Voice for Development Alur-Sakleshpur

Voice for Development Alur-Sakleshpur Many cities have been continuously grow through several years. So lets fight together for Development...

Now for Alur & Sakleshpur we need more development towards industrial revolution, Agricultural, Educational institutions, good hospitals & many more.

‎ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ । ನಮೋ ಮೋಕ್ಷಪ್ರದೇ ದೇವಿ ನಮಃ ಸಂಪಮ್ರದಾಯಿಕೇ||‎‎ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದ...
02/11/2025

‎ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ । ನಮೋ ಮೋಕ್ಷಪ್ರದೇ ದೇವಿ ನಮಃ ಸಂಪಮ್ರದಾಯಿಕೇ||

‎ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು
‎ತುಳಸಿ ವಿವಾಹದ ಪವಿತ್ರ ದಿನವು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ.


ಬೆಟ್ಟ ಬೈರವೇಶ್ವರ ದೇವಾಲಯ ಮತ್ತು ಸುತ್ತ ಮುತ್ತ ಹಾಗೂ ಪ್ರಸ್ತುತ ಶೌಚಾಲಯ ಕಟ್ಟಡದ ನವೀಕರಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆದು ಮನವ...
15/10/2025

ಬೆಟ್ಟ ಬೈರವೇಶ್ವರ ದೇವಾಲಯ ಮತ್ತು ಸುತ್ತ ಮುತ್ತ ಹಾಗೂ ಪ್ರಸ್ತುತ ಶೌಚಾಲಯ ಕಟ್ಟಡದ ನವೀಕರಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆದು ಮನವಿ....

ಬೆಟ್ಟ ಬೈರವೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಶಾಸಕರಾದ ಶ್ರೀ ಎಚ್. ಎಂ. ವಿಶ್ವನಾಥ್ ಅವರ ಅವಧಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಯಿತು. ಈ ಸೌಕರ್ಯವನ್ನು ಭಕ್ತರು ಮತ್ತು ಪ್ರವಾಸಿಗರಿಗೆ ಸ್ವಚ್ಛತಾ ಸೌಲಭ್ಯ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿತ್ತು.

ಆದರೆ, ಅವರ ಅವಧಿಯ ನಂತರ ಈ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ, ದೇವಾಲಯದ ಸುತ್ತಮುತ್ತಲಿನ ಪರಿಸರ ಸಂಪೂರ್ಣವಾಗಿ ಕಡೆಗಣನೆಗೊಳಗಾಗಿದೆ. ಈ ಪವಿತ್ರ ಹಾಗೂ ಐತಿಹಾಸಿಕ ಸ್ಥಳದಲ್ಲಿ ಪ್ರವಾಸಿಗರು ಅಥವಾ ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳು — ಶೌಚಾಲಯ, ಕುಡಿಯುವ ನೀರು, ಕಸದ ನಿರ್ವಹಣೆ, ವಿಶ್ರಾಂತಿ ಸ್ಥಳ ಮುಂತಾದವುಗಳ ಕೊರತೆಯಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯು ಸಹ ಈ ಪ್ರದೇಶದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ, ಸ್ಥಳವು ಅನಗತ್ಯ ಚಟುವಟಿಕೆಗಳಿಗೆ ಬಳಸಲ್ಪಡುತ್ತಿದೆ ಮತ್ತು ಸ್ಥಳದ ಐತಿಹಾಸಿಕ ಮಹತ್ವ ನಿಧಾನವಾಗಿ ಮರೆಯಲ್ಪಡುತ್ತಿದೆ.

ಆದ್ದರಿಂದ, ಪ್ರಸ್ತುತ ಶಾಸಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿನಂತಿಸುತ್ತೇನೆ.
ಬೆಟ್ಟ ಬೈರವೇಶ್ವರ ದೇವಾಲಯವು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿಯ ಪ್ರತೀಕವಾಗಿದ್ದು, ಇದರ ಗೌರವ ಮತ್ತು ಪಾವಿತ್ರ್ಯವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಹನಬಾಳು ಸುತ್ತಮುತ್ತಲಿನ ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳು ಸಹ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಏಕತೆಯಿಂದ ಮುಂದಾಗುವುದು ಅತ್ಯವಶ್ಯಕ.
ಅವರು ಸ್ಥಳೀಯ ಅಧಿಕಾರಿಗಳ ಪೂರ್ವಾನುಮತಿ ಪಡೆದು, ಪರಿಸರ ಸಂರಕ್ಷಣಾ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು.
ಈ ರೀತಿಯ ಸಮನ್ವಯದ ಮೂಲಕ ಸ್ಥಳದ ಸ್ವಚ್ಛತೆ, ಭದ್ರತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು.
ಅಲ್ಲದೆ, ಅವರು ಈ ಪ್ರದೇಶ ಅತ್ವ ಸ್ಥಳವನು ಸಚಿವೃತವಾಗಿ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವುದರ ಮೂಲಕ, “so and so resort/home stay managed” ಎಂಬ ರೀತಿಯಲ್ಲಿ ನಿಮ್ಮ ರೆಸಾರ್ಟ್ ನ ಹೆಸರು ಪ್ರಚಾರಮಾಡಬಹುದು.
ಇದರಿಂದ ಸಾರ್ವಜನಿಕರ ವಿಶ್ವಾಸವೂ ಹೆಚ್ಚುತ್ತದೆ ಮತ್ತು ಸ್ಥಳದ ಗೌರವವೂ ಉಳಿಯುತ್ತದೆ ಹಾಗೂ ರೆಸಾರ್ಟ್ ಹೆಸರು ಪ್ರಚಾರವಾಗುತದೆ. ..

ಇತಿಹಾಸ ಬೆಟ್ಟ ಬೈರವೇಶ್ವರ ದೇವಾಲಯ – ಭಕ್ತಿಯ ಮತ್ತು ಸಂಸ್ಕೃತಿಯ ಪ್ರತೀಕ

ಬೆಟ್ಟ ಬೈರವೇಶ್ವರ ದೇವಾಲಯವು ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣವಾಗಿದೆ. ಭಗವಾನ್ ಬೈರವೇಶ್ವರ, ಅಂದರೆ ಭಗವಾನ್ ಶಿವನ ಒಂದು ರೂಪಕ್ಕೆ ಸಮರ್ಪಿತವಾದ ಈ ದೇವಾಲಯವು ಭಕ್ತಿಯ, ಶ್ರದ್ಧೆಯ ಮತ್ತು ಶಿಲ್ಪಕಲೆಯ ಅದ್ಭುತ ನಿದರ್ಶನವಾಗಿದೆ.
ಈ ದೇವಾಲಯದ ನಿಖರ ನಿರ್ಮಾಣ ದಿನಾಂಕದ ದಾಖಲಾತಿಗಳು ಲಭ್ಯವಿಲ್ಲದಿದ್ದರೂ, ಇದು ಶತಮಾನಗಳ ಹಿಂದಿನ ಪ್ರಾಚೀನ ದೇವಾಲಯವೆಂದು ನಂಬಲಾಗಿದೆ. ಭಾರತದ ಅನೇಕ ದೇವಾಲಯಗಳಂತೆ, ಬೆಟ್ಟ ಬೈರವೇಶ್ವರ ದೇವಾಲಯಕ್ಕೂ ಅದರ ಸ್ಥಾಪನೆಗೆ ಸಂಬಂಧಿಸಿದ ಪೌರಾಣಿಕ ಕಥೆಗಳು ಮತ್ತು ಜನಪದ ಪುರಾಣಗಳು ಪ್ರಸಿದ್ಧವಾಗಿವೆ.
ಅವುಗಳಲ್ಲಿ ಒಂದರಲ್ಲಿ ಮಂಡವ್ಯ ಮಹರ್ಷಿ ಎಂಬ ಋಷಿಯ ಕಥೆ ಇದೆ. ಅವರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು ಭಗವಾನ್ ಶಿವನ ಭಕ್ತರಾಗಿದ್ದರು. ಅವರ ತಪಸ್ಸಿಗೆ ಸಂತುಷ್ಟನಾದ ಶಿವನು ಲಿಂಗ ರೂಪದಲ್ಲಿ ಪರ್ವತದ ಮೇಲೆ ಪ್ರತ್ಯಕ್ಷನಾದನೆಂದು ಹೇಳಲಾಗುತ್ತದೆ. ಆ ಸ್ಥಳದಲ್ಲೇ ನಂತರ ದೇವಾಲಯವನ್ನು ನಿರ್ಮಿಸಲಾಯಿತು ಎಂದು ನಂಬಿಕೆ ಇದೆ.

ಶತಮಾನಗಳ ಕಾಲದಲ್ಲಿ ಈ ದೇವಾಲಯವು ಅನೆಕ ರಾಜರು, ಸಾಮಂತರು ಮತ್ತು ಶ್ರೀಮಂತ ಭಕ್ತರ ಆಶ್ರಯದಲ್ಲಿ ಪುನರ್‌ನಿರ್ಮಾಣ ಮತ್ತು ವಿಸ್ತರಣೆಗೊಂಡಿದೆ. ಅವರ ದಾನ ಮತ್ತು ಶ್ರದ್ಧೆಯಿಂದ ದೇವಾಲಯದ ವೈಭವ ಇಂದಿಗೂ ಉಳಿದುಕೊಂಡಿದೆ.
ಈ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದ್ದು, ಅದರ ಸೂಕ್ಷ್ಮ ಶಿಲ್ಪಗಳು, ಎತ್ತರದ ಗೋಪುರಗಳು, ಮತ್ತು ಅಲಂಕೃತ ಕಂಬಮಂಟಪಗಳು ವಿಶಿಷ್ಟವಾಗಿವೆ. ದೇವಾಲಯ ಸಮುಚ್ಚಯದಲ್ಲಿ ಸಾಮಾನ್ಯವಾಗಿ ಗರ್ಭಗೃಹ (ಮುಖ್ಯ ದೇವರ ಸನ್ನಿಧಿ), ಮಂಟಪಗಳು, ಪರಿವಾರ ದೇವತೆಗಳ ಸನ್ನಿಧಿಗಳು,

ಧಾರ್ಮಿಕ ದೃಷ್ಟಿಯಿಂದ, ಬೆಟ್ಟ ಬೈರವೇಶ್ವರ ದೇವಾಲಯವು ಭಗವಾನ್ ಶಿವಭಕ್ತರ ಪ್ರಮುಖ ಯಾತ್ರಾಸ್ಥಳವಾಗಿದೆ. ವಿಶೇಷವಾಗಿ ಮಹಾ ಶಿವರಾತ್ರಿ ಹಬ್ಬದ ಸಂದರ್ಭಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿ ಆಗಮಿಸುತ್ತಾರೆ.

ಧಾರ್ಮಿಕತೆಯ ಜೊತೆಗೆ, ಈ ದೇವಾಲಯವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಇದು ರಾಜ್ಯದ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಭಕ್ತಿಯ ಪರಂಪರೆಯ ಜೀವಂತ ಸಾಕ್ಷಿಯಾಗಿದೆ..

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾ...
27/08/2025

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.ತಮ್ಮೆಲ್ಲರಿಗೂ ಸಕಲ ಸಂಪತ್ತು, ಆರೋಗ್ಯ, ನೆಮ್ಮದಿ ದಯಪಾಲಿಸಲಿ ಎಂದು ವಿಘ್ನನಿವ...
26/08/2025

ನಾಡಿನ ಸಮಸ್ತ ಜನತೆಗೆ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.

ತಮ್ಮೆಲ್ಲರಿಗೂ ಸಕಲ ಸಂಪತ್ತು, ಆರೋಗ್ಯ, ನೆಮ್ಮದಿ ದಯಪಾಲಿಸಲಿ ಎಂದು ವಿಘ್ನನಿವಾರಕ ಗಣೇಶ ನಲ್ಲಿ ಪ್ರಾರ್ಥಿಸುತ್ತೇನೆ.

**ಡಾ. ಪವಿತ್ರಾ ಅನುಪರಾಜ್ ಮೆಣಸಮಕ್ಕಿ ****(MD (ISM), CIM( Appollo Hospitals)---ರವರು ಅನೇಕ ಪ್ರತಿಷ್ಠಿತ ಮೈಸೂರು ಮತ್ತು ಹಾಸನದ  ಆಸ್ಪತ...
14/07/2025

**ಡಾ. ಪವಿತ್ರಾ ಅನುಪರಾಜ್ ಮೆಣಸಮಕ್ಕಿ **
**(MD (ISM), CIM( Appollo Hospitals)
---
ರವರು ಅನೇಕ ಪ್ರತಿಷ್ಠಿತ ಮೈಸೂರು ಮತ್ತು ಹಾಸನದ ಆಸ್ಪತ್ರೆಗಳಲ್ಲಿ ಕೆಲಸಮಾಡಿದ ಅನುಭವವಿದೆ.. ವೈದ್ಯಕೀಯದ ವಿವಿಧ ಚಿಕಿತ್ಸಾ ಅನುಭವವನ್ನು ಹೊಂದಿದ್ದಾರೆ. ನಿರಂತರ ಅಧ್ಯಯನ ಮತ್ತು ವೃತ್ತಿಪರ ಅಭಿವೃದ್ಧಿಯ ಬಗ್ಗೆ ಬದ್ಧತೆ ಇದೆ. ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆಗೆ, ಚಿಕಿತ್ಸೆಗೆ ಅಥವಾ ಸಮಾಲೋಚನೆಗೆ ಭೇಟಿ ಕೊಡಿ ಹಾಗೂ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

*ವಿಳಾಸ* ;- ರಾಜನಂದಿ ಹೆಲ್ತ್ ಕೇರ್ ಕ್ಲಿನಿಕ್ , ವಾಯು ನಂದ್ ಮೆಡಿಕಲ್ಸ್ ಬಿಲ್ಡಿಂಗ್ ಹಾಗೂ ಸರ್ಕಾರಿ ಆಸ್ಪತ್ರೆ ಪಕ್ಕ ಆಲೂರು.

ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು.ಅವರ ಅದ್ವಿತೀ...
07/11/2024

ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳು.
ಅವರ ಅದ್ವಿತೀಯ ಆವಿಷ್ಕಾರವಾದ ಮತ್ತು ಇತರ ವೈಜ್ಞಾನಿಕ ಸಾಧನೆಗಳು ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿಯಾಗಿಸಿದೆ.

Address

Hassan
573213

Telephone

+919632078818

Website

Alerts

Be the first to know and let us send you an email when Voice for Development Alur-Sakleshpur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Voice for Development Alur-Sakleshpur:

Share

Category