AIDSO Davanagere

AIDSO Davanagere Contact information, map and directions, contact form, opening hours, services, ratings, photos, videos and announcements from AIDSO Davanagere, Political organisation, #684/2, 8th Main, PJ extension, Davangere.

26/07/2026
'ಸಂಸದ್ ಚಲೋ' ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ  ನೂರಾರು ವ...
22/07/2026

'ಸಂಸದ್ ಚಲೋ' ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ  ನೂರಾರು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಧಾವಿಸಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯ ಪತ್ರಿಕಾ ವರದಿಗಳು!!
25/06/2026

ಪ್ರತಿಭಟನೆಯ ಪತ್ರಿಕಾ ವರದಿಗಳು!!

25/06/2026
ನೀಟ್ UG 2026, ಪರೀಕ್ಷೆಯಲ್ಲಿ ಆಗಿರುವ ಅವಾಂತರಗಳು ಹಾಗೂ ಅಕ್ರಮಗಳನ್ನು ಖಂಡಿಸಿ, ಕೂಡಲೇ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದು ಆಗ್...
24/06/2026

ನೀಟ್ UG 2026, ಪರೀಕ್ಷೆಯಲ್ಲಿ ಆಗಿರುವ ಅವಾಂತರಗಳು ಹಾಗೂ ಅಕ್ರಮಗಳನ್ನು ಖಂಡಿಸಿ, ಕೂಡಲೇ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ AIDSO ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ದಾವಣಗೆರೆಯ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ನೆರೆದ ನೂರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ AIDSO ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ ಅವರು "ಇಡೀ ದೇಶದಾದ್ಯಂತ ಜನರ ಮನಸ್ಸನ್ನು ಘಾಸಿಗೊಳಿಸಿರುವುದು ಕಳೆದ ನಾಲ್ಕು ದಿನಗಳಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು. ದಿನೇ ದಿನೇ ಶಿಕ್ಷಣ ಖಾಸಗಿಕರಣ ಹಾಗೂ ವ್ಯಾಪಾರಿಕರಣಕ್ಕೆ ಬಲಿಯಾಗುತ್ತಲೇ ಇದೆ. ಇದರ ಪರಿಣಾಮವಾಗಿ ಇಡೀ ದೇಶದಾದ್ಯಂತ ವ್ಯಾಪಿಸಿರುವ ನೀಟ್ ಪರೀಕ್ಷೆಯು ಬಡ ಮಕ್ಕಳನ್ನು ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಕೂಡ ಉನ್ನತ ಶಿಕ್ಷಣದಿಂದ, ವೈದ್ಯಕೀಯ ಶಿಕ್ಷಣದಿಂದ ದೂರ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ನೀಟ್ ಪರೀಕ್ಷೆ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ." ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

"ಎಲ್ಲಾ ಅಂಶಗಳು ನಮಗೆ ಎತ್ತಿ ತೋರಿಸುವುದೆಂದರೆ ಸರ್ಕಾರವು ಶಿಕ್ಷಣದ ಮೇಲಿನ ತನ್ನ ಎಲ್ಲಾ ಜವಾಬ್ದಾರಿಗಳನ್ನು ಕೈ ಚೆಲ್ಲಿ ಶಿಕ್ಷಣವನ್ನು ಸಂಪೂರ್ಣವಾಗಿ ಒಂದು ಖಾಸಗಿ ವ್ಯಾಪಾರಿ ಸರಕಾಗಿಸುವ ಧೋರಣೆಯೊಂದಿಗೆ ಮುಂದೆ ಸಾಗುತ್ತಿದೆ ಎಂದು. ಈ ಕೂಡಲೇ ಸರ್ಕಾರ ಈ ಧೋರಣೆಯನ್ನು ಬದಲಾಯಿಸಿ ಪ್ರತಿಯೊಬ್ಬ ಮಗುವಿಗೂ ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡುವ ದಿಕ್ಕಿನಲ್ಲಿ ಗಮನಕೊಡಬೇಕು ಹಾಗೂ ಈ ಅವಾಂತರಗಳಿಗೆ ಕಾರಣರಾದ ಎಲ್ಲಾ ತಪ್ಪಿತಸ್ಥರಿಗೂ ನಿದರ್ಶನೀಯ ಶಿಕ್ಷೆ ನೀಡಬೇಕು. ಈ ಕೂಡಲೇ NTA ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯನ್ನು ರದ್ದು ಮಾಡಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್, ಇದೆಲ್ಲದರ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು. ವ್ಯವಸ್ಥೆಯ ನಿರ್ಲಕ್ಷ ಹಾಗೂ ಬೇಜಾವಾದ್ದಾರಿತನದಿಂದ ಕೊಲೆಗೊಳಗಾದ ಎಲ್ಲಾ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡಲೇಬೇಕು!!" ಎಂದು ನೆರೆದಿದ್ದ ವಿದ್ಯಾರ್ಥಿಗಳ ಬೇಡಿಕೆಗಳನ್ನು ಮುಂದಿಟ್ಟರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್, ಜಿಲ್ಲಾ ಸಂಘಟನಾಕಾರರಾದ ಗಂಗಾಧರ್ ಹೆಚ್ ಡಿ, ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

08/12/2025

# ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಮತ್ತು ಬಲಪಡಿಸಿ

Address

#684/2, 8th Main, PJ Extension
Davangere
577003

Telephone

09591406615

Website

Alerts

Be the first to know and let us send you an email when AIDSO Davanagere posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIDSO Davanagere:

Shortcuts

Share