Karnataka nava nirmana sene bidar

Karnataka nava nirmana sene bidar Contact information, map and directions, contact form, opening hours, services, ratings, photos, videos and announcements from Karnataka nava nirmana sene bidar, Political organisation, gurunanak colony bidar, Bidar.

02/07/2021ರ ಬೆಳಗಿನ ಜಾವಾ ಪುಲ್ವಾಮದಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಿತ್ತಿರುವ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧ ಹವಾಲ್ದಾರ್ ಕಾಶಿರಾಯ ಶ...
04/07/2021

02/07/2021ರ ಬೆಳಗಿನ ಜಾವಾ ಪುಲ್ವಾಮದಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಿತ್ತಿರುವ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧ ಹವಾಲ್ದಾರ್ ಕಾಶಿರಾಯ ಶಂ ಬೊಮ್ಮನಹಳ್ಳಿ ಅವರಿಗೆ ಕನಸೇ ಬೀದರ್ ಜಿಲ್ಲಾ ವತಿಯಿಂದ ವಿರ ನಮನಗಳು

31/12/2015

ಕಾರ್ನಾಟಕ ನವ ನಿರ್ಮಾಣ ಸೇನೇ ವತಿಯಿನ್ದ ಹೋಸಾ ವರ್ಶದಾ ಹಾರ್ದಿಕ ಶುಭಶ್ಯಗಲ.. ಬಿದರ

01/11/2015

ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೧] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

17/09/2015
23/08/2015

ಕನ್ನಡ ಒನ್ ಇಂಡಿಯಾ » ಕನ್ನಡ » ಹಬ್ಬ-ಹರಿದಿನ » Rajyotsava ರಾಜ್ಯೋತ್ಸವ ಸಂದರ್ಭದಲ್ಲಿ ನಾಡ ಗೀತೆ ಓದಿ, ಕೇಳಿ Posted by: Mahesh | Fri, Oct 31, 2014, 13:37 [IST] ಬೆಂಗಳೂರು, ಅ.31: ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡ ಗೀತೆಯನ್ನಾಗಿ ಕರ್ನಾಟಕ ಸರ್ಕಾರ 2004ರಲ್ಲಿ ಘೋಷಿಸಿತು. ಕೆ.ವಿ ಪುಟ್ಟಪ್ಪ(ಕುವೆಂಪು ) ಅವರು ಈ ಪದ್ಯವನ್ನು 1924 ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದಿದ್ದರು ಎಂಬುದು ವಿಶೇಷ. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಘೋಷಿಸಲಾಯಿತು. ನಾಡಗೀತೆ ವಿವಾದ: ಮಧ್ವಾಚಾರ್ಯರ ಹೆಸರು ಸೇರ್ಪಡೆ ಮತ್ತು ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಬಸವೇಶ್ವರರ ಹೆಸರು ಕೈ ಬಿಡಬೇಕೆಂಬ ವಿಚಾರಗಳ ಕುರಿತು ಧರ್ಮ ಗುರುಗಳು, ಸಾಹಿತಿಗಳು ಮತ್ತು ರಾಜಕಾರಣಿಗಳ ನೆಡುವೆ ತೀವ್ರ ಚರ್ಚೆ ನಡೆದು ವಿಷಯ ವಿವಾದ ಉಂಟಾಗಿತ್ತು. ಕೆಲವರು ಈ ಗೀತೆ ನಾಡ ಗೀತೆಯಾಗಲು ಅರ್ಹವಾಗಿಲ್ಲವೆಂದು ಕೂಡ ವಾದಿಸಿದರು. ಇತ್ತೀಚೆಗೆ ಪಾಟೀಲ ಪುಟ್ಟಪ್ಪ ಅವರು ಈ ಗೀತೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಕಿತ್ತೂರು ಚೆನ್ನಮ್ಮಳ ಹೆಸರು ಬರಬೇಕು ಎಂದು ವಾದಿಸಿದರು. ಅದರೆ, ಮೂಲ ಪದ್ಯದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆ ಬಳಸುವಂತೆ ಕರ್ನಾಟಕ ಸರ್ಕಾರ ಆಜ್ಞೆ ಹೊರಡಿಸಿತು. [ರಾಜ್ಯದ ರೈತರ ನಾಡ ಗೀತೆ ಇಲ್ಲಿದೆ ಓದಿ] ಸಂಗೀತ ಸಂಯೋಜನೆ: ಕುವೆಂಪು ವಿರಚಿತ ಗೀತೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರು ಅನಂತ ಸ್ವಾಮಿ ಅವರು ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಸಿ. ಅಶ್ವಥ್ ಅವರ ಸಂಯೋಜನೆ ಜನಪ್ರಿಯತೆ ಗಳಿಸಿತು. ಯಾರ ರಾಗ ಸಂಯೋಜನೆ ಬಳಸಬೇಕು ಎಂಬುದರ ಬಗ್ಗೆ ಕೂಡಾ ವಿವಾದ ಉಂಟಾಗಿತ್ತು. ಪ್ರೊ. ಶಿವರುದ್ರಪ್ಪ ಅವರ ಸಮಿತಿ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯನ್ನು ಶಿಫಾರಸು ಮಾಡಿತ್ತು. ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ, ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ, ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ ಕುಮಾರವ್ಯಾಸರ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾ ನಂದ ಕಬೀರರ ಜಯ ಹೇ ಕರ್ನಾಟಕ ಮಾತೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗಾ ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

15/08/2015

ಸ್ವಾತಂತ್ರ್ಯ ಬಂದು ಇಂದಿಗೆ ಸುಮಾರು ೬೫ ವರ್ಷಗಳು ಕಳೆದು ಹೋಗಿವೆ, ೧೮೫೭ ರ ಮೊದಲ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಗಿದ್ದು ನಮ್ಮ ದೇಶವನ್ನ ಬ್ರಿಟೀಷರ ದಾಸ್ಯದಿಂದ ಬಿಡಿಸುವ ಹೊರಾಟ. ನಿರಂತರ ೨೦೦ ವರ್ಷಗಳು ಅವರು ಆಳಿದರು,ದೋಚಿದರು,ಕಬ್ಬಿನ ಜಲ್ಲೆಯಂತೆ ಹಿಂಡಿದರು,ಎಷ್ಟೋ ನಮ್ಮ ಮುಗ್ಧ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು, ಸುಭಾಶ್ ಚಂದ್ರ ಬೋಸ್ , ಭಗತ್ ಸಿಂಗ್, ಸೂರ್ಜೋ ಸೇನ, ಮುಂತಾದ ಸಾವಿರಾರು ಕ್ರಾಂತಿಕಾರಿಗಳ ನರಬಲಿ ನೆಡೆದು ಹೊಯಿತು ಕೊನೆಗೆ ಗಾಂಧಿ ಅನ್ನುವ ತಾತ ಮಾಧ್ಯಮವಾಗಬೇಕಾಯಿತು ಭಾರತ ಮತ್ತು ಪಾಕಿಸ್ತಾನಗಳನ್ನ ಬೇರೆ ಬೇರೆ ಮಾಡಿ ಸಧಾ ಕಚ್ಚಾಡುವ ತೆರದಲ್ಲಿ ಮಾಡಿ, ಮುಂದೆ ಅದನ್ನೇ ಮುಖ್ಯ ವಿಚಾರವನ್ನಾಗಿರಿಸಿಕೊಂಡು ದೇಶದ ಒಳಗಡೆಯೂ ಎರಡು ಕೋಮುಗಳ ನಡುವೆ ಬಿರುಕು ಉಂಟುಮಾಡಿ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಅಂತರಿಕ ವಾಗಿ ರಾಜಕಾರಣಿಗಳು ಮನಸೋ ಇಚ್ಛೆ ದೋಚುವ ಲೈಸೆನ್ಸ್ ಕೊಡಿಸಲು!! ಅಲ್ಲವೇ?

೧೯೬೫ ರಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಂದರ್ಭದಲ್ಲಿ ಕೊಡುವುದೆಲ್ಲವನ್ನು ಕೊಟ್ಟು ಕಳಿಸಿದ್ದರೂ ಕಾಲು ಕೆರೆದುಕೊಂಡು ಬಂದರು ಯುದ್ದ ಮಾಡಲು,ಆವಾಗ ನಮ್ಮ ದೇಶದ ಸೈನ್ಯವನ್ನು ಎಷ್ಟು ಭದ್ರವಾಗಿ ಕಟ್ಟಿದ್ದೆವೆಂದರೆ ನಮ್ಮ ಮುಂದೆ ತರಗೆಲೆಗಳಂತೆ ಉದುರಿ ಹೊಯಿತು ಪಾಕಿಸ್ತಾನ. ಸ್ವತಹ ಆಗಿನ ಪ್ರದನಿಗಳಾಗಿದ್ದ ಲಾಲ್ ಭಾಹದ್ದೂರ್ ಶಾಸ್ತ್ರಿಗಳು ಮುಂದಾಳತ್ವ ವಹಿಸಿ “೨ನೆ ಕಾಶ್ಮೀರ ಕಧನ”ವನ್ನ ಎದುರಿಸಿದರು, ಅವರೊಂದಿಗೆ ಲೆಫ್ಟಿನೆಂಟ್ ಜನರಲ್ ಚೌದರಿ, ಲೆಫ್ಟಿನೆಂಟ್ ಜನರಲ್ ಹರ್ಭಕ್ಶ್ ಸಿಂಗ್ , ಏರ್ ಚೀಫ್ ಮಾರ್ಷಲ್ ಅರ್ಜುನ್ ಹಾಗು ಮುಂತಾದವರು ಜೊತೆಯಾದರು. ಕೊನೆಗೆ ಆ ಯುದ್ಧವೂ “ತಾಷ್ಕೆಂಟ್ ಒಪ್ಪಂದ”ವನ್ನ ಸಂಯುಕ್ತ ರಾಷ್ಟ್ರ ಸಂಘಟನೆಯ ಮಧ್ಯಸ್ತಿಕೆಯಲ್ಲಿ ಪರಸ್ಪರ ಭಾರತ ಹಾಗು ಪಾಕಿಸ್ತಾನಗಳು ಸಹಿ ಹಾಕಿಸುವಲ್ಲಿ ಮುಕ್ತಾಯಗೊಂಡಿತು.

೧೯೭೧ ರಲ್ಲಿ ಮತ್ತೊಮ್ಮೆ ಪ್ರಹಾರ, ಆಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರದಾನಿಯಗಿದ್ದರು. ಡಿಸೆಂಬರ್ ೩ ೧೯೭೧ ರಂದು ಪ್ರಾರಂಭಗೊಂಡ ಯುದ್ದವು ಕೇವಲ ೧೩ ದಿನಗಳಲ್ಲಿ ಮುಗಿದು ಹೊಯಿತು,ಹಾಗು ವಿಶ್ವ ಕಂಡ ಅತ್ಯಂತ ಕಡಿಮೆ ಸಮಯದ ಯುದ್ದ ಇದಾಗಿತ್ತು, ಆದರೆ ಆಗಿನ ಲೆಫ್ಟಿನೆಂಟ್ ಜನರಲ್ ಗಳಾದ ಜೆ. ಎಸ್ ಅರೋರ, ಜಿ. ಬೀವರ್, ಸಗಥ್ ಸಿಂಗ್, ಅಡ್ಮಿರಲ್ ನಂದ, ಹಾಗು ಏರ್ ಚೀಫ್ ಮಾರ್ಷಲ್ ಪ್ರತಾಪ್ ಲಾಲ್ ಅವರ ಹೋರಾಟ ಹೇಗಿತ್ತೆಂದರೆ ಹದಿಮೂರು ದಿನಗಳಲ್ಲಿ ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರ ಗಳನ್ನ ತ್ಯಜಿಸಿ ಬೇಷರತ್ ಶರಣಾಯಿತು,ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೆಶವೆನ್ನುವ ಸ್ವಾತಂತ್ರ್ಯ ರಾಷ್ಟ್ರವಾಯಿತು.

೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ದವಂತೂ ನಿಮಗೆಲ್ಲ ಗೊತ್ತೇ ಇದೆ, ಆಗಿನ ಪ್ರಧಾನಿಗಳಗಿದ್ದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು. ಸುಮಾರು ೨ ತಿಂಗಳು ನಡೆದ ಕದನದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಕಾರ್ಗಿಲ್ ಭಾಗವನ್ನ ಮತ್ತೆಂದು ಅವರಿಗೆ ಬಿಟ್ಟು ಕೊಡದಂತೆ ವಾಪಸ್ ಪಡೆದೆವು. ಆಗ ದೇಶಕ್ಕಾಗಿ ಪ್ರಾಣ ತೆತ್ತ ಸುಮಾರು ಸೈನಿಕರಿಗೆ ಪರಮವೀರ ಚಕ್ರ ಪ್ರಶಸ್ತಿಗಳನ್ನ ಕೊಡಮಾದಲಾಯಿತು, ಅವರಲ್ಲಿ ಯೋಗಿಂದ್ರ ಸಿಂಗ್ ಯಾದವ್, ಮನೋಜ್ ಕುಮಾರ್ ಪಾಂಡೆ, ವಿಕ್ರಂ ಭಾತ್ರ, ಅನುಜ್ ನಾಯರ್, ಸರವಣನ್, ಅಜಯ್ ಅಹುಜಾ, ಸಂಜಯ್ ಕುಮಾರ್, ಹಾಗು ರಾಜೇಶ್ ಸಿಂಗ್ ಅಧಿಕಾರಿ ಮುಂತಾದವರು ಮುಖ್ಯವಾದವರು.

ಓದಿದಿರಲ್ಲ ಇದನ್ನೆಲ್ಲಾ? ಇದನ್ನೆಲ್ಲ ನಮಗೆ ಗೊತ್ತಿಲ್ಲ ಅನ್ನುವ ಕಾರಣಕ್ಕೆ ಹೇಳುತ್ತಿಲ್ಲ, ನಾವು ಮರೆತಿದ್ದೇವೆ ಅನ್ನುವುದನ್ನ ನೆನಪಿಸುತ್ತಿದ್ದೇನೆ ಅಷ್ಟೇ. ನಮಗೆ ಬಂದಿರುವ ಸ್ವಾತಂತ್ರ್ಯ ಎಂತಹದು ? ಸದಾ ಒಂದು ಭಾಗದಿಂದ ಒಳನುಸುಳಿ ಕಂಡ ಕಂಡಲ್ಲಿ ಬಾಂಬುಗಳನ್ನ ಇಟ್ಟು ಅಮಾಯಕರನ್ನ ಸಾಯಿಸುವ ಪಕ್ಕದ ದೇಶ ಒಂದು ಸೃಷ್ಟಿಯಾಯಿತು, ಪದೇ ಪದೇ ಕಾಶ್ಮೀರದಲ್ಲಿ ದಲ್ಲಿ ಗಲಾಟೆ ಮಾಡುವುದು, ಮತ್ತೊಂದು ಕಡೆ ಇಂದ ಬಾಂಗ್ಲಾದೇಶ ಅನ್ನುವ ಚಿಕ್ಕ ರಾಷ್ಟ್ರದವರು ನಮ್ಮ ದೇಶಕ್ಕೆ ಅಕ್ರಮ ವಾಗಿ ಒಳನುಸುಳುವುದು, ಭಯೋತ್ಪಾದನೆಯನ್ನ ಪ್ರತ್ಯಕ್ಷವಾಗಿ ಬೆಂಬಲಿಸುವ ಪಾಕಿಸ್ತಾನವೆಂಬ ನರಕ ನಮಗೆ ಸಿಕ್ಕಿತು ಅಲ್ಲವೇ? ಹಾಗೆಂದು ಸ್ವಾತಂತ್ರ್ಯ ಸಂದರ್ಭದಲ್ಲಿ ವಿಭಜನೆ ಮಾಡಬಾರದಿತ್ತು ಅನ್ನುವ ಅಭಿಪ್ರಾಯವಲ್ಲ ಆದರೆ ವಿಭಜನೆಯಾದಮೇಲೆ ಸುಮ್ಮನಿದ್ದುಕೊಂಡು ದೇಶದ ಆಂತರಿಕ ಅಭಿವೃದ್ದಿಯನ್ನ ಗಮನಿಸಬೇಕು ಹೊರತು,ಮತ್ತೆ ಮತ್ತೆ ಕಾಲು ಕೆರೆದುಕೊಂಡು ಬರುವುದು ಯಾವ ಮಾಹ ಘನ ಕಾರ್ಯ ಸಾದಿಸಲು? ಅನ್ನುವುದು.

ನಮ್ಮನ್ನು ಪ್ರತಿಕ್ಷಣವೂ ಹಿಂಸಿಸುತ್ತಿರುವ ಪಾಕಿಸ್ತಾನ,ಬಾಂಗ್ಲಾದೇಶ,ಚೀನಾಗಳು ಒಂದುಕಡೆಯಾದರೆ ಇನ್ನೊಂದು ಆಂತರಿಕವಾಗಿ ಸಾಮಾನ್ಯ ಜನರನ್ನು ಕಿತ್ತು ತಿನ್ನುತ್ತಿರುವ ಹೊಲಸು ರಾಜಕಾರಣಿಗಳು!! ಎಂತಹ ನಾಯಕರುಗಳು!!! ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಹಗರಣಗಳನ್ನು ನಡೆಸುತ್ತಿದ್ದಾರೆ, ಜನ ಸೇವೆಯ ಹೆಸರಲ್ಲಿ ತಮ್ಮ ೧೦ ತಲೆಮಾರುಗಳು ಕೂತು ತಿನ್ನುವಷ್ಟು ದುಡ್ಡು ದೋಚುತ್ತಿದ್ದಾರೆ, ತಮ್ಮ ಸ್ವಂತ ಆಸ್ತಿಯಂತೆ ಮಣ್ಣು ಅಗೆದು ಅಕ್ರಮ ಗಣಿಗಾರಿಕೆಯನ್ನ ರಾಜಾರೋಷವಾಗಿ ನೆಸುತ್ತಿದ್ದಾರೆ ಇನ್ನು ಕೆಲವರಂತೂ ಮುಗ್ಧ ರೈತರ ಭೂಮಿಯನ್ನ ಕಸಿದುಕೊಳ್ಳುತ್ತಿದ್ದಾರೆ, ಕೇಳಲು ಹೋದರೆ ಅನ್ನದಾತನ ತಲೆಗೆ ಗುಂಡಿಟ್ಟು ಗೋಲಿಬಾರ್ ಮಾಡುತ್ತಿದ್ದಾರೆ!! ಆದರೆ ಮಾಧ್ಯಮದ ಮುಂದೆ ಸತ್ಯ ಹರಿಶ್ಚಂದ್ರ ರಂತೆ ಪೋಸು ಕೊಡುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.

ಧರ್ಮದ ಹೆಸರಲ್ಲಿ ಇನ್ನು ಕೆಲವರದ್ದು ಮೋಸ ಹಾಗು ಹಗಲು ದರೋಡೆ, ಕೋಟ್ಯಾಂತರ ರೂಪಾಯಿಗಳನ್ನ ನೆಲಮಾಳಿಗೆಯಲ್ಲಿ ಬಚ್ಚಿಡುತ್ತಿದ್ದಾರೆ, ಸಂತನೆಂದು ಹೇಳಿಕೊಂಡು ವ್ಯಭಿಚಾರವನ್ನ ನಡೆಸುವ ಕಳ್ಳ ಸ್ವಾಮಿಜಿಗಳು ನಮ್ಮ ದೇಶದಲ್ಲಿ ಮೆರೆಯುತ್ತಿದ್ದಾರೆ, ಧರ್ಮದ ಹೆಸರಿನಲ್ಲಿ ಜರನರನ್ನ ಮೋಸಗೊಳಿಸಿ ಮಂಕು ಬೂದಿ ಎರಚಿ ಹಗಲಿನಲ್ಲೇ ರಾಜಾರೋಷವಾಗಿ ಜನರ ಸಮಯ ಹಾಗು ಹಣವನ್ನ ದೋಚುತ್ತಿದ್ದಾರೆ, ಇನ್ನು ಕೆಲವು ಸ್ವಾಮಿಗಳು ಕೆಲವು ಹೊಲಸು ರಾಜಕಾರಣಿಗಳನ್ನ ನೇರವಾಗಿ ಹಳಿಯುವ, ಅಥವಾ ಬೆಂಬಲಿಸುವುದನ್ನ ನೋಡಿದರೆ ಅವರು ಧರ್ಮ ಪ್ರಚರಕರಲ್ಲ ಕೇವಲ ಅಪ ಪ್ರಚಾರಕರು ಅನ್ನುವುದು ಸ್ಪಷ್ಟವಾಗುತ್ತೆ ಅಲ್ಲವೇ?

ಪೊಲೀಸರದು ಇನ್ನು ವಿಚಿತ್ರ ಹಿಂಸೆ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಸರಿಯಾಗಿ ನಿಮ್ಮ ವಾಹನಗಳನ್ನ ಸರಿಯಾಗಿ ಓಡಿಸಿದ್ದರೂ, ಸಂಚಾರಿ ನಿಯಮಗಳನ್ನ ಪಾಲಿಸಿದ್ದರೂ, ಸಾಮಾನ್ಯರನ್ನ ಹಿಡಿದು ಫೈನ್ ಹೆಸರಿನಲ್ಲಿ ದೋಚುತ್ತಿದ್ದಾರೆ, ಪೊಲೀಸ್ ಎನ್ನುವ ಟೋಪಿ ದರಿಸಿಕೊಂಡು ರೋಲ್ಕಾಲ್ ಮಾಡುವ ಅಧಿಕಾರಿಗಳು, ಅವರನ್ನು ಬೆಂಬಲಿಸುವ ರಾಜಕೀಯದ ಕಾಣದ ಕೈಗಳು.

ಬ್ರಷ್ಟಾಚಾರದ ವಿರುದ್ಧ ಯಾರಾದರು ಪ್ರತಿಭಟನೆ ಮಾಡಿದರೆ, ಅವರ ಮೇಲೆ ಲಾಟಿ ಚಾರ್ಜ್ ಮಾಡುವುದು,ಅರೆಸ್ಟ್ ಮಾಡುವುದು, “ಜನರಿಗೆ ಉಪಯೋಗಕ್ಕೆ ಬರುವ ಬ್ರಷ್ಟಾಚಾರ ವಿರೋಧಿ ಕಾನೂನನ್ನ ಜಾರಿಗೆ ತನ್ನಿ” ಎಂದರೆ , ರಾಜಕೀಯದವರಿಗೆ ಬೇಕಾಗುವ, ಅವರಿಗೆ ಮತ್ತಷ್ಟು ದೋಚಲು ಅನುಕೂಲವಾಗುವ೦ತೆ ಅದನ್ನ ತಿರುಚಿ ಅದನ್ನೇ ಸಂಸತ್ತಿನಲ್ಲಿ ಮಂಡಿಸುವುದನ್ನ ನೋಡಿದರೆ ರಕ್ತ ಕುದಿಯುವುದಿಲ್ಲವೇ?

ಅದಕ್ಕೆ ಕೇಳಿದ್ದು ಸ್ನೇಹಿತರೆ ಎಲ್ಲಿಯ ಸ್ವಾತಂತ್ರ್ಯ? ಯಾವ ಸ್ವಾತಂತ್ರ್ಯ ನಮಗೆ ಬಂದಿರುವುದು? ಹೋಗಲಿ ಒಂದು ತಮಾಷೆ ಗೊತ್ತಾ? ನಮ್ಮ ಸ್ವಾತಂತ್ರ್ಯ ದಿನಾಚರಣೆ ಯನ್ನೇ ನಾವು ನೆಮ್ಮದಿಯಾಗಿ ಆಚರಿಸಲು ಆಗುತ್ತಿಲ್ಲ!! ಪಕ್ಕದ ಪಾಕಿಗಳು ಯಾವಾಗ ಬಾಂಬ್ ಹಾಕುತ್ತಾರೋ ? ಯಾವಾಗ ನಾವು ಸಾಯಬೇಕೋ ಅನ್ನುವ ಭಯದಲ್ಲೇ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಎಷ್ಟು ನಾಚಿಕೆಗೇಡಿನ ಸಂಗತಿಯಲ್ಲವೇ? ಇನ್ನೆ೦ದೂ ನಮಗೆ ತೊಂದರೆ ಕೊಡದ ರೀತಿಯಲ್ಲಿ ಪಾಕಿಗಳನ್ನ ಸಧೆಬಡಿಯುವ ಸರ್ಕಾರ ಯಾಕೆ ಬರುತ್ತಿಲ್ಲ? ಅಥವಾ ನಮ್ಮ ರಾಜಕಾರಣಿಗಳಿಗೆ ಅದನ್ನ ಮಾಡುವ ಮನಸಿಲ್ಲ ಏಕೆ?

ಒ೦ದೇ ಪರಿಹಾರ ಅದು ಮೊದಲು ನಮ್ಮ ನಮ್ಮಲ್ಲೇ ಇದ್ದು ನಮ್ಮಲ್ಲೇ ಒಡಕನ್ನ ಉಂಟುಮಾಡಿ ರಾಜಕೀಯದ ಬೆಳೆಬೇಯಿಸಿಕೊಳ್ಳುತ್ತಿರುವ ರಾಜಕೀಯದ ಹೊಲಸು ನಾಯಕರುಗಳಿಗೆ ಬುದ್ದಿ ಕಲಿಸುವುದು, ಬ್ರಷ್ಟಾಚಾರವನ್ನ ಸಾಯಿಸಲು ಸೋಮರಿತನವನ್ನ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ದುಡಿಯುವುದು.. ಅಲ್ಲವೇ? ಇಲ್ಲದಿದ್ದಲ್ಲಿ ಇನ್ನೊಂದು ದಿನ ನಮ್ಮ ದೇಶದಲ್ಲಿ ನಾವೇ ಅಲ್ಪ ಸಂಖ್ಯಾತರಾಗಿ, ಪಾಕಿಸ್ತಾನದ ದಾಸರಾಗಿ ಹೋಗಬೇಕಾಗುತ್ತದೆ ಅಷ್ಟೇ ಅಲ್ಲ ನಮ್ಮ ಸೋಮಾರಿತನಕ್ಕೆ ನಮ್ಮ ಮೊಮ್ಮಕ್ಕಳು ನರಕಯಾತನೆಯನ್ನ ಅನುಭವಿಸಬೇಕಾಗುತ್ತದೆ ಅಲ್ಲವೇ?

ಎಲ್ಲಾ ಅಂತರಿಕ ಕೆಸರೆರಚಾಟಗಳ ನಡುವೆಯೂ ದೇಶಕ್ಕಾಗಿ,ನಮ್ಮ ಉಜ್ವಲ ನಾಳೆಗಳಿಗಾಗಿ ಪ್ರಾಣ ತೆತ್ತು ವೀರ ಸ್ವರ್ಗವನ್ನ ಏರಿರುವ ಎಲ್ಲ ನಮ್ಮ ಸೈನಿಕ ಭಾಂದವರಿಗೆ ಭಾವ ಪೂರ್ಣ ಅಶ್ರುತರ್ಪಣವನ್ನ ಸಲ್ಲಿಸೋಣ.. ಹಾಗೆ ಬನ್ನಿ…. ಸ್ವಾತಂತ್ರ್ಯ ದಿನಾಚರಣೆಯ ಈ ಸಂಧರ್ಬದಲ್ಲಿ ಅಣ್ಣ ಹಜಾರೆಯವರ ಬ್ರಷ್ಟಾಚಾರಿ ವಿರೋಧಿ ಕಾಯ್ದೆ “ಲೋಕ ಪಾಲ್ ಬಿಲ್” ಅನ್ನು ಸಂಪೂರ್ಣವಾಗಿ ಬೆಂಬಲಿಸೋಣ, ಸಾಧ್ಯವಾದಷ್ಟು ಬ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡೋಣ, ದೇಶವನ್ನ ಅಭಿವೃದ್ಧಿಯ ದಿಸೆಯಲ್ಲಿ ಮುನ್ನೆಡೆಸುವ ನಾಯಕರನ್ನ ಆರಿಸುವ ಜವಾಬ್ದಾರಿಯನ್ನ ಅರಿಯೋಣ ಹಾಗು ಅರಿವನ್ನ ಮೂಡಿಸುವ ಪ್ರಯತ್ನ ಮಾಡೋಣ ಅಲ್ಲವೇ? ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು …ಮತ್ತೊಮ್ಮೆ ಬರ್ತೀನಿ……….

12/08/2015

ದ.ರಾ.ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ

ಶ್ರೀ ಬೇಂದ್ರೆಯವರು
ಜನನ ೧೮೯೬ ಜನವರಿ ೩೧
ಧಾರವಾಡ
ಮರಣ ೧೯೮೧ ಅಕ್ಟೋಬರ ೨೬
ಮುಂಬಯಿ
ಕಾವ್ಯನಾಮ ಅಂಬಿಕಾತನಯದತ್ತ
ವೃತ್ತಿ ವರಕವಿ, ಶಿಕ್ಷಕರು
ರಾಷ್ಟ್ರೀಯತೆ ಭಾರತೀಯ
ಕಾಲ (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿ ಕಥೆ, ಕವನ, ವಿಮರ್ಶೆ, ಅನುವಾದ
ವಿಷಯ ಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
ಸಾಹಿತ್ಯ ಚಳುವಳಿ ನವೋದಯ
ಪ್ರಭಾವಗಳು
ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು.

11/08/2015

ಜ್ಞಾನಪೀಠ ಪ್ರಶಸ್ತಿ ಉಲ್ಲೇಖ
ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.

ಬಿ.ಎಂ.ಶ್ರೀ.
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

ದ.ರಾ.ಬೇಂದ್ರೆ

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೄಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ-ಜನ-ಮನ
ಇದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ?
ಉತ್ತಮ ಕವಿ ನುಡಿ – ಚದುರಗೆ
ಚಾರುತ್ವದ ಕುಂದಣದಲಿ
ಚಾರಿತ್ರ್ಯದ ರತ್ನ
ಚಾತುರ್ಯದ ಮಂತಣದಲಿ
ಸತ್ಸಂಗದ ಯತ್ನ
ಇದೆ ತೄಪ್ತಿಯು ನಿಮಗೆ

ಸ.ಸ.ಮಾಳವಾಡ
ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಡಿ.ಎಲ್.ನರಸಿಂಹಚಾರ್
ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.

ಹಾ.ಮಾ.ನಾಯಕ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.

ಸುಜನಾ
ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.

ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.

ದೇ.ಜ.ಗೌ
ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.

ಕೀರ್ತಿನಾಥ ಕುರ್ತಕೋಟಿ
ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ 'ರೊಮ್ಯಾಂಟಿಕ್' ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಕೋ.ಚೆನ್ನಬಸಪ್ಪ
ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ - ಆತ್ಮಜ್ಞಾನ - ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.

ಕೆ. ಸಚ್ಚಿದಾನಂದನ್
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

07/08/2015

ಕುವೆಂಪು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರ ಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

06/08/2015

ಡಾ.ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಬಹುಮಖ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರ ಅಧ್ಯಯನಶೀಲತೆ ಅಪಾರವಾದುದು. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ. [೧] [೨] [೩] [೪]

ವಿದ್ಯಾಭ್ಯಾಸ
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತಿದ್ದರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.
೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು.
೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು. ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.
ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.
೧೯೨೦ರವರೆಗೆ ಮುಂಬೈಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.
ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
ವೃತ್ತಿ ಜೀವನ
ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು.
ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು. ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.
ಅಸ್ಪೃಶ್ಯತೆಯ ವಿರುದ್ದ ಹೋರಾಟ
೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.
ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು. ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು.
ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ. *ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.

ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು. *೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.
ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು.ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು.
ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, "ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು"ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು:
ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು.ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

06/08/2015

ಬಿ.ಆರ್.ಅಂಬೇಡ್ಕರ್
ಪುಟ ಸಮಸ್ಯೆಗಳು
ಭೀಮರಾವ್ ರಾಮ್‌ಜೀ ಅಂಬೇಡ್ಕರ್
Ambedkar speech at Yeola.png
೧೩ ಅಕ್ಟೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್
ಅಧ್ಯಕ್ಷರು ಸಂವಿಧಾನ ರಚನ ಸಮಿತಿ ]]
ಅಧಿಕಾರ ಅವಧಿ
೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦
ಮೊದಲನೆಯ ಕಾನೂನು ಮತ್ತು ನ್ಯಾಯಾಂಗ ಸಚಿವ
ಅಧಿಕಾರ ಅವಧಿ
೧೫ ಆಗಸ್ಟ್ ೧೯೪೭ – ಸೆಪ್ಟೆಂಬರ್ ೧೯೫೧
ರಾಷ್ಟ್ರಪತಿ ರಾಜೇಂದ್ರಪ್ರಸಾದ್
ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಿದರು
ಕಾರ್ಮಿಕ ಸದಸ್ಯ ವೈಸ್ ರಾಯ್ ನಿರ್ವಾಹಕ ಸಮಿತಿ
ಅಧಿಕಾರ ಅವಧಿ
೧೯೪೨ – ೧೯೪೬
ಪೂರ್ವಾಧಿಕಾರಿ ಫಿರೋಜ್ ಖಾನ್ ನೂನ್
ಉತ್ತರಾಧಿಕಾರಿ ಸ್ಥಾನವನ್ನು ರದ್ದುಪಡಿಸಲಾಯಿತು
ವೈಯುಕ್ತಿಕ ಮಾಹಿತಿ
ಜನನ 14 ಏಪ್ರಿಲ್ 1891
ಮೊವ್, ಕೇಂದ್ರೀಯ ಪ್ರಾಂತಗಳು, ಬ್ರಿಟಿಷ್ ಭಾರತ (ಈಗ ಮಧ್ಯಪ್ರದೇಶದಲ್ಲಿದೆ)
ಮರಣ 6 ಡಿಸೆಂಬರ್ 1956 (ತೀರಿದಾಗ ವಯಸ್ಸು ೬೫)
ದೆಹಲಿ, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ರಮಾಬಾಯಿ (m. 1906)
ಸವಿತಾ ಅಂಬೇಡ್ಕರ್ (m. 1948)

ಅಭ್ಯಸಿಸಿದ ವಿದ್ಯಾಪೀಠ ಮುಂಬೈ ವಿಶ್ವವಿದ್ಯಾಲಯ
ಕೊಲಂಬಿಯಾ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯದ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
ಧರ್ಮ ಬೌದ್ಧಧರ್ಮ
ಸಹಿ
ಮಿಲಿಟರಿ ಸೇವೆ

04/08/2015

ಕರ್ನಾಟಕದ ಹುತ್ರಿದುರ್ಗ ಕಬ್ಬಿಣದ ಯುಗದ ಅವಶೇಷಗಳು ಸಂಪಾದಿಸಿ

ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗಕ್ಕೆ ಸೇರಿರಬಹುದಾದ ಸಮಾಧಿಯ ಅವಶೇಷಗಳು ಕುಣಿಗಲ್ ತಾಲೂಕಿನ ಹುತ್ರಿದುರ್ಗ ಕೋಟೆ ಸಮೀಪ ಪತ್ತೆಯಾಗಿವೆ.(Jul 12, 2014,)
ಕೆಂಪೇಗೌಡರ ಕಾಲದ ಇತಿಹಾಸ ಪ್ರಸಿದ್ಧ ಕೋಟೆಗಳಲ್ಲಿ ಹುತ್ರಿದುರ್ಗ ಕೋಟೆಯೂ ಒಂದು.
ಸೀಗೆಹಳ್ಳಿಯ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಹಂ.ಗು. ರಾಜೇಶ್ ಮತ್ತು ಡಾ.ಪುಟ್ಟರಾಜು ಅವರು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಮಯದಲ್ಲಿ ಇವುಗಳು ಪತ್ತೆಯಾಗಿವೆ.
ಹುತ್ರಿದುರ್ಗ ಕೋಟೆಯ ಪೂರ್ವ ದಿಕ್ಕಿನ ಮಾಗಡಿ ದ್ವಾರ ಮುಚ್ಚಾಲಮ್ಮನ ಗುಡಿ ಮುಂಭಾಗದಿಂದ ಅಲ್ಲಿಯ ಬಿಸಿಲು-ಬಸವಣ್ಣ ಮಂಟಪದವರೆಗಿನ ಸರ್ವೆ ನಂ.59ರಲ್ಲಿ ಈ ಅವಶೇಷಗಳು ಕಂಡುಬಂದಿವೆ.
ಕಬ್ಬಿಣಯುಗದ ಈ ಸಮಾಧಿಗಳು ವೃತ್ತಾಕಾರದಲ್ಲಿ ಜೋಡಿಸಿದ ಕಪ್ಪು ಮತ್ತು ಗ್ರಾನೈಟ್ ಶಿಲೆಗಳಿಂದ ಕೂಡಿದ್ದು, ಶಿಲಾವೃತ್ತಗಳು 12 ಅಡಿ ವ್ಯಾಸ ಹೊಂದಿವೆ. ಈ ಸಮಾಧಿಗಳಲ್ಲಿ ಪ್ರಾಚೀನ ಕಾಲದ ಮಾನವರ ದೇಹ/ಅಸ್ಥಿ ಪಂಜರಗಳನ್ನು ಇರಿಸಿ ಅವುಗಳ ಜತೆಗೆ ಮುಂದಿನ ಜನ್ಮಕ್ಕೆ ಉಪಯೋಗವಾಗಲಿ ಎಂಬ ನಂಬಿಕೆಯಿಂದ ಅವರು ಬಳಸಿದ ಪಾತ್ರೆ, ಮಡಕೆ, ಕುಡಿಕೆ ಮತ್ತು ಆಯುಧಗಳನ್ನು ಸಮಾಧಿಯಲ್ಲಿ ಇರಿಸುತ್ತಿದ್ದರು. ಈ ಸಮಾಧಿಗಳು ಅತ್ಯಂತ ಪ್ರಾಚೀನವಾಗಿದ್ದು, ಹುತ್ರಿದುರ್ಗದ ಇತಿಹಾಸವನ್ನು ಸುಮಾರು 3 ಸಾವಿರ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಮಾಗಡಿ ಮತ್ತು ಹುತ್ರಿದುರ್ಗದ ಪರಿಸರದಲ್ಲಿ 'ಕಲ್ಲುಸೇವೆ' ಎಂಬ ವಿಶಿಷ್ಟ ಶವಸಂಸ್ಕಾರ ಪದ್ಧತಿಯೊಂದಿತ್ತು. ಶವಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡದೆ ಬೆಟ್ಟದ ಬಂಡೆಗಳ ಮೇಲೆ ಇರಿಸಿ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿಸಲಾಗುತ್ತದೆ. ಕೆಲ ದಿನಗಳ ನಂತರ ಗ್ರಾಮದವರು ಅಳಿದುಳಿದ ಮೂಳೆಗಳನ್ನು ಸಂಗ್ರಹಿಸಿ ಶವ ಸಂಸ್ಕಾರದ ಪದ್ಧತಿಯಂತೆ ಹೂಳುತ್ತಿದ್ದರು. ಹುತ್ರಿದುರ್ಗದಲ್ಲಿ ಹಿಂದೆ ಇಂತಹ ಪದ್ಧತಿ ಆಚರಣೆಯಲ್ಲಿತ್ತು ಎಂಬುದು ಸ್ಥಳೀಯರಿಂದ ತಿಳಿಯುತ್ತದೆ. ಈ ರೀತಿಯ ಕಲ್ಲುಸೇವೆ ನಡೆಯುತ್ತಿದ್ದ ಬೆಟ್ಟದ ಪಕ್ಕದಲ್ಲಿಯೇ ಕಬ್ಬಿಣ ಯುಗದ ಸಮಾಧಿಗಳು ದೊರೆತಿರುವುದು ವಿಶೇಷ.
ಕಬ್ಬಿಣ ಯುಗದ ಶವ ಸಂಸ್ಕಾರ ಪದ್ಧತಿಗೂ, ಕಲ್ಲುಸೇವೆ ಶವ ಸಂಸ್ಕಾರ ಪದ್ಧತಿಗೂ ಸಾಮ್ಯತೆಗಳಿರುವುದರಿಂದ ಕಲ್ಲುಸೇವೆಯೂ ಸುಮಾರು 3 ಸಾವಿರ ವರ್ಷಗಳ ಹಿಂದಿನ ಪದ್ಧತಿಯ ಮುಂದುವರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್) ಉಪನಿರ್ದೇಶಕಿ ಡಾ.ಎಸ್.ಕೆ. ಅರುಣಿ ಹುತ್ರಿದುರ್ಗ ಐತಿಹಾಸಿಕ ಸ್ಥಳ. ನಾಡಪ್ರಭು ಕೆಂಪೇಗೌಡರ ಕಾಲದ 1534ರ ಶಾಸನವಿರುವ ಕೋಟೆ ಇಲ್ಲಿದೆ. ಅಲ್ಲದೆ, ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಿಕೊಂಡಿದ್ದ. ಈ ಬಗೆಯ ಅನೇಕ ಐತಿಹಾಸಿಕ ದಾಖಲೆಗಳಿರುವ ಈ ಕೋಟೆ ಪಕ್ಕದಲ್ಲಿ ಯುವ ಸಂಶೋಧಕರು ಕಬ್ಬಿಣಯುಗದ ಅವಶೇಷಗಳನ್ನು ಪತ್ತೆ ಮಾಡಿರುವುದು ಬಹಳ ಮಹತ್ವದ್ದಾಗಿದೆ, ಎಂದು ಹೇಳಿದ್ದಾರೆ

Address

Gurunanak Colony Bidar
Bidar
585401

Website

Alerts

Be the first to know and let us send you an email when Karnataka nava nirmana sene bidar posts news and promotions. Your email address will not be used for any other purpose, and you can unsubscribe at any time.

Share