Crp Traffic PS

Crp Traffic PS Follow Traffic Rules

ಶಾಲಾ ಮಕ್ಕಳು ಅಮೂಲ್ಯ ರತ್ನಗಳು ವಾಹನ ಚಾಲಕರು ಜಾಗೃತಿಯಿಂದ ವಾಹನ ಚಲಾಯಿಸಿ
11/01/2026

ಶಾಲಾ ಮಕ್ಕಳು ಅಮೂಲ್ಯ ರತ್ನಗಳು ವಾಹನ ಚಾಲಕರು ಜಾಗೃತಿಯಿಂದ ವಾಹನ ಚಲಾಯಿಸಿ

09/01/2026

ಇಂದು ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಸನ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಸಹಯೋಗದೊಂದಿಗೆ ಚನ್ನರಾಯಪಟ್ಟಣ ಸಂಚಾರ ಪೊಲ...
06/01/2026

ಇಂದು ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಸನ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಸಹಯೋಗದೊಂದಿಗೆ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚನ್ನರಾಯಪಟ್ಟಣ ನಗರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಹವನ್ನು ಆಚರಿಸಿ ಸಾರ್ವಜನಿಕರಿಗೆ ವಾಹನ ಸವಾರರು ಮತ್ತು ಮಾಲೀಕರುಗಳಿಗೆ ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕರ್ನಾಟಕ ರಾಜ್ಯದ ಜನತೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ  #ಹೊಸ  #ವರ್ಷದ  #ಶುಭಾಶಯಗಳು.
01/01/2026

ಕರ್ನಾಟಕ ರಾಜ್ಯದ ಜನತೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ #ಹೊಸ #ವರ್ಷದ #ಶುಭಾಶಯಗಳು.

ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಇಂದು ಚನ್ನರಾಯಪಟ್ಟಣದ ವೈದ್ಯ ನರ್ಸಿಂಗ್ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ...
27/12/2025

ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಇಂದು ಚನ್ನರಾಯಪಟ್ಟಣದ ವೈದ್ಯ ನರ್ಸಿಂಗ್ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ಪಿಎಸ್ಐ ಹಾಗೂ ಠಾಣೆಯ ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮ ನಡೆಸಲಾಗಿರುತ್ತದೆ.

ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.   State PoliceKarnataka State Poli...
20/11/2025

ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. State PoliceKarnataka State Police

ಈ ದಿನ ಸಂಚಾರ ಪೊಲೀಸ್ ಠಾಣೆ ಚನ್ನರಾಯಪಟ್ಟಣ ವತಿಯಿಂದ ಸರ್ಕಾರಿ ಪ್ರೌಢಶಾಲೆ ಪೇಟೆ ಬೀದಿ ಚನ್ನರಾಯಪಟ್ಟಣ ದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ರವರ 1...
30/10/2025

ಈ ದಿನ ಸಂಚಾರ ಪೊಲೀಸ್ ಠಾಣೆ ಚನ್ನರಾಯಪಟ್ಟಣ ವತಿಯಿಂದ ಸರ್ಕಾರಿ ಪ್ರೌಢಶಾಲೆ ಪೇಟೆ ಬೀದಿ ಚನ್ನರಾಯಪಟ್ಟಣ ದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ರವರ 150ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತ ದಿವಸದ ಬಗ್ಗೆ ಶ್ರೀ ಕೃಷ್ಣ ನಾಯಕ್ ಪಿಎಸ್ಐ ಸಂಚಾರಿ ಠಾಣೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಿ ನಂತರ ಪ್ರತಿಜ್ಞಾವಿಧಿ ಬೋಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಸಮಾರಂಭವನ್ನು ಮುಕ್ತಾಯ ಮಾಡಲಾಯಿತು.

21/10/2025
ಆಯುಧ ಪೂಜೆಯ ಸಂಭ್ರಮ.
19/10/2025

ಆಯುಧ ಪೂಜೆಯ ಸಂಭ್ರಮ.

05/08/2025

*ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಪೊಲೀಸರ ಮನವಿ*

1. ಈ ಭೂಮಿಯಲ್ಲಿ ಮತ್ತೆ ಹುಟ್ಟಲು ನಾವು ತಾಯಿಯ ಗರ್ಭದಲ್ಲಿ 9 ತಿಂಗಳು ಕಾಯಬೇಕು.

2. ನಡೆಯಲು 2 ವರ್ಷಗಳು.

3. ಶಾಲೆಗೆ ಹೋಗಲು 3 ವರ್ಷಗಳು,
4. ಮತ ಚಲಾಯಿಸಲು 18 ವರ್ಷಗಳು,
5. ಉದ್ಯೋಗ ಪಡೆಯಲು 25 ವರ್ಷಗಳು,
6. ಮದುವೆಯಾಗಲು 25 ರಿಂದ 30 ವರ್ಷಗಳು... ನಾವು ಅನೇಕ ಸಂದರ್ಭಗಳಲ್ಲಿ ಕಾಯುತ್ತೇವೆ (ಕಾಯುತ್ತೇವೆ).

ಆದರೆ....

ವಾಹನಗಳನ್ನು ಹಿಂದಿಕ್ಕುವಾಗ... ಚಾಲನೆ ಮಾಡುವಾಗ, ನಾವು 30 ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ.

ನಾವು ತಪ್ಪು ಮಾಡಿ ಅಪಘಾತಕ್ಕೀಡಾದರೆ, ನಾವು ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು ಮತ್ತು ಅಗತ್ಯವಿದ್ದರೆ ವರ್ಷಗಳ ಕಾಲ ಆಸ್ಪತ್ರೆಯಲ್ಲಿರುತ್ತೇವೆ.

ಕೆಲವು ಸೆಕೆಂಡುಗಳ ಅಜಾಗರೂಕತೆಯು ಉಂಟುಮಾಡುವ ಭಯಾನಕ ಪರಿಣಾಮಗಳ ಬಗ್ಗೆ ಯೋಚಿಸಿ.

ಮುಂದೆ ಹೋಗುವವರು ಹೋಗಲಿ... ಹಿಂದೆ ಇರುವವರು ಆರಾಮವಾಗಿ ಹೋಗಲಿ....

ದಯವಿಟ್ಟು ಸಂಚಾರ ನಿಯಮಗಳನ್ನು ಸರಿಯಾದ ವೇಗದಲ್ಲಿ, ಸರಿಯಾದ ದಿಕ್ಕಿನಲ್ಲಿ ಅನುಸರಿಸಿ... ಹೆಲ್ಮೆಟ್ ಧರಿಸಿ... ಮತ್ತು ವಾಹನಗಳನ್ನು ನಿಯಂತ್ರಣದಲ್ಲಿಡಿ. ಮತ್ತು ನಿಮ್ಮ ಗಮ್ಯಸ್ಥಾನವನ್ನು ಸುರಕ್ಷಿತವಾಗಿ ತಲುಪಿ.

ನಿಮ್ಮ ಕುಟುಂಬ ಸದಸ್ಯರು ಮತ್ತು ಮಕ್ಕಳು ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಎಂಬುದನ್ನು ಮರೆಯಬೇಡಿ... ಸಾಧ್ಯವಾದರೆ, ಈ ಸಂದೇಶವನ್ನು ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ...

ಎಚ್ಚರಿಕೆಯಿಂದಿರಿ... ಹ್ಯಾಪಿ ಜರ್ನಿ

ಇವರಿಂದ,
ಸಂಚಾರ ಪೊಲೀಸ್ ಠಾಣೆ ಚನ್ನರಾಯಪಟ್ಟಣ

Address

Kuvempu Nagara
Channarayapatna
573116

Website

Alerts

Be the first to know and let us send you an email when Crp Traffic PS posts news and promotions. Your email address will not be used for any other purpose, and you can unsubscribe at any time.

Share

Category