23/12/2021
ಕಿತ್ತೂರು ಅರಮನೆ ಮಾದರಿ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ..
ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ #ಶ್ರೀ_ಬಸವರಾಜ_ಬೊಮ್ಮಾಯಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಕಿತ್ತೂರಿನ ಮಾನ್ಯ ಶಾಸಕರಾದ #ಶ್ರೀ_ಮಹಾಂತೇಶ_ಬ_ದೊಡ್ಡಗೌಡರ ರವರ ನೇತೃತ್ವದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಕಿತ್ತೂರು ಅರಮನೆಯ ಅವಶೇಷಗಳನ್ನು ಆಧರಿಸಿ ಅರಮನೆ ಮಾದರಿಯಲ್ಲಿಯೇ ಪ್ರತಿರೂಪವನ್ನು ನಿರ್ಮಿಸಲು ತಯಾರಿಸಿದ ನೀಲಿನಕ್ಷೆ, ಗಡಾದ ಮರಡಿಯಲ್ಲಿ ದ್ವಜ ಸ್ಥಂಭ ನಿರ್ಮಾಣ, ಸಿ.ಸಿ ಕ್ಯಾಮೆರಾ ಅಳವಡಿಕೆ, ಚೌಕಿಮಠದ ಗದ್ದುಗೆಗಳ ಅಭಿವೃದ್ಧಿ, ಸಭಾಭವನ ಹಾಗೂ ಪ್ರಾಧಿಕಾರ ಕಚೇರಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇಂದು ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆಯಲಾಯಿತು.
ಈ ಸಭೆಯಲ್ಲಿ ಕಿತ್ತೂರಿನ ರಾಜಗುರು ಕಲ್ಮಠ ಶ್ರೀಗಳಾದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಧಾರವಾಡ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಶ್ರೀ ಅಮೃತ ದೇಸಾಯಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಹಿರಿಯ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು
.officialfollow: