Uttara Kannada Zilla Panchayat

Uttara Kannada Zilla Panchayat Official Account Of Zilla Panchayat, Uttara Kannada, Karwar

29/08/2026
ಕಾಯಕ ಯೋಗಿಗಳೊಂದಿಗೆ ಸಂಭ್ರಮದ ರಕ್ಷಾಬಂಧನ! 🌿✨  ​        VBgramg Karnataka Ministry of Rural Development, Government of India R...
29/08/2026

ಕಾಯಕ ಯೋಗಿಗಳೊಂದಿಗೆ ಸಂಭ್ರಮದ ರಕ್ಷಾಬಂಧನ! 🌿✨

​ VBgramg Karnataka Ministry of Rural Development, Government of India Rural Development and Panchayat Raj - Karnataka DK Shivakumar Chief Minister of Karnataka Eshwar Khandre

🌾 ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ🏡 ಪ್ರತಿ ಮನೆಗೆ ಭ...
19/08/2026

🌾 ಜಾಬ್ ಕಾರ್ಡ್ ಮೇಳ – ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆಯ ಹೊಸ ಹೆಜ್ಜೆ! 🌾

📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ

ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ಕರ್ನಾಟಕದಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲು ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.

✅ ಹೊಸ ಜಾಬ್ ಕಾರ್ಡ್‌ಗಾಗಿ ನೋಂದಣಿ
✅ ಜಾಬ್ ಕಾರ್ಡ್ ತಿದ್ದುಪಡಿ ಹಾಗೂ ನವೀಕರಣ
✅ ಇ-ಕೆವೈಸಿ (e-KYC) ನವೀಕರಣ
✅ ಉದ್ಯೋಗ ಬೇಡಿಕೆಗಳ ಸ್ವೀಕಾರ
✅ ದುರ್ಬಲ ಹಾಗೂ ಅರ್ಹ ಕುಟುಂಬಗಳಿಗೆ ವಿಶೇಷ ಆದ್ಯತೆ
✅ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗ ಅವಕಾಶ
✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ
💰 ಪ್ರತಿ ದಿನಕ್ಕೆ ರೂ. 382/- ಕೂಲಿ

🤝 ನಿಮ್ಮ ಹಕ್ಕಿನ ಉದ್ಯೋಗಕ್ಕಾಗಿ ಇಂದೇ ಜಾಬ್ ಕಾರ್ಡ್ ಪಡೆಯಿರಿ!
🏘️ ನಿಮ್ಮ ಗ್ರಾಮದಲ್ಲಿ ನಡೆಯುವ ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.

📞 ಹೆಚ್ಚಿನ ಮಾಹಿತಿಗಾಗಿ: 8277506000

ಬನ್ನಿ… ಜಾಬ್ ಕಾರ್ಡ್ ಪಡೆಯಿರಿ!
ಕೆಲಸ ಮಾಡಿ – ಕೂಲಿ ಪಡೆಯಿರಿ!
ಉದ್ಯೋಗದ ಹಕ್ಕನ್ನು ಖಚಿತಪಡಿಸಿಕೊಳ್ಳಿ!

Ministry of Rural Development, Government of India DK Shivakumar Eshwar Khandre VBgramg Karnataka Deputy Commissioner Uttara Kannada

ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 16 ರಿಂದ 35 ವರ್ಷದೊಳಗಿನ ಯುವಜನರು BJYS ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ...
16/08/2026

ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 16 ರಿಂದ 35 ವರ್ಷದೊಳಗಿನ ಯುವಜನರು BJYS ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆಧಾರ್ ಆಧಾರಿತವಾಗಿ ನೋಂದಾಯಿಸಿಕೊಳ್ಳಬಹುದು.

ಬನ್ನಿ, 'ಯುವ ಕರ್ನಾಟಕ, ನವಭಾರತ'ವನ್ನು ಜೊತೆಯಾಗಿ ನಿರ್ಮಿಸೋಣ.

Chief Minister of Karnataka Deputy Commissioner Uttara Kannada DK Shivakumar Rural Development and Panchayat Raj - Karnataka

14/08/2026

📢 ಜಾಬ್ ಕಾರ್ಡ್ ಮೇಳ: "ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ" 🌾✨

ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಭದ್ರತೆ ಒದಗಿಸಲು ವಿಬಿ-ಜಿ ರಾಮ್‌ ಜಿ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್ ಮೇಳವನ್ನು ಆಯೋಜಿಸಲಾಗಿದೆ!

🗓 ದಿನಾಂಕ: ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ

📍 ಸ್ಥಳ: ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ

✅ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ
✅ ಪ್ರತಿ ದಿನಕ್ಕೆ ರೂ. 382/- ಕೂಲಿ
✅ ಗಂಡು-ಹೆಣ್ಣಿಗೆ ಸಮಾನ ಅವಕಾಶ

💪 ನಿಮ್ಮ ಕುಟುಂಬದ ಉದ್ಯೋಗ ಹಕ್ಕನ್ನು ಖಚಿತಪಡಿಸಿಕೊಳ್ಳಿ!

ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಮತ್ತು ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಿ.

Ministry of Rural Development, Government of India Chief Minister of Karnataka Eshwar Khandre VBgramg Karnataka Deputy Commissioner Uttara Kannada

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರ ವರೆಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ - ಗ್ರ...
14/08/2026

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರ ವರೆಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ - ಗ್ರಾಮೀಣ ಯೋಜನೆಯಡಿ "ಜಾಬ್ ಕಾರ್ಡ್ ಮೇಳ" ಆಯೋಜನೆ.

ಗ್ರಾಮೀಣ ಪ್ರದೇಶದ ಅರ್ಹ ಕೂಲಿಕಾರರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗ ಅವಕಾಶ.!

VBgramg Karnataka Deputy Commissioner Uttara Kannada Rural Development and Panchayat Raj - Karnataka Panchayat Raj Karnataka Ministry of Rural Development, Government of India Chief Electoral Officer Karnataka DK Shivakumar

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರು ಕಾರವಾರದ ಶಿಶುಪಾಲನ ಕೇಂದ್ರ, ಸ್ವೀಕಾರ ಕ...
04/08/2026

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರು ಕಾರವಾರದ ಶಿಶುಪಾಲನ ಕೇಂದ್ರ, ಸ್ವೀಕಾರ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜೊಯಿಡಾ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ದೇವರಾಜ್ ಅರಸ್ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

Deputy Commissioner Uttara Kannada Rural Development and Panchayat Raj - Karnataka Ministry of Rural Development, Government of India Panchayat Raj Karnataka

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ. ಲಕ್ಷ್ಮೀಪ್ರಿಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪ...
03/08/2026

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ. ಲಕ್ಷ್ಮೀಪ್ರಿಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಯೋಜನಾ ನಿರ್ದೇಶಕರು, ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿಗಳು, ಯುವ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ‌ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಶಸ್ತಿ ವಿಜೇತರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Chief Electoral Officer Karnataka Election Commission of India Deputy Commissioner Uttara Kannada SP Karwar

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿಯ ಸಭಾಂ...
03/08/2026

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲೀಷ್ ಶಶಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಅಂಗವಾಗಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಭಾಷಣ ಸ್ಪರ್ಧೆ ಜರುಗಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು ‌ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Chief Electoral Officer Karnataka Election Commission of India Deputy Commissioner Uttara Kannada SP Karwar

Address

MG Road
Karwar

Alerts

Be the first to know and let us send you an email when Uttara Kannada Zilla Panchayat posts news and promotions. Your email address will not be used for any other purpose, and you can unsubscribe at any time.

Contact The Organization

Send a message to Uttara Kannada Zilla Panchayat:

Shortcuts

Share