Voice of Hanur

Voice of Hanur We stand for our Hanur, we voice for our Hanur people.

21/02/2023

ಶತಕಗಳಿಂದಲೂ ನಿರ್ಮಾಣವಾಗಿಲ್ಲ ಹುತ್ತೂರು ರಸ್ತೆ! ಹಳ್ಳ ಗುಂಡಿಗಳಿಗೆ ಮುಕ್ತಿ ಯಾವಾಗ?

ಇಂತಹ ಅವ್ಯವಸ್ಥೆಗಳ ಮಧ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಹೇಗೆ? ಜನಜೀವನ ಹೇಗೆ? ಇದಕ್ಕೆಲ್ಲಾ ಶಾಸಕರು ಸ್ಪಂಧಿಸೋದಾದ್ರು ಯಾವಾಗ? ಉತ್ತರಿಸಿ ಶಾಸಕರೇ.

ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

16/01/2023

ಮಕರ ಸಂಕ್ರಾಂತಿ ಪ್ರಯುಕ್ತ ಸಾಲೂರು ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿ ದರ್ಶನ ಪಡೆದು ಗೋ ಪೂಜೆ ಸಲ್ಲಸಿದರು.

27/12/2022

ಹನೂರಿನಿಂದ ಕೊಳ್ಳೆಗಾಲಕ್ಕೆ ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಶಾಸಕರಿಗೂ ಕ್ಷೇತ್ರದ ಬಗ್ಗೆ ಗಮನವಿಲ್ಲ ಸಾರಿಗೆ ಸಚಿವರಾದರೂ ದಯೆತೋರಲಿ ಎಂದು ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು.

ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

ಸಕ್ರೀಯ ರಾಜಕಾರಣದಿಂದ ಹೊರ ಉಳಿದಿದ್ದ ಜನಾರ್ಧನ್ ರೆಡ್ಡಿ ಎರಡನೇ ಇನ್ನಿಗ್ಸ್ ಶುರು! ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRP) ದಿಂದ ಯಾರಿ...
26/12/2022

ಸಕ್ರೀಯ ರಾಜಕಾರಣದಿಂದ ಹೊರ ಉಳಿದಿದ್ದ ಜನಾರ್ಧನ್ ರೆಡ್ಡಿ ಎರಡನೇ ಇನ್ನಿಗ್ಸ್ ಶುರು!

ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRP) ದಿಂದ ಯಾರಿಗೆ ಎಷ್ಟು ಲಾಭ ಎಷ್ಟು ನಷ್ಟ?

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

22/12/2022

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಮಹಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ.

ಕ್ಷೇತ್ರದ ಕಡೆ ಮುಖಮಾಡಿ ಶಾಸಕರೇ! ಹನೂರಿನ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿರುವ ಕೌದಳ್ಳಿ ಗ್ರಾಮದಲ್ಲಿ ಕಸ ತುಂಬಿ ಚರಂಡಿಗಳಲ್ಲಿ ಹೂಳು ತ...
20/12/2022

ಕ್ಷೇತ್ರದ ಕಡೆ ಮುಖಮಾಡಿ ಶಾಸಕರೇ!

ಹನೂರಿನ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿರುವ ಕೌದಳ್ಳಿ ಗ್ರಾಮದಲ್ಲಿ ಕಸ ತುಂಬಿ ಚರಂಡಿಗಳಲ್ಲಿ ಹೂಳು ತುಂಬಿ ಗಬ್ಬು ನಾರುವ ಪರಿಸ್ಥಿತಿ ಬಂದು ಜನರು ಅನಾರೋಗ್ಯಕ್ಕೀಡಾಗುತ್ತಿದ್ದರೂ ತಲೆ ಕೆಡಸಿಕೊಳ್ಳದ ಶಾಸಕರು ಕ್ಷೇತ್ರಕ್ಕೆ ಬೇಕಾ?
ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಕ್ಷೇತ್ರಕ್ಕಾಗಿ ನಮ್ಮ ಧ್ವನಿ.

19/12/2022

ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿಯ ವಿಷೇಶ ಪೂಜೆ.

16/12/2022

ಶಾಸಕರ ನಿರ್ಲಕ್ಷ್ಯದಿಂದ ಪಾದಯಾತ್ರಿಗಳಿಂದಲೂ ಸಿಎಂಗೆ ಮನವಿ!

ಮಲೆಮಹಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತರಿಗೆ ದಾರಿ ಮಧ್ಯೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಶಾಸಕರಿಗೆ ಮನವಿ ಮಾಡಿ ಬೇಸತ್ತ ಭಕ್ತಾಧಿಗಳು ಹನೂರಿಗೆ ಬಂದಿದ್ದ ಸಿಎಂ ಸಾಹೇಬರ ಬಳಿ ಮನವಿ ಮಾಡಿದ್ದಾರೆ.

ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

16/12/2022

ಶವ ಸಂಸ್ಕಾರಕ್ಕೂ ಅನುವು ಮಾಡಿಕೊಡದ ಸಾಧನೆ ನಮ್ಮ ಶಾಸಕರದ್ದು!

ಹನೂರಿನ ಅಂಬಿಕಾಪುರದಲ್ಲಿ ಸ್ಮಶಾನವಿಲ್ಲದೆ ಜನ ತಮ್ಮ ಪ್ರಾಣದ ಹಂಗು ತೊರೆದು ಹಳ್ಳದಲ್ಲಿಯೇ ಶವ ಸಂಸ್ಕಾರ ಮಾಡಬೇಕು.

ಕ್ಷೇತ್ರದಲ್ಲಿ ಅಭಿವೃದ್ಧಿಯಂತು ಇಲ್ಲ ಕನಿಷ್ಟ ಮೂಲಭೂತ ಸೌಕರ್ಯಗಳಾದ್ರೂ ಬೇಡ್ವಾ ಶಾಸಕರೇ? ಇದಕ್ಕೆಲ್ಲಾ ಮುಕ್ತಿ ಯಾವಾಗ?

ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

15/12/2022

ಪ್ರತಿನಿತ್ಯ 6 ಕಿ.ಮೀ. ನೆಡೆಯಬೇಕು, ನಮ್ಮ ಶಾಸಕರಂತೂ ದಯೆತೋರಲ್ಲ ನೀವಾದರೂ ಬಸ್ ಹಾಕಿಸಿಕೊಡಿ ಎಂದು ಸಿಎಂ ಸಾಹೇಬರಿಗೆ ಮನವಿ ಮಾಡಿದ ಅರೆಕಡುವಿನದೊಡ್ಡಿ ಶಾಲಾ ಮಕ್ಕಳು.

ದಿನಾ ಬೆಳಗ್ಗೆ ಅಲಾರಮ್ ಹೊಡೆೆಯುತ್ತೋ ಇಲ್ವೋ ಆದರೆ ಹನೂರಿನ ರಸ್ತೆ ಅವ್ಯವಸ್ಥೆಯ ಗೊಳಂತು ಇದ್ದೇ ಇರುತ್ತದೆ. ಆದರೂ ನಮ್ಮ ಶಾಸಕರಿಗೆ ಇದರ ಬಗ್ಗೆ ಗ...
15/12/2022

ದಿನಾ ಬೆಳಗ್ಗೆ ಅಲಾರಮ್ ಹೊಡೆೆಯುತ್ತೋ ಇಲ್ವೋ ಆದರೆ ಹನೂರಿನ ರಸ್ತೆ ಅವ್ಯವಸ್ಥೆಯ ಗೊಳಂತು ಇದ್ದೇ ಇರುತ್ತದೆ. ಆದರೂ ನಮ್ಮ ಶಾಸಕರಿಗೆ ಇದರ ಬಗ್ಗೆ ಗಮನವೇ ಇಲ್ಲ.

ಇದು ಗೂಳ್ಯ ಮತ್ತು ಹಳೆಯೂರಿನ ರಸ್ತೆಗಳ ಪರಿಸ್ತಿತಿ. ಇದಕ್ಕೆಲ್ಲಾ ಅಂತ್ಯ ಯಾವಾಗ ಶಾಸಕರೇ? ಇಂತಹ ಜನಪ್ರತಿನಿಧಿಗಳು ನಿಜಕ್ಕೂ ಕ್ಷೇತ್ರಕ್ಕೆ ಬೇಕಾ?

ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

ರಸ್ತೆಯಿಲ್ಲ, ವಿದ್ಯುತ್ ಇಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ಜನ ಬಾಯಿ ಬಡಿದುಕೊಂಡಿದ್ದೆ ಆಯ್ತು ಆದರೆ ಕ್ಷೇತ್ರದ ಶಾಸಕರಿಗಂತೂ ಕರುಣೆ ಬರಲಿಲ್ಲ!...
13/12/2022

ರಸ್ತೆಯಿಲ್ಲ, ವಿದ್ಯುತ್ ಇಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ಜನ ಬಾಯಿ ಬಡಿದುಕೊಂಡಿದ್ದೆ ಆಯ್ತು ಆದರೆ ಕ್ಷೇತ್ರದ ಶಾಸಕರಿಗಂತೂ ಕರುಣೆ ಬರಲಿಲ್ಲ!

ಬರೀ ಉದ್ಘಾಟನೆ, ಭೂಮಿ ಪೂಜೆಗಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳೋದಲ್ಲ ಶಾಸಕರೇ ಒಮ್ಮೆಯಾದರೂ ಮಹಾದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳು ಯಾವ ದುಸ್ಥಿತಿಗೆ ತಲುಪಿವೆ ಎಂದು ನೋಡಿ.

ಇಂತಹ ಬೇಜವಾಬ್ದಾರಿ ಶಾಸಕರು ಕ್ಷೇತ್ರಕ್ಕೆ ಬೇಕಾ? ಕಾಮೆಂಟ್ ಮೂಲಕ ಹೇಳಿ.
ಕ್ಷೇತ್ರಕ್ಕಾಗಿ ನಮ್ಮೆಲ್ಲರ ಧ್ವನಿ!

Address

Hanur Taluk, Chamarajnagara
Chamarajanagar
571440

Website

Alerts

Be the first to know and let us send you an email when Voice of Hanur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Voice of Hanur:

Share

Category