BJP Kolar

BJP Kolar BJP Kolar Official Page

ಸಂಘಟನೆಯೇ ಶಕ್ತಿ. ರಾಜ್ಯ ಮಟ್ಟದ ಮಹಾಪ್ರಶಿಕ್ಷಣ ಸಭೆ ನಾಳೆ ಬೆಂಗಳೂರಿನಲ್ಲಿ.
25/02/2026

ಸಂಘಟನೆಯೇ ಶಕ್ತಿ. ರಾಜ್ಯ ಮಟ್ಟದ ಮಹಾಪ್ರಶಿಕ್ಷಣ ಸಭೆ ನಾಳೆ ಬೆಂಗಳೂರಿನಲ್ಲಿ.

17/02/2026

ಚಿನ್ನದ ನಾಡಲ್ಲಿ ಹೆಲಿಕಾಪ್ಟರ್ ಕ್ರಾಂತಿ.
BJP Kolar

ಪ್ರಧಾನಿ ಶ್ರೀ ನರೇಂದ್ರಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಕರ್ನಾಟಕದ ವೇಮಗಲ್‌ನಲ್ಲಿ ಟಾಟಾ-ಏರ್‌ಬಸ್ ನಿರ್ಮಿ...
17/02/2026

ಪ್ರಧಾನಿ ಶ್ರೀ ನರೇಂದ್ರಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಕರ್ನಾಟಕದ ವೇಮಗಲ್‌ನಲ್ಲಿ ಟಾಟಾ-ಏರ್‌ಬಸ್ ನಿರ್ಮಿತ H125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು (FAL) ವರ್ಚುವಲ್ ಆಗಿ ಉದ್ಘಾಟಿಸಿದರು.

✅ 'ಮೇಕ್ ಇನ್ ಇಂಡಿಯಾ'ಕ್ಕೆ ಹೆಮ್ಮೆ
✅ ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಬಲ
✅ ಇಂಡೋ-ಫ್ರೆಂಚ್ ಬಲಿಷ್ಠ ಸಂಬಂಧದ ಸಂಕೇತ

PM Shri Narendra Modi and President of France Mr. Macron virtually inaugurated the final assembly line of H-125 helicopt...
17/02/2026

PM Shri Narendra Modi and President of France Mr. Macron virtually inaugurated the final assembly line of H-125 helicopters at Vemagal (Karnataka) today.

Congratulations to the teams from Tata Advanced System and Airbus Helicopters on the inauguration of this project.

This project is a shining example of mutually beneficial partnership with friendly countries in high-end manufacturing sector.

17/02/2026

Speaking at the inaugural ceremony of the final assembly line of H-125 helicopters at Vemagal (Karnataka).

17/02/2026

Live : ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷರಾದ ಇಮಾನ್ಯುವಲ್ ಮ್ಯಾಕ್ರಾನ್ ಅವರಿಂದ ವರ್ಚುವಲ್‌ ಆಗಿ ಕೋಲಾರದ H125 ಹೆಲಿಕಾಪ್ಟರ್‌ ಘಟಕ ಉದ್ಘಾಟನೆ

ಕರ್ನಾಟಕದ ವಿಚಾರದಲ್ಲಿ Indian National Congress - Karnataka ನೇತೃತ್ವದ ಯುಪಿಎ ಸರ್ಕಾರ ಅಂದು ಕೊಟ್ಟಿದ್ದು ಖಾಲಿ ಚೊಂಬು. ಇಂದು ಪ್ರಧಾನಿ ...
17/02/2026

ಕರ್ನಾಟಕದ ವಿಚಾರದಲ್ಲಿ Indian National Congress - Karnataka ನೇತೃತ್ವದ ಯುಪಿಎ ಸರ್ಕಾರ ಅಂದು ಕೊಟ್ಟಿದ್ದು ಖಾಲಿ ಚೊಂಬು. ಇಂದು ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮೂಲಸೌಕರ್ಯ, ರೈಲ್ವೆ ಯೋಜನೆಗಳಿಂದ ಹಿಡಿದು ಕುಡಿಯುವ ನೀರಿಗೆ ಅನುದಾನದವರೆಗೆ ಕರ್ನಾಟಕ ರಾಜ್ಯಕ್ಕೆ ಮೋದಿ ಸರ್ಕಾರ ಭರಪೂರ ಕೊಡುಗೆ ನೀಡುತ್ತಿದೆ.

ಕೋಲಾರದ ವೇಮಗಲ್‌ನಲ್ಲಿ ದೇಶದಲ್ಲೇ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ರಕ್ಷಣಾ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಇಮಾನ್ಯುವಲ್ ಮ್ಯಾಕ್ರಾನ್ ಅವರು ವರ್ಚುವಲ್‌ ಆಗಿ ಉದ್ಘಾಟಿಸಿಲಿದ್ದಾರೆ. ಉಭಯ ದೇಶಗಳ ರಕ್ಷಣಾ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ನಿರ್ಮಾಣಗೊಂಡ ಈ ಘಟಕವು ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್​ಗಳನ್ನು ತಯಾರಿಸಲಿದೆ. ಈ ಘಟಕವು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೂರಾರು ಜನತೆಗೆ ಉದ್ಯೋಗ ಸೃಷ್ಟಿಸುವುದಲ್ಲದೇ, ಆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ.

ಕರ್ನಾಟಕದ ಅಭಿವೃದ್ಧಿಯಲ್ಲಿ ಹೊಸ ಭಾಷ್ಯ ಬರೆದ ಮೋದಿ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು.



BJP Kolar BJP Karnataka

ರಾಜ್ಯದಲ್ಲಿ ತರಕಾರಿ, ದಿನಸಿ ಸಾಮಾನುಗಳ ಬೆಲೆ ಗಗನಕ್ಕೆ ಏರುತ್ತಿದೆ. ವಿದ್ಯುತ್‌, ನೀರಿನ ಬಿಲ್‌ ಮೂರು ತಿಂಗಳಿಗೊಮ್ಮೆ ಏರಿಕೆಯಾಗುತ್ತಿದೆ. ಗ್ಯಾ...
17/02/2026

ರಾಜ್ಯದಲ್ಲಿ ತರಕಾರಿ, ದಿನಸಿ ಸಾಮಾನುಗಳ ಬೆಲೆ ಗಗನಕ್ಕೆ ಏರುತ್ತಿದೆ. ವಿದ್ಯುತ್‌, ನೀರಿನ ಬಿಲ್‌ ಮೂರು ತಿಂಗಳಿಗೊಮ್ಮೆ ಏರಿಕೆಯಾಗುತ್ತಿದೆ. ಗ್ಯಾರಂಟಿ ನೆಪದಲ್ಲಿ ಜನರ ಕಿಸೆಯಿಂದ ದುಪ್ಪಟ್ಟು ಪೀಕುತ್ತಿದ್ದಾರೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಜನರು ಇಷ್ಟೊಂದು ಪರದಾಡುತ್ತಿರುವಾಗ Indian National Congress - Karnataka ಶಾಸಕರು ಮೋಜು ಮಸ್ತಿ ಮಾಡಲು ವಿದೇಶಕ್ಕೆ ತೆರಳುತ್ತಿದ್ದಾರೆ.

ರೋಮ್‌ಗೆ ಬೆಂಕಿ ಬಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ ಎಂಬ ಗಾದೆ ಕಾಂಗ್ರೆಸ್‌ ಸರ್ಕಾರಕ್ಕೆ ಹೇಳಿ ಮಾಡಿಸಿದಂತಿದೆ. ಸಿಎಂ Siddaramaiah ಅವರಿಗೆ ಕುರ್ಚಿ ಉಳಿಸುವುದೊಂದೇ ಗುರಿಯಾಗಿದೆ. ರಾಜ್ಯದ ಜನತೆಯ ಆಶೋತ್ತರಗಳಿಗೆ ಉತ್ತರದಾಯಿಯಾಗಬೇಕಾದವರು ಕುರ್ಚಿ ಕಾಳಗದಲ್ಲಿ ನಿರತರಾಗಿರುವುದು ರಾಜ್ಯದ ದುರಂತ.



BJP Karnataka BJP Kolar
Vijayendra Yediyurappa
S Muniswamy MP KOLAR
N S Nandiesha Reddy

17/02/2026

Live : ಪತ್ರಿಕಾಗೋಷ್ಠಿ

ಉಪಸ್ಥಿತಿ : ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಶ್ರೀ ಮೋಹನ್ ವಿಶ್ವ ಮತ್ತು ಪ್ರಮುಖರು

ಸ್ಥಳ : ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ

ಮಾಲೂರು ತಾಲ್ಲೂಕಿನ ಅಗಲಕುಂಟೆ ಗ್ರಾಮದಲ್ಲಿ 70 ವರ್ಷಗಳ ಹಿಂದೆ, ಅಂದರೆ 1955 ರಲ್ಲಿ ಬಡವರ ಶಿಕ್ಷಣಕ್ಕಾಗಿ ಕೊಡುಗೈ ದಾನಿಗಳು ಶಿಕ್ಷಣ ಇಲಾಖೆಗೆ ನ...
27/01/2026

ಮಾಲೂರು ತಾಲ್ಲೂಕಿನ ಅಗಲಕುಂಟೆ ಗ್ರಾಮದಲ್ಲಿ 70 ವರ್ಷಗಳ ಹಿಂದೆ, ಅಂದರೆ 1955 ರಲ್ಲಿ ಬಡವರ ಶಿಕ್ಷಣಕ್ಕಾಗಿ ಕೊಡುಗೈ ದಾನಿಗಳು ಶಿಕ್ಷಣ ಇಲಾಖೆಗೆ ನೀಡಿರುವ 50 ಎಕರೆ ಜಮೀನನ್ನು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈಜೋಡಿಸಿ ಕಬಳಿಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಇಂದು ಕೋಲಾರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸಂಸದರಾದ ಡಾ.ಕೆ.ಸುಧಾಕರ್ ರವರು, ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಆರ್.ವೆಂಕಟಾಚಲಪತಿ, ಮಾಲೂರಿನ ಮಾಜಿ ಶಾಸಕರಾದ ಶ್ರೀ ಮಂಜುನಾಥ ಗೌಡ, ಮಾಜಿ ಸಂಸದರಾದ ಶ್ರೀ ಮುನಿಸ್ವಾಮಿ, ಮಾಜಿ ಎಂಎಲ್ಸಿ ಶ್ರೀ ವೈ.ಎ.ನಾರಾಯಣಸ್ವಾಮಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು  ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೋಲಾರ ಮತ್ತು ಮಧುಗಿರಿ ಜಿಲ್ಲಾ ಘಟ...
09/01/2026

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೋಲಾರ ಮತ್ತು ಮಧುಗಿರಿ ಜಿಲ್ಲಾ ಘಟಕಗಳ ಜಿಲ್ಲಾಶಃ ವಿಶೇಷ ಸಭೆ ನಡೆಸಿ, ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.‌ ಯಡಿಯೂರಪ್ಪ, ಶ್ರೀ ಡಿ. ವಿ. ಸದಾನಂದ ಗೌಡ, ಮಾಜಿ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
BJP Karnataka BJP Kolar

Address

NH-75
Kolar

Alerts

Be the first to know and let us send you an email when BJP Kolar posts news and promotions. Your email address will not be used for any other purpose, and you can unsubscribe at any time.

Share