12/04/2023
ಕನ್ನಡಿಗರ ಹೆಮ್ಮೆಯ ನಂದಿನಿ ಹಾಲು ಉತ್ಪನ್ನಗಳನ್ನು ಉಳಿಸಿ, ಬೆಳೆಸೋಣ. ನಮ್ಮ ರೈತರ ಜೀವನಾಡಿ ಆಗಿರುವ ನಂದಿನಿಯು ಉಸಿರಾಗಿದೆ. ನಂದಿನಿಯು ನಮ್ಮ ಕರ್ನಾಟಕದ ಬ್ರಾಂಡ್ ಆಗಿದ್ದು, ನಮ್ಮ ಬ್ರಾಂಡ್ ನ್ನು ಅಮುಲ್ ನೊಂದಿಗೆ ಸೇರ್ಪಡೆಗೊಳಿಸುವುದಾಗಲಿ / ವಿಲೀನಗೊಳಿಸುವುದಾಗಲಿ ಮಾಡುವುದು ಎಷ್ಟು ಸರಿ. ಈಗಾಗಲೇ ಕರ್ನಾಟಕಕ್ಕೆ ವಿಲೀನ ಎಂಬ ಭೂತವು ವಕ್ಕರಿಸಿ ಸರ್.ಎಂ.ವಿ. ರವರು ಕಟ್ಟಿ ಪೋಷಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ವಿಜಯ ಬ್ಯಾಂಕ್ ಇವುಗಳು ಹೇಳ ಹೆಸರಿಲ್ಲದಂತೆ ಮರೆ ಆಗಿವೆ. ಇದರಂತೆಯೇ ನಮ್ಮ ನಂದಿನಿ ಕೂಡ ಅಮುಲ್ ನೊಂದಿಗೆ ವಿಲೀನಗೊಳಿಸಿದ್ದಲ್ಲಿ “ನಂದಿನಿ” ಹೆಸರು ಕೂಡ ಮರೆ ಆಗುವುದರಲ್ಲಿ ಸಂಶಯವಿಲ್ಲ. ಕನ್ನಡರಿಗರ ಆತ್ಮ ಗೌರವ, ಸ್ವಾಭಿಮಾನ ಮಾರಟಕ್ಕಿಲ್ಲ, ಅಡಮಾನವಿಡಲು ಸಾಧ್ಯವಿಲ್ಲ. ನಮ್ಮ ನಂದಿನಿ ನಮ್ಮ ಕನ್ನಡಿಗರ ನಾಡಿಮಿಡಿತ, ನಮ್ಮ ಕರ್ನಾಟಕದ ಹೆಮ್ಮೆಯ ಸಂಕೇತ.
ಅದ್ದರಿಂದ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯು ಎಚ್ಚೆತ್ತುಕೊಂಡು “ಕರ್ನಾಟಕ ಬಚಾವೋ” ಅಭಿಮಾನ / ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. “ನಮ್ಮ ಕರ್ನಾಟಕ, ನಮ್ಮ ನಂದಿನಿ, ನಮ್ಮ ಹೆಮ್ಮೆ”
#ಕರ್ನಾಟಕಬಚಾವೋ