28/03/2026
ಎಲ್ಲರಿಗೂ ನಮಸ್ಕಾರ,
ನಿಮಗೆಲ್ಲಾ ತಿಳಿದಂತೆ ಹಾಸನದಲ್ಲಿ ಇದೇ ಮಾರ್ಚ್ 7&8 ರಂದು ನಡೆದ ಮಹಿಳಾ ಸಮಾವೇಶದ ಸಾಂದರ್ಭಿಕ ಗ್ರಂಥವಾಗಿ "ಹಾಸನ ಮಣ್ಣಿನ ಹೆಣ್ಣು ದನಿಗಳು" ಕೃತಿ ಬಿಡುಗಡೆಗೊಂಡಿದೆ. ಅದರಲ್ಲಿ ಹಾಸನ ಮಣ್ಣಿನ ಹೆಣ್ಣು ಕಥೆಗಳನ್ನು- ವೈಯಕ್ತಿಕ, ಸಾಮುದಾಯಿಕ, ಸಂಘಟನಾತ್ಮಕ, ಸೇವಾ ನೆಲೆಗಳಲ್ಲಿ ಸ್ಥೂಲವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಪುಸ್ತಕದಲ್ಲಿ 66 ಲೇಖನಗಳಿದ್ದು, ಸಾಹಿತಿ ಬಾನುಮುಷ್ತಾಕ್ ಅವರ ಮೌಲಿಕ ಮುನ್ನುಡಿ ಇದೆ. 308 ಪುಟಗಳ ಪುಸ್ತಕದ ಬೆಲೆ 250/- ರೂಪಾಯಿಗಳು.
ಆಸಕ್ತರು ಪುಸ್ತಕವನ್ನು ಖರೀದಿಸಲು ವಿಚಾರಿಸುತ್ತಿದ್ದು ಪ್ರತಿಗಳನ್ನು ಸಂಪಿಗೆ ರಸ್ತೆಯಲ್ಲಿರುವ "ಅಕ್ಷರ ಬುಕ್ ಹೌಸ್" ನಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ "ಕರಾವಳಿ ಪುಸ್ತಕ ಮಳಿಗೆ"ಯಲ್ಲಿ ಮಾರಾಟಕ್ಕಿಡಲಾಗಿದೆ. ಪುಸ್ತಕ ಕೊಳ್ಳಲು ಬಯಸುವವರಿಗೆ ದಯವಿಟ್ಟು ಮಾಹಿತಿ ನೀಡಿ. ಆಸಕ್ತರೂ ಪುಸ್ತಕವನ್ನು ಕೊಂಡು ಓದಲು ಮನವಿ.