22/08/2026
ಹೊಸ ಯುಗ ಹೊಸ ಅಧ್ಯಾಯ
ನಮ್ಮ ಯುವಕರ ನಡೆ ಗ್ರಾಮದ ಕಡೆ
ಪುರಾತನ ಗುಡಿಗಳಿಗೆ
ಹೊಸದೊಂದು ಮೆರುಗು
ಸುಮಾರು 500 ವರ್ಷಗಳ ಇತಿಹಾಸವನ್ನು ತನ್ನೊಳಗೆ ಹೊತ್ತು ನಿಂತಿರುವ, ಅಮರಶಿಲ್ಪಿ ಜಕಣಾಚಾರಿಯ ಶಿಲ್ಪಕಲೆಯ ಪರಂಪರೆಯನ್ನು ನೆನಪಿಸುವ ಶ್ರೀ ಸಿದ್ದೇಶ್ವರ ದೇವಸ್ಥಾನದತ್ತ ನಮ್ಮ ನಡೆ ಸಾಗಿತು.
ಹುಬ್ಬಳ್ಳಿಯಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿರುವ ವರೂರು ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ, ಒಂದು ಕಾಲದಲ್ಲಿ ತನ್ನ ವೈಭವದಿಂದ ಮೆರೆದಿದ್ದ ಪುರಾತನ ದೇವಾಲಯ. ಆದರೆ ಕಾಲಚಕ್ರದ ಹೊಡೆತಕ್ಕೆ ಸಿಲುಕಿ, ನಿರ್ಲಕ್ಷ್ಯದಿಂದ ಇಂದು ನಶಿಸುವ ಸ್ಥಿತಿಗೆ ತಲುಪಿರುವುದು ನೋವಿನ ಸಂಗತಿ.
ಈ ಪವಿತ್ರ ದೇವಾಲಯದ ರಕ್ಷಣೆಗೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನವೆಂಬರ್ 2021ರಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು, ದೇವಾಲಯವನ್ನು ಸಂರಕ್ಷಿಸುವ ಮಹತ್ವದ ಹೆಜ್ಜೆ ಇಟ್ಟಿದ್ದರು. ಆದರೆ ಕಾಲ ಕಳೆದಂತೆ ಮತ್ತೆ ದೇವಾಲಯಕ್ಕೆ ಸೂಕ್ತ ರಕ್ಷಣೆ ಮತ್ತು ನಿರ್ವಹಣೆಯ ಅಗತ್ಯತೆ ಎದುರಾಗಿದೆ.
ಆದ್ದರಿಂದ ಈಗ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ (ರಿ), ಕರ್ನಾಟಕ ಈ ಪುರಾತನ ದೇವಾಲಯದ ರಕ್ಷಣೆಗೆ ಸಜ್ಜಾಗಿದೆ.
ನಮ್ಮ ಉದ್ದೇಶ �