ರಾದೇ ಪುಸ್ತಕ ಸಂಗ್ರಹ ಮಂದಿರ

ರಾದೇ ಪುಸ್ತಕ ಸಂಗ್ರಹ ಮಂದಿರ ಜ್ಙಾನ ಎಂಬ ದೇವರಿಗೆ.
ಪುಸ್ತಕ ಎನ್ನುವ ಒಂದು ಪುಟ್ಟ ದೇವಾಲಯ.

ಪುಸ್ತಕಗಳು ನಮ್ಮ ಕೈಯಲ್ಲಿರುವ ಕಾಗದದ ಪುಟಗಳಲ್ಲ;ಅವು ನಮ್ಮೊಳಗೆ ಮರೆತುಹೋದ ನೆನಪುಗಳಿಗೆ, ಭಾವನೆಗಳಿಗೆ ಮತ್ತು ಪ್ರಶ್ನೆಗಳಿಗೆ ಧ್ವನಿ ನೀಡುವ ಕನ್...
09/09/2026

ಪುಸ್ತಕಗಳು ನಮ್ಮ ಕೈಯಲ್ಲಿರುವ ಕಾಗದದ ಪುಟಗಳಲ್ಲ;
ಅವು ನಮ್ಮೊಳಗೆ ಮರೆತುಹೋದ ನೆನಪುಗಳಿಗೆ, ಭಾವನೆಗಳಿಗೆ ಮತ್ತು ಪ್ರಶ್ನೆಗಳಿಗೆ ಧ್ವನಿ ನೀಡುವ ಕನ್ನಡಿಗಳು.
#ರಾದೇಪುಸ್ತಕಸಂಗ್ರಹಮಂದಿರ #ಬೆಳಗೆರೆಕೃಷ್ಣಶಾಸ್ತ್ರಿ

06/09/2026

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ #ವಿದ್ಯಾರ್ಥಿಗಳಿಂದ_ವಿಚಾರಗೋಷ್ಠಿ ಹಾಗೂ ದಕ್ಷ ಕಾಲೇಜಿನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ.
#ರಾದೇಪುಸ್ತಕಸಂಗ್ರಹಮಂದಿರ #ಪುಸ್ತಕಪ್ರೇಮಿಗಳು

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ  #ವಿದ್ಯಾರ್ಥಿಗಳಿಂದ_ವಿಚಾರಗೋಷ್ಠಿ ಹಾಗೂ  #ದಕ್ಷ_ಕಾಲೇಜಿನ_ವಿದ್ಯಾರ್ಥಿಗಳಿ...
04/09/2026

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ #ವಿದ್ಯಾರ್ಥಿಗಳಿಂದ_ವಿಚಾರಗೋಷ್ಠಿ ಹಾಗೂ #ದಕ್ಷ_ಕಾಲೇಜಿನ_ವಿದ್ಯಾರ್ಥಿಗಳಿಗೆ_ನೋಟ್_ಪುಸ್ತಕ ವಿತರಣೆ ಕಾರ್ಯಕ್ರಮ.

ವೀರಲೋಕದ 200ನೇ ಕೃತಿ…ವೀರಲೋಕ ಆರಂಭವಾದ ಮೊದಲ ಎರಡು ವರ್ಷಗಳ ವೇಗದಲ್ಲೇ ನಾವು ಮುಂದುವರಿದಿದ್ದರೆ, ಇಷ್ಟೊತ್ತಿಗೆ 500ಕ್ಕೂ ಹೆಚ್ಚು ಕೃತಿಗಳನ್ನು ...
29/08/2026

ವೀರಲೋಕದ 200ನೇ ಕೃತಿ…

ವೀರಲೋಕ ಆರಂಭವಾದ ಮೊದಲ ಎರಡು ವರ್ಷಗಳ ವೇಗದಲ್ಲೇ ನಾವು ಮುಂದುವರಿದಿದ್ದರೆ, ಇಷ್ಟೊತ್ತಿಗೆ 500ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುತ್ತಿದ್ದೆವು. ಆದರೆ ಒಂದು ಹಂತದಲ್ಲಿ ನಮ್ಮ ವೇಗಕ್ಕೆ ನಾವೇ ಬ್ರೇಕ್ ಹಾಕಿಕೊಳ್ಳಬೇಕಾಯಿತು. ಕನ್ನಡದಲ್ಲಿ ಕೃತಿಗಳ ಕೊರತೆಯಿಲ್ಲ ಆದರೆ ಮೌಲ್ಯಯುತವಾದ ಕೃತಿಗಳ ಕೊರತೆಯಿದೆ ಅನ್ನೋದು ದಿನಗಳೆದಂತೆ ಅರ್ಥವಾಗತೊಡಗಿತು. ಹಣವನ್ನು ಹಾಳೆಗಳನ್ನಾಗಿಸುವುದರಲ್ಲಿ ಯಾವ ಹೆಚ್ಚುಗಾರಿಕೆ ಇದೆ ಹೇಳಿ? ಆದ್ದರಿಂದ ವೇಗವನ್ನು ಕಡಿಮೆಮಾಡಿಕೊಂಡೆವು. ಹೆಚ್ಚು ಕೃತಿಗಳನ್ನು ಪ್ರಕಟಿಸುವುದಕ್ಕಿಂತ, ಮೌಲ್ಯಯುತವಾದ ಕೃತಿಗಳನ್ನು ಪ್ರಕಟಿಸುವುದೆಂದು ತೀರ್ಮಾನಿಸಿದೆವು. ಅದರ ಪರಿಣಾಮವಾಗಿ ಕಳೆದೊಂದು ವರ್ಷದಲ್ಲಿ ನಮ್ಮ ಪ್ರಕಟಣೆಗಳ ಸಂಖ್ಯೆ ಹತ್ತನ್ನೂ ದಾಟಲಿಲ್ಲ. ಇದು ನಿಮ್ಮ ಗಮನಕ್ಕೂ ಬಂದಿರಬಹುದು.

ಇದು ನಮ್ಮ ವೇಗ ಕಡಿಮೆಯಾಗಿದ್ದರ ಸಂಕೇತವಲ್ಲ; ನಮ್ಮ ಆದ್ಯತೆ ಬದಲಾಗಿದ್ದರ ಸಂಕೇತವೂ ಹೌದು! ಸಂಖ್ಯೆಯ ಹಿಂದೆ ಓಡುವುದಕ್ಕಿಂತ, ಮೌಲ್ಯದ ಹಿಂದೆ ಹೊರಡುವ ಅನಿವಾರ್ಯತೆ ಈಗಿನದು. ವರ್ಷಕ್ಕೆ ಐದೇ ಕೃತಿಗಳನ್ನು ಪ್ರಕಟಿಸಿದರೂ, ಆ ಐದೂ ಕನ್ನಡಕ್ಕೆ ಅತ್ಯಮೂಲ್ಯ ಕೊಡುಗೆಗಳಾಗಿರಬೇಕು ಎಂಬ ಕಾರ್ಯಸೂಚಿ ನಮ್ಮದು. ಇದೇ ಇನ್ನು ಮುಂದೆ ವೀರಲೋಕದ ಎಸ್ಓಪಿ!

ಅಂತಹ ಹೊಸ ಚಿಂತನೆಯ, ಹೊಸ ಪಯಣದ ಮೊದಲ ಹೆಜ್ಜೆಯಾಗಿ ಬರುತ್ತಿರುವುದು ವೀರಲೋಕದ 200ನೇ ಕೃತಿ.
ಇದು ಕೇವಲ 200ನೇ ಕೃತಿಯ ಸಂಭ್ರಮವಲ್ಲ. ಇದು ವೀರಲೋಕದ ಪ್ರಕಟಣಾ ಪಯಣದ ಹೊಸ ಅಧ್ಯಾಯ.

ಈ ಕೃತಿ ನಿಮ್ಮ ನಿರೀಕ್ಷೆಯನ್ನು ಖಂಡಿತ ನಿರಾಸೆಗೊಳಿಸುವುದಿಲ್ಲ ಎಂಬ ವಿಶ್ವಾಸ ನನ್ನದು.

ಎಂದಿನಂತೆ ಜೊತೆಗಿರಿ.

ನಿಮ್ಮ
#ವೀರಕಪುತ್ರಶ್ರೀನಿವಾಸ

 #ಓಶೋ ಅವರ  #ಮಣ್ಣಿನ_ಹಣತೆ’ — ಅಂತರಂಗದ ಬೆಳಕಿನ ಹುಡುಕಾಟ‘ಮಣ್ಣಿನ ಹಣತೆ’ ಎಂಬ ಶೀರ್ಷಿಕೆಯೇ ಅತ್ಯಂತ ಅರ್ಥಪೂರ್ಣವಾಗಿದೆ. ಮಣ್ಣಿನಿಂದ ರೂಪುಗೊಂಡ...
23/08/2026

#ಓಶೋ ಅವರ #ಮಣ್ಣಿನ_ಹಣತೆ’ — ಅಂತರಂಗದ ಬೆಳಕಿನ ಹುಡುಕಾಟ
‘ಮಣ್ಣಿನ ಹಣತೆ’ ಎಂಬ ಶೀರ್ಷಿಕೆಯೇ ಅತ್ಯಂತ ಅರ್ಥಪೂರ್ಣವಾಗಿದೆ. ಮಣ್ಣಿನಿಂದ ರೂಪುಗೊಂಡ ಒಂದು ಸರಳ ಹಣತೆ, ತನ್ನೊಳಗೆ ಬೆಳಕನ್ನು ಹೊತ್ತಿಕೊಂಡು ಕತ್ತಲೆಯನ್ನು ದೂರ ಮಾಡುವಂತೆ, ಮನುಷ್ಯನೂ ತನ್ನೊಳಗಿನ ಅರಿವಿನ ಬೆಳಕನ್ನು ಕಂಡುಕೊಂಡಾಗ ಜೀವನಕ್ಕೆ ಹೊಸ ಅರ್ಥ ಸಿಗುತ್ತದೆ ಎಂಬ ಚಿಂತನೆಯತ್ತ ಈ ಕೃತಿ ನಮ್ಮನ್ನು ಕರೆದೊಯ್ಯುತ್ತದೆ.
ಓಶೋ ಅವರ ಬರಹಗಳ ಪ್ರಮುಖ ವೈಶಿಷ್ಟ್ಯವೆಂದರೆ, ಅವರು ಆಧ್ಯಾತ್ಮಿಕತೆಯನ್ನು ಕೇವಲ ಧಾರ್ಮಿಕ ಆಚರಣೆಗಳ ವ್ಯಾಪ್ತಿಯಲ್ಲಿ ನೋಡದೆ, ವ್ಯಕ್ತಿಯ ಅಂತರಂಗದ ಅನುಭವ ಮತ್ತು ಜಾಗೃತಿಯೊಂದಿಗೆ ಜೋಡಿಸುತ್ತಾರೆ. ಹೊರಗಿನ ಜಗತ್ತಿನಲ್ಲಿ ಸಂತೋಷವನ್ನು ಹುಡುಕುವುದಕ್ಕಿಂತ, ನಮ್ಮೊಳಗೆ ನಡೆಯುತ್ತಿರುವುದನ್ನು ಗಮನಿಸುವುದು, ಮನಸ್ಸನ್ನು ಅರಿಯುವುದು ಮತ್ತು ಬದುಕನ್ನು ಜಾಗೃತಿಯಿಂದ ಅನುಭವಿಸುವುದು ಮುಖ್ಯ ಎಂಬ ಸಂದೇಶ ಇಲ್ಲಿ ಪ್ರಮುಖವಾಗುತ್ತದೆ.
ಮಣ್ಣಿನ ಹಣತೆ ಅತ್ಯಂತ ಸಾಮಾನ್ಯವಾದ ವಸ್ತು. ಆದರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಸೇರಿದಾಗ ಬೆಳಕು ಮೂಡುತ್ತದೆ. ಅದೇ ರೀತಿ ಮನುಷ್ಯನ ಜೀವನದಲ್ಲಿಯೂ ಜಾಗೃತಿ ಎಂಬ ಬೆಳಕು ಮೂಡಿದಾಗ ಅಜ್ಞಾನ, ಭಯ, ಗೊಂದಲ ಮತ್ತು ಅಶಾಂತಿಯ ಕತ್ತಲೆ ನಿಧಾನವಾಗಿ ದೂರವಾಗಬಹುದು. ಈ ಸರಳ ರೂಪಕದ ಮೂಲಕ ಬದುಕಿನ ಆಳವಾದ ಅರ್ಥವನ್ನು ಹುಡುಕುವ ಅವಕಾಶವನ್ನು ಕೃತಿ ನೀಡುತ್ತದೆ.
ಇಂದಿನ ವೇಗದ ಬದುಕಿನಲ್ಲಿ ಮನುಷ್ಯ ಹೊರಗಿನ ಯಶಸ್ಸು, ಸಂಪತ್ತು ಮತ್ತು ಭೌತಿಕ ಸೌಲಭ್ಯಗಳ ಹಿಂದೆ ಓಡುತ್ತಾನೆ. ಆದರೆ ತನ್ನೊಳಗಿನ ಶಾಂತಿ ಮತ್ತು ಸಂತೋಷವನ್ನು ಮರೆತುಬಿಡುತ್ತಾನೆ. ಅಂತಹ ಸಂದರ್ಭದಲ್ಲಿ ‘ಮಣ್ಣಿನ ಹಣತೆ’ ನಮ್ಮನ್ನು ಕ್ಷಣಕಾಲ ನಿಲ್ಲಿಸಿ, ನಮ್ಮೊಳಗೆ ನೋಡಿಕೊಳ್ಳುವಂತೆ ಮಾಡುವ ಕೃತಿಯಾಗಿ ಕಾಣುತ್ತದೆ.
ಓಶೋ ಅವರ ಚಿಂತನೆಗಳನ್ನು ಇಷ್ಟಪಡುವವರು ಮಾತ್ರವಲ್ಲದೆ, ಆತ್ಮಾವಲೋಕನ, ಧ್ಯಾನ, ಜೀವನದ ಅರ್ಥ ಮತ್ತು ಅಂತರಂಗದ ಶಾಂತಿಯ ಬಗ್ಗೆ ಚಿಂತಿಸಲು ಬಯಸುವ ಪ್ರತಿಯೊಬ್ಬ ಓದುಗರಿಗೂ ಈ ಕೃತಿ ಚಿಂತನೆಯನ್ನು ಹುಟ್ಟಿಸುವ ಓದಾಗಬಹುದು.
ಮಣ್ಣಿನಿಂದ ಹುಟ್ಟಿದ ಹಣತೆ ಹೊರಗಿನ ಕತ್ತಲೆಯನ್ನು ಹೋಗಲಾಡಿಸುತ್ತದೆ; ಅರಿವಿನಿಂದ ಹೊತ್ತಿದ ಅಂತರಂಗದ ಹಣತೆ ಬದುಕಿನ ಕತ್ತಲೆಯನ್ನು ದೂರ ಮಾಡುತ್ತದೆ. ಇದೇ ‘ಮಣ್ಣಿನ ಹಣತೆ’ ಎಂಬ ಶೀರ್ಷಿಕೆಯ ಸುಂದರ ಒಳಾರ್ಥವನ್ನು ನೆನಪಿಸುವ ಚಿಂತನೆ.
#ರಾದೇಪುಸ್ತಕಸಂಗ್ರಹಮಂದಿರ #ಪುಸ್ತಕಪ್ರೇಮಿಗಳು

ಯೋಗಿಗಳ ಜೀವನವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಪವಾಡಗಳ ಕಥೆಯಲ್ಲ. ಅದು ಆತ್ಮಶೋಧನೆ, ಅನುಭವ, ತ್ಯಾಗ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪಯಣ. ...
07/08/2026

ಯೋಗಿಗಳ ಜೀವನವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಪವಾಡಗಳ ಕಥೆಯಲ್ಲ. ಅದು ಆತ್ಮಶೋಧನೆ, ಅನುಭವ, ತ್ಯಾಗ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪಯಣ. ಈ ಹಿನ್ನೆಲೆಯಲ್ಲಿ ಯೋಗಿಗಳೊಂದಿಗೆ ಒಡನಾಟ ಹೊಂದಿದಾಗ ದೊರೆಯುವ ಅನುಭವಗಳು ಸಾಮಾನ್ಯ ಜೀವನದ ದೃಷ್ಟಿಕೋನವನ್ನು ಬದಲಾಯಿಸಬಲ್ಲವು.
#ಬೆಳಗೆರೆ_ಕೃಷ್ಣಶಾಸ್ತ್ರಿ ಗಳ
#ಯೇಗ್ದಾಗೆಲ್ಲಾ_ಐತೆ ಎಂಬ ಕೃತಿ ಅಂತಹ ಅನುಭವಗಳನ್ನು ಓದುಗರ ಮುಂದೆ ತೆರೆದಿಡುವ ಪ್ರಯತ್ನವಾಗಿ ಕಾಣುತ್ತದೆ. ಯೋಗಿಗಳ ವ್ಯಕ್ತಿತ್ವದ ಹೊರಗಿನ ರೂಪಕ್ಕಿಂತ ಅವರ ಅಂತರಂಗದ ಸಾಧನೆ ಮತ್ತು ಜೀವನದರ್ಶನವನ್ನು ಅರ್ಥಮಾಡಿಕೊಳ್ಳಲು ಕೃತಿ ಪ್ರೇರೇಪಿಸುತ್ತದೆ.
#ರಾದೇಪುಸ್ತಕಸಂಗ್ರಹಮಂದಿರ

ಯೋಗಿಗಳ ಜೀವನವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಪವಾಡಗಳ ಕಥೆಯಲ್ಲ. ಅದು ಆತ್ಮಶೋಧನೆ, ಅನುಭವ, ತ್ಯಾಗ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪಯಣ. ...
07/08/2026

ಯೋಗಿಗಳ ಜೀವನವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಪವಾಡಗಳ ಕಥೆಯಲ್ಲ. ಅದು ಆತ್ಮಶೋಧನೆ, ಅನುಭವ, ತ್ಯಾಗ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಪಯಣ. ಈ ಹಿನ್ನೆಲೆಯಲ್ಲಿ ಯೋಗಿಗಳೊಂದಿಗೆ ಒಡನಾಟ ಹೊಂದಿದಾಗ ದೊರೆಯುವ ಅನುಭವಗಳು ಸಾಮಾನ್ಯ ಜೀವನದ ದೃಷ್ಟಿಕೋನವನ್ನು ಬದಲಾಯಿಸಬಲ್ಲವು.
#ಬೆಳಗೆರೆ_ಕೃಷ್ಣಶಾಸ್ತ್ರಿ ಗಳ
#ಯೇಗ್ದಾಗೆಲ್ಲಾ_ಐತೆ ಎಂಬ ಕೃತಿ ಅಂತಹ ಅನುಭವಗಳನ್ನು ಓದುಗರ ಮುಂದೆ ತೆರೆದಿಡುವ ಪ್ರಯತ್ನವಾಗಿ ಕಾಣುತ್ತದೆ. ಯೋಗಿಗಳ ವ್ಯಕ್ತಿತ್ವದ ಹೊರಗಿನ ರೂಪಕ್ಕಿಂತ ಅವರ ಅಂತರಂಗದ ಸಾಧನೆ ಮತ್ತು ಜೀವನದರ್ಶನವನ್ನು ಅರ್ಥಮಾಡಿಕೊಳ್ಳಲು ಕೃತಿ ಪ್ರೇರೇಪಿಸುತ್ತದೆ.
#ರಾದೇಪುಸ್ತಕಸಂಗ್ರಹಮಂದಿರ #ಪುಸ್ತಕಪ್ರೇಮಿಗಳು

ಡಾ ಮಹೇಂದ್ರಮೂರ್ತಿ ದೇವನೂರು ರವರ  #ವಚನಪಿತಾಮಹ  ು_ಹಳಕಟ್ಟಿ ಪುಸ್ತಕ  #ರಾದೇಪುಸ್ತಕಸಂಗ್ರಹಮಂದಿರ  ಸೇರಿತ್ತು.      #ಪುಸ್ತಕಪ್ರೇಮಿಗಳು     ...
01/08/2026

ಡಾ ಮಹೇಂದ್ರಮೂರ್ತಿ ದೇವನೂರು ರವರ #ವಚನಪಿತಾಮಹ ು_ಹಳಕಟ್ಟಿ ಪುಸ್ತಕ #ರಾದೇಪುಸ್ತಕಸಂಗ್ರಹಮಂದಿರ ಸೇರಿತ್ತು.
#ಪುಸ್ತಕಪ್ರೇಮಿಗಳು Dr Rajesh Nayak G R Rajesh Nayak G R ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಮತ್ತು ಆತ್ಮೀಯರು ಆಗಿರುವ  #ರವಿಕುಮಾರ್_ ನೀಹ ಸರ್ ರವರ  #ನೀಗೊನಿ ಪುಸ್ತಕ ...
30/07/2026

ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಮತ್ತು ಆತ್ಮೀಯರು ಆಗಿರುವ #ರವಿಕುಮಾರ್_ ನೀಹ ಸರ್ ರವರ #ನೀಗೊನಿ ಪುಸ್ತಕ ಇಂದು ನಮ್ಮ #ರಾದೇಪುಸ್ತಕಸಂಗ್ರಹಮಂದಿರ ಸೇರಿತ್ತು.. ಧನ್ಯವಾದಗಳು ರವಿಕುಮಾರ್ ಸರ್. 🙏🙏🙏
#ಪುಸ್ತಕಪ್ರೇಮಿಗಳು Purushottama Bilimale ರವಿಕುಮಾರ್ ನೀಹ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ತರಾಸು ಕನ್ನಡದ ಮಹಾನ್ ಕಾದಂಬರಿಕಾರರು, ತಮ್ಮ ಸಾಹಿತ್ಯ ಅನುಭವದಿಂದ ಹಲವಾರು ಸಾಮಾಜಿಕ, ಚಾರಿತ್ರಿಕ, ಮನೋ ವೈಜ್ಞಾನಿಕ ಕಾದಂಬರಿಗಳಿಂದ ಕನ್ನಡ ಕಾದಂ...
28/01/2026

ತರಾಸು ಕನ್ನಡದ ಮಹಾನ್ ಕಾದಂಬರಿಕಾರರು, ತಮ್ಮ ಸಾಹಿತ್ಯ ಅನುಭವದಿಂದ ಹಲವಾರು ಸಾಮಾಜಿಕ, ಚಾರಿತ್ರಿಕ, ಮನೋ ವೈಜ್ಞಾನಿಕ ಕಾದಂಬರಿಗಳಿಂದ ಕನ್ನಡ ಕಾದಂಬರಿ ಕ್ಷೇತ್ರವನ್ನು ಶ್ರೀಮಂತಗೊಳಿಸಿರಿವುದರಲ್ಲಿ ಇವರು ಪ್ರಮುಖರು,
ಇವರ ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಮತ್ತು ಸರ್ಪಮತ್ಸರ ಈ ಮೂರು ಕೃತಿಗಳನ್ನು ಸಿ ಕೆ ಕೃಷ್ಣಮೂರ್ತಿಯವರು ಕಾವ್ಯಾಲಯ ಪ್ರಕಾಶನ ಮೈಸೂರು ಮುಖಾಂತರ ಒಂದೇ ಪುಸ್ತಕದಲ್ಲಿ ನೀಡಿದ್ದರೆ. ಆ ಕೃತಿಯೇ #ನಾಗರಹಾವು #ರಾದೇಪುಸ್ತಕಸಂಗ್ರಮಂದಿರ #ರಾದೇಪ್ರತಿಷ್ಟನ #ಸಾಹಿತ್ಯ

Address

Chamarajanagar
571111

Website

Alerts

Be the first to know and let us send you an email when ರಾದೇ ಪುಸ್ತಕ ಸಂಗ್ರಹ ಮಂದಿರ posts news and promotions. Your email address will not be used for any other purpose, and you can unsubscribe at any time.

Shortcuts

Share