲ್ಲಿ ಇರಬೇಕೆನ್ನುವ ಬಗ್ಗೆ. ಕಾಯ್ದೆ ಬಗ್ಗೆ ತಿಳಿಸಿ ಗರಿಷ್ಠ 1 ವರ್ಷ ಜೈಲಿನಲ್ಲಿ ಇರಲೇ ಬೇಕಾಗುತ್ತದೆ ಎಂದು ತಿಳಿಸಿದೆ. ಅದನ್ನು ಕೇಳಿದ ಕೂಡಲೆ ಏನೋ ಒಂದು ತರಹ ಆರೋಪಿ ಖುಷಿಯಾದ ಅವನ ಮಾತು ನನಗೆ ಆಶ್ಚರ್ಯ ಮತ್ತು ದಿಗ್ಭ್ರಮೆಯನ್ನು ಉಂಟುಮಾಡಿತು, ಅವನು ಹೇಳುತ್ತಾನೆ " ನಾನ್ಯಾಕೆ ಸರ್ ಜೈಲಿನಲ್ಲಿರಲಿ, ಹಾಗಾದರೆ ಹೆಚ್ಚೆಂದರೆ 1 ವರ್ಷ ಮಾತ್ರ ಜೈಲಿನಲ್ಲಿರುತ್ತೇನೆ, ಯಾವಾಗಲು ಜೈಲಿನಲ್ಲಿ ಇರುವರು ಜೈಲ್ ಕೆಲಸಕ್ಕೆ ಸೇರಿದವರು" ಅಂದ. ಆ ಕ್ಷಣದಲ್ಲಿ ಅವನಿಗೆ ಸರಿಯಾಗಿ ಪಾಠ ಹೇಳಿಕೊಡಬೇಕು ಅನ್ನಿಸಿತು.
ಒಂದು ಕಡೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು, ಅಕ್ರಮಗಳನ್ನು ಕಾನೂನು ರೀತ್ಯ ಬಗ್ಗು ಬಡಿಯಬೇಕು ಅನ್ನುವ ಹಠ, ಒಂದು ಕಡೆ ಇಲಾಖೆಯವರೆ ಇದು ಆಗುತ್ತಾ ಅನ್ನುವ ಕೊಂಕು ಮಾತು, ಮತ್ತೊಂದು ಕಡೆ ಜಾರಿ ಆದರೂ ನನ್ನನ್ನ ಏನೂ ಮಾಡಲು ಸಾಧ್ಯ ಇಲ್ಲ ಎನ್ನುವ ಆರೋಪಿ, ಈ ನಡುವೆ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳಾದ ಶ್ರೀಮತಿ ಮಂಜುಳ ಚೆಲ್ಲೂರುರವರ ನೇತೃತ್ವದಲ್ಲಿ ತ್ರಿಸದಸ್ಯ ಸಲಹಾ ಸಮಿತಿ ರಚನೆಗೊಂಡು ಆರೋಪಿಯನ್ನು ಹಾಜರುಪಡಿಸಿ ಇಲಾಖಾ ಪರವಾಗಿ ಡಿಎಸ್ಪಿ ಅಥವಾ ಮೇಲ್ಮಟ್ಟದ ಅಧಿಕಾರಿ ಬಂದು ಕೇಸ್ ವಿವರ ನೀಡಲಿ ಎಂದು ಪತ್ರ ಬಂತು. ಹೊಸಕೋಟೆ ಉಪ ವಿಭಾಗದಲ್ಲಿ ಇನ್ ಚಾರ್ಜ್ ಡಿಎಸ್ಪಿ ಇದ್ದರು ಅವರು ಈ ಪತ್ರ ನೋಡಿ ರಜೆ ಮೇಲೆ ಹೊರಟು ಹೋದರು. ಬೇರೆಯವರು ಬರಲು ಸಿದ್ದ ಇಲ್ಲ, ಅನಿವಾರ್ಯವಾಗಿ ಸಬ್ ಇನ್ಸ್ಪೆಕ್ಟರ್ ಆದ ನಾನು ಡಿಎಸ್ಪಿ ಇನ್ ಚಾರ್ಜ್ ನಲ್ಲಿ ಸಲಹಾ ಸಮಿತಿ ಮುಂದೆ‌ ಹಾಜರಾಗಬೇಕಾಯಿತು. ನನ್ನೊಂದಿಗೆ ಡಿಎಸ್ಪಿ ರವಿಶಂಕರ್ ರವರು, ಕೊಲಾರದ ಪೊಲೀಸ್ ಡಿಎಸ್ಪಿ ಕೃಷ್ಣಪ್ಪ ರವರು ಬಂದಿದ್ದರು.ಅವರ ವ್ಯಾಪ್ತಿಯಲ್ಲೂ ಇದ್ದ ಪ್ರಕರಣಗಳನ್ನು ಉಲ್ಲೇಖ ಮಾಡಿದ್ದೆ. ನನ್ನನ್ನ ನೋಡಿ ಮೇಡಂ ಸಬ್ ಇನ್ಸ್ಪೆಕ್ಟರ್ ಯಾಕೆ ಬಂದಿದ್ದಾರೆ ಅಂತ ಕೇಳಿದರು. ನಾನೆ ವರದಿ ತಯಾರಿಸಿ ಕಳುಹಿಸಿದ್ದ ಕಾರಣ ಸಮಂಜಸವಾಗಿ ವಿವರ ನೀಡಿದೆ. ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿವರನ್ನು ಒಪ್ಪಿದ್ದಾರೆ ಅಂತ ಅನ್ನಿಸಿತು ಆದರೂ ಎಲ್ಲೊ ಒಂದು ಕಡೆ ಆಗದಿದ್ದರೆ ಅನ್ನುವ ಆತಂಕ. ಒಂದು‌ ವಾರದ ನಂತರ‌ ಸಲಹಾ ಸಮಿತಿ‌ ಗೂಂಡಾ ಕಾಯ್ದೆ ಕ್ರಮಬದ್ಧವಾಗಿದೆ ಎಂದು ಒಳಾಡಳಿತ ಇಲಾಖೆಗೆ ವರದಿಸಿರುವುದು ಗೊತ್ತಾಯಿತು.

ಮುಂದುವರಿಯುವುದು

ವಜ್ರದೇಹಿ 2024, ಕರ್ನಾಟಕ ರಾಜ್ಯಮಟ್ಟದ ದೇಹದಾರ್ಢ ಸ್ಪರ್ಧೆ, ನಂಜನಗೂಡು. ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯೋಜಕರಿಗೂ, ಸ್ಪರ್ಧಾಳುಗಳಿಗು ಶುಭ ಕೋರಿ...
30/01/2024

ವಜ್ರದೇಹಿ 2024, ಕರ್ನಾಟಕ ರಾಜ್ಯಮಟ್ಟದ ದೇಹದಾರ್ಢ ಸ್ಪರ್ಧೆ, ನಂಜನಗೂಡು. ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯೋಜಕರಿಗೂ, ಸ್ಪರ್ಧಾಳುಗಳಿಗು ಶುಭ ಕೋರಿದೆ. ಇಂತಹ ಕಾರ್ಯಕ್ರಮಗಳು ನಂಜನಗೂಡಿನಲ್ಲಿ ಹೆಚ್ಚಾಗಿ ಆಯೋಜನೆಗೊಳ್ಳಲಿ.

ದಿನಾಂಕ : 28.01.2024 ರಂದು ಸಶಸ್ತ್ರ  ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳು.
26/01/2024

ದಿನಾಂಕ : 28.01.2024 ರಂದು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳು.

ಸಮಸ್ತ ನಾಗರೀಕರಿಗೆ 75ನೇ ಗಣರಾಜೋತ್ಸವದ ಶುಭಾಸಯಗಳು
26/01/2024

ಸಮಸ್ತ ನಾಗರೀಕರಿಗೆ 75ನೇ ಗಣರಾಜೋತ್ಸವದ ಶುಭಾಸಯಗಳು

ಇಂದು“ರಾಷ್ಟ್ರೀಯ ಮತದಾರರ ದಿನದ" ಅಂಗವಾಗಿ  ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
25/01/2024

ಇಂದು“ರಾಷ್ಟ್ರೀಯ ಮತದಾರರ ದಿನದ" ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ನಂಜನಗೂಡು ತಾಲ್ಲೂಕು ಕರ್ತವ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತ...
23/01/2024

ನಂಜನಗೂಡು ತಾಲ್ಲೂಕು ಕರ್ತವ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಪತ್ರಕರ್ತರು ಸಮಾಜದ ನಾಲ್ಕನೇ ಅಂಗವಾಗಿದ್ದು, ಸಮಾಜಕ್ಕೆ ತಮ್ಮದೇ ಕಾಣಿಕೆ ನೀಡುತ್ತಿರುವ ತಮ್ಮೆಲರಿಗೂ ಹೊಸ ವರ್ಷದ ಹಾರ್ಥಿಕ ಶುಭಾಶಯಗಳು.

ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂಗೂರಿನ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಜಾತ್ರೆ ಸುಗಮವಾಗಿ ನಡೆಯಲು ಚರ್ಚಿಸ...
22/01/2024

ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂಗೂರಿನ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಜಾತ್ರೆ ಸುಗಮವಾಗಿ ನಡೆಯಲು ಚರ್ಚಿಸಲಾಯಿತು, ಪ್ರಮುಖವಾಗಿ ರಥೋತ್ಸವ, ಬಂಡಿ ಉತ್ಸವ, ತೆಪೋತ್ಸವ, ಚಿಗುರು ಕುಡಿಯುವುದು, ವೈಮಾಳಿಗೋತ್ಸವದ ದಿನಗಳಂದು ಸ್ಥಳೀಯರು ಬರುವ ಭಕ್ತಾದಿಗಳೊಂದಿಗೆ ವೈಭವದೊಂದಿಗೆ ಹಬ್ಬ ಆಚರಿಸಲು ಸೂಚಿಸಲಾಯಿತು.

ನಂಜನಗೂಡು ಗುರು ಭವನದಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಸರ್ಕಾರಿ ನೌಕರರ ವಾರ್ಷ...
21/01/2024

ನಂಜನಗೂಡು ಗುರು ಭವನದಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಸರ್ಕಾರಿ ನೌಕರರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ.‌ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಕಾರ್ಯಾಂಗ ನಮ್ಮ ಸಹೋದ್ಯೋಗಿ ಮಿತ್ರರು. ಅವರ ಆಶೋತ್ತರಗಳು ಅವರ ಮಕ್ಕಳ ಕನಸು ನನಸಾಗಲಿ ಎಂದು ಹಾರೈಸುತ್ತೇನೆ. ಕರ್ತವ್ಯದೆಡೆಗಿನ ಬದ್ದತೆ ನಮ್ಮದಾಗಲಿ.

ತುಮಕೂರು ತಾಲ್ಲೂಕಿನ ನರಗಾನಹಳ್ಳಿ ಗ್ರಾಮದ ಗವಿರಂಗ, ರಾಕೇಶ್ ಮತ್ತು ಕೊರಟಗೆರೆ ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ಅಪ್ಪು ಎಂಬುವ ಯುವಕರು ಅ...
19/01/2024

ತುಮಕೂರು ತಾಲ್ಲೂಕಿನ ನರಗಾನಹಳ್ಳಿ ಗ್ರಾಮದ ಗವಿರಂಗ, ರಾಕೇಶ್ ಮತ್ತು ಕೊರಟಗೆರೆ ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ಅಪ್ಪು ಎಂಬುವ ಯುವಕರು ಅಯ್ಯಪ್ಪಸ್ವಾಮಿ ಮಾಲಾಧರಿಗಳಾಗಿದ್ದು ಇಂದು ನಂಜನಗೂಡು ಕಪಿಲಾ ನದಿತೀರದಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳಿಗಿ ದುರದೃಷ್ಟವಶ ಮೃತಪಟ್ಟಿದ್ದು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಅಗ್ನಿಶಾಮಕ ಸಿಬ್ಬಂಧಿ ಮತ್ತು ಸ್ಥಳೀಯ ತೆಪ್ಪ ನಡೆಸುವವರು ಮತ್ತು ಈಜುಗಾರ ಸಹಾಯದಿಂದ ಹೊರತೆಗೆದು ಕಾನೂನು ಕ್ರಮ ಜರುಗಿಸಿ ವಾರಸುದಾರರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶ್ರೀ ದರ್ಶನ್ ದ್ರುವನಾರಾಯಣ್, ಶಾಸಕರು ನಂಜನಗೂಡು ರವರು ಹಾಜರಿದ್ದು ಸೂಕ್ತ ಸಲಹೆ ನೀಡಿದರು. ಹಿಂದೆ ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಇಂತಹದ ಅಪಘಾತ ಸಂಬವಿಸಿ 3 ಜನರ ಪ್ರಾಣ ಹಾನಿಯಾಗಿತ್ತು.‌ ತಲಕಾಡು ನಿಸರ್ಗದಾಮದ ಬಳಿಯೂ ಪ್ರಾಣಾಪಯಗಳು ಸಂಭವಿಸುತದತ್ತಿದ್ದು ಸಾರ್ವಜನಿಕರು ನದಿಗಳಿಗೆ ಇಳಿಯುವ ಮನ್ನ ಮುಂಜಾಗ್ರತೆ ವಹಿಸಿ. ಜೀವ ಅಮೂಲ್ಯ.

35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕರಿಗೆ ಅರಿವಿನ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ...
17/01/2024

35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕರಿಗೆ ಅರಿವಿನ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಶಾಲೆಯ ಮಕ್ಕಳು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು

ನಂಜನಗೂಡು ಪ್ರತಿಧ್ವನಿ ವೇದಿಕೆ ವತಿಯಿಂದ "ನಮ್ಮೂರ ಹಬ್ಬ" ಕನ್ನಡ ರಾಜೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಕ್ಷಣ.
15/01/2024

ನಂಜನಗೂಡು ಪ್ರತಿಧ್ವನಿ ವೇದಿಕೆ ವತಿಯಿಂದ "ನಮ್ಮೂರ ಹಬ್ಬ" ಕನ್ನಡ ರಾಜೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಕ್ಷಣ.

ನಂಜನಗೂಡು ಸರ್ಕಾರಿ ಪದವಿ ಕಾಲೇಜುರವರು ಆಲಂಬೂರು ಗ್ರಾಮದಲ್ಲಿ ವಾರ್ಷಿಕ ಎನ್ ಎಸ್ ಎಸ್ ಶಿಬಿರವನ್ನು ಹಮ್ಮಿಕೊಂಡು ನನ್ನನ್ನೂ ಶಿಬರದ ಕಾರ್ಯಕ್ರಮಕ್...
10/01/2024

ನಂಜನಗೂಡು ಸರ್ಕಾರಿ ಪದವಿ ಕಾಲೇಜುರವರು ಆಲಂಬೂರು ಗ್ರಾಮದಲ್ಲಿ ವಾರ್ಷಿಕ ಎನ್ ಎಸ್ ಎಸ್ ಶಿಬಿರವನ್ನು ಹಮ್ಮಿಕೊಂಡು ನನ್ನನ್ನೂ ಶಿಬರದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ "ಯವಜನತೆ ಮತ್ತು ಅಪರಾದ" ಎಂಬ ವಿಷಯದ ಬಗ್ಗೆ ಮಾತನಾಡಿದೆ. ಮಹಾರಾಜ ಕಾಲೇಜು ಮೈಸೂರು ಇಲ್ಲಿ ವ್ಯಾಸಂಗ ಮಾಡುವಾಗ ನಾನೂ ಕೂಡ ಎನ್ ಎಸ್ ಎಸ್ ಶಿಬಿರಾರ್ಥಿ ಆಗಿದ್ದು ನೆನಪಾಯಿತು.

Address

Ballary City
Bellary
583101

Telephone

+919480801031

Website

Alerts

Be the first to know and let us send you an email when SDPO Nanjangudu posts news and promotions. Your email address will not be used for any other purpose, and you can unsubscribe at any time.

Share

Category