Namma Chikkamagaluru Foundation

Namma Chikkamagaluru Foundation NCF is an Non-profit organisation, working for social and environmental causes

ಚಿಕ್ಕಮಗಳೂರು ನಗರದ ಹೊಸ ಸಂಚಾರಿ ಪೊಲೀಸರು.
29/06/2024

ಚಿಕ್ಕಮಗಳೂರು ನಗರದ ಹೊಸ ಸಂಚಾರಿ ಪೊಲೀಸರು.

ಇದು ನಮ್ಮ ಬಹುಕಾಲದ ಬೇಡಿಕೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧವೆನ್ನುವುದು ಕೇವಲ ನಾಲ್ಕು ದಿನದ ಔಪಚಾರಿಕ ಕ್ರಮವಾಗದೇ ಜಿಲ್ಲಾಡಳಿತದ  ಕಠಿಣ ನೀತಿಯಾಗ...
09/06/2024

ಇದು ನಮ್ಮ ಬಹುಕಾಲದ ಬೇಡಿಕೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧವೆನ್ನುವುದು ಕೇವಲ ನಾಲ್ಕು ದಿನದ ಔಪಚಾರಿಕ ಕ್ರಮವಾಗದೇ ಜಿಲ್ಲಾಡಳಿತದ ಕಠಿಣ ನೀತಿಯಾಗಿ ಜಾರಿಗೆ ಬಂದರೆ ಮಾತ್ರ ನಮ್ಮ ಗಿರಿ ಉಳಿಯಲು ಸಾಧ್ಯ. ಕೇವಲ ಗಿರಿಯಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಗುಡ್ಡ, ಕಾಡು ಪ್ರದೇಶಗಳಲ್ಲಿಯೂ ಈ ಕಾನೂನು ಜಾರಿಯಾಗಬೇಕಿದೆ.
ಸಧ್ಯಕ್ಕೆ ಪ್ಲಾಸ್ಟಿಕ್ ತ್ಯಾಜ್ಯದ ಕೂಪವಾಗಿರುವ ಗಿರಿ ಪ್ರದೇಶದಲ್ಲಿ ಜಾರಿಗೆ ತಂದಿರುವ ಈ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆಗಳು.
ಅಧಿಕಾರಿ ವರ್ಗವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಊಟಿಯೇ ದೊಡ್ಡ ಉದಾಹರಣೆ. ಒಂದುಕಾಲದಲ್ಲಿ ತಿಪ್ಪೆಗುಂಡಿಯಾಗಿದ್ದ ಸಂಪೂರ್ಣ ಉದಕಮಂಡಲ ಜಿಲ್ಲೆ ಇಂದು ಸರ್ಕಾರದ ಕಠಿಣ ಕ್ರಮದ ಫಲವಾಗಿ 95% ಪ್ಲಾಸ್ಟಿಕ್ ಮುಕ್ತವಾಗಿದೆ. ಅಲ್ಲೀಗ ಐದು ಲೀಟರ್ ನೀರಿನ ಬಾಟಲಿಯ ಹೊರತಾಗಿ ಯಾವುದೇ ನೀರಿನ, ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಲಭ್ಯವಿಲ್ಲ. ಬೇಕೆಂದರೆ ಅರವತ್ತು ರುಪಾಯಿ ತೆತ್ತು ಒಂದು ಲೀಟರಿನ ನೀರಿನ ಗಾಜಿನ ಬಾಟಲಿಯನ್ನು ಕೊಳ್ಳಬೇಕು. ಈ ಕ್ರಮವು ಊಟಿಯನ್ನು ಪ್ಲಾಸ್ಟಿಕ್ ಗಂಡಾಂತರದಿಂದ ಪಾರು ಮಾಡಿದೆ.
ಅಲ್ಲಿ ಸಾಧ್ಯವಾಗಿದ್ದು ನಮ್ಮಲ್ಲೇಕೆ ಸಾಧ್ಯವಿಲ್ಲ.!?

ಇದು ಮಲ್ಲಂದೂರು ವೃತ್ತದ ಟ್ರಾಫಿಕ್. ಇಲ್ಲಿರುವ ಸಂಚಾರ ನಿಯಂತ್ರಕ ಸಿಗ್ನಲ್ ಕೆಲಸ ಮಾಡದೆ ಎರಡು ವರ್ಷಗಳೇ ಕಳೆದವು. ದಿನನಿತ್ಯ ಟ್ರಾಫಿಕ್ ಪೊಲೀಸರು...
29/02/2024

ಇದು ಮಲ್ಲಂದೂರು ವೃತ್ತದ ಟ್ರಾಫಿಕ್. ಇಲ್ಲಿರುವ ಸಂಚಾರ ನಿಯಂತ್ರಕ ಸಿಗ್ನಲ್ ಕೆಲಸ ಮಾಡದೆ ಎರಡು ವರ್ಷಗಳೇ ಕಳೆದವು. ದಿನನಿತ್ಯ ಟ್ರಾಫಿಕ್ ಪೊಲೀಸರು ಬಿಸಿಲಿನಲ್ಲಿ ಬೆವರುತ್ತಾ ಸಂಚಾರ ನಿಯಂತ್ರಿಸುತ್ತಾರೆ. ಆದರೂ ಯಾಕಿನ್ನೂ ಸಂಚಾರ ನಿಯಂತ್ರಣ ದೀಪಗಳನ್ನು ದುರಸ್ತಿಗೊಳಿಸಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯೇ ತಿಳಿಸಬೇಕು.
Chikkamagaluru District Police ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ದಯವಿಟ್ಟು ಇತ್ತ ಗಮನ ಹರಿಸಿ.

ಇದು ಮಲ್ಲಂದೂರು ರಸ್ತೆಯ ವೃತ್ತದ ಸಂಚಾರ ದಟ್ಟಣೆಯ ಚಿತ್ರ. ಇಲ್ಲಿ ಸಂಚಾರ ದೀಪದ ವ್ಯವಸ್ಥೆಯೂ ಇದೆ, ಆದರೆ ದೀಪ ಕೆಟ್ಟುಹೋಗಿ ವರ್ಷಗಳೇ ಕಳೆದರೂ ಸಹ ...
29/11/2023

ಇದು ಮಲ್ಲಂದೂರು ರಸ್ತೆಯ ವೃತ್ತದ ಸಂಚಾರ ದಟ್ಟಣೆಯ ಚಿತ್ರ. ಇಲ್ಲಿ ಸಂಚಾರ ದೀಪದ ವ್ಯವಸ್ಥೆಯೂ ಇದೆ, ಆದರೆ ದೀಪ ಕೆಟ್ಟುಹೋಗಿ ವರ್ಷಗಳೇ ಕಳೆದರೂ ಸಹ ಸಂಬಂಧಪಟ್ಟ ಇಲಾಖೆ ದುರಸ್ತಿ ಮಾಡಿಲ್ಲ. ಹೀಗಾಗಿ ಇಕ್ಕಟ್ಟಾದ ಐಜಿ ರಸ್ತೆ ಹಾಗೂ ಮಲ್ಲಂದೂರು ರಸ್ತೆಗಳ ವಾಹನ ಸವಾರರಿಗೆ ನಿತ್ಯ ನರಕ. ಹನುಂಮತಪ್ಪ ವೃತ್ತದ ದೀಪವೂ ಕೆಟ್ಟುನಿಂತಿದೆ. ಮಲ್ಲಂದೂರು ವೃತ್ತ, ಎಮ್ ಇ ಎಸ್ ಕಾಲೇಜು ವೃತ್ತ, ತೊಗರಿಹಂಕಲ್ ವೃತ್ತ, ಹಾಗೂ ಬೋಳರಾಮೇಶ್ವರ ವೃತ್ತಗಳಲ್ಲಿ ತುರ್ತಾಗಿ ಸುಗಮ ಸಂಚಾರ ವ್ಯವಸ್ಥೆಯ ಅಗತ್ಯವಿದೆ.
Chikkamagaluru District Police ಚಿಕ್ಕಮಗಳೂರು ಜಿಲ್ಲಾ ಪೊಲೀಸ್

ದಂಟರಮಕ್ಕಿ ಕೆರೆಯ ಹೂಳೆತ್ತಿದ ಮಣ್ಣನ್ನು ಸಾಗಿಸ್ತಿರೋ ಟಿಪ್ಪರ್ ಗಳು ಮಾಡುತ್ತಿರೋ ಅವಾಂತರಗಳು. ಎಲ್ಲಾ ರಸ್ತೆಗಳಲ್ಲೂ ಮಣ್ಣುಹೆಂಟೆಗಳದ್ದೇ ರಾಶಿ....
04/04/2023

ದಂಟರಮಕ್ಕಿ ಕೆರೆಯ ಹೂಳೆತ್ತಿದ ಮಣ್ಣನ್ನು ಸಾಗಿಸ್ತಿರೋ ಟಿಪ್ಪರ್ ಗಳು ಮಾಡುತ್ತಿರೋ ಅವಾಂತರಗಳು. ಎಲ್ಲಾ ರಸ್ತೆಗಳಲ್ಲೂ ಮಣ್ಣುಹೆಂಟೆಗಳದ್ದೇ ರಾಶಿ. ಹೊಸದಾಗಿ ನಿರ್ಮಿಸಲ್ಪಟ್ಟಿರುವ ದಂಟರಮಕ್ಕಿ ರಸ್ತೆ, ಬೈಪಾಸ್ , ಕಡೂರು ರಸ್ತೆಗಳ ತುಂಬಾ ಮಣ್ಣನ್ನು ಚೆಲ್ಲಿಕೊಂಡು ಸಾಗಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಈ ಮಣ್ಣುಹೆಂಟೆಯಿಂದಾಗಿ ಸ್ಕೂಟರ್ ಸ್ಕಿಡ್ ಆಗಿ ಮಹಿಳೆಯೊಬ್ಬರು ಬಿದ್ದಿದ್ದಾರೆ. ಈ ಅವ್ಯವಸ್ಥೆಗೆ ಯಾರು ಹೊಣೆ ? ಟಿಪ್ಪರ್ ನವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ. ?

ಭದ್ರಾ ವನ್ಯಜೀವಿ ವಲಯದ ಅತ್ತಿಗುಂಡಿ, ಮಹಲ್, ವಿರುಪಾಕ್ಷಕಾನ್ ಗೇಟ್ , ಹೆಬ್ಬೆ ಜಲಪಾತ ಮಾರ್ಗದ ಕೆಮ್ಮಣ್ಣುಗುಂಡಿ  ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇ...
28/12/2022

ಭದ್ರಾ ವನ್ಯಜೀವಿ ವಲಯದ ಅತ್ತಿಗುಂಡಿ, ಮಹಲ್, ವಿರುಪಾಕ್ಷಕಾನ್ ಗೇಟ್ , ಹೆಬ್ಬೆ ಜಲಪಾತ ಮಾರ್ಗದ ಕೆಮ್ಮಣ್ಣುಗುಂಡಿ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆಯ ತಪಾಸಣೆ ಹಾಗೂ ಗೇಟ್ ನಿರ್ವಹಣಾ ಸಿಬ್ಬಂದಿಗಳು ಬೆಳಿಗ್ಗೆ ಒಂಬತ್ತು ಗಂಟೆಯ ಸಮಯದಲ್ಲಿ ಕಛೇರಿಗೆ ಬೀಗ ಹಾಕಿಕೊಂಡು ಹೋಗಿದ್ದರಿಂದ ಸಾರ್ವಜನಿಕರು ತಾವೇ ಗೇಟ್ ತೆರೆದುಕೊಂಡು ಸಂಚರಿಸುತ್ತಿದ್ದ ದೃಶ್ಯ.
ಭದ್ರಾ ವನ್ಯಜೀವಿ ವಲಯದ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯತೆ.

ಚಿಕ್ಕಮಗಳೂರು ಬಸ್ ನಿಲ್ದಾಣದ ಬಳಿ ( ಇಂದಿರಾ ಕ್ಯಾಂಟೀನಿನ ಎದುರು) ಹಲವು ತಿಂಗಳುಗಳಿಂದ ಬಾಯ್ತೆರೆದುಕೊಂಡು ಅಪಾಯಕ್ಕೆ ಅಹ್ವಾನ ನೀಡುತ್ತಿದ್ದ ಗೇಟ...
23/11/2022

ಚಿಕ್ಕಮಗಳೂರು ಬಸ್ ನಿಲ್ದಾಣದ ಬಳಿ ( ಇಂದಿರಾ ಕ್ಯಾಂಟೀನಿನ ಎದುರು) ಹಲವು ತಿಂಗಳುಗಳಿಂದ ಬಾಯ್ತೆರೆದುಕೊಂಡು ಅಪಾಯಕ್ಕೆ ಅಹ್ವಾನ ನೀಡುತ್ತಿದ್ದ ಗೇಟ್ ವಾಲ್ ಗುಂಡಿಯನ್ನು ಇಂದು ಕಾಂಕ್ರೀಟ್ ಸ್ಲ್ಯಾಬ್ ಗಳಿಂದ ಮುಚ್ಚಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೆ ಗುಂಡಿಯನ್ನು ತೆರೆದಿಟ್ಟು, ಸಕಾಲದಲ್ಲಿ ಮುಚ್ಚದೇ ಇದ್ದುದು ಸಂಬಂಧಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ.

2021 ರ ಫೆಬ್ರವರಿ 23 ರಂದು Namma Chikkamagaluru Foundation  ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ಇನಾಂ ದತ್ತಾತ್ರೇಯ ಪೀಠ, ಗಾಳಿಕೆರೆ, ...
20/10/2022

2021 ರ ಫೆಬ್ರವರಿ 23 ರಂದು Namma Chikkamagaluru Foundation ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ಇನಾಂ ದತ್ತಾತ್ರೇಯ ಪೀಠ, ಗಾಳಿಕೆರೆ, ಮಾಣಿಕ್ಯಧಾರಾ ಪ್ರದೇಶಗಳನ್ನು ಸ್ವಚ್ಛಗೊಳಿಸುವ ' ಗಿರಿ ಸ್ವಚ್ಛತಾ ಅಭಿಯಾನ' ವನ್ನು ಆಯೋಜಿಸಿತ್ತು. ಸುಮಾರು ಎಂಟುನೂರು ಜನ ಸ್ವಯಂಸೇವಕರು ಈ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದ್ದರು. ಈಗ ಮತ್ತೆ ಮುಂದಿನ ತಿಂಗಳು ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ.

ಗಿರಿ ಪ್ರದೇಶಕ್ಕೆ ನೀಲಿಕುರುಂಜಿ ಹೂವು ನೋಡಲು ಬಂದ ಪ್ರವಾಸಿಗರು ಎಸೆದಿರುವ ತ್ಯಾಜ್ಯ.
13/10/2022

ಗಿರಿ ಪ್ರದೇಶಕ್ಕೆ ನೀಲಿಕುರುಂಜಿ ಹೂವು ನೋಡಲು ಬಂದ ಪ್ರವಾಸಿಗರು ಎಸೆದಿರುವ ತ್ಯಾಜ್ಯ.

ಪ್ರವಾಸಿಗರ ವಿಪರೀತ ಸಂದಣಿಯಿಂದಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ವಾಹನಗಳ ದಟ್ಟಣೆ.
12/10/2022

ಪ್ರವಾಸಿಗರ ವಿಪರೀತ ಸಂದಣಿಯಿಂದಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ವಾಹನಗಳ ದಟ್ಟಣೆ.

Address

Chikmagalur

Website

Alerts

Be the first to know and let us send you an email when Namma Chikkamagaluru Foundation posts news and promotions. Your email address will not be used for any other purpose, and you can unsubscribe at any time.

Share