ಶ್ರೀ ವಿರೂಪಾಕ್ಷ ಸೇವಾ ಚಾರಿಟಬಲ್ ಟ್ರಸ್ಟ್ ರಿ ಹೊಸಪೇಟೆ ವಿಜಯನಗರ ಜಿಲ್ಲೆ ಕರ್ನಾಟಕ

  • Home
  • India
  • Hampi
  • ಶ್ರೀ ವಿರೂಪಾಕ್ಷ ಸೇವಾ ಚಾರಿಟಬಲ್ ಟ್ರಸ್ಟ್ ರಿ ಹೊಸಪೇಟೆ ವಿಜಯನಗರ ಜಿಲ್ಲೆ ಕರ್ನಾಟಕ

ಶ್ರೀ ವಿರೂಪಾಕ್ಷ ಸೇವಾ ಚಾರಿಟಬಲ್ ಟ್ರಸ್ಟ್ ರಿ ಹೊಸಪೇಟೆ ವಿಜಯನಗರ ಜಿಲ್ಲೆ ಕರ್ನಾಟಕ ಕರ್ಣಾಟ ಕ್ಷತ್ರಿಯ ನಾಯಕ

21/08/2026

ಚಾಲುಕ್ಯರ ಆರಾಧ್ಯ ದೈವ #ಶ್ರೀ_ವಿರೂಪಾಕ್ಷ...🎊 🎉

Rajarshi Devaraya

ಸ್ಥಳ ಪರಿಚಯ : ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುoಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ - ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವoಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವoಶದ ಅರಸರು ಏಳನೇ ಮತ್ತು ಎoಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒoಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿoತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥರ್ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.

ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು ಶೈವ ಸಂಪ್ರದಾದವುಗಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ ವಾಸ್ತುವಿನ್ಯಾಸ ಉತ್ತುಂಗವನ್ನು ತಲುಪಿದ್ದನ್ನು ಕಾಣುತ್ತೇವೆ.ಆ ಕಾರಣಕ್ಕಾಗೇ ಇಂದಿಗೂ ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ.

ಮಲ್ಲಿಕಾರ್ಜುನ ದೇವಾಲಯ
ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.

ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಇದು ಕೂಡ ವಾಸ್ತು ವಿನ್ನ್ಯಾಸದಲ್ಲಿ ವಿರುಪಾಕ್ಷ ದೇವಾಲಯವನ್ನು ಹೋಲುತ್ತದೆ. ಇದನ್ನೂ ಅದೇ ಶಿಲ್ಪಿಗಳು ನಿರ್ಮಿಸಿರುವ ಸಾಧ್ಯತೆ ಇದೆ.

ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ.

ಇಲ್ಲಿರುವ ಸ್ಮಾರಕಗಳ ಗುoಪನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

 #ಕರ್ಣಾಟ_ಸಾಮ್ರಾಜ್ಯ ಸ್ಥಾಪಕ ಶ್ರೀ ಮಹಾ ದೇವರಾಯ ನಿರ್ಮಿಸಿದ ಶ್ರೀ ವಿರೂಪಾಕ್ಷ ದೇವಸ್ಥಾನ,  #ನೇಪಾಳ_ದೇಶ...🎊 🎉                          ...
19/07/2026

#ಕರ್ಣಾಟ_ಸಾಮ್ರಾಜ್ಯ ಸ್ಥಾಪಕ ಶ್ರೀ ಮಹಾ ದೇವರಾಯ

ನಿರ್ಮಿಸಿದ ಶ್ರೀ ವಿರೂಪಾಕ್ಷ ದೇವಸ್ಥಾನ, #ನೇಪಾಳ_ದೇಶ...🎊 🎉

Rajarshi Devaraya

 #ಕರ್ಣಾಟ_ಸಾಮ್ರಾಜ್ಯ ಸ್ಥಾಪಕ ಹಂಪಿ ಶ್ರೀ ವಿರೂಪಾಕ್ಷ ರಾಜ ಗೋಪುರ ಸೃಷ್ಟಿಕರ್ತ  #ಶ್ರೀ_ಮಹಾ_ದೇವರಾಯರ 929 ನೇ ವರ್ಷದ  #ಸಿಂಹಾಸನಾರೋಹಣ ದಿನದ ಶ...
17/07/2026

#ಕರ್ಣಾಟ_ಸಾಮ್ರಾಜ್ಯ ಸ್ಥಾಪಕ ಹಂಪಿ ಶ್ರೀ ವಿರೂಪಾಕ್ಷ ರಾಜ

ಗೋಪುರ ಸೃಷ್ಟಿಕರ್ತ #ಶ್ರೀ_ಮಹಾ_ದೇವರಾಯರ 929 ನೇ

ವರ್ಷದ #ಸಿಂಹಾಸನಾರೋಹಣ ದಿನದ ಶುಭಾಶಯಗಳು...🎊 🎉

18 - 07 - 1097.

Rajarshi Devaraya

13/07/2026

ಹಂಪಿಯ ಮಂಟಪದಲ್ಲಿ #ವರ್ಣಚಿತ್ರ...🎊 🎉

Rajarshi Devaraya

 #ಶ್ರೀ_ವಿರೂಪಾಕ್ಷ ದೇವಾಲಯ,  #ನೇಪಾಳ ದೇಶ.                                                       Rajarshi Devaraya
11/07/2026

#ಶ್ರೀ_ವಿರೂಪಾಕ್ಷ ದೇವಾಲಯ, #ನೇಪಾಳ ದೇಶ.

Rajarshi Devaraya

ಹಂಪಿ  #ಶ್ರೀ_ವಿರೂಪಾಕ್ಷ_ರಾಜ_ಗೋಪುರ ಸೃಷ್ಟಿಕರ್ತ  #ಶ್ರೀ_ಮಹಾ_ದೇವರಾಯ ರ 929 ನೇ ವರ್ಷದ ನೇಪಾಳ - ಬಿಹಾರ  #ವಿಜಯೋತ್ಸವದ ಶುಭಾಶಯಗಳು...🎊 🎉10...
09/07/2026

ಹಂಪಿ #ಶ್ರೀ_ವಿರೂಪಾಕ್ಷ_ರಾಜ_ಗೋಪುರ ಸೃಷ್ಟಿಕರ್ತ

#ಶ್ರೀ_ಮಹಾ_ದೇವರಾಯ ರ 929 ನೇ ವರ್ಷದ ನೇಪಾಳ -

ಬಿಹಾರ #ವಿಜಯೋತ್ಸವದ ಶುಭಾಶಯಗಳು...🎊 🎉

10 - 07 - 1097

Rajarshi Devaraya

04/07/2026

ಪ್ರಪಂಚದಲ್ಲಿ ಕಂಡುಹಿಡಿಯುವ ಮುಂಚೆಯೇ

12 ಶತಮಾನದ ಭಾರತದಲ್ಲಿ ಆ #ತಂತ್ರಜ್ಞಾನ ಬಳಕೆಯಲ್ಲಿತ್ತು...🎊 🎉

Rajarshi Devaraya

01/07/2026

ಶ್ರೀ ವಿರೂಪಾಕ್ಷ ರಾಜ ಗೋಪುರ...

Rajarshi Devaraya

Address

Hampi

Website

Alerts

Be the first to know and let us send you an email when ಶ್ರೀ ವಿರೂಪಾಕ್ಷ ಸೇವಾ ಚಾರಿಟಬಲ್ ಟ್ರಸ್ಟ್ ರಿ ಹೊಸಪೇಟೆ ವಿಜಯನಗರ ಜಿಲ್ಲೆ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Shortcuts

Share

Category