Kolar Golds

Kolar Golds Kolar Golds gives you complete information about Kolar.

ಇವರಲ್ಲಿ ಕೋಲಾರದ ಮುಂದಿನ ಶಾಸಕರು ಯಾರಾಗಬಹುದು?1. ವರ್ತೂರ್ ಪ್ರಕಾಶ್ ( ಬಿಜೆಪಿ )2. ಕೊತ್ತೂರು ಮಂಜುನಾಥ್ ( ಕಾಂಗ್ರೆಸ್ )3. ಸಿಎಂಎರ್ ಶ್ರೀನಾ...
24/04/2023

ಇವರಲ್ಲಿ ಕೋಲಾರದ ಮುಂದಿನ ಶಾಸಕರು ಯಾರಾಗಬಹುದು?
1. ವರ್ತೂರ್ ಪ್ರಕಾಶ್ ( ಬಿಜೆಪಿ )
2. ಕೊತ್ತೂರು ಮಂಜುನಾಥ್ ( ಕಾಂಗ್ರೆಸ್ )
3. ಸಿಎಂಎರ್ ಶ್ರೀನಾಥ್ ( ಜೆಡಿಎಸ್ )
4. ಇತರೆ.....

03/11/2022
ನಗು ಮೊಗದ ರಾಜಕುಮಾರ ಅಪ್ಪು ಅವರ ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಬ್ಬ,ಜಾತ್ರೆ ,ಮೆರವಣಿಗೆಗಳಲ್ಲಿ ಪುನೀತ್ ಪೋಸ್ಟರ್‌ಗಳದ್ದೇ ಹವಾ.
27/08/2022

ನಗು ಮೊಗದ ರಾಜಕುಮಾರ ಅಪ್ಪು ಅವರ ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಬ್ಬ,ಜಾತ್ರೆ ,ಮೆರವಣಿಗೆಗಳಲ್ಲಿ ಪುನೀತ್ ಪೋಸ್ಟರ್‌ಗಳದ್ದೇ ಹವಾ.

15/05/2020

High Alert !!!
1 CONFIRM COVID-19 POSITIVE case in KOLAR Town / Gandhinagara

Total 7 Positive cases in KOLAR

ಕೋಲಾರ, ಮೇ 01: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರನ್ನು ಕೋಲಾರ ತಹಶೀಲ್ದಾರ್ ಶೋಭಿತಾ ಅವರು ವಶಕ್ಕೆ ಪಡೆದಿದ್ದಾರ...
01/05/2020

ಕೋಲಾರ, ಮೇ 01: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರನ್ನು ಕೋಲಾರ ತಹಶೀಲ್ದಾರ್ ಶೋಭಿತಾ ಅವರು ವಶಕ್ಕೆ ಪಡೆದಿದ್ದಾರೆ.

ಕೊರೊನಾದಿಂದಾಗಿ ಲಾಕ್ ಡೌನ್ ವಿಧಿಸಲಾಗಿದೆ. ಕೊರೊನಾ ಪ್ರಕರಣಗಳೂ ಹೆಚ್ಚಾಗುತ್ತಿರುವ ಕಾರಣ ಜನರು ಸಾಮೂಹಿಕವಾಗಿ ಎಲ್ಲೂ ಸೇರಬಾರದು, ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಎಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂಬ ನಿರ್ಬಂಧ ಹೇರಲಾಗಿದೆ. ಆದರೆ ಈ ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರಿಗೆ ಪಾಠ ಕಲಿಸಲು ತಹಶೀಲ್ದಾರ್ ಶೋಭಿತಾ ಅವರು ಮಸೀದಿ ಪ್ರವೇಶಿಸಿದ್ದಾರೆ.

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ತೆರಳಿದ ಶೋಭಿತಾ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ಹನ್ನೊಂದು ಜನರನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದ 8 ವರ್ಷದ ಬಾಲಕಿ ಚರಿತಾ ಆರ್‌.ರಾಯಲ್‌ ತನ್ನ ಹುಟ್ಟು ಹಬ್ಬಕ್ಕಾಗಿ ಡಬ್ಬಿ ಗಡಿಗೆಯಲ್ಲಿ ಕೂಡಿಟ್ಟಿದ್ದ ಸುಮಾರು...
22/04/2020

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದ 8 ವರ್ಷದ ಬಾಲಕಿ ಚರಿತಾ ಆರ್‌.ರಾಯಲ್‌ ತನ್ನ ಹುಟ್ಟು ಹಬ್ಬಕ್ಕಾಗಿ ಡಬ್ಬಿ ಗಡಿಗೆಯಲ್ಲಿ ಕೂಡಿಟ್ಟಿದ್ದ ಸುಮಾರು ₹ 11 ಸಾವಿರವನ್ನು ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.

ಮುಳಬಾಗಿಲಿನಲ್ಲಿ ವಾಸವಿರುವ ರಮೇಶ್‌ಕುಮಾರ್‌ ಮತ್ತು ಲಾವಣ್ಯ ದಂಪತಿಯ ಮಗಳಾದ ಚರಿತಾ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಪೋಷಕರು ಹಾಗೂ ಸಂಬಂಧಿಕರು ಕೊಡುವ ಹಣವನ್ನು ಡಬ್ಬಿ ಗಡಿಗೆಯಲ್ಲಿ ಕೂಡಿಡುವ ಚರಿತಾ ತನ್ನ ಹುಟ್ಟು ಹಬ್ಬದ ದಿನದಂದು ಆ ಹಣವನ್ನು ಸಮಾಜ ಸೇವಾ ಕಾರ್ಯಕ್ಕೆ ಬಳಕೆ ಮಾಡುತ್ತಾ ಬಂದಿದ್ದಾಳೆ.

ಚರಿತಾ ಕಳೆದೊಂದು ವರ್ಷದಿಂದ ಕೂಡಿಟ್ಟಿದ್ದ ಹಣವು ದೇಶದೆಲ್ಲೆಡೆ ಕೊರೊನಾ ಸೋಂಕಿನಿಂದ ತೊಂದರೆಗೆ ಸಿಲುಕಿರುವವರ ಕಷ್ಟ ಪರಿಹಾರಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿ, ಪೋಷಕರೊಂದಿಗೆ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಹಣ ನೀಡಿದಳು.

ಬಾಲಕಿಯ ಸೇವಾ ಮನೋಭಾವಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

#ಕೋಲಾರದಚಿನ್ನ

ಕೋಲಾರ ಎಪಿಎಂಸಿ ಆಡಳಿತ ಮಂಡಳಿ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ 40 ಸಾವಿರ ರೂಪಾಯಿ ದೇಣಿಗೆ, ಎಪಿಎಂಸಿ ಆಡಳಿತ ಮಂಡಳಿ ಆಧ್ಯಕ್ಷ ವಡಗೂರು ...
07/04/2020

ಕೋಲಾರ ಎಪಿಎಂಸಿ ಆಡಳಿತ ಮಂಡಳಿ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ 40 ಸಾವಿರ ರೂಪಾಯಿ ದೇಣಿಗೆ, ಎಪಿಎಂಸಿ ಆಡಳಿತ ಮಂಡಳಿ ಆಧ್ಯಕ್ಷ ವಡಗೂರು ನಾಗರಾಜ್ 50 ಲಕ್ಷ 40 ಸಾವಿರ ರೂಪಾಯಿ ಚೆಕ್ ನ್ನು ಡಿಸಿ ಸಿ. ಸತ್ಯಭಾಮ ಅವರಿಗೆ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ಸಂಸದ ಎಸ್ ಮುನಿಸ್ವಾಮಿ, ಶಾಸಕ‌ ಶ್ರೀನಿವಾಸಗೌಡ, ತಾಲ್ಲೂಕು ದಂಡಾಧಿಕಾರಿ ಶೋಭಿತ, ನಗೆಸಭೆ ಆಯುಕ್ತ ಶ್ರೀಕಾಂತ್ ಕೃಷಿ ಮಾರುಕಟ್ಟೆ ಆಡಳಿ ಮಂಡಳಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Credit by : Jeeva

ಲಯನ್ಸ್ ಕ್ಲಬ್ ವತಿಯಿಂದ ಕೋಲಾರ ನಗರದ ಎಂ.ಜಿ ರಸ್ತೆಯಲ್ಲಿ ಕೊರೋನಾ ಜಾಗೃತಿಗಾಗಿ ಕಲಾಚಿತ್ರ ರಚಿಸಲಾಗಿದೆ.  ಕೋಲಾರದ ಚಿನ್ನ
07/04/2020

ಲಯನ್ಸ್ ಕ್ಲಬ್ ವತಿಯಿಂದ ಕೋಲಾರ ನಗರದ ಎಂ.ಜಿ ರಸ್ತೆಯಲ್ಲಿ ಕೊರೋನಾ ಜಾಗೃತಿಗಾಗಿ ಕಲಾಚಿತ್ರ ರಚಿಸಲಾಗಿದೆ.



ಕೋಲಾರದ ಚಿನ್ನ

ಕೋಲಾರದ ತೇರಳ್ಳಿಬೆಟ್ಟದ ವಾಸಿಯಾದ, ಹೊಸಕೋಟೆ ವಿವೇಕಾನಂದ ಶಾಲೆಯಲ್ಲಿ ೧೦ ನೇ ತರಗತಿ ಓದುತ್ತಿರುವ ಆನಂದ್ ನಡುಬಿಸಿಲಿನಲ್ಲಿ ಸ್ವಯಂ ಪ್ರೇರಿತನಾಗಿ ...
27/03/2020

ಕೋಲಾರದ ತೇರಳ್ಳಿಬೆಟ್ಟದ ವಾಸಿಯಾದ, ಹೊಸಕೋಟೆ ವಿವೇಕಾನಂದ ಶಾಲೆಯಲ್ಲಿ ೧೦ ನೇ ತರಗತಿ ಓದುತ್ತಿರುವ ಆನಂದ್ ನಡುಬಿಸಿಲಿನಲ್ಲಿ ಸ್ವಯಂ ಪ್ರೇರಿತನಾಗಿ ಸೈಕಲ್ ಮೇಲೆ ಪೊಲೀಸರಿಗೆ ನಿಂಬೆಹಣ್ಣು ಜ್ಯೂಸ್ ವಿತರಣೆ ಮಾಡುತ್ತಿದ್ದದ್ದು ನಮ್ಮಂತವರಿಗೆ ಮತ್ತಷ್ಟು ಕರ್ತವ್ಯ ನಿರ್ವಹಿಸಲು ಹುಮ್ಮಸ್ಸು ನೀಡಿತು . ಆನಂದ ನಿಗೆ ತಾಯಿ ಭಾರತಾಂಬೆಯ ಅಭಯ ಸದಾಕಾಲವೂ ಅವನಿಗಿದ್ದು, ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಪ್ರಜ್ವಲಿಸಲಿ.
ಜೈಹಿಂದ್.

ಕೃಪೆ : ವಂದೇಮಾತರಂ ಸೋಮಶಂಕರ್

Address

Kolar

Alerts

Be the first to know and let us send you an email when Kolar Golds posts news and promotions. Your email address will not be used for any other purpose, and you can unsubscribe at any time.

Share