Kalaburagi City Police

Kalaburagi City Police Contact information, map and directions, contact form, opening hours, services, ratings, photos, videos and announcements from Kalaburagi City Police, Government Organization, office of the commissioner of police, Gulbarga.

ಸಿಸಿಬಿ ಪೊಲೀಸರ ಕಾರ್ಯಾಚರಣೆ. ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಕನಕ ತ್ರಿಶೂಲ್ ಲಾಡ್ಜ್ ಹತ...
10/04/2026

ಸಿಸಿಬಿ ಪೊಲೀಸರ ಕಾರ್ಯಾಚರಣೆ. ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಕನಕ ತ್ರಿಶೂಲ್ ಲಾಡ್ಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 08 ಜನರ ಮೇಲೆ ದಾಳಿ ಮಾಡಿ ₹ 63,100/- ರೂಪಾಯಿಗಳನ್ನು ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. Karnataka State Police Karnataka State Police Karnataka State Police

ಸಿಸಿಬಿ ಪೊಲೀಸರ ಕಾರ್ಯಾಚರಣೆ. ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮ...
10/04/2026

ಸಿಸಿಬಿ ಪೊಲೀಸರ ಕಾರ್ಯಾಚರಣೆ. ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಒಬ್ಬ ಆರೋಪಿತನನ್ನು ಬಂಧಿಸಿ ₹ 6,300/- ರೂಪಾಯಿಗಳನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. Karnataka State Police Karnataka State Police Karnataka State Police

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಳಂದ ಚೆಕ್ ಪೋಸ್ಟ್ ಹತ್ತಿರದ ವೈಷ್ಣವಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿನ ಸಾರ್...
10/04/2026

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಳಂದ ಚೆಕ್ ಪೋಸ್ಟ್ ಹತ್ತಿರದ ವೈಷ್ಣವಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಒಬ್ಬ ಆರೋಪಿತನನ್ನು ಬಂಧಿಸಿ ₹ 640/- ರೂಪಾಯಿಗಳನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. Karnataka State Police Karnataka State Police Karnataka State Police

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಳಂದ ಚೆಕ್ ಪೋಸ್ಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಒಬ್ಬ ಆರ...
10/04/2026

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಳಂದ ಚೆಕ್ ಪೋಸ್ಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಒಬ್ಬ ಆರೋಪಿತನನ್ನು ಬಂಧಿಸಿ ₹ 530/- ರೂಪಾಯಿಗಳನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. Karnataka State Police Karnataka State Police Karnataka State Police

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ 🙌ಇಂದು ಕಲಬುರಗಿ ನಗರದಲ್ಲಿ ಒಬ್ಬ ಪ್ರಾಮಾಣಿಕ ಆಟೋ ಚಾಲಕರು ತಮ್ಮ ಆಟೋದಲ್ಲಿ ಮೊಬೈಲ್ ಬಿಟ್ಟು ಹೋಗಿರುವುದನ್ನು...
10/04/2026

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ 🙌

ಇಂದು ಕಲಬುರಗಿ ನಗರದಲ್ಲಿ ಒಬ್ಬ ಪ್ರಾಮಾಣಿಕ ಆಟೋ ಚಾಲಕರು ತಮ್ಮ ಆಟೋದಲ್ಲಿ ಮೊಬೈಲ್ ಬಿಟ್ಟು ಹೋಗಿರುವುದನ್ನು ಕಂಡು, ತಕ್ಷಣವೇ ಸಂಚಾರಿ ಪೊಲೀಸರಿಗೆ ಒಪ್ಪಿಸಿದರು. ಸಂಚಾರಿ ಸಿಬ್ಬಂದಿಯವರ ತ್ವರಿತ ಕ್ರಮದಿಂದ ಆ ಮೊಬೈಲ್ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. 👏

ಈ ಪ್ರಾಮಾಣಿಕ ಆಟೋ ಚಾಲಕರಿಗೆ ಹಾಗೂ ಕರ್ತವ್ಯನಿಷ್ಠೆ ಸಂಚಾರಿ ಪೊಲೀಸರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಜಾಗೃತಿ ಸಂದೇಶ 🚦
ನಿಮಗೆ ಯಾವುದಾದರೂ ಕಳೆದುಹೋದ ವಸ್ತುಗಳು ಸಿಕ್ಕಲ್ಲಿ, ದಯವಿಟ್ಟು ಸಮೀಪದ ಪೊಲೀಸ್ ಠಾಣೆಗೆ ಅಥವಾ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿ. ನಿಮ್ಮ ಸಣ್ಣ ಪ್ರಾಮಾಣಿಕ ನಡೆ ಯಾರಾದರೂ ಜೀವನದಲ್ಲಿ ದೊಡ್ಡ ಸಂತೋಷವನ್ನು ತರುತ್ತದೆ.

ನಾವು ಎಲ್ಲರೂ ಸೇರಿ ಜವಾಬ್ದಾರಿಯುತ ಮತ್ತು ನಂಬಿಕೆಯ ಸಮಾಜವನ್ನು ನಿರ್ಮಿಸೋಣ. Karnataka State Police Karnataka State Police Karnataka State Police

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ದೀಪಾ ಎಂ, ಎಂಬ ಮಹಿಳೆಯೊಬ್ಬರು ರಾಯಚೂರಿನಲ್ಲಿ ತಮ್ಮ ಮೊಬೈಲ್ ಕಳೆದುಕೊಂಡು Find My Device ಮೂಲಕ ಪತ್...
09/04/2026

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ದೀಪಾ ಎಂ, ಎಂಬ ಮಹಿಳೆಯೊಬ್ಬರು ರಾಯಚೂರಿನಲ್ಲಿ ತಮ್ಮ ಮೊಬೈಲ್ ಕಳೆದುಕೊಂಡು Find My Device ಮೂಲಕ ಪತ್ತೆ ಹಚ್ಚಿದಾಗ ಮೊಬೈಲ್ location ಕಲಬುರಗಿಯಲ್ಲಿ ಪತ್ತೆಯಾದಾಗ ಆ ಮಹಿಳೆಯು ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರಿಗೆ ಫೋನ್ ಕರೆ ಮಾಡಿ, ಕಳೆದು ಹೋದ ನನ್ನ ಮೊಬೈಲ್ ಕಲಬುರಗಿಯಲ್ಲಿ location ತೋರಿಸುತ್ತಿದ್ದು ದಯವಿಟ್ಟು ಹುಡುಕಿ ಕೊಡಿ ಎಂದು ವಿನಂತಿಸಿಕೊಂಡಾಗ, ಮಾನ್ಯ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಪಿ.ಐ ರವರಾದ ಶ್ರೀ ಅರುಣಕುಮಾರ ರವರಿಗೆ ಕಾರ್ಯಪ್ರವೃತ್ತರಾಗುವಂತೆ ಅದೇಶಿಸಿದ್ದು, ಸದರಿ ತಂಡವು ಕೇವಲ 06 ಗಂಟೆಗಳಲ್ಲಿ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ. Karnataka State Police Karnataka State Police Karnataka State Police

ಮಾನ್ಯ ಶ್ರೀ ಅರುಣ್ ಚಕ್ರವರ್ತಿ ಐಪಿಎಸ್, ಪೊಲೀಸ್ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಬ...
09/04/2026

ಮಾನ್ಯ ಶ್ರೀ ಅರುಣ್ ಚಕ್ರವರ್ತಿ ಐಪಿಎಸ್, ಪೊಲೀಸ್ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಬೆಂಗಳೂರು ಮತ್ತು ಟ್ರಸ್ಟಿ, ಮದ್ಯವ್ಯಸನಿ ಅನಾಮಧೇಯ ಭಾರತ ಮಂಡಳಿ ಫೆಲೋಶಿಪ್ ರವರು "ಆಲ್ಕೋಹಾಲಿಕ್ಸ್ ಅನಾನಿಮಸ್" ಸಂಸ್ಥೆಯ ಕಾರ್ಯವೈಖರಿಯ ಕುರಿತು ಹಾಗೂ ಮಧ್ಯ ವ್ಯಸನಕ್ಕೆ ಗುರಿಯಾದ ಸಿಬ್ಬಂದಿಯವರಿಗೆ ಮಧ್ಯ ವ್ಯಸನದಿಂದ ಮುಕ್ತಿ ಪಡೆಯಲು ಈ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಲಬುರಗಿ ನಗರ ಹಾಗೂ ಈಶಾನ್ಯ ವಲಯ ಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಈ ಯೋಜನೆಯಿಂದ ಸಿಬ್ಬಂದಿಯವರು ಮದ್ಯಪಾನದಂತಹ ವ್ಯಸನಗಳಿಂದ ಮುಕ್ತರಾಗಿ ಸಮಾಜದಲ್ಲಿ ಘನತೆಯಿಂದ ಬದುಕುವುದು ಇದರ ಮೂಲ ಉದ್ದೇಶವಾಗಿರುತ್ತದೆ. Karnataka State Police Karnataka State Police Karnataka State Police

ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರ ನೇತೃತ್ವದಲ್ಲಿ “ಆಸರೆ ಮತ್ತು ಸನ್ಮಿತ್ರ” ಸಭೆಯನ್ನು ಆಯೋಜಿಸಲಾಯಿತು. “ಆಸರೆ” ...
07/04/2026

ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರ ನೇತೃತ್ವದಲ್ಲಿ “ಆಸರೆ ಮತ್ತು ಸನ್ಮಿತ್ರ” ಸಭೆಯನ್ನು ಆಯೋಜಿಸಲಾಯಿತು. “ಆಸರೆ” ಕಾರ್ಯಕ್ರಮದಡಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು ಹಾಗೂ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಸಮಾಲೋಚನೆ ಪಡೆಯುವ ವ್ಯವಸ್ಥೆ ಕುರಿತು ವಿವರಿಸಲಾಯಿತು. ಸಭೆಯಲ್ಲಿ ತಜ್ಞ ಮಾನಸಿಕ ವೈದ್ಯರಾದ ಡಾ. ರಾಹುಲ್ ಮಂದಕನಳ್ಳಿ ಹಾಗೂ ಡಾ. ಪ್ರಭು ಕಿರಣ್ ಗೋಗಿ ರವರು ಡ್ರಗ್ಸ್ ವ್ಯಸನವು ವ್ಯಕ್ತಿಯ ಜೀವನ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟುಮಾಡುವ ಗಂಭೀರ ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಶಿವನಗೌಡ ಪಾಟೀಲ್, ACP ಉತ್ತರ ಉಪವಿಭಾಗ, ಶ್ರೀ ದಿಲೀಪ ಸಾಗರ, PI ರೋಜಾ ಪೊಲೀಸ್ ಠಾಣೆ, ಶ್ರೀಮತಿ ಅಕ್ಕಮಹಾದೇವಿ, PI ನಗರ ಮಹಿಳಾ ಠಾಣೆ, ಶ್ರೀ ಖಾಜಾಹುಸೇನ್, PI ಎಂ.ಬಿ. ನಗರ ಪೊಲೀಸ್ ಠಾಣೆ, ಶ್ರೀ ಸುಶೀಲ, PI ಚೌಕ್ ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳದ ಪ್ರತಿನಿಧಿ ಶ್ರೀ ರಾಜೇಶ್ ಕೆ ಉಪಸ್ಥಿತರಿದ್ದರು. Karnataka State Police Karnataka State Police Karnataka State Police

ಮಾನ್ಯ ಉಪ ಪೊಲೀಸ್ ಆಯುಕ್ತರಾದ ಪ್ರವೀಣ್ ನಾಯಕ್., ಕೆ.ಎಸ್.ಪಿ.ಎಸ್ ರವರು ನಗರದ ಸಿ.ಎ.ಆರ್ ಪರೇಡ್ ಮೈದಾನದಲ್ಲಿ ನಡೆದ ಕವಾಯತ್ತಿನ ಗೌರವ ವಂದನೆ ಸ್...
07/04/2026

ಮಾನ್ಯ ಉಪ ಪೊಲೀಸ್ ಆಯುಕ್ತರಾದ ಪ್ರವೀಣ್ ನಾಯಕ್., ಕೆ.ಎಸ್.ಪಿ.ಎಸ್ ರವರು ನಗರದ ಸಿ.ಎ.ಆರ್ ಪರೇಡ್ ಮೈದಾನದಲ್ಲಿ ನಡೆದ ಕವಾಯತ್ತಿನ ಗೌರವ ವಂದನೆ ಸ್ವೀಕರಿಸಿ, ಕವಾಯತ್ತಿನ ಪರಿವಿಕ್ಷಣೆಯನ್ನು ಕೈಗೊಂಡರು. ಇಲಾಖೆಯ ಗೌರವ ಕಾಪಾಡುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಸೂಚನೆಗಳನ್ನು ನೀಡಿದರು. Karnataka State Police Karnataka State Police Karnataka State Police

"ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ 2025ನೇ ಸಾಲಿನ 'ಮುಖ್ಯಮಂತ್ರಿಗಳ ಪದಕ' ಪಡೆದ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯ ನಿರೀಕ್...
06/04/2026

"ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ 2025ನೇ ಸಾಲಿನ 'ಮುಖ್ಯಮಂತ್ರಿಗಳ ಪದಕ' ಪಡೆದ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ಸುಶೀಲಕುಮಾರ ಹಾಗೂ ಶ್ರೀ ವಿಟೋಬಾ ಸಿಪಿಸಿ ಅವರನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಪ್ರಶಂಸಿಸಿ ಅಭಿನಂದಿಸಿದರು ಮತ್ತು ಅಧಿಕಾರಿಗಳ ದಕ್ಷತೆ, ಜನಸ್ನೇಹಿ ಸೇವೆಯು ಸದಾ ಕಾಲ ಹೀಗೆಯೇ ಮುಂದುವರಿಯಲಿ ಮತ್ತು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು. Karnataka State Police Karnataka State Police Karnataka State Police

ಬೈಕ್ ಇರುವುದು ಇಬ್ಬರಿಗೆ ಮಾತ್ರ. ಮೂವರು ಕುಳಿತು ಬ್ಯಾಲೆನ್ಸ್ ಕಳೆದುಕೊಂಡು ಪ್ರಾಣಾಪಯಕ್ಕೆ ಸಿಲುಕಬೇಡಿ. ಸಂಚಾರಿ ನಿಯಮಗಳನ್ನು ಪಾಲಿಸಿ ಮತ್ತು ಸ...
05/04/2026

ಬೈಕ್ ಇರುವುದು ಇಬ್ಬರಿಗೆ ಮಾತ್ರ. ಮೂವರು ಕುಳಿತು ಬ್ಯಾಲೆನ್ಸ್ ಕಳೆದುಕೊಂಡು ಪ್ರಾಣಾಪಯಕ್ಕೆ ಸಿಲುಕಬೇಡಿ. ಸಂಚಾರಿ ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತ ಪ್ರಯಾಣವನ್ನು ಆಯ್ಕೆ ಮಾಡಿ. ಸದಾ ಸಂಚಾರಿ ನಿಯಮಗಳನ್ನು ಪಾಲಿಸಿ. ತುರ್ತು ಸಂಧರ್ಭದಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ. Karnataka State Police Karnataka State Police

ಸೀಟ್ ಬೆಲ್ಟ್ ಕೇವಲ ತಂಡದ ಭಯಕ್ಕಲ್ಲ, ನಿಮ್ಮ ಪ್ರಾಣದ ರಕ್ಷಣೆಗಾಗಿ! ಪ್ರಾಣ ರಕ್ಷಣೆಗಾಗಿ ಹಾಗೂ ಏರ್ ಬ್ಯಾಗ್ ಕೆಲಸ ಮಾಡಲು ಸೀಟ್ ಬೆಲ್ಟ್ ಧರಿಸುವು...
05/04/2026

ಸೀಟ್ ಬೆಲ್ಟ್ ಕೇವಲ ತಂಡದ ಭಯಕ್ಕಲ್ಲ, ನಿಮ್ಮ ಪ್ರಾಣದ ರಕ್ಷಣೆಗಾಗಿ! ಪ್ರಾಣ ರಕ್ಷಣೆಗಾಗಿ ಹಾಗೂ ಏರ್ ಬ್ಯಾಗ್ ಕೆಲಸ ಮಾಡಲು ಸೀಟ್ ಬೆಲ್ಟ್ ಧರಿಸುವುದು ಅತ್ಯಗತ್ಯ. ಸದಾ ಸಂಚಾರಿ ನಿಯಮಗಳನ್ನು ಪಾಲಿಸಿ, ತುರ್ತು ಸಂದರ್ಭದಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ. Karnataka State Police Karnataka State Police

Address

Office Of The Commissioner Of Police
Gulbarga
585102

Alerts

Be the first to know and let us send you an email when Kalaburagi City Police posts news and promotions. Your email address will not be used for any other purpose, and you can unsubscribe at any time.

Share