ಕರ್ನಾಟಕ ಜನಪರ ಹೋರಾಟ ವೇದಿಕೆ Karnataka Janapara Horata Vedike

  • Home
  • India
  • Hubli
  • ಕರ್ನಾಟಕ ಜನಪರ ಹೋರಾಟ ವೇದಿಕೆ Karnataka Janapara Horata Vedike

ಕರ್ನಾಟಕ ಜನಪರ ಹೋರಾಟ ವೇದಿಕೆ Karnataka Janapara Horata Vedike Contact information, map and directions, contact form, opening hours, services, ratings, photos, videos and announcements from ಕರ್ನಾಟಕ ಜನಪರ ಹೋರಾಟ ವೇದಿಕೆ Karnataka Janapara Horata Vedike, Social service, Hubli.

ಅಮಾಯಕ ಜನರಿಗೆ ಆಗುತ್ತಿರುವ ಮೋಸ ಮತ್ತು ವಂಚನೆಯ ವಿರುದ್ದ ಹೋರಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಹಾಗೂ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತುವ ಉದ್ದೇಶದೊಂದಿಗೆ ಕರ್ನಾಟಕ ಜನಪರ ಹೋರಾಟ ವೇದಿಕೆ ಸ್ಥಾಪಿಸಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!ಅಬಕಾರಿ ಸಚಿವ ಶ್ರೀ ಕೆ.ಎಂ.ಶಿವಲಿಂಗೇಗೌಡರಿಗೆ ಬಹಿರಂಗ ಪತ್ರ..!ಮಾನ್ಯರೇ, ಅಬಕಾರಿ ಸಚಿವರಾಗಿ ಅ...
13/08/2026

ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

ಅಬಕಾರಿ ಸಚಿವ ಶ್ರೀ ಕೆ.ಎಂ.ಶಿವಲಿಂಗೇಗೌಡರಿಗೆ ಬಹಿರಂಗ ಪತ್ರ..!

ಮಾನ್ಯರೇ, ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ತಮಗೆ ಅಭಿನಂದನೆಗಳು. ನೇರವಾಗಿ ವಿಷಯಕ್ಕೆ ಬಂದು ಬಿಡ್ತೀನಿ..ಅಬಕಾರಿ ಇಲಾಖೆಯಲ್ಲಿನ ಅಧಿಕಾರಿಗಳು ಲಂಚ ತಿಂತಾರೆ ಅಂತ ಜನ ಮಾತನಾಡುವದನ್ನು ಈವರೆಗೆ ಯಾರಿಂದಲೂ ತಡೆಯಲು ಆಗಿಲ್ಲ. ಮತ್ತು ಲಂಚ ತಿನ್ನುವದನ್ನು ನಿಲ್ಲಿಸಲಿಕ್ಕೂ ಯಾರಿಂದಲೂ ಸಾಧ್ಯವಿಲ್ಲ ಎಂಬುದು ತಮ್ಮ ಗಮನಕ್ಕೆ ಇರಲಿಕ್ಕೆ ಸಾಕು.

ನಾನು ಈಗ ತಮಗೆ ತಿಳಿಸಬಯಸುವದೆನೇಂದರೇ, ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳ ಹುಬ್ಬಳ್ಳಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಅದೇಂತಹ ಭಯಾನಕ ಕಳ್ಳರಿದ್ದಾರೆ ಎಂದರೇ ಲಂಚದ ಆಸೆಗೆ ಎಂತಹ ನೀಚ ಕೆಲಸಕ್ಕೂ ಹೇಸುವದಿಲ್ಲ ಎಂಬುದರ ಬಗ್ಗೆ ಅವರುಗಳು ಮಾಡಿರುವ ನೀಚ ಕೆಲಸವನ್ನು ತಾವು ಕೇಳಿದ ಕೂಡಲೇ ಒಂದು ಕ್ಷಣ ಶೇಕ್‌ ಆಗುವಂತಹ ಪ್ರಕರಣ ಇದು.

ನಾನು ಹೇಳಲು ಹೊರಟಿರುವ ಈ ಭ್ರಷ್ಟಾಚಾರದ ಸ್ಟೋರಿಗೆ ಬೇಕಾದ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಈ ಎಲ್ಲ ದಾಖಲೆಗಳನ್ನು ತಮಗೆ ಶೀಘ್ರವಾಗಿ ತಲುಪಿಸುತ್ತೇನೆ. ಒಮ್ಮೆ ಈ ದಾಖಲೆ ತಮ್ಮ ಬಳಿ ಬಂದ ನಂತರವೂ ಕಾನೂನು ಪ್ರಕಾರ ತಾವು ಕ್ರಮ ಕೈಗೊಳ್ಳದಿದ್ದರೇ ತಾವು ಸಹ ಇದರಲ್ಲಿ ಶಾಮೀಲಾಗಿದ್ದೀರಿ ಎಂಬ ಅನುಮಾನ ಬರಲಿದೆ. ಆದರೆ ತಾವು ಅಂತಹ ಕೆಲಸ ಮಾಡುವದಿಲ್ಲ ಎಂಬ ವಿಶ್ವಾಸದೊಂದಿಗೆ ತಮಗೆ ಈ ಹಗರಣದ ಇಂಚಿಂಚು ಮಾಹಿತಿ ತಮಗೆ ನೀಡಲಿದ್ದೇನೆ.

ಸರ್ಕಾರಿ ಜಾಗೆಯಲ್ಲಿ ಸಿಎಲ್‌7 ಲೈಸನ್ಸ್‌ ಮಂಜೂರು!

ಮಾನ್ಯ ಸಚಿವರೇ, ಇದು ಬರೋಬ್ಬರಿ 9 ವರುಷಗಳ ಹಿಂದಿನ ಕಥೆ! ಹುಬ್ಬಳ್ಳಿಯಲ್ಲಿ ಆಗ ಅಬಕಾರಿ ನಿರೀಕ್ಷಕರಾಗಿದ್ದ ಈಗ ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಇರುವ ಮಹಾನುಭಾವರೊಬ್ಬರು ಕೇಂದ್ರ ಸರ್ಕಾರದ ಜಾಗೆಯಲ್ಲಿ ಅದು ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಸಿಎಲ್‌7 ಲೈಸನ್ಸ್‌ ನೀಡಿದ್ದಾರೆ. ಇದೇನು ದೊಡ್ಡ ವಿಷಯ ಬಿಡಿ. ದುಡ್ಡು ತಿಂದು ಕೊಟ್ಟಿರಬಹುದು ಎಂದು ಕೆಲವರು ಅಂದುಕೊಳ್ಳಬಹುದು. ಆದರೆ ಲಂಚದ ಎಂಜಲಿಗೆ ಆಗಿನ ನಿರೀಕ್ಷಕ ಮಾಡಿದ್ದ ನೀಚ ಕೆಲಸಕ್ಕೆ ಆತ ಯಾವೊತ್ತೋ ವಜಾ ಆಗಬೇಕಾಗಿತ್ತು.

ಫೋರ್ಜರಿ ಮಾಡಿದ ನಿರಾಕ್ಷೇಪಣಾ ಪತ್ರ|

ಆಗಿನ ಹುಬ್ಬಳ್ಳಿಯ ಅಬಕಾರಿ ನಿರೀಕ್ಷಕ ಅಂದು ಮಾಡಿದ ಘನಂದಾರಿ ಕೆಲಸ ಬಹುಶಃ ಕರ್ನಾಟಕದಲ್ಲಿ ಅಬಕಾರಿ ಇಲಾಖೆಯಲ್ಲಿ ಯಾರು ಮಾಡಿರಲಿಕ್ಕಿಲ್ಲ...ಅಲ್ಲ ಈವರೆಗೆ ಮಾಡಿಲ್ಲ. ಆದರೆ ಈ ಮಹಾವಂಚಕ ಅಬಕಾರಿ ನಿರೀಕ್ಷಕ ಹಣದಾಸೆಗೆ ಕೇಂದ್ರ ಸರ್ಕಾರಿ ಜಾಗೆಯಲ್ಲಿ ಸಿಎಲ್‌7 ಲೈಸನ್ಸ್‌ ನೀಡಲು ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನು ತಾನೇ ಮುಂದೆ ನಿಂತು ಫೋರ್ಜರಿ ಮಾಡಿದ್ದಾನೆ.

ಕಾನೂನು ಪ್ರಕಾರ ಸರ್ಕಾರಿ ಜಾಗೆಯಲ್ಲಿ ಅದೂ ಸಾರ್ವಜನಿಕ ಸ್ಥಳದಲ್ಲಿ ಸಿಎಲ್‌7 ನೀಡಲು ಅವಕಾಶವೇ ಇಲ್ಲ. ಈ ಹಲಾಲಖೋರ ಕೆಲಸದಲ್ಲಿ ಈ ಅಬಕಾರಿ ನಿರೀಕ್ಷಕನ ಜೊತೆ ಕೇಂದ್ರ ಸರ್ಕಾರದ ಕೆಲ ಸಿಬ್ಬಂದಿಯು ಸಹ ಕೈಜೋಡಿಸಿರುತ್ತಾರೆ. ಭ್ರಷ್ಟರೆಲ್ಲ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಅಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿ, ಒಬ್ಬ ಕಂಟ್ರಾಕ್ಟರ್‌ನ ಹೋಟೇಲ್‌ಗೆ ಸಿಎಲ್‌7 ಲೈಸನ್ಸ್‌ ಮಂಜೂರು ಮಾಡಿಸುತ್ತಾರೆ.

ನೀರಿಕ್ಷಕನಿಂದ ಡಿಸಿವರೆಗೂ ಶಾಮೀಲು!

ನಕಲಿ ದಾಖಲೆ, ಫೋರ್ಜರಿ ಮಾಡಿ ಸಿಎಲ್‌7 ಲೈಸನ್ಸ್‌ ಮಂಜೂರು ಮಾಡುವಲ್ಲಿ ಹುಬ್ಬಳ್ಳಿಯ ಆಗಿನ ಅಬಕಾರಿ ಇಲಾಖೆಯ ಭ್ರಷ್ಟ ನಿರೀಕ್ಷಕನಿಂದ ಹಿಡಿದು ಆಗಿನ ಧಾರವಾಡ ಜಿಲ್ಲೆಯ ಅಬಕಾರಿ ಡೆಪ್ಯುಟಿ ಕಮೀಶನರ್‌ ಹಾಗೂ ಕಣ್ಣು ಮುಚ್ಚಿ ಲೈಸನ್ಸ್‌ ಮಂಜೂರು ಮಾಡಿದ ಧಾರವಾಡದ ಅಂದಿನ ಜಿಲ್ಲಾಧಿಕಾರಿ ಸೇರಿ ಇನ್ನು ಹಲವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.

ಮಾನ್ಯ ಸಚಿವರೇ, ತಮಗೆ ಅಬಕಾರಿ ಇಲಾಖೆಯ ಖಾತೆಯನ್ನು ನೀಡಿದ ಕೂಡಲೇ ಕೆಲವರು ತಮ್ಮ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾನು ತಿಳಿಸುತ್ತಿರುವ ಈ ಹಗರಣದ ಬಗ್ಗೆ ತಾವು ಸ್ವತಃ ಮುತುರ್ವಜಿ ವಹಿಸಿ ತನಿಖೆಗೆ ಆದೇಶ ನೀಡನೇಕು. ಆ ಮೂಲಕ ಶಿವಲಿಂಗೇಗೌಡರ ಖದರು ಏನು ಅಂತ ತೋರಿಸಬೇಕು.

ಈಗ ನಾನು ತಿಳಿಸಿರುವ ಹಗರಣ ಸೂಕ್ಷವಾಗಿರುವದರಿಂದ ಈ ಹಗರಣದ ಎಲ್ಲ ದಾಖಲೆಗಳನ್ನು (ಒಂದೇ ಫೋರ್ಜರಿ ಪತ್ರವನ್ನು ಹಲವು ಬಾರಿ ತಿದ್ದಿ ಸಹಿ ಮಾಡಿದ ದಾಖಲೆಗಳು ಸಮೇತ) ತಮಗೆ ನಾನು ಶೀಘ್ರದಲ್ಲೇ ಖುದ್ದಾಗಿ ಬಂದು ನೀಡಲಿದ್ದೇನೆ. ತಾವು ಎಲ್ಲವನ್ನು ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಹಾಗೂ ನೀಡಲಾಗಿರುವ ಸಿಎಲ್‌7 ಲೈಸನ್ಸ್‌ ಅನ್ನು ರದ್ದು ಮಾಡುತ್ತೀರಿ ಎಂದು ನಂಬಿದ್ದೇನೆ.

ತಮ್ಮ

ವಿಜಯೀಂದ್ರ ಪಿ.ಹುನಗುಂದ್‌
ಅಧ್ಯಕ್ಷರು,
ಕರ್ನಾಟಕ ಜನಪರ ಹೋರಾಟ ವೇದಿಕೆ
ಹುಬ್ಬಳ್ಳಿ.
7337732409 (whatsup only)
[email protected]

25/07/2026
ಅನ್ಯಾಯದ ವಿರುದ್ದ ಹೋರಾಟದಲ್ಲಿ ಸದಾ ನನ್ನ ಬೆಂಬಲಕ್ಕೆ ನಿಲ್ಲುವ ಅಂದಿನ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಅನೀಲ್‌ಕುಮಾರ್‌ ಪಾಟೀ...
25/07/2026

ಅನ್ಯಾಯದ ವಿರುದ್ದ ಹೋರಾಟದಲ್ಲಿ ಸದಾ ನನ್ನ ಬೆಂಬಲಕ್ಕೆ ನಿಲ್ಲುವ ಅಂದಿನ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಅನೀಲ್‌ಕುಮಾರ್‌ ಪಾಟೀಲ್‌ ಅವರ ಜೊತೆ ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದ ಚಿತ್ರಪಟ

ಹುಬ್ಬಳ್ಳಿಯಲ್ಲಿ ನಿವೇಶನ, ಮನೆ ಮಾರಾಟದ ಹೆಸರಿನಲ್ಲಿ "ಮೆಗಾದೋಖಾ"ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಲಾಗಿದೆ ಅಪಾರ್ಟಮೆಂಟ್‌ಹುಬ್ಬಳ್ಳಿಯ ...
20/05/2026

ಹುಬ್ಬಳ್ಳಿಯಲ್ಲಿ ನಿವೇಶನ, ಮನೆ ಮಾರಾಟದ ಹೆಸರಿನಲ್ಲಿ "ಮೆಗಾದೋಖಾ"

ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಲಾಗಿದೆ ಅಪಾರ್ಟಮೆಂಟ್‌
ಹುಬ್ಬಳ್ಳಿಯ ಅಮೃತ್‌ ಥೇಟರ್‌ ಬಳಿ ಇದೆ ಅಪಾರ್ಟಮೆಂಟ್‌
ಕಾಯ್ದೆ ಉಲ್ಲಂಘಿಸಿ ಮನೆಗಳ ಮಾರಾಟ ಮಾಡಿರುವ ವಂಚಕ ಬಿಲ್ಡರ್‌
ಬಿಲ್ಡರ್‌ ಜೊತೆ ಪಾಲಿಕೆ ಅಧಿಕಾರಿಗಳು ಶಾಮೀಲು
ಕಾಯ್ದೆ ಉಲ್ಲಂಘಿಸಿ "ಸಿಸಿ" ಕೊಟ್ಟಿರುವ ಪಾಲಿಕೆ ಅಧಿಕಾರಿಗಳು
ಯೋಜನಾ ವಿಭಾಗದ ಮೂವರು ಅಧಿಕಾರಿಗಳ ವಿರುದ್ದ ದೂರು
ಲೋಕಾಯಕ್ತರ ಬಳಿ ದೂರು ದಾಖಲು
ಸಾರ್ವಜನಿಕ ಹಿತದೃಷ್ಟಿಯಿಂದ ದೂರು ದಾಖಲು

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿಯ ಪತ್ರಿಕಾ ಕಾರ್ಯದರ್ಶಿಯಾಗಿ ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒ...
16/04/2026

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿಯ ಪತ್ರಿಕಾ ಕಾರ್ಯದರ್ಶಿಯಾಗಿ ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಪ್ರೆಸ್‌ ಮೀಟ್‌ಗೆ ವರದಿಗಾರರನ್ನು ಸೇರಿಸಲು ಹರಸಾಹಸ ಪಡುತ್ತಿದ್ದರ ಬಗ್ಗೆ ಇವತ್ತು ವಿಶ್ವೇಶ್ವರ ಭಟ್‌ ಸರ್‌ ಅವರು (೧೬-೦೪-೨೦೨೬ ರಂದು) ತಮ್ಮ ಫೇಸ್‌ಬುಕ್‌ನಲ್ಲಿ ಹಾಗೂ ವಿಶ್ವವಾಣಿಯಲ್ಲಿ ಬರೆದ ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು ! ಲೇಖನ ಓದಿದಾಗ ಆಗಿನ ಕಾಲದ ಪತ್ರಿಕೋದ್ಯಮ ನೆನಪಿಗೆ ಬರುವಂತಾಯಿತು.
ವಿಶ್ವೇಶ್ವರ ಭಟ್‌ ಸರ್‌, ಇಂದು ನೀವು ಬರೆದಿರುವ ಲೇಖನ ಓದಿದ ನಂತರ ಆಗಿನ ಪತ್ರಿಕೋದ್ಯಮವನ್ನು ಸ್ವತಃ ನೋಡಿರುವ ನಾನು ಕೆಲವು ವಿಷಯ ಹಂಚಿಕೊಳ್ಳುತ್ತಿದ್ದೇನೆ.
ಆಗ ಸಂಯುಕ್ತ ಕರ್ನಾಟಕದಲ್ಲಿ ಆರ್‌.ಎಸ್‌.ಜಮಖಂಡಿ ಅವರು ಮುಖ್ಯ ವರದಿಗಾರರಾಗಿದ್ದರು. ಪ್ರಜಾವಾಣಿಯಲ್ಲಿ ಅರುಣಕುಮಾರ್‌ ಹಬ್ಬು , ಲಕ್ಷ್ಮಣ ಕೊಡಸೆ , ಸಂಜೆವಾಣಿಯಲ್ಲಿ ವಿಶ್ವನಾಥ್‌ ಕುಲಕರ್ಣಿ, ದಯಾನಂದ್‌ ಪಾಟೀಲ್‌, ಉಮಾಪತಿ, ಕನ್ನಡಮ್ಮ ದಿನಪತ್ರಿಕೆಯಲ್ಲಿ ಗಣಪತಿ ಗಂಗೊಳ್ಳಿ, ವಿಶಾಲ ಕರ್ನಾಟಕದಲ್ಲಿ ಉಮೇಶ್‌ ಬಳಿಗಾರ, ಡಾ.ಪಾಟೀಲ್‌ ಪುಟ್ಟಪ್ಪನವರು ಸಂಪಾದಕರಾಗಿದ್ದ ಆಗಿನ ವಿಶ್ವವಾಣಿ ದಿನಪತ್ರಿಕೆಯಲ್ಲಿ ಹನುಮಂತ್‌ ಹೂಗಾರ, ವಿನಾಯಕ ದೇಶಪಾಂಡೆ ಸೇರಿದಂತೆ ಇನ್ನು ಅನೇಕ ದಿಗ್ಗಜ ಪತ್ರಕರ್ತರ ಜೊತೆ ನನ್ನ ಒಡನಾಟವಿತ್ತು.
ನನ್ನ ತಂದೆ ದಿವಂಗತ ಶ್ರೀ ಪಿ.ಆರ್‌.ಪಂಢರಿ ಅವರು ಸಂಯುಕ್ತ ಕರ್ನಾಟಕದಲ್ಲಿ ಸಾಪ್ತಾಹಿಕ ಸಂಪಾದಕರಾಗಿದ್ದರು. ಹೀಗಾಗಿ ನನಗೂ ಸುದ್ದಿ ಬರೆಯುವುದು ರಕ್ತಗತವಾಗಿ ಬಂದಿತ್ತು.
ಈಗ ಧಾರವಾಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮೇಯರ್‌ ಅನೀಲ್‌ ಕುಮಾರ್‌ ಪಾಟೀಲ್‌ ಅವರು ಆಗ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಆಗ ಅಖಂಡ ಧಾರವಾಡ ಜಿಲ್ಲೆಯಿದ್ದಿದ್ದರಿಂದ ೧೮ ತಾಲೂಕುಗಳಿಗೆ ಪಕ್ಷದ ಸಭೆ, ಕಾರ್ಯಕ್ರಮಗಳಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ಅವರ ಜೊತೆ ನಾನು ನಿರಂತರ ಪ್ರವಾಸಕ್ಕೆ ಹೋಗುತ್ತಿದ್ದೆ.
ಆಗ ಎಲ್ಲ ಪಕ್ಷಗಳಲ್ಲಿ ಪತ್ರಿಕಾ ಕಾರ್ಯದರ್ಶಿ ಸ್ಥಾನಕ್ಕೆ ಭಾರಿ ಗೌರವ ಇತ್ತು ಎಂಬುದು ಈಗಲೂ ನನಗೆ ನೆನಪಿದೆ. ಯಾಕೆಂದರೇ ಪಕ್ಷದಲ್ಲಿ ಇದ್ದ ಇತರೆ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಎಲ್ಲರೂ ರಾಜಕಾರಣ ಮಾಡುವವರೇ! ಆದರೆ ರಾಜಕೀಯ ಹೋಗುಗಳ ಬಗ್ಗೆ ತಿಳಿದುಕೊಂಡು ಪತ್ರಿಕಾ ಮಾಧ್ಯಮಗಳ ಜೊತೆ ಸಂಪರ್ಕದಲ್ಲಿದ್ದ ಪತ್ರಿಕಾ ಕಾರ್ಯದರ್ಶಿಗಳಿಗೆ ವಿಶೇಷ ಸ್ಥಾನಮಾನ ಆಗ ಎಲ್ಲ ಪಕ್ಷಗಳಲ್ಲಿ ಇತ್ತು.
ನನಗೆ ಇನ್ನು ನೆನಪಿದೆ. ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕರು, ಆಗಿನ ಕೆಲ ಸಚಿವರಾದಿಯಾಗಿ ಮತ್ತು ಆಗ ಸಿಎಂ ಆಗಿದ್ದ ಎಸ್‌.ಬಂಗಾರಪ್ಪ, ವೀರಪ್ಪ ಮೊಯ್ಲಿ ,ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೃಷ್ಣರಾವ್‌, ನಮ್ಮ ಭಾಗದವರೇ ಆದ ಡಿ.ಕೆ.ನಾಯ್ಕರ್‌ ಅವರು ಹುಬ್ಬಳ್ಳಿಗೆ ಬಂದರೇ, "ಏಯ್‌ ಹುನಗುಂದ್‌, ಎಂದು ಗುರುತು ಹಿಡಿದು ಕರೆಯುತ್ತಿದ್ದರು. ಇನ್ನು ಆಗಿನ ಹಿರಿಯ ದಿಗ್ಗಜ ಪತ್ರಕರ್ತರು ಸಹ ನನ್ನ ತಂದೆಯ ಮೇಲಿನ ಗೌರವ ಹಾಗೂ ನಾನು ಅವರ ಜೊತೆ ನಡೆದುಕೊಳ್ಳುತ್ತಿದ್ದ ರೀತಿಯಿಂದಾಗಿ ನನ್ನ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು.
ಆಗೆಲ್ಲ ಪತ್ರಿಕಾಗೋಷ್ಠಿಯನ್ನು ಕರೆಯಬೇಕೆಂದರೇ ಖುದ್ದು ಪತ್ರಿಕಾ ಕಚೇರಿಗೆ ತೆರಳಬೇಕಿತ್ತು. ಪತ್ರಿಕಾಗೋಷ್ಠಿಯಲ್ಲಿ ಯಾರು ಮಾತನಾಡುತ್ತಾರೆ. ಸ್ಥಳ ಯಾವುದು? ಎಂಬುದರ ಬಗ್ಗೆ ವಿವರವಾಗಿ ಲೆಟರ್‌ ಹೆಡ್‌ನಲ್ಲಿ ಬರೆದು ಅದನ್ನು ಕೊಟ್ಟು ಬರುತ್ತಿದ್ದೆ.
ಆಗ ಕೊಪ್ಪಿಕರ ರಸ್ತೆಯಲ್ಲಿ ಸಂಯುಕ್ತ ಕರ್ನಾಟಕ, ಸಂಜೆವಾಣಿ, ಮಹಾನಗರಪಾಲಿಕೆ ಕಚೇರಿ ಮುಂದೆ ಕನ್ನಡಪ್ರಭ, ಇಂಡಿಯನ್ನ ಎಕ್ಸ್‌ಪ್ರೆಸ್‌, ಕೃಷ್ಣ ಭವನದ ಹಿಂದಿನ ರಸ್ತೆಯಲ್ಲಿ ಕನ್ನಡಮ್ಮ, ಅಮೃತ್‌ ಥೇಟರ್‌ ಮುಂದೆ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌, ಟ್ರಾಫಿಕ್‌ ಐಲ್ಯಾಂಡ್‌ನಲ್ಲಿ ವಿಶ್ವವಾಣಿ ಕಚೇರಿಗಳು ಇದ್ದವು. ಕೆಲವೊಮ್ಮೆ ಪತ್ರಕರ್ತರು ಹೇಳಿದ ಸ್ಥಳದಲ್ಲಿ ಪತ್ರಿಕಾಗೋಷ್ಠಿಯ ಸ್ಥಳ ಬದಲಾವಣೆ ಮಾಡಿದ್ದು ಇದೆ.
ಇನ್ನು ಸಮಯಕ್ಕೆ ಸರಿಯಾಗಿ ಪತ್ರಕರ್ತರನ್ನು ಕರೆದುಕೊಂಡು ಬರುವ ಜವಾಬ್ದಾರಿ ಸಹ ಪತ್ರಿಕಾ ಕಾರ್ಯದರ್ಶಿಗಳ ಮೇಲಿತ್ತು. ಆಗ ಮೊಬೈಲ್‌ ಇರದ ಕಾರಣ, ಎಲ್ಲರಿಗೂ ಕಚೇರಿಗೆ ಫೋನ್‌ ಮಾಡಬೇಕಿತ್ತು. ಆಗ ಎಲ್ಲ ಪತ್ರಕರ್ತರ ಬಳಿ ವಾಹನವಿರಲಿಲ್ಲ. ಹೀಗಾಗಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅನೀಲ್‌ ಕುಮಾರ್‌ ಪಾಟೀಲ್‌ ಅವರ ಮಾರುತಿ ವ್ಯಾನ್‌ ವಾಹನದಲ್ಲಿ ಡ್ರೈವರ್‌ ಸಮೇತ ನಾನು ಹೊರಟರೇ ಪತ್ರಕರ್ತರನ್ನು ಅವರ ಕಚೇರಿಯಿಂದ ಪಿಕಪ್‌ ಮಾಡಿ, ಪತ್ರಿಕಾಗೋಷ್ಠಿಯ ಸ್ಥಳಕ್ಕೆ ಕರೆದುಕೊಂಡು ಬರುತ್ತಿದೆ.
ಈಗಿನಂತಲೇ ಆಗಲೂ ಸಚಿವರುಗಳು ಸೇರಿದಂತೆ ಸಿಎಂ ವರೆಗೂ ಯಾರೇ ಬಂದರೂ ವಾರ್ತಾ ಇಲಾಖೆಯಿಂದ ಪ್ರೆಸ್‌ಮೀಟ್‌ ವಿಷಯವನ್ನು ಪತ್ರಿಕಾಲಯಗಳಿಗೆ ತಿಳಿಸುತ್ತಿದ್ದರು. ಆದರೆ, ನಾನು ಪತ್ರಿಕಾ ಕಾರ್ಯದರ್ಶಿಯಾಗಿದ್ದಾಗ ಅವಧಿಯಲ್ಲಿ, ಪಕ್ಷದ ಕಾರ್ಯಕ್ರಮಕ್ಕೆಂದು ಬರುವ ಆಗಿನ ಸಿಎಂ, ಸಚಿವರುಗಳು ದಿಢೀರ ಆಗಿ ಪತ್ರಕರ್ತರ ಜೊತೆ ಮಾತನಾಡಬೇಕು ಎಂದರೇ ಪತ್ರಿಕಾಲಯಗಳಿಗೆ ತಿಳಿಸಿ, ವರದಿಗಾರರನ್ನು ಕರೆದುಕೊಂಡು ಬರುವ ಜವಾಬ್ದಾರಿ ನನ್ನದಾಗಿತ್ತು.
ಒಮ್ಮೊಮ್ಮೆ ವರದಿಗಾರರು ಬರುವತನಕ ಸಿಎಂ ಆದಿಯಾಗಿ ಇತರೆ ಸಚಿವರು , ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಿರಿಯ ನಾಯಕರು ಕಾಯುತ್ತ ಕುಳಿತಿದ್ದ ಸಂಗತಿಗಳು ಸಹ ನನಗೆ ಈಗಲೂ ನೆನಪಿವೆ. ಪತ್ರಿಕಾಗೋಷ್ಠಿಗೆ ಪತ್ರಕರ್ತರು ಬಂದರೇ, ಪಿನ್‌ ಡ್ರಾಪ್‌ ಸೈಲೆನ್ಸ್‌ ಆದ ಘಟನೆಗಳು ಇದೆ. ಅಂದರೇ ಆಗ ಅಷ್ಟರ ಮಟ್ಟಿಗೆ ಪತ್ರಕರ್ತರಿಗೆ ಹಾಗೂ ಮಾಧ್ಯಮಕ್ಕೆ ಗೌರವ, ಮನ್ನಣೆ ಇತ್ತು.
ಇನ್ನು ಪತ್ರಿಕಾಗೋಷ್ಠಿಗೆ ಬರಲು ಆಗದ ವರದಿಗಾರರಿಗೆ ನಡೆದ ವಿಷಯವನ್ನು ನಾನು ಬರೆದು ಕೊಟ್ಟು ತಲುಪಿಸುತ್ತಿದ್ದೆ. ಅವತ್ತು ಪತ್ರಿಕಾ ಕಾರ್ಯದರ್ಶಿಯಾಗಿ ಪತ್ರಿಕಾ ಹೇಳಿಕೆಗಳನ್ನು ಬರೆಯುವ ರೂಢಿಯೇ, ಮುಂದೆ ನನ್ನನ್ನು ಸಹ ಪತ್ರಕರ್ತನನ್ನಾಗಿ ಮಾಡಿತು.
ಸುಮಾರು ೨೧ ವರುಷಗಳ ಪೂರ್ಣಪ್ರಮಾಣದ ಪತ್ರಕರ್ತನಾಗಿ ಸಂಜೆವಾಣಿ, ಹಾಯ್‌ ಬೆಂಗಳೂರು, ಲಂಕೇಶ್‌ ಪತ್ರಿಕೆ, ಟಿವಿ೯, ಸುವರ್ಣ ನ್ಯೂಸ್‌, ಕಸ್ತೂರಿ ವಾಹಿನಿ, ಜನಶ್ರೀ ನ್ಯೂಸ್‌, ದೂರದರ್ಶನ ವಾಹಿನಿಗಳಲ್ಲಿ ವರದಿಗಾರನಿಂದ ಹಿಡಿದು ಸಂಪಾದಕ ಹುದ್ದೆವರೆಗೆ ಕೆಲಸ ಮಾಡಿ, ಈಗ ಸ್ವಂತ ನ್ಯೂಸ್‌ ವೆಬ್‌ಸೈಟ್‌ ನಡೆಸುತ್ತಿದ್ದೇನೆ. ಉಪಜೀವನಕ್ಕೆ ಜಾಹೀರಾತು ಸಂಸ್ಥೆಯೊಂದರಲ್ಲಿ ಪಾಲುದಾರನಾಗಿದ್ದೇನೆ.
ಶ್ರೀ ವಿಶ್ವೇಶ್ವರ ಭಟ್‌ ಸರ್‌ ಅವರು ಗುರವಾರದ (೧೬-೦೪-೨೦೨೬) ರಂದು ಬರೆದ ಲೇಖನ ಮತ್ತೆ ಹಳೆಯದನ್ನು ಅಂದರೇ ಆಗಿನ ಪತ್ರಿಕೋದ್ಯಮ ನೆನಪು ಮಾಡುವಂತೆ ಮಾಡಿತು. ಆಗಿನ ಪತ್ರಿಕೋದ್ಯಮಕ್ಕೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಆದರೆ ಆಗಿನ ಕಾಲದ ಪ್ರತಿಕೋದ್ಯಮದಲ್ಲಿಯು ಕೆಲಸ ಮಾಡಿ, ಈಗಿನ ಇಂಟರ್‌ನೆಟ್‌ ಯುಗದಲ್ಲಿಯ ಪತ್ರಿಕೋದ್ಯಮದಲ್ಲಿರುವ ಹಾಲಿ ಇರುವ ಎಲ್ಲ ಸವಾಲನ್ನು ಸ್ವೀಕರಿಸಿ, ಯಶಸ್ವಿಯಾಗಿ ಮುಂದುವರೆದಿರುವ ಶ್ರೀ ವಿಶ್ವೇಶ್ವರ್‌ ಭಟ್‌ ಸರ್‌ ಅವರು ನೈಜ ಪತ್ರಕರ್ತರಿಗೆ ಸದಾ ಆದರ್ಶಪ್ರಾಯರು ಎಂಬುದು ಮಾತ್ರ ನಿಜ.

ಶ್ರೀ ವಿಶ್ವೇಶ್ವರ್‌ ಭಟ್‌ ಸರ್‌ ಅವರು ಬರೆದ ಲೇಖನದ ಫೇಸ್‌ಬುಕ್‌ ಲಿಂಕ್‌ https://www.facebook.com/share/p/1Fexv7ktS7/

ಇಂತಿ ತಮ್ಮ
ವಿಜಯೀಂದ್ರ ಪಿ.ಹುನಗುಂದ್‌
ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ
ಬೆಂಗಳೂರು.
Contact No: 7337732409 (Whatsup Only)
[email protected]

👉 "ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಭಾರಿ ಗೋಲಮಾಲ್"..!‌👉 ಖರೀಧಿ ವ್ಯವಹಾರದಲ್ಲಿ ಕೋಟಿಗಟ್ಟಲೇ ದುಡ್ಡು ಗುಳುಂ!👉 ಕೇವಲ ಎರಡೇ ವರುಷದಲ...
05/04/2026

👉 "ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಭಾರಿ ಗೋಲಮಾಲ್"..!‌

👉 ಖರೀಧಿ ವ್ಯವಹಾರದಲ್ಲಿ ಕೋಟಿಗಟ್ಟಲೇ ದುಡ್ಡು ಗುಳುಂ!

👉 ಕೇವಲ ಎರಡೇ ವರುಷದಲ್ಲಿ ಆ ವೈದ್ಯ ಅಕ್ರಮವಾಗಿ ಗಳಿಸಿದ್ದು ಎಷ್ಟು ಗೊತ್ತಾ?

👉 ಬ್ರಹ್ಮಾಂಡ ಭ್ರಷ್ಟತೆ ಬಗ್ಗೆ ಗೊತ್ತಿದ್ದರೂ ಜನಪ್ರತಿನಿಧಿಗಳು ಸುಮ್ಮನಿರುವದೇಕೆ?

👉 ಆ ಸರ್ಕಾರಿ ಆಸ್ಪತ್ರೆ ಯಾವುದು ಗೊತ್ತಾ..? ಅದು ನಿಮ್ಮೂರಿನದೇ ಆಗಿರಬಹುದು..

👉"ಕರ್ನಾಟಕ ಜನಪರ ಹೋರಾಟ ವೇದಿಕೆ" ಮೊದಲ ಬಾರಿಗೆ ಬಯಲಿಗೆಳೆಯಲಿದೆ
ರಾಜ್ಯ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ...!

👉 ಬರೋಬ್ಬರಿ ನೂರು ಕೋಟಿರೂ ತಿಂದನಾ ಆ ವೈದ್ಯ..?"

👉 ಶೀಘ್ರದಲ್ಲೇ.. ನಿರೀಕ್ಷಿಸಿ...

👉 ಇಂದೇ ನಮ್ಮ ಪೇಜ್‌ ಫಾಲೋ ಮಾಡಿ...ನಮ್ಮ ಹೋರಾಟಕ್ಕೆ ಬೆಂಬಲಿಸಿ..

👉 https://www.facebook.com/profile.php?id=61572155300363

Photo Credit: OAG

ಅನ್ಯಾಯದ ವಿರುದ್ಧ ನಮ್ಮ ಹೋರಾಟ ಆರಂಭ..!ಅಮಾಯಕ ಜನರಿಗೆ ಆಗುತ್ತಿರುವ ಮೋಸ ಮತ್ತು ವಂಚನೆಯ ವಿರುದ್ದ ಹೋರಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಹಿನ್ನ...
05/04/2026

ಅನ್ಯಾಯದ ವಿರುದ್ಧ ನಮ್ಮ ಹೋರಾಟ ಆರಂಭ..!

ಅಮಾಯಕ ಜನರಿಗೆ ಆಗುತ್ತಿರುವ ಮೋಸ ಮತ್ತು ವಂಚನೆಯ ವಿರುದ್ದ ಹೋರಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಹಾಗೂ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತುವ ಉದ್ದೇಶದೊಂದಿಗೆ ಕರ್ನಾಟಕ ಜನಪರ ಹೋರಾಟ ವೇದಿಕೆ ಸ್ಥಾಪಿಸಲಾಗಿದೆ.

ಸಮಾನಮನಸ್ಕರು ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೊಗಿಗಳ ಜೊತೆಗೂಡಿ ಆರಂಭಿಸಲಾದ ಈ ವೇದಿಕೆಯಲ್ಲಿ ಪ್ರಜ್ಞಾವಂತ ನಾಗರಿಕರು ಸಹ ನಮ್ಮ ಜೊತೆ ಕೈಜೋಡಿಸುವ ಮೂಲಕ ಬೆಂಬಲಿಸಬಹುದು.

ನೊಂದ ಅಮಾಯಕರು ತಮಗಾಗಿರುವ ಅನ್ಯಾಯವನ್ನು ಕರ್ನಾಟಕ ಜನಪರ ಹೋರಾಟ ವೇದಿಕೆಯ ವ್ಯಾಟ್ಸ್‌ಅಪ್‌ ನಂಬರ್‌ ಮುಖಾಂತರ ತಿಳಿಸಬಹುದಾಗಿದೆ.

ನಿಮಗಾದ ಅನ್ಯಾಯಕ್ಕೆ ಹೋರಾಟದ ರೂಪ ಕೊಟ್ಟು ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮದು. ಇವತ್ತು ಹಾಡಹಗಲೇ ವಿವಿಧ ಪ್ರಕಾರಗಳಲ್ಲಿ ಮೋಸ, ವಂಚನೆ ನಡೆಯುತ್ತಿದೆ.

ಯಾರಿಂದಲೇ ತೊಂದರೆ ಆಗಲಿ, ನಮಗೆ ತಿಳಿಸಿ, ನಾವು ನಿಮ್ಮೊಂದಿಗಿದ್ದೇವೆ. ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಹೋರಾಟ ಮಾಡುವ ಮುಖೇನ ನ್ಯಾಯ ಒದಗಿಸಿಕೊಡುವಲ್ಲಿ ಕರ್ನಾಟಕ ಜನಪರ ಹೋರಾಟ ವೇದಿಕೆ ಹಗಲಿರಳು ಶ್ರಮಿಸಲಿದೆ.

ನಿಮ್ಮ ವಿಶ್ವಾಸವೇ...ನಮ್ಮ ಹೋರಾಟದ ಶಕ್ತಿಯಾಗಲಿದೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿಕ

ವಿಜಯೀಂದ್ರ ಪಿ.ಹುನಗುಂದ್‌
ಸಂಸ್ಥಾಪಕ ಅಧ್ಯಕ್ಷರು
ಕರ್ನಾಟಕ ಜನಪರ ಹೋರಾಟ ವೇದಿಕೆ
ಬೆಂಗಳೂರು-ಹುಬ್ಬಳ್ಳಿ
Whatsup Only:- 7337732409

Address

Hubli

Website

Alerts

Be the first to know and let us send you an email when ಕರ್ನಾಟಕ ಜನಪರ ಹೋರಾಟ ವೇದಿಕೆ Karnataka Janapara Horata Vedike posts news and promotions. Your email address will not be used for any other purpose, and you can unsubscribe at any time.

Shortcuts

Share

Category