02/09/2026
ಬೆಳಗಾವಿ ಉತ್ತರ ವಲಯದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ (31.08.2026 ಮತ್ತು 01.09.2026)ದಲ್ಲಿ ಗದಗ ಜಿಲ್ಲಾ ಪೊಲೀಸ್ ತಂಡವು ಶ್ರೇಷ್ಠ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದೆ.
ಆಫೀಸ್ ಆಟೊಮೇಷನ್, ಜಾವಾ ಪ್ರೋಗ್ರಾಮಿಂಗ್, ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆ, ವಿಧ್ವಂಸಕ ಕೃತ್ಯ ತಡೆ ಪರಿಶೀಲನೆ, ಪೊಲೀಸ್ ವಿಡಿಯೋಗ್ರಾಫಿ ಮತ್ತು ಫೋಟೋಗ್ರಾಫಿ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿ, ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿದೆ.
ದಿನಾಂಕ:01.09.2026 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ಸಾಧನೆಗೈದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಅಭಿನಂದಿಸಿದರು.
ಸದರಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಜಿಲ್ಲಾ ಪೊಲೀಸ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಎಚ್.ಎನ್., ಐ.ಪಿ.ಎಸ್., ರವರು ಶ್ಲಾಘಿಸಿರುತ್ತಾರೆ.