Mgnrega kittur taluk panchayath

Mgnrega kittur taluk panchayath IEC(ಮಾಹಿತಿ ಶಿಕ್ಷಣ ಸಂವಹನ)

28/02/2026
*ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ....
10/02/2026

*ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಭೇಟಿ ನೀಡಿದರು.*

ನರೇಗಾ ಕೂಲಿಕಾರ್ಮಿಕರ NMMS Face ಹಾಜರಾತಿಯ ಪ್ರಸ್ತುತ ಸಮಸ್ಯೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ಇ-ಕೆವೈಸಿ ಮಾಡಿಸಿಕೊಳ್ಳದವರು ತಪ್ಪದೇ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ದೊರೆಯುವಂತಹ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಗ್ರಾಪಂ GKM, BFT ಮತ್ತು ಸಿಬ್ಬಂದಿಗಳು ಹಾಜರಿದ್ದರು.

23/12/2025
*ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆ ಬೆಂಗಳೂರು.  ಶ್ರೀಮತಿ ಉಮಾ ಮಹಾದೇವನ್ ಮೇಡಂ* ಅವರು ಬುಧವಾರ *ಚ.ಕ...
11/12/2025

*ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆ ಬೆಂಗಳೂರು. ಶ್ರೀಮತಿ ಉಮಾ ಮಹಾದೇವನ್ ಮೇಡಂ* ಅವರು ಬುಧವಾರ *ಚ.ಕಿತ್ತೂರು ತಾಲೂಕು ಪಂಚಾಯತ* ಕಾರ್ಯಲಯಕ್ಕೆ ಹಾಗೂ ಬೈಲೂರ ಗ್ರಾಮ ಪಂಚಾಯತಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕೂಸಿನ ಮನೆಗೆ ಭೇಟಿ ನೀಡಿ ಪೌಷ್ಠಿಕ ಆಹಾರ ಹಾಗೂ ಮಕ್ಕಳ ಬಗ್ಗೆ ವಿಚಾರಿಸಿದರು. ನಂತರ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸಂವಾದ ನಡೆಸಿ ಗ್ರಂಥಾಲಯದಿಂದ ಮಕ್ಕಳಿಗೆ ಎಷ್ಟು ಸಹಾಯಕವಾಗಿದೆ ಎಂದು ಕೇಳಿ ತಿಳಿದರು. ಗ್ರಂಥಾಲಯದಲ್ಲಿ ಬೇಡಿಕೆ ಇರುವ ಪುಸ್ತಕಗಳನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿದರು.

ಈ ಸಂದರ್ಭದಲ್ಲಿ ಜಿಪಂ. ಲೆಕ್ಕಾಧಿಕಾರಿಗಳು, ತಾ.ಪಂ ನ ಸಹಾಯಕ ನಿರ್ದೇಶಕರು(ಗ್ರಾಉ), ಸಹಾಯಕ ಲೆಕ್ಕಾಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ತಾ.ಪಂ‌. ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಮನರೇಗಾ ಸ್ತಬ್ಧ ಚಿತ್ರ ಮೆರವಣಿಗೆಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗ...
23/10/2025

ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಮನರೇಗಾ ಸ್ತಬ್ಧ ಚಿತ್ರ ಮೆರವಣಿಗೆ

ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ, ಮಾನ್ಯ ಯೋಜನಾ ನಿರ್ದೇಶಕರು ಶ್ರೀ ರವಿ ಬಂಗಾರೆಪ್ಪನವರ ಹಾಗೂ ತಾ.ಪಂ. ಕಿತ್ತೂರಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ನಿಂಗಪ್ಪ ಮಸಳಿ, ಮಾನ್ಯ ಸಹಾಯಕ ನಿರ್ದೇಶಕರು ಶ್ರೀ ಮಹಮ್ಮದ್ ಗೌಸ್ ರಿಸಲ್ದಾರ್, ಜಿ.ಪಂ. ಯ ಎಡಿಪಿಸಿ ಬಸವರಾಜ ನಾಯಕ, ಜಿಲ್ಲಾ ಐಇಸಿ ಪ್ರಮೋದ ಗೋಡೆಕರ, ತಾ.ಪಂ. ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಕಿತ್ತೂರು  ತಾಲೂಕಿನ ಅವಾರಾದಿ  ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ ದಡದಲ್ಲಿ ಇಂದು 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂಗಮ ಯೋಗ, ಹರ...
21/06/2025

ಕಿತ್ತೂರು ತಾಲೂಕಿನ ಅವಾರಾದಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ ದಡದಲ್ಲಿ ಇಂದು 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂಗಮ ಯೋಗ, ಹರಿತ ಯೋಗ ಚಟುವಟಿಕೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಮೂಲಕ ಆಚರಿಸಲಾಯಿತು.

ನಂತರ ಅಮೃತ ಸರೋವರ ದಡದಲ್ಲಿ ಶಾಲಾ ಮಕ್ಕಳೊಂದಿಗೆ ಯೋಗವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು(ಗ್ರಾಉ), ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಗ್ರಾಪಂ ಸಿಬ್ಬಂದಿ, ನರೇಗಾ ಕೂಲಿಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ವಿಶೇಷಚೇತನರಿಗೆ ಮನರೇಗಾ ಜಾಬ್ ಕಾರ್ಡ್ ವಿತರಣೆ18 ವರ್ಷ ಮೇಲ್ಪಟ್ಟ ನಿರುದ್ಯೋಗಿ ವಿಶೇಷಚೇತನರಿಗೆ ಮನರೇಗಾ ಯೋಜನೆಯಡಿ ವಿಶೇಷವರ್ಗದ ಜಾಬ್ ಕಾರ್ಡ್ ...
02/04/2025

ವಿಶೇಷಚೇತನರಿಗೆ ಮನರೇಗಾ ಜಾಬ್ ಕಾರ್ಡ್ ವಿತರಣೆ

18 ವರ್ಷ ಮೇಲ್ಪಟ್ಟ ನಿರುದ್ಯೋಗಿ ವಿಶೇಷಚೇತನರಿಗೆ ಮನರೇಗಾ ಯೋಜನೆಯಡಿ ವಿಶೇಷವರ್ಗದ ಜಾಬ್ ಕಾರ್ಡ್ ಗಳನ್ನು ನೋಂದಣಿ ಮಾಡಲು ತಾಲೂಕಿನ ಎಲ್ಲಾ ಗ್ರಾ ಪಂ ಗಳಲ್ಲಿ 15 ದಿನದ ಅಭಿಯಾನವನ್ನು ಮಾಡಲಾಗುತ್ತಿದೆ. ಈ ಅಭಿಯಾನದ ಉಪಯೋಗ ಪ್ರತಿಯೊಬ್ಬ ವಿಶೇಷಚೇತನರು ಪಡೆಯಬೇಕು ಎಂದು ಸಹಾಯಕ ನಿರ್ದೇಶಕರು (ಗ್ರಾಉ) ಶ್ರೀ ಮಹಮದ್ ಗೌಸ್ ರಿಸಲ್ದಾರ್ ತಿಳಿಸಿದರು.
ಬುಧವಾರ ತಾಲೂಕಿನ ಉಗರಖೋಡ ಗ್ರಾ.ಪಂ. ವ್ಯಾಪ್ತಿಯ ಬಚ್ಚನಕೆರಿ ಗ್ರಾಮದ ವಿಶೇಷಚೇತನರ ಮನೆ ಮನೆ ಭೇಟಿ ನೀಡಿ ವಿಶೇಷವರ್ಗದ ಜಾಬ್ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದರು.
ಮನರೇಗಾ ಯೋಜನೆಯಡಿ ದಿನಕ್ಕೆ 370ರೂ ದಿನಗೂಲಿ ನೀಡುವದರ ಜೊತೆ ಪ್ರತಿ ವಿಶೇಷಚೇತನರಿಗೆ ಆರ್ಥಿಕ ವರ್ಷದಲ್ಲಿ 100 ದಿನ ಕೆಲಸದ ಜೊತೆ ಕೆಲಸದಲ್ಲಿ 50% ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಈ ಅಭಿಯಾನದ ಉದ್ದೇಶ ವಿಶೇಷ ವರ್ಗದವರು ಆರ್ಥಿಕವಾಗಿ ಸದೃಢರಾಗಬೇಕು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಶಫಿಕ್ ಹವಲ್ದಾರ, ಸದಸ್ಯ ಲಿಂಗರಾಜ ಕುಗಟಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಗದೀಶ ಗೌಡರ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಗ್ರಾಮ ಕಾಯಕಮಿತ್ರ ಕಸ್ತೂರಿ ಚಕಡಿ, ಪುನರವಸತಿ ಕಾರ್ಯಕರ್ತ ನಾಗಪ್ಪ ದೇವಗಿರಿ ಹಾಜರಿದ್ದರು.

ಇಂದು ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ  5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ  ಪಂ...
20/02/2025

ಇಂದು ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಪಂಚಾಯತ್ ರಾಜ್ ವಿಷಯಗಳ ಕುರಿತಾದ ಗ್ರಾ.ಪಂ. ಯ ಆರ್ಥಿಕ ಸ್ಥಿತಿಗತಿ ಕುರಿತು ಸಭೆ ನಡೆಯಿತು*.

ಸಭೆಯ ಅಧ್ಯಕ್ಷೆಯನ್ನು *5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಶ್ರೀ ಡಾ.ಸಿ. ನಾರಾಯಣಸ್ವಾಮಿ* ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಶ್ರೀ ಮೊಹಮದ್ ಸನಾವುಲ್ಲಾ, ಶ್ರೀ ಆರ್.ಎಸ್. ಪೋಂಡೆ, ಸಮಾಲೋಚಕರು ಶ್ರೀ ಎಂ.ಕೆ. ಕೆಂಪೇಗೌಡ, ಶ್ರೀ ಸಿ.ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಶ್ರೀ ಕೆ. ಯಾಲಕ್ಕಿಗೌಡ, ವಿಶೇಷಾಧಿಕಾರಿಗಳು ಶ್ರೀ ಇ.ಎಂ. ವಹಾಬ್ ಖಾನ್, ಅಧ್ಯಕ್ಷರ ಆಪ್ತ ಸಹಾಯಕರು ಶ್ರೀ ರವಿ, ಜಿಪಂ. ಯೋಜನಾ ನಿರ್ದೇಶಕರು ಶ್ರೀ ರವಿ ಬಂಗಾರಪ್ಪನವರ, ತಾಪಂ ಇಓ ಶ್ರೀ ಕಿರಣ್ ಘೋರ್ಪಡೆ, ಸಹಾಯಕ ನಿರ್ದೇಶಕರು ಶ್ರೀ ಸುರೇಶ ನಗೋಜಿ, ಪಿಡಿಓ ಜಗದೀಶ್ ಗೌಡರ , ಅಧ್ಯಕ್ಷರು ಶಫೀಕ್ ಹವಾಲ್ದಾರ್, ,ಉಪಾಧ್ಯಕ್ಷರು ಶಿಲ್ಪಾ ನಾಡಗೌಡರ, ಸದಸ್ಯರು, ತಾಪಂ, ಗ್ರಾ.ಪಂ‌. ಸಿಬ್ಬಂದಿಗಳು, ಹಾಜರಿದ್ದರು.

Address

Kittur

Website

Alerts

Be the first to know and let us send you an email when Mgnrega kittur taluk panchayath posts news and promotions. Your email address will not be used for any other purpose, and you can unsubscribe at any time.

Share