12/08/2026
ಸಾಮಾರ್ಥ್ಯ ಅಭಿವೃದ್ದಿ ಆಯೋಗ ಭಾರತ ಸರ್ಕಾರ ಕರ್ಮಯೋಗಿ ಭಾರತ್ ಯೋಜನೆಯಡಿ ಕೃಷಿ ಮಾರಾಟ ಇಲಾಖೆ ಬೆಳಗಾವಿ ವಿಭಾಗದ ಅಧಿಕಾರಿಗಳು / ಸಿಬ್ಬಂದಿ ಯವರಿಗೆ ಕರ್ಮಯೋಗಿ ಕರ್ತವ್ಯ ಕಾರ್ಯಕ್ರಮದಡಿ (K*K) ಸಾಮಾರ್ಥ್ಯ ಅಭಿವೃದ್ದಿ ಕಾರ್ಯಗಾರವನ್ನು ದಿನಾಂಕ 10.08.2026 ಒಂದು ದಿನದ ಕಾರ್ಯಗಾರವನ್ನು ಬೆಳಗ್ಗೆ 10 ಘಂಟೆಯಿಂದ ಸಾಯಂಕಲ 05 ರವರೆಗೆ ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ, ಹುಬ್ಬಳ್ಳಿಯ ಸಂಬಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಡಾ. ಚಿದಾನಂದ ಪಿ ಮನ್ಸೂರ, ವಕೀಲರು, ಸರ್ವೊಚ್ಚ ನ್ಯಾಯಲಯ ಹಾಗೂ ವಿಶ್ರಾಂತ ಡೀನ್, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಶ್ರೀ ಕೋಡಿಗೌಡ, ಹೆಚ್ಚುವರಿ ನಿರ್ದೇಶಕರು, ಜಾರಿ ಕೋಶ ಮತ್ತು ವಿಭಾಗೀಯ ಕಾರ್ಯಲಯ,ಬೆಳಗಾವಿ, ಶ್ರೀ ರವಿಚಂದ್ರ ಎಂ ಜಂಟಿ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿರಸಿ, ಶ್ರೀಮತಿ ಸುವರ್ಣ ವಾಲಿಕಾರ, ಜಂಟಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಗದಗ ಜಿಲ್ಲೆ , ಶ್ರೀ ಆಶಿಕ್ ಅಲಿ ಡಿ ಎಂ ಪ್ರಾಚಾರ್ಯರು, ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ ಹುಬ್ಬಳ್ಳಿ ಮತ್ತು ಬೆಳಗಾವಿ ವಿಭಾಗದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ ಮಾರಾಟ ಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸದರಿ ಕರ್ಯಾಗಾರದಲ್ಲಿ ಕೇಂದ್ರ ಸರ್ಕಾರದ iGOT Karmayogi ಡಿಜಿಟಲ್ ಪ್ಲಾಟ್ಫಾರ್ಮ್ನೊಂದಿಗೆ ಸಂಯೋಜನೆಯಾಗಿರುತ್ತದೆ ಹಾಗೂ SLTs (State Level Trainers) ರವರಿಂದ ಆಯೋಜಿಸಲಾಗುತ್ತು ಇದರಲ್ಲಿ ನಾಲ್ಕು ಮಾದರಿಗಳನ್ನೊಳಗೊಂಡ ಸರ್ಕಾರ ನೌಕರಲ್ಲಿ ಸೇವಾ ಭಾವ, ನಾಗರೀಕ ಕೇಂದ್ರಿತ ಸೇವೆಗಳು, ವೈಯಕ್ತಿಕ ಗುರಿಗಳನ್ನು ಹೇಗೆ ವ್ಯಾಕ್ಯಾನಿಸಿ ಅವುಗಳನ್ನು ಇಲಾಖೆ, ಸಚಿವಾಲಯ, ರಾಜ್ಯ ಮತ್ತು ದೇಶದ ಗುರಿಗಳನ್ನಾಗಿ ಮಾರ್ಪಾಡು ಮಾಡಬಹುದೆಂದು ಕಾರ್ಯಗಾರದಲ್ಲಿ ಬೋದಿಸಿಲಾಗಿರುತ್ತದೆ.