Hunsur Taluk Panchayath

Hunsur Taluk Panchayath MGNREGA Work details about Hunsur

SIRD ಪ್ರಶಿಕ್ಷಣಾರ್ಥಿಗಳು ಇಂದು ಬಿಳಿಕೆರೆಯಲ್ಲಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಅಮೃತ ಸರೋವರ, ಕೂಸಿನ ಮನೆ, ಆಟದ ಮೈದಾನ, ಡಿಜಿಟಲ್ ಲೈಬ್ರರಿ...
09/12/2025

SIRD ಪ್ರಶಿಕ್ಷಣಾರ್ಥಿಗಳು ಇಂದು ಬಿಳಿಕೆರೆಯಲ್ಲಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಅಮೃತ ಸರೋವರ, ಕೂಸಿನ ಮನೆ, ಆಟದ ಮೈದಾನ, ಡಿಜಿಟಲ್ ಲೈಬ್ರರಿ ಹಾಗೂ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅನುಷ್ಠಾನಗೊಂಡಿರುವ ಡ್ರ್ಯಾಗನ್‌ ಫ್ರ್ಯೂಟ್‌ ಕಾಮಗಾರಿ, ದನದಕಟ್ಟೆ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ತಾಲ್ಲೂಕು ಪಂಚಾಯಿತಿಯ ಎಲ್ಲಾ ಅಮೃತ ಸರೋವರ ದಂಡೆಗಳಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕು ನೀಡಿರುವ ಸಂವಿಧಾನ ದಿನದ ಅಂ...
28/11/2025

ತಾಲ್ಲೂಕು ಪಂಚಾಯಿತಿಯ ಎಲ್ಲಾ ಅಮೃತ ಸರೋವರ ದಂಡೆಗಳಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕು ನೀಡಿರುವ ಸಂವಿಧಾನ ದಿನದ ಅಂಗವಾಗಿ ತಾಲ್ಲೂಕಿನಲ್ಲಿರುವ ಅಮೃತ ಸರೋವರ ದಂಡೆ ಮೇಲೆ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞೇ ಸ್ವೀಕರಿಸಿದ ಕ್ಷಣ.

#ಸಂವಿಧಾನದಿನ #

2026-27ನೇ ಸಾಲಿನಲ್ಲಿ ಮ-ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲು ಉಚಿತ ಸಹಾಯವಾಣಿ ಸಂಖ್ಯೆ 8277506000 ಗೆ ಸಂಪರ್ಕಿಸುವ ಮೂಲಕ...
05/11/2025

2026-27ನೇ ಸಾಲಿನಲ್ಲಿ ಮ-ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲು ಉಚಿತ ಸಹಾಯವಾಣಿ ಸಂಖ್ಯೆ 8277506000 ಗೆ ಸಂಪರ್ಕಿಸುವ ಮೂಲಕ ಬೇಡಿಕೆ ಸಲ್ಲಿಸಬಹುದು

ನೆನಪಿನಲ್ಲಿರಲಿ ಉಚಿತ ಸಹಾಯವಾಣಿ ಸಂಖ್ಯೆ 8277506000

ಮ-ನರೇಗಾ ಯೋಜನೆಯಡಿ ತಾಲ್ಲೂಕಿನ ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ಅಭಿವೃದ್ಧಿಗೊಂಡಿದ್ದು, ಅದರ ಚಿತ್ರಣವನ್ನು ಕಾಣಬಹುದು
12/09/2025

ಮ-ನರೇಗಾ ಯೋಜನೆಯಡಿ ತಾಲ್ಲೂಕಿನ ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ಅಭಿವೃದ್ಧಿಗೊಂಡಿದ್ದು, ಅದರ ಚಿತ್ರಣವನ್ನು ಕಾಣಬಹುದು

ಮ-ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್...
21/08/2025

ಮ-ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಅವರಾದ ಭೀಮಪ್ಪ.ಕೆ.ಲಾಳಿ ಅವರು ತಾಲ್ಲೂಕಿನ ಮರದೂರು ಗ್ರಾಮ ಪಂಚಾಯಿತಿ ಹಾಗೂ ಕೊತ್ತೇಗಾಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ 2025-26ನೇ ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳ ಪಟ್ಟಿ ಹಾಗೂ 2022-23ನೇ ಸಾಲಿನಿಂದ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಮುಕ್ತಾಯ ವರದಿ ಹಾಕದೆಯೇ ಬಾಕಿ ಉಳಿಸಿಕೊಂಡಿರುವುದರ ಕುರಿತು ಸಮಜಾಯಿಷಿ ಕೇಳಿದರು. ಜೊತೆಗೆ ಮುಕ್ತಾಯ ವರದಿ ಹಾಕಲು ಇರುವಂತಹ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಮುಕ್ತಾಯ ವರದಿ ಹಾಕುವಂತೆ ತಾಕೀತು ಮಾಡಿದರು.

ಮರದೂರು ಗ್ರಾಮ ಪಂಚಾಯಿತಿಯಲ್ಲಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಸಂಜೀವಿನಿ ಘಟಕ, ಮತ್ತು ಗೋದಾಮು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಒಕ್ಕೂಟ ಮತ್ತು ರೈತರ ಬಳಕೆಗೆ ಒದಗಿಸುವಂತೆ ತಿಳಿಸಿದರು. ಬಳಿಕ ಸಾಮಾಜಿಕ ಅರಣ್ಯ ಇಲಾಖೆಯಡಿ ನಡೆಸುತ್ತಿರುವ ನರ್ಸರಿ, ಹಗರನಹಳ್ಳಿ ಮತ್ತು ಶ್ರವಣಹಳ್ಳಿಯಲ್ಲಿ ಅನುಷ್ಠಾನಗೊಂಡಿರುವ ಸ್ಮಶಾನ ಅಭಿವೃದ್ಧಿ, ಬೂದು ನೀರು ನಿರ್ವಹಣೆ ಮತ್ತು ಕಾಮಗಾರಿ ಹಂತದಲ್ಲಿರುವ ನೀರುಗಾಲುವೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಸ್ವಾಮಿ ಬಿನ್‌ ಲೇ ಜೋಸೆಫ್‌ ಎಂಬ ಫಲಾನುಭವಿ ತಮ್ಮ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದು...
14/08/2025

ತಾಲ್ಲೂಕಿನ ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಸ್ವಾಮಿ ಬಿನ್‌ ಲೇ ಜೋಸೆಫ್‌ ಎಂಬ ಫಲಾನುಭವಿ ತಮ್ಮ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಮುಂದಾಗಿರುತ್ತಾರೆ.

ಅರಣ್ಯ ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಣ್ಣಿನ  ಸಂರಕ್ಷಣೆಗಾಗಿ ಮ-ನರೇಗಾ ಯೋಜನೆಯಿಂದ ಕಂದಕ ಬದು ಅನುಷ್ಠಾನವಾಗುತ್ತಿದ್ದು, ಈ ಕುರಿತ ಯಶೋ...
14/08/2025

ಅರಣ್ಯ ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಣ್ಣಿನ ಸಂರಕ್ಷಣೆಗಾಗಿ ಮ-ನರೇಗಾ ಯೋಜನೆಯಿಂದ ಕಂದಕ ಬದು ಅನುಷ್ಠಾನವಾಗುತ್ತಿದ್ದು, ಈ ಕುರಿತ ಯಶೋಗಾಥೆ ವಿಜಯ ವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು

ಪ್ರಾದೇಶಿಕ ಅರಣ್ಯ ವಲಯದಿಂದ ಮ-ನರೇಗಾದಡಿ ಮಣ್ಣಿನ ತೇವಾಂಶ ರಕ್ಷಣೆ ಕಾಮಗಾರಿಯಡಿ ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿದ್ದು, ಮಳೆ ನೀರು ತುಂಬಿ ಕಾಮಗಾ...
05/07/2025

ಪ್ರಾದೇಶಿಕ ಅರಣ್ಯ ವಲಯದಿಂದ ಮ-ನರೇಗಾದಡಿ ಮಣ್ಣಿನ ತೇವಾಂಶ ರಕ್ಷಣೆ ಕಾಮಗಾರಿಯಡಿ ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿದ್ದು, ಮಳೆ ನೀರು ತುಂಬಿ ಕಾಮಗಾರಿ ಅನುಷ್ಠಾನದ ಉದ್ದೇಶಕ್ಕೆ ಪುಷ್ಟಿ ನೀಡಿರುತ್ತದೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸ್ಥಳ: 🚩 ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮ ಪಂಚಾಯತಿಯ ಶಾಲಾ ಆವರಣ
21/06/2025

ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಸ್ಥಳ: 🚩 ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮ ಪಂಚಾಯತಿಯ ಶಾಲಾ ಆವರಣ

ಮೈಸೂರು‌ ಜಿಲ್ಲೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯ ಅಮೃತ ಸರೋವರವಾದ ಬನ್ನಮ್ಮನ ಕೆರೆ ಏರಿ ಮೇಲೆ ವಿಶ್ವ ಯೋಗ ದಿನದ ಅಂಗವಾಗಿ...
21/06/2025

ಮೈಸೂರು‌ ಜಿಲ್ಲೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯ ಅಮೃತ ಸರೋವರವಾದ ಬನ್ನಮ್ಮನ ಕೆರೆ ಏರಿ ಮೇಲೆ ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸವನ್ನು ಮಾಡಲಾಯಿತು.
ಈ ವೇಳೆ ಪಿಡಿಒ, ಕಾರ್ಯದರ್ಶಿ, ಎನ್.ಆರ್.ಎಲ್.ಎಂ ವ್ಯವಸ್ಥಾಪಕರು, ಐಇಸಿ ಸಂಯೋಜಕರು, ಒಕ್ಕೂಟದ‌ ಮಹಿಳೆಯರು ಸೇರಿದಂತೆ ಅನೇಕ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು

ತಾಲ್ಲೂಕಿನ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿಯ ಹೆಬ್ಬಾಳ ಹಾಡಿಯ ಜನರಿಗೆ ಮ-ನರೇಗಾ ಯೋಜನೆಯಿಂದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನದೊಂದಿಗೆ ವಸತ...
18/06/2025

ತಾಲ್ಲೂಕಿನ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿಯ ಹೆಬ್ಬಾಳ ಹಾಡಿಯ ಜನರಿಗೆ ಮ-ನರೇಗಾ ಯೋಜನೆಯಿಂದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನದೊಂದಿಗೆ ವಸತಿ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅರಿವು ಮೂಡಿಸಲಾಗಿರುತ್ತದೆ

Address

Hunsur
Hunsur
571105

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm
Sunday 10am - 5:30pm

Website

Alerts

Be the first to know and let us send you an email when Hunsur Taluk Panchayath posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hunsur Taluk Panchayath:

Share