ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ

  • Home
  • India
  • Kadur
  • ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ

ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ Contact information, map and directions, contact form, opening hours, services, ratings, photos, videos and announcements from ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ, Social service, Kadur.

ನಮ್ಮ ಕಡೂರು ವಿಧಾನಸಭಾ ಕ್ಷೇತ್ರದ ಒಳ್ಳೆಯ ಬದಲಾವಣೆಗೆ ಹಾಗೂ ಅಭಿರುದ್ದಿಗಾಗಿ, ನಮ್ಮೆಲ್ಲರ ಒಂದಿಷ್ಟು ಸಾಮಾಜಿಕ ಕರ್ತವ್ಯಗಳು.👍

- ರಾಘವೇಂದ್ರ ಅಗ್ನಿ ಕಡೂರು

10/06/2026

ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರಸ್ತುತ ಪರಿಸ್ಥಿತಿ.

, , #ಕಡೂರು, #ಬೀರೂರು, , ,

ಕಡೂರು ಕ್ಷೇತ್ರದ ಎಲ್ಲಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಪ್ರಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು! 🌸📚********************...
18/03/2026

ಕಡೂರು ಕ್ಷೇತ್ರದ ಎಲ್ಲಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಪ್ರಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು! 🌸📚
******************************************

ಈ ಮಹತ್ವದ ಹಂತದಲ್ಲಿ ನೀವು ತೋರಿಸಿರುವ ಪರಿಶ್ರಮ, ತ್ಯಾಗ ಮತ್ತು ದೃಢಸಂಕಲ್ಪ ನಿಮಗೆ ಖಂಡಿತ ಯಶಸ್ಸನ್ನು ತಂದುಕೊಡುತ್ತದೆ. ಪರೀಕ್ಷೆ ಎಂದರೆ ಕೇವಲ ಅಂಕಗಳಿಗೆ ಮಾತ್ರವಲ್ಲ, ಅದು ನಿಮ್ಮ ಜ್ಞಾನ, ಆತ್ಮವಿಶ್ವಾಸ ಮತ್ತು ಜೀವನದ ಪಾಠಗಳ ಪ್ರತಿಬಿಂಬವಾಗಿದೆ.

ಪರೀಕ್ಷೆಯ ಸಮಯದಲ್ಲಿ ಶಾಂತವಾಗಿರಿ, ಪ್ರಶ್ನೆಗಳನ್ನು ಸರಿಯಾಗಿ ಓದಿ, ನಿಮ್ಮಿಗೆ ಗೊತ್ತಿರುವುದನ್ನು ಆತ್ಮವಿಶ್ವಾಸದಿಂದ ಬರೆಯಿರಿ. ಸಮಯವನ್ನು ಸರಿಯಾಗಿ ಹಂಚಿಕೊಂಡು ಪ್ರತಿಯೊಂದು ಪ್ರಶ್ನೆಗೆ ಗಮನ ನೀಡಿ.

ನೀವು ಎಷ್ಟು ಪರಿಶ್ರಮ ಪಟ್ಟಿದ್ದೀರೋ ಅದಕ್ಕೆ ತಕ್ಕ ಫಲ ಖಂಡಿತ ದೊರೆಯುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಳ್ಳಿ.
ಯಶಸ್ಸು ನಿಮ್ಮದಾಗಲಿ, ನಿಮ್ಮ ಕನಸುಗಳು ಸಾಕಾರವಾಗಲಿ! ✨

ಸರ್ಕಾರಿ ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಮನವಿ 🙏
***********************************************
ವಿದ್ಯಾರ್ಥಿಗಳಿಗೆ ಶಾಂತ ವಾತಾವರಣ ಕಲ್ಪಿಸೋಣ,
ಅವರ ಮೇಲೆ ಒತ್ತಡ ಹಾಕದೇ, ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳನ್ನು ಹೇಳೋಣ.

ಪರೀಕ್ಷಾ ಕೇಂದ್ರಗಳ ಬಳಿ ಶಾಂತಿ ಕಾಪಾಡೋಣ,
ಅವಶ್ಯಕವಿದ್ದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ತಲುಪಲು ಸಹಕರಿಸೇೂಣ.

ಈ ಸಂದರ್ಭದಲ್ಲಿ MESCOM ಅವರಿಗೆ ವಿನಮ್ರ ಮನವಿ 🙏
******************************************

ಪರೀಕ್ಷೆಯ ದಿನಗಳಲ್ಲಿ ವಿದ್ಯುತ್ ವ್ಯತ್ಯಯ (power cut) ಮಾಡದೇ ವಿದ್ಯಾರ್ಥಿಗಳಿಗೆ ಸಹಕಾರ ನೀಡುವಂತೆ ಕೋರಿಕೊಳ್ಳುತ್ತೇವೆ. ಈ ಸಮಯದಲ್ಲಿ ವಿದ್ಯುತ್ ಅತೀ ಮುಖ್ಯ – ಓದು, ಪುನರವಲೋಕನ ಹಾಗೂ ಪರೀಕ್ಷೆಗೆ ಸಿದ್ಧತೆಗಾಗಿ ನಿರಂತರ ವಿದ್ಯುತ್ ಅವಶ್ಯಕವಾಗಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಆಲ್ ದಿ ಬೆಸ್ಟ್! 👍😊

#ಕಡೂರು, #ಬೀರೂರು, #ಪುರಸಭೆ, , ,
, , , ,

ಕಾಫಿನಾಡಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ: ***********************************ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಎ...
18/01/2026

ಕಾಫಿನಾಡಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ:
***********************************

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಎನ್.ಡಿ.ಎ.ಮೈತ್ರಿಕೂಟ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು.

13 ನಿರ್ದೇಶಕರಲ್ಲಿ 11 ಬಿಜೆಪಿ, ಜೆಡಿಎಸ್ 2ರಲ್ಲಿ ಗೆಲುವು.

ಹಾಲಿ ಕಾಂಗ್ರೆಸ್ ಶಾಸಕ ಕಡೂರಿನ ಕೆ.ಎಸ್.ಆನಂದ್ ಗೆ ಸೋಲು, ಚಿಕ್ಕಮಗಳೂರು ಜಿಲ್ಲೆಯಲ್ಲಿ 5ಕ್ಕೆ 5 ಕಾಂಗ್ರೆಸ್ ಶಾಸಕರಿದ್ದರೂ ಸೋಲು ಕಂಡ ಕಾಂಗ್ರೆಸ್ ಶಾಸಕ.

ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕಡೂರು ಶಾಸಕ ಕೆ.ಎಸ್.ಆನಂದ್, ಕೊಪ್ಪ ಬಿಜೆಪಿ ಮುಖಂಡ ದಿನೇಶ್ ಹೊಸೂರು ಎದುರು ಕೈ ಶಾಸಕನಿಗೆ ಸೋಲು

ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿಗೂ ಸೋಲು, ಪ್ರಾಥಮಿಕ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಎಂ.ಪಿ.ಕುಮಾರಸ್ವಾಮಿ

, ,

ಕಡೂರು ಪಟ್ಟಣದಲ್ಲಿ law and order ನ್ನು ನಿಷ್ಪಕ್ಷಪಾತವಾಗಿ ಕಾಪಾಡಬೇಕೇಂದು ಪೊಲೀಸ ಅಧಿಕಾರಿಗಳಿಗಳಿಗೆ ಸಾರ್ವಜನಿಕರ ಪರವಾಗಿ ಮನವಿ:**********...
20/12/2025

ಕಡೂರು ಪಟ್ಟಣದಲ್ಲಿ law and order ನ್ನು ನಿಷ್ಪಕ್ಷಪಾತವಾಗಿ ಕಾಪಾಡಬೇಕೇಂದು ಪೊಲೀಸ ಅಧಿಕಾರಿಗಳಿಗಳಿಗೆ ಸಾರ್ವಜನಿಕರ ಪರವಾಗಿ ಮನವಿ:
************************************************

ಪೊಲೀಸ್ ಸೇವೆ ಸಾರ್ವಜನಿಕರ ರಕ್ಷಣೆ, ಕಾನೂನು ಪಾಲನೆ ಮತ್ತು ನ್ಯಾಯ ಒದಗಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಒಂದು ಮಹತ್ವದ ವ್ಯವಸ್ಥೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಸಂದರ್ಭಗಳಲ್ಲಿ ಸಾರ್ವಜನಿಕರು ನೀಡುವ ದೂರುಗಳಿಗೆ ತಕ್ಷಣ ಮತ್ತು ಸಮರ್ಪಕ ಕ್ರಮ ಕೈಗೊಳ್ಳಲಾಗದಿರುವುದು ಗಂಭೀರ ಚಿಂತೆಗೀಡುಮಾಡುತ್ತಿದೆ.

ಪೊಲೀಸ್ ಇಲಾಖೆಯು ಸಾರ್ವಜನಿಕರ ತೆರಿಗೆ ಹಣದಿಂದ ಕಾರ್ಯನಿರ್ವಹಿಸುವ ಸೇವೆಯಾಗಿದ್ದು, ಪ್ರತಿಯೊಬ್ಬ ನಾಗರಿಕನ ದೂರುಗೆ ಸ್ಪಂದಿಸುವುದು ಅದರ ಕರ್ತವ್ಯವಾಗಿದೆ. ದೂರುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿಸುವುದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಅದು ನ್ಯಾಯ ನಿರಾಕರಣೆಯೂ ಹೌದು.

ಇತ್ತೀಚೆಗೆ ಬಳ್ಳೆಕೆರೆಯಲ್ಲಿ ನಡೆದೆ ಘಟನೆಯೆ ಇದಕ್ಕೆ ಒಂದು ಊದಹರಣೆ.

ಈ ಮೂಲಕ ಕಡೂರು ಪೊಲೀಸ ಅಧಿಕಾರಿಗಳಿಗಳಿಗೆ ಕೇಳಿಕೊಳ್ಳೊವುದು, ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆಯನ್ನ ಕೂಡುವುದರ ಮೂಲಕ ಕಡೂರು ಪಟ್ಟಣದ law and order ಕಾಪಾಡಬೇಕೇಂದು ಕೇಳಿಕೂಳ್ಳುತ್ತೇವೆ.

1. ಸಾರ್ವಜನಿಕರಿಂದ ಸ್ವೀಕರಿಸಿದ ಪ್ರತಿಯೊಂದು ದೂರುಗೆ ನಿಗದಿತ ಅವಧಿಯೊಳಗೆ ತನಿಖೆ ಪ್ರಾರಂಭಿಸಬೇಕು.
2. ದೂರುದಾರರಿಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.
3. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
4. ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಸ್ನೇಹಿ ಮತ್ತು ಜವಾಬ್ದಾರಿಯುತ ವರ್ತನೆ ಖಚಿತಪಡಿಸಬೇಕು.

, , #ಕಡೂರು, #ಬೀರೂರು, , ,

ಮಾನ್ಯ ಕಡೂರು ಶಾಸಕರಿಗೆ,ಕಡೂರು ಕ್ಷೇತ್ರದ ಜನಸಂಖ್ಯಾ ಅನುಗುಣವಾಗಿ ಒಂದು ಸುಸಜ್ಜಿತ “ಡಿಜಿಟಲ್ ಸಾರ್ವಜನಿಕ ಲೈಬ್ರರಿ” ಸ್ಥಾಪಿಸುವ ಕುರಿತು ಮನವಿ....
07/12/2025

ಮಾನ್ಯ ಕಡೂರು ಶಾಸಕರಿಗೆ,

ಕಡೂರು ಕ್ಷೇತ್ರದ ಜನಸಂಖ್ಯಾ ಅನುಗುಣವಾಗಿ ಒಂದು ಸುಸಜ್ಜಿತ “ಡಿಜಿಟಲ್ ಸಾರ್ವಜನಿಕ ಲೈಬ್ರರಿ” ಸ್ಥಾಪಿಸುವ ಕುರಿತು ಮನವಿ.
****************************************************

ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ನಮ್ಮ ಊರಲ್ಲಿ ಸಾರ್ವಜನಿಕ ಲೈಬ್ರರಿ ಇರುವ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಜ್ಞಾನಾಭಿರುಚಿಯುಳ್ಳ ನಾಗರಿಕರು ಪುಸ್ತಕ ಮತ್ತು ಮಾಹಿತಿಯನ್ನು ಪಡೆಯುವುದರಲ್ಲಿ ಅನೇಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ.

ಲೈಬ್ರರಿಯನ್ನು ಸ್ಥಾಪಿಸಿದಲ್ಲಿ ದೊರಕುವ ಪ್ರಯೋಜನಗಳು:
1. ವಿದ್ಯಾರ್ಥಿಗಳಿಗೆ ಪಾಠ್ಯಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಸಾಮಾನ್ಯ ಜ್ಞಾನ ಪುಸ್ತಕಗಳು ಸುಲಭವಾಗಿ ಲಭ್ಯ.
2. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಎಲ್ಲರೂ ಓದು ಸಂಸ್ಕೃತಿಯಲ್ಲಿ ಭಾಗಿಯಾಗುವ ಅವಕಾಶ.
3. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಲೈಬ್ರರಿ ಮೂಲಕ ಕಂಪ್ಯೂಟರ್ ಜ್ಞಾನ ವೃದ್ಧಿ.
4. ಸಮುದಾಯದ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಉತ್ತೇಜನ.
5. ಓದು–ಬರಹದ ಅಭ್ಯಾಸದಿಂದ ಸಾಮಾಜಿಕ ಜಾಗೃತಿ ವೃದ್ಧಿ.

ಹೀಗಾಗಿ, ಕಡೂರು ಮತ್ತು ಬೀರೂರು ನಲ್ಲಿ ಒಂದು ಸಾರ್ವಜನಿಕ ಡಿಜಿಟಲ್ ಲೈಬ್ರರಿ ಸ್ಥಾಪಿಸಬೇಕೇಂದು ಕೋರುತ್ತೇವೆ. ಇದು ಸಮುದಾಯದ ಭವಿಷ್ಯ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗುತ್ತದೆ ಎಂದು ನಂಬಿದ್ದೇವೆ.

ಧನ್ಯವಾದಗಳು 🙏

, , #ಕಡೂರು, #ಬೀರೂರು, #ಪುರಸಭೆ, , ,
,

27/11/2025

ನಮ್ಮೂರಿನ ಜನಪ್ರತಿನಿಧಿಗಳೇ, ರಾಜಕೀಯ ಮುಖಂಡರುಗಳೇ ನಿಮಗೆ:
*****************************************************

ಕಡೂರಿನ ಎಮ್ಮೆದೊಡ್ಡಿ ಭಾಗದ 22 ಗ್ರಾಮಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲವಂತೆ. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳೆ ದೊರಕಿದಂತೆ ಕಾಣುತ್ತಿಲ್ಲಾ.

ಸೂಕ್ತ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ ಎಮ್ಮೆದೊಡ್ಡಿ ಭಾಗದ ಜನರು ಪರದಾಡುವಂತಾಗಿದೆ, ಮಳೆಗಾಲದ ಸಂದರ್ಭದಲ್ಲಿ ಮಕ್ಕಳು, ಶಿಕ್ಷಕರು ಶಾಲೆಗೆ ಹೋಗುವುದೇ ಕಷ್ಟವಾಗಿದೆಯಂತೆ.

ಪದೇ ಪದೇ ಹೇಳುವ ಹಾಗೆ ಸ್ವಾತಂತ್ರ್ಯ ಬಂದಿ ಸುಮಾರು 75 ವರ್ಷಗಳ ದಾಟಿದರೂ ಕೂಡ ನಮ್ಮೂರಲ್ಲಿ ಕೆಲವೊಂದು ಭಾಗದ ಜನರು ಮೂಲಭೂತ ಸೌಕರ್ಯಗಳಿಗೆ ಪರದಾಡುವಂಥಾಗಿದೆ.

ನಿನ್ನೆ ದಿನ ಸಂವಿಧಾನ ದಿನಾಚರಣೆ ಆಚರಿಸಿ ಏನು ಪ್ರಯೋಜನ !! ಇಲ್ಲಿ ಯಾರ ವಿರುದ್ಧವಾಗಿ ದಿನಾಚರಣೆ ಆಚರಿಸಿದ್ದೀರಾ..? ಇಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಜನರ ವಿರುದ್ಧವೂ..? ಅಥವಾ ಮೂಲಭೂತ ಸೌಕರ್ಯ ಕೊಡುವಲ್ಲಿ ವಿಫಲರಾದ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ವಿರುದ್ಧವೂ ..? ನೀವುಗಳು ಮೊದಲು ಸಂವಿಧಾನವನ್ನು ಸರಿಯಾಗಿ ತಿಳಿದು, ಗೌರವಿಸಿ ಮತ್ತು ಅದರ ಉದ್ದೇಶವನ್ನು ಜನರು ನಿಮಗೆ ಕೊಟ್ಟಿರುವ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಮೂಲಭೂತ ಸೌಕರ್ಯವನ್ನು ಇಂತಹ ಜನಸಾಮಾನ್ಯರಿಗೆ ತಲುಪುವಂತೆ ಮಾಡಿ ಪೂರ್ಣಗೊಳಿಸಿ.

, , #ಕಡೂರು, #ಬೀರೂರು, , ,

Address

Kadur
577548

Website

Alerts

Be the first to know and let us send you an email when ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕಡೂರಿನ ಅಭಿವೃದ್ಧಿಗಾಗಿ - ಇದು ನಮ್ಮೆಲ್ಲರ ಜವಾಬ್ದಾರಿ:

Shortcuts

Share

Category