Cpi- ML Red Star ಚಿಕ್ಕಮಗಳೂರು

Cpi- ML Red Star ಚಿಕ್ಕಮಗಳೂರು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ಲೆನಿನ್ ವಾದಿ)ರೆಡ್ ಸ್ಟಾರ್
CPI-ML Red Star Chikamagalur, Karnataka

01/09/2026
ಸಿಪಿಐ (ಎಂ.ಎಲ್) ರೆಡ್ ಸ್ಟಾರ್  ನರಸಿಂಹರಾಜಪುರ ತಾಲೂಕ ಸಮಿತಿಸಭೆCPI-ML Red Star NR pura thakuk committee meeting ಇಂದು  ಸಿಪಿಐ (ಎಂ....
31/08/2026

ಸಿಪಿಐ (ಎಂ.ಎಲ್) ರೆಡ್ ಸ್ಟಾರ್ ನರಸಿಂಹರಾಜಪುರ ತಾಲೂಕ ಸಮಿತಿ
ಸಭೆ
CPI-ML Red Star NR pura thakuk committee meeting

ಇಂದು ಸಿಪಿಐ (ಎಂ.ಎಲ್) ರೆಡ್ ಸ್ಟಾರ್ ನರಸಿಂಹರಾಜಪುರ ತಾಲ್ಲೂಕು ಸಮಿತಿಯ ಮಹತ್ವದ ಸಭೆ ಯಶಸ್ವಿಯಾಗಿ ಜರುಗಿತು.

ಮುಂಬರುವ ಸೆಪ್ಟೆಂಬರ್ 16 ರಿಂದ 20 ರವರೆಗೆ ರಾಯಚೂರಿನಲ್ಲಿ ನಡೆಯಲಿರುವ ಪಕ್ಷದ 13ನೇ ಮಹಾ ಅಧಿವೇಶನ ವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ತಾಲ್ಲೂಕಿನಾದ್ಯಂತ ಪಕ್ಷ ಸಂಘಟನೆಯನ್ನು ಬಲಪಡಿಸಿ, ಜನಸಾಮಾನ್ಯರ ಹಾಗೂ ಕಾರ್ಮಿಕ-ರೈತರ ಪರ ಹೋರಾಟಗಳನ್ನು ತೀವ್ರಗೊಳಿಸಲು ತೀರ್ಮಾನಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ , #ಕಾಂ_ಸಂದೀಪ್ ಬಿ. ಆರ್. ಹಾಗೂ ರಾಜ್ಯ ಸಮಿತಿ ಸದಸ್ಯರಾದ #ಕಾಂ_ನಾಗೇಶ್ ಅವರು ಭಾಗವಹಿಸಿದ್ದರು,
ಕ್ರಾಂತಿಕಾರಿ ವಂದನೆಗಳೊಂದಿಗೆ,

#ಕಾಂ_ಉಮೇಶ್
ತಾಲ್ಲೂಕು ಕಾರ್ಯದರ್ಶಿ
ಸಿಪಿಐ (ಎಂ.ಎಲ್) ರೆಡ್ ಸ್ಟಾರ್, ತಾಲೂಕು ಸಮಿತಿ
ನರಸಿಂಹರಾಜಪುರ
ಚಿಕ್ಕಮಗಳೂರು
ಕರ್ನಾಟಕ

31/8/2026

Cpi- ML Red Star ಚಿಕ್ಕಮಗಳೂರು
CPI ML Red Star Karnataka CPI - ML Redstar Raichur CPI - ML Red Star 13th Party Congress of CPI (ML) Red Star CPIML Redstar Telangana State CPI - ML RED STAR, Odisha State Committee M Gangadhar Rudrayya B Cpiml

28/08/2026

*ಕರ್ನಾಟಕ ರೈತ ಸಂಘ - ಚಿಕ್ಕಮಗಳೂರು ಜಿಲ್ಲಾ ಸಮಿತಿ- AIKKS ಚಿಕ್ಕಮಗಳೂರು*

*ಡಾ. ಕಸ್ತೂರಿರಂಗನ್ ವರದಿ ಅವೈಜ್ಞಾನಿಕ - ಮಲೆನಾಡಿನ 147 ಹಳ್ಳಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ: ಕರ್ನಾಟಕ ರೈತ ಸಂಘ AIKKS ತೀವ್ರವಾಗಿ ವಿರೋಧಿಸುತ್ತದೆ*

ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಡಾ. ಕಸ್ತೂರಿರಂಗನ್ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಕರ್ನಾಟಕ ರೈತ ಸಂಘ AIKKS ಚಿಕ್ಕಮಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ.

ಈ ವರದಿಯು ಉಪಗ್ರಹ ಸರ್ವೆ ಆಧಾರದಲ್ಲಿ, ಮಲೆನಾಡಿನ ನೆಲದ ವಾಸ್ತವ ಅರಿಯದೆ ತಯಾರಿಸಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕಿನ 147 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯ (ESZ) ಎಂದು ಗುರುತಿಸಲಾಗಿದೆ. ಇದು ರೈತರ ಜಮೀನುಗಳನ್ನೂ ಅರಣ್ಯ ವಲಯಕ್ಕೆ ಸೇರಿಸಿದಂತಾಗಿದೆ.

ಮಲೆನಾಡನ್ನು ಕಾಪಾಡುತ್ತಿರುವುದು ನಾವೇ, ರೈತರೇ ಹೊರತು ಡೆಲ್ಲಿಯಲ್ಲಿ ಕುಳಿತು ವರದಿ ಬರೆದವರಲ್ಲ. ಭೌತಿಕ ಸರ್ವೆ (Physical Survey) ಮಾಡದೆ, ಕೃತಕ ಅರಣ್ಯ ಮತ್ತು ನೈಸರ್ಗಿಕ ಅರಣ್ಯವನ್ನು ಬೇರ್ಪಡಿಸದೆ ಏಕಾಏಕಿ ನಮ್ಮ ಹಳ್ಳಿಗಳನ್ನು ಸೂಕ್ಷ್ಮ ವಲಯಕ್ಕೆ ಸೇರಿಸುವುದು ವೈಜ್ಞಾನಿಕವಲ್ಲ.

ಈಗಾಗಲೇ ಕರ್ನಾಟಕ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರ ಮತ್ತೆ ಮತ್ತೆ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಖಂಡನೀಯ.

ನಮ್ಮ ಬೇಡಿಕೆಗಳು:
1. ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.
2. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕ ಭೌತಿಕ ಸರ್ವೆ ನಡೆಸಬೇಕು.
3. ರೈತರ ಕೃಷಿ ಭೂಮಿ ಮತ್ತು ವಾಸದ ಮನೆಗಳನ್ನು ESZ ವ್ಯಾಪ್ತಿಯಿಂದ ಕೈಬಿಡಬೇಕು
4. ಡಾ. ಮಾದವ ಗಾಡ್ಗೀಳ್ ವರದಿ ಜಾರಿಗೊಳಿಸಬೇಕು
5. ಆಕ್ರ ಗಣಿ ಮಾಪಿಯ, ಕಲ್ಲು ಕೊರೆ ಮಾಫಿಯಾ, ರೆಸಾರ್ಟ್ ಮಾಫಿಯಾ, ಟಿಂಬರ್ ಮಾಫಿಯಾ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಕೂಡಲೇ ನಿಲ್ಲಿಸಬೇಕು
6. ಪರಿಸರ ವಿರೋಧಿ ನೀತಿಗಳನ್ನು ಕೈ ಬಿಡಬೇಕು

ಈ ವರದಿಯನ್ನು ವಾಪಸ್ ಪಡೆಯದಿದ್ದರೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು

*ನಾಗೇಶ್ ಬೊಗಸೆ*
ಕರ್ನಾಟಕ ರೈತ ಸಂಘ - AIKKS
ಜಿಲ್ಲಾ ಅಧ್ಯಕ್ಷ
ಚಿಕ್ಕಮಗಳೂರು
+91 99722 14991

Address

ಬಾರ್ ಲೈನ್ ರಸ್ತೆ, ಚಿಕ್ಕಮಗಳೂರು
Chikmagalur
577131

Alerts

Be the first to know and let us send you an email when Cpi- ML Red Star ಚಿಕ್ಕಮಗಳೂರು posts news and promotions. Your email address will not be used for any other purpose, and you can unsubscribe at any time.

Shortcuts

Share