Amaranath Sahu Kulageri

Amaranath Sahu Kulageri "ಏನಾದರೂ ಆಗು ಮೊದಲು ಮಾನವನಾಗು"

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಲಬುರಗಿ ನಗರದ ವೀರಶೈವ ಸಮಾಜ ಶಿಕ್ಷಣ ಸಂಸ್ಥೆಯಲ್ಲಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣಕುಮಾರ ಎಸ...
16/08/2026

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಲಬುರಗಿ ನಗರದ ವೀರಶೈವ ಸಮಾಜ ಶಿಕ್ಷಣ ಸಂಸ್ಥೆಯಲ್ಲಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಿದ ಅವರು, ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರ, ಮಾನವೀಯತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು, ದೇಶದ ಏಕತೆ ಹಾಗೂ ಅಖಂಡತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಯುವಜನತೆ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.

“ಇಂದಿನ ವಿದ್ಯಾರ್ಥಿಗಳೇ ನಾಳಿನ ಭಾರತದ ಶಕ್ತಿ. ನಿಮ್ಮ ಜ್ಞಾನ, ಪ್ರತಿಭೆ ಮತ್ತು ಸಾಮರ್ಥ್ಯವನ್ನು ರಾಷ್ಟ್ರದ ಪ್ರಗತಿಗಾಗಿ ಬಳಸಿಕೊಳ್ಳಿ” ಎಂಬ ಅರ್ಥಪೂರ್ಣ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ದೇಶಪ್ರೇಮ ಕೇವಲ ಆಚರಣೆಯಾಗದೆ, ಪ್ರತಿಯೊಬ್ಬರ ಬದುಕಿನ ಸಂಕಲ್ಪವಾಗಲಿ.

ಜನ್ಮದಿನ ಮುಗಿದ ಬಳಿಕವೂ ಅನಾಥ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದ ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರ ಆತ್ಮೀಯ ಬಳಗನಮ್ಮೆಲ್ಲ...
27/07/2026

ಜನ್ಮದಿನ ಮುಗಿದ ಬಳಿಕವೂ ಅನಾಥ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದ ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರ ಆತ್ಮೀಯ ಬಳಗ

ನಮ್ಮೆಲ್ಲರ ನೆಚ್ಚಿನ ನಾಯಕರು, ಯುವಕರ ಕಣ್ಮಣಿ, ಬಿಸಿಲುನಾಡಿನ ಭರವಸೆಯ ಹೋರಾಟಗಾರರಾದ ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರ 56ನೇ ಜನ್ಮದಿನದ ಸಂಭ್ರಮ ಮುಗಿದ ಬಳಿಕವೂ, ಅವರ ಆತ್ಮೀಯ ಬಳಗದ ವತಿಯಿಂದ ಪ್ರೀತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರನ್ನು ಅನಾಥ ಮಕ್ಕಳ ಶಾಲೆಗೆ ಆತ್ಮೀಯವಾಗಿ ಆಹ್ವಾನಿಸಿ, ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು . ಬಳಿಕ ಎಲ್ಲ ಮಕ್ಕಳಿಗೂ ಪ್ರೀತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರು ಮಕ್ಕಳ ಮಧ್ಯೆಯೇ ಕುಳಿತು ಊಟ ಸೇವಿಸುವ ಮೂಲಕ ಪ್ರೀತಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯವನ್ನು ಬದುಕಿನಲ್ಲೇ ತೋರಿಸಿದರು.

ಜನ್ಮದಿನದ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಲಿಲ್ಲ, ಅನಾಥ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ಈ ಕ್ಷಣಗಳೇ ನಿಜವಾದ ಆಚರಣೆಯಾಗಿ ಉಳಿದವು.

ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರ 56ನೇ ಜನ್ಮದಿನದ ಅಂಗವಾಗಿ, ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮ...
22/07/2026

ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಅರುಣಕುಮಾರ್ ಎಸ್. ಪಾಟೀಲ ಕೊಡಲಹಂಗರಗಾ ಅವರ 56ನೇ ಜನ್ಮದಿನದ ಅಂಗವಾಗಿ, ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಪತ್ರಿಕೆಗಳಲ್ಲಿ ವರದಿ.

21/07/2026
ಜನ್ಮದಿನ ಅಂಗವಾಗಿ ವೈಯಕ್ತಿಕವಾಗಿ ಕರೆ ಮಾಡಿ, ಸಂದೇಶಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಹಾಗೂ ಸಾಮಾಜಿಕ...
20/07/2026

ಜನ್ಮದಿನ ಅಂಗವಾಗಿ ವೈಯಕ್ತಿಕವಾಗಿ ಕರೆ ಮಾಡಿ, ಸಂದೇಶಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳ ಬಳಗ,ಹಿತೈಷಿಗಳಿಗೆ,ಗೆಳೆಯರ ಬಳಗಕ್ಕೂ,ಜಿಲ್ಲೆಯ ಜನತೆಗೆ ಅ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು.🙏🙏

ನೀವು ತೋರಿದ ಪ್ರೀತಿಪೂರ್ವಕ ಅಭಿಮಾನಕ್ಕೆ ನಾನು ಸದಾ ಚಿರಋಣಿ.

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ಆಶಿಸುತ್ತೇನೆ.

ಇಂತಿ ನಿಮ್ಮ ಪ್ರೀತಿಯ
ಶ್ರೀ ಅರುಣಕುಮಾರ ಎಸ್ ಪಾಟೀಲ ಕೊಡಲಹಂಗರಗಾ
ವೀರಶೈವ ಸಮಾಜ ಜಿಲ್ಲಾಧ್ಯಕ್ಷರು ಕಲಬುರಗಿ

ಒಡಿಶಾದಲ್ಲಿ ತಮ್ಮ ಕುಟುಂಬದವರೊಂದಿಗೆ ಅತ್ಯಂತ ಸರಳವಾಗಿ ಜನ್ಮದಿನವನ್ನು ಆಚರಿಸಿಕೊಂಡ ನಮ್ಮೆಲ್ಲರ ನೆಚ್ಚಿನ ನಾಯಕರು, ಯುವಕರ ಕಣ್ಮಣಿ, ಬಿಸಿಲು ನಾ...
20/07/2026

ಒಡಿಶಾದಲ್ಲಿ ತಮ್ಮ ಕುಟುಂಬದವರೊಂದಿಗೆ ಅತ್ಯಂತ ಸರಳವಾಗಿ ಜನ್ಮದಿನವನ್ನು ಆಚರಿಸಿಕೊಂಡ ನಮ್ಮೆಲ್ಲರ ನೆಚ್ಚಿನ ನಾಯಕರು, ಯುವಕರ ಕಣ್ಮಣಿ, ಬಿಸಿಲು ನಾಡಿನ ಭರವಸೆ ಹೋರಾಟಗಾರರು ಹಾಗೂ ವೀರಶೈವ ಸಮಾಜ ಜಿಲ್ಲಾಧ್ಯಕ್ಷರಾದ ಶ್ರೀ ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಅಣ್ಣಾಜೀವರು..!


ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾಜೀ🎂💐ಕನ್ನಡದ ಕಟ್ಟಾಳುˌಕನ್ನಡದ ಕಣ್ಮಣಿˌದಣಿವರಿಯದ ನಾಯಕ ಸಮರ ಸೇನಾನಿˌನನ್ನ ಅಭಿಮಾನದ ಅಣ್ಣಾಜೀˌ ಬಿಸಿ...
19/07/2026

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾಜೀ🎂💐

ಕನ್ನಡದ ಕಟ್ಟಾಳುˌಕನ್ನಡದ ಕಣ್ಮಣಿˌದಣಿವರಿಯದ ನಾಯಕ ಸಮರ ಸೇನಾನಿˌನನ್ನ ಅಭಿಮಾನದ ಅಣ್ಣಾಜೀˌ ಬಿಸಿಲೂ ನಾಡಿನ ಜನ ನಾಯಕರಾದಾ ಸನ್ಮಾನ್ಯ ಶ್ರೀ ಅರುಣಕುಮಾರ ಪಾಟೀಲ ಅಣ್ಣಾಜೀವರು ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹುಟ್ಟು ಹಾಕಿ ಕನ್ನಡ ಸೇವೆಗೆ ಸಾವಿರಾರು ಯುವಕರಿಗೆ ಕನ್ನಡ ದೀಕ್ಷೆ ತೊಡಿಸಿˌ ಯುವಶಕ್ತಿಯಲ್ಲಿ ಸತ್ತು ಹೋಗುತ್ತಿದ್ದ ನಾಡ ಪ್ರೇಮವನ್ನು ಬಡೆದೆಬ್ಬಿಸಿ ನಾಡು ಕಾಯುವ ರಣಧೀರರ ದಂಡನೆ ಕಟ್ಟಿದ್ದರು. ಕೇವಲ ನಮ್ಮ ವೇದಿಕೆಯನ್ನು ಬರೀ ಸಾಹಿತ್ಯಕ ಚಟುವಟಿಕೆˌಭಾಷಣˌಸನ್ಮಾನಗಳಿಗೆ ಸೀಮಿತವಾಗದೇ ಸಾಕಷ್ಟು ಜನಪರˌರೈತಪರˌನಾಡಪರˌಕಾಂತ್ರಿಕಾರಿ ಹೋರಾಟಗಳು ಈ ಭಾಗದಲ್ಲಿ ಮಾಡಿದ್ದಾರೆ.
ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ತಮ್ಮ ಆಯುಷ್ಯ ರೇಖೆಯನ್ನು ಕಟ್ಟಿಎಳೆದು ಒಯ್ಯುತ್ತಿದ್ದಾರೆ. ಕನ್ನಡ ಸೇವೆಗೆ ಸೈನಿಕರನ್ನು ಪೋಷಿಸಿ ಉಜ್ವಲವಂತೆ ಮಾಡಿದ್ದಾರೆ ಅವರ ಬೇರಿನ ಹೆಮ್ಮರವಾಗಿ ಬೆಳೆದು ಟೊಂಗೆಗಳಾಗಿವೆ.
ಅದೇ ರೀತಿ ಜನತೆಯಿಂದ ಬಿಸಿಲು ನಾಡಿನ ಭರವಸೆ ಹೋರಾಟಗಾರರೆಂದು ಬಿರುದು ಪಡೆದಿದ್ದಾರೆ.
ತಮ್ಮ ಜೀವಮಾನದ ಅಮೂಲ್ಯ ವರ್ಷಗಳನ್ನು ಕಲಬುರಗಿ ಭಾಗಕ್ಕೆ ಮೀಸಲಿಟ್ಟಂತಹ ಧೀಮಂತ ವ್ಯಕ್ತಿಯಾಗಿದ್ದರೆ.
ಕರ್ನಾಟಕದಲ್ಲಿ ಚಿರಪರಿಚಿತರಾಗಿ ಈ ಭಾಗದ ಜನತೆಯ ನಾಡಿ ಮಿಡಿತದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡು ಜನಪರ ಸೇವೆಯೇ ತಮ್ಮ ಬದುಕಿನಲ್ಲಿ ಮುಖ್ಯವಾಗಿರಿಸಿಕೊಂಡು ಸದಾ ಮುನ್ನುಗುತ್ತಿರುವ ನನ್ನ ಹೆಮ್ಮೆಯ ನಾಯಕರಾಗಿದ್ದಾರೆ
ನಮ್ಮ ಜೈ ಕರವೇ ವೇದಿಕೆಯಿಂದ ಅಣ್ಣಾಜೀಯವರ ಕೈಗೊಂಡ ಕಾಂತ್ರಿಕಾರ ಹೋರಾಟಗಳಿಂದ ಕಲಬುರಗಿಯಲ್ಲಿ ರೇಲ್ವೇ ಯೋಜನೆಗಳು,ನಗರದ ರಸ್ತೆ ಅಗಲೀಕರಣ,ಅಂಡರ ಬ್ರಿಜ್,ಕಾನ್ಸರ್ ಆಸ್ಪತ್ರೆ, 371ಜೆ ಕಲ್ಂಗಾಗಿ ಸೇರಿದಂತೆ ಸಾಕಷ್ಟು ಅಭಿವ್ರಧ್ಧಿ ಕಾರ್ಯಗಳಾಗಿವೆ.
ರಾಜಕೀಯ ರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿ, ಸಮಾಜದ ಏಳಿಗೆಗಾಗಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ ಸಮಾಜದಲ್ಲಿನ ನೊಂದವರ ಧ್ವನಿಯಾಗಿ ಸಮಾಜದ ಶೇಯೋಭಿವ್ರದ್ಧಿಗೆ ಶ್ರಮಿಸಿದ್ದರು. ನಿಸ್ವಾರ್ಥ ಸಮಾಜಸೇವೆ ಕಂಡು ಜರ್ಮನಿನ ಶಾಂತಿ ವಿವಿಯಿಂದ ಗೌರವ ಡಾಕ್ಟರೇಟ್ "ಪದವಿಯನ್ನು ನೀಡಿ ಗೌರವಿಸಿದೆ. ಬಿ ಜೆ ಪಿ ಪಕ್ಷದ ಮುಖಂಡರಾಗಿ ಪಕ್ಷದ ಚಟುವಟಿಕೆಗಳಲ್ಲಿಯೂ ಕೂಡ ಸಕ್ರೀಯವಾಗಿದ್ದಾರೆ. ಪ್ರಸುತ್ತ ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷರಾಗಿ ಸಮಾಜದ ಏಳೆಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಸಾವಿರಾರು ಯುವಕರಿಗೆ ದಾರಿದೀಪ, ಸದಾ ಸಮಾಜಕ್ಕಾಗಿ ಮಿಡಿಯುವ ಮನಸ್ಸು, ನಾನು ಕೂಡ ಒಬ್ಬ ಅವರ ಗರಡಿಯಲ್ಲಿ ಬೆಳೆದುದ್ದಕ್ಕೆ ಹೆಮ್ಮೆಯಾಗುತ್ತೆ, ನಿಮ್ಮ ನಿಸ್ವಾರ್ಥ ಸಮಾಜಸೇವೆ ನಮ್ಮೇಲ್ಲರಿಗೂ ಆರ್ದಶಮಯವಾಗಿದೆ.ಕಲಬುರಗಿ ಜಿಲ್ಲೆಯ ಜನತೆಗೆ ಆದಷ್ಟು ಬೇಗನೆ ನಿಮ್ಮನ್ನು ಶಾಸಕರನ್ನಾಗಿ ನೋಡುವ ಆಸೆ ಆಗಿದೆ
ಆದಷ್ಟು ಬೇಗನೆ ಆ ಭಗವಂತ ನಮ್ಮೆಲ್ಲರ ಬಯಕೆ ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ.🙏🏻🙏

19/07/2026

Happy Birthday BOSS*🎂💐

ಯುವಕರ ಕಣ್ಮಣಿ,ನೊಂದವರ ಪಾಲಿನ ಆಧಾರ ಸ್ಥಂಬ್,ಬಿಸಿಲು ನಾಡಿನ ಭರವಸೆ ಹೋರಾಟಗಾರರು,ಹಾಗೂ ವೀರಶೈವ ಸಮಾಜ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅರುಣಕ...
18/07/2026

ಯುವಕರ ಕಣ್ಮಣಿ,ನೊಂದವರ ಪಾಲಿನ ಆಧಾರ ಸ್ಥಂಬ್,ಬಿಸಿಲು ನಾಡಿನ ಭರವಸೆ ಹೋರಾಟಗಾರರು,ಹಾಗೂ ವೀರಶೈವ ಸಮಾಜ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅರುಣಕುಮಾರ ಎಸ್ ಪಾಟೀಲ ಕೊಡಲಹಂಗರಗಾ ಅವರ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಳೆ ದಿನಾಂಕ:19/07/2026 ರಂದು ಕಲಬುರಗಿ ನಗರದಲ್ಲಿ ಸಮಾಜಮುಖಿ ಸೇವಾ ಕಾರ್ಯಗಳು ಆಯೋಜಿಸಲಾಗಿದೆ*.

ಶ್ರೀ ಅರುಣಕುಮಾರ ಎಸ ಪಾಟೀಲ ಕೊಡಲಹಂಗರಗಾ ಅವರ ಅಭಿಮಾನಿ ಬಳಗ ಕಲಬುರಗಿ.🙏

Address

Kulageri
Gulbarga
585325

Website

Alerts

Be the first to know and let us send you an email when Amaranath Sahu Kulageri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Amaranath Sahu Kulageri:

Shortcuts

Share

Category