Samarth Shamanur

Samarth Shamanur ಅಭಿವೃದ್ಧಿಗಾಗಿ. ಜನರಿಗಾಗಿ. ದಾವಣಗೆರೆಗಾಗಿ. Youngest MLA in South India, MLA Davanagere South
Agriculturist | Industrialist | Philanthropist

25/08/2026

ಜಲಸಿರಿ ಯೋಜನೆಗೆ ಮತ್ತು ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅತಿ ಹೆಚ್ಚು ಒತ್ತು ನೀಡಲಾಗುತ್ತಿದೆ.

ಈ ವಲಯದಲ್ಲಿ ಜಲಸಿರಿ ಯೋಜನೆಯಡಿ ನಿರಂತರ ನೀರು ಪೂರೈಕೆಗೆ ವಿದ್ಯುತ್ ಸಮಸ್ಯೆ ಅಡ್ಡಿಯಾಗುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಎಸ್‌ಎಸ್‌ಎಂ ನಗರದಲ್ಲಿರುವ ಎಸ್‌ಟಿಪಿ ಪ್ಲಾಂಟ್ ಪಕ್ಕದಲ್ಲೇ ಹೊಸ ಸಬ್‌ಸ್ಟೇಷನ್ ನಿರ್ಮಿಸಲು ಈಗಾಗಲೇ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಯೂ ಆರಂಭವಾಗಿದೆ.

ಡಿಸೆಂಬರ್ ತಿಂಗಳೊಳಗೆ ಸಬ್‌ಸ್ಟೇಷನ್ ಕಾಮಗಾರಿ ಪೂರ್ಣಗೊಳಿಸಿ, ಜಲಸಿರಿ ಯೋಜನೆಯಡಿ ದಿನದ 24 ಗಂಟೆಯೂ ನಿರಂತರ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ.

ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದೆ...
25/08/2026

ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದೆ...

ದಾವಣಗೆರೆ ನಗರ ದೇವತೆಯಾದ ಶ್ರೀ ದುರ್ಗಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ....
25/08/2026

ದಾವಣಗೆರೆ ನಗರ ದೇವತೆಯಾದ ಶ್ರೀ ದುರ್ಗಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ....

"ಉತ್ತಮ ರಸ್ತೆ, ಸುಗಮ ಸಂಚಾರ, ಸಮಗ್ರ ಅಭಿವೃದ್ಧಿ."ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಸಂಚಾರ ಮತ್ತಷ್ಟು ಸುಗಮವಾಗಲಿದ್ದು, ದೈನಂದಿನ ಓಡಾಟಕ...
25/08/2026

"ಉತ್ತಮ ರಸ್ತೆ, ಸುಗಮ ಸಂಚಾರ, ಸಮಗ್ರ ಅಭಿವೃದ್ಧಿ."

ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಸಂಚಾರ ಮತ್ತಷ್ಟು ಸುಗಮವಾಗಲಿದ್ದು, ದೈನಂದಿನ ಓಡಾಟಕ್ಕೆ ಅನುಕೂಲವಾಗುವುದರ ಜೊತೆಗೆ ಪ್ರದೇಶದ ಅಭಿವೃದ್ಧಿಗೂ ಹೊಸ ಉತ್ತೇಜನ ದೊರೆಯಲಿದೆ. ಜನರ ಅಗತ್ಯಗಳಿಗೆ ಸ್ಪಂದಿಸುವಹಾಗೂ ಅವರ ಜೀವನಮಟ್ಟವನ್ನು ಸುಧಾರಿಸುವ ಇಂತಹ ಮೂಲಸೌಕರ್ಯ ಕಾಮಗಾರಿಗಳಿಗೆ ನಮ್ಮ ಬದ್ಧತೆ ನಿರಂತರವಾಗಿರುತ್ತದೆ. ಸಾರ್ವಜನಿಕರ ಅನುಕೂಲ ಮತ್ತು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

24/08/2026
24/08/2026

ವಿದ್ಯಾರ್ಥಿಗಳು ಶಾಲೆಯಲ್ಲಾಗಲಿ, ಮುಂದಿನ ಜೀವನದಲ್ಲಾಗಲಿ ಎಂದಿಗೂ ತಪ್ಪು ದಾರಿ ಹಿಡಿಯದೆ, ಸದಾ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಯಾವುದೇ ಸಮಸ್ಯೆ ಎದುರಾದರೂ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಶಿಕ್ಷಕರು, ಗುರುಗಳು ಹಾಗೂ ಹಿರಿಯರು ಸದಾ ನಿಮ್ಮೊಂದಿಗೆ ಇದ್ದು, ಸರಿಯಾದ ದಾರಿ ತೋರಿಸುತ್ತಾರೆ.

ಶಾಲೆಯೂ ನಿಮ್ಮ ಮನೆಯಂತೆಯೇ, ಒಳ್ಳೆಯ ಸ್ನೇಹಿತರೂ ಕುಟುಂಬದವರಂತೆಯೇ. “It takes a village to raise a child” ಎಂಬಂತೆ, ಮಕ್ಕಳ ಬೆಳವಣಿಗೆಯಲ್ಲಿ ಕುಟುಂಬದ ಜೊತೆಗೆ ಶಾಲೆ, ಸಮಾಜ ಹಾಗೂ ಹಿರಿಯರ ಪಾತ್ರವೂ ಮುಖ್ಯ.

ಆದ್ದರಿಂದ ಒಳ್ಳೆಯದನ್ನೇ ಆಯ್ಕೆ ಮಾಡಿಕೊಂಡು, ನಿಮ್ಮ ಕನಸುಗಳತ್ತ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನೀವು ಎಷ್ಟು ದೊಡ್ಡ ಕನಸು ಕಾಣುತ್ತೀರೋ, ಅಷ್ಟು ಎತ್ತರಕ್ಕೆ ಬೆಳೆಯಿರಿ...

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸೋಣ ಪರಿಸರವನ್ನು ಸಂರಕ್ಷಿಸೋಣ..
24/08/2026

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸೋಣ ಪರಿಸರವನ್ನು ಸಂರಕ್ಷಿಸೋಣ..

ಸ್ವಾತಂತ್ರ್ಯ ಸೇನಾನಿ, ಕ್ರಾಂತಿಕಾರಿ ಹೋರಾಟಗಾರ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಗೌರವ ನಮನಗಳು...
24/08/2026

ಸ್ವಾತಂತ್ರ್ಯ ಸೇನಾನಿ, ಕ್ರಾಂತಿಕಾರಿ ಹೋರಾಟಗಾರ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಗೌರವ ನಮನಗಳು...

"ಯುವಶಕ್ತಿಯೇ ದೇಶದ ಭವಿಷ್ಯದ ಶಕ್ತಿ"ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಕೌಶಲ್ಯವನ್ನು ಬೆಳೆಸಿಕೊ...
24/08/2026

"ಯುವಶಕ್ತಿಯೇ ದೇಶದ
ಭವಿಷ್ಯದ ಶಕ್ತಿ"

ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಕೌಶಲ್ಯವನ್ನು ಬೆಳೆಸಿಕೊಂಡು, ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಂಡು, ತಮ್ಮಲ್ಲಿರುವ ಪ್ರತಿಭೆಯನ್ನು ಸದುಪಯೋಗಪಡಿ ಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡು, ತಮ್ಮ ಉಜ್ವಲ ಭವಿಷ್ಯದೊಂದಿಗೆ ದೇಶದ ಶದ ಪ್ರಗತಿಗೊ ಮಹತದ ಕೊಡುಗೆ ನೀಡಬೇಕು.

23/08/2026

“ಸ್ವಚ್ಛ ಗ್ರಾಮ • ಹಸಿರು ಪರಿಸರ • ದೀರ್ಘಕಾಲಿಕ ಅಭಿವೃದ್ಧಿ”

ಗ್ರಾಮದಲ್ಲಿ ಕಸ ಹಾಗೂ ಅನಗತ್ಯ ಜಾಲಿಮರಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುತ್ತಿರುವ ಕಾರ್ಯ ಸಂತಸದ ವಿಷಯವಾಗಿದೆ.

ಇದೇ ಸ್ವಚ್ಛತೆ ಮತ್ತು ಅಭಿವೃದ್ಧಿಯ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ ಹದಡಿಯಿಂದ ಬಲ್ಲೂರುವರೆಗಿನ ಮಾರ್ಗದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಿಸಬೇಕು.

ಕೇವಲ ಸಸಿಗಳನ್ನು ನೆಡುವುದಕ್ಕೆ ಸೀಮಿತವಾಗದೆ, ಅವುಗಳನ್ನು ಕುರಿ-ಮೇಕೆ ಹಾಗೂ ಇತರ ಪ್ರಾಣಿಗಳಿಂದ ರಕ್ಷಿಸಲು ಸೂಕ್ತ ಬೇಲಿ ನಿರ್ಮಿಸಿ, ಸಸಿಗಳು ಉತ್ತಮವಾಗಿ ಬೆಳೆದು ಮರಗಳಾಗುವವರೆಗೆ ಅಗತ್ಯ ಸಂರಕ್ಷಣೆ ಒದಗಿಸಬೇಕು.

ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಾಗ ಅದು ತಾತ್ಕಾಲಿಕ ಪರಿಹಾರವಾಗದೆ, ಮುಂದಿನ 20ರಿಂದ 40 ವರ್ಷಗಳವರೆಗೆ ಬಾಳಿಕೆ ಬರುವಂತೆ ಗುಣಮಟ್ಟದಿಂದ ಹಾಗೂ ದೂರದೃಷ್ಟಿಯಿಂದ ಮಾಡಬೇಕು.

ಪ್ರತಿ ವರ್ಷ ಪದೇ ಪದೇ ಕಳೆ ತೆರವುಗೊಳಿಸುವ ಬದಲು ಆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಮರಗಳನ್ನು ಬೆಳೆಸಿದರೆ, ಅವುಗಳ ನೆರಳಿನಿಂದ ಕಳೆ ಬೆಳೆಯುವು�

Address

D Corporates #13
Davangere
577001

Alerts

Be the first to know and let us send you an email when Samarth Shamanur posts news and promotions. Your email address will not be used for any other purpose, and you can unsubscribe at any time.

Shortcuts

Share

Category