CV Chandrashekar

CV Chandrashekar For a better Society!

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಧರ್ಮ, ಸತ್ಯ ಮತ್ತು ಕರ್ಮದ ಮಹತ್ವವನ್ನು ಸಾರಿದ ಶ್ರೀಕೃಷ್ಣನ ದಿವ್ಯ ಸಂದೇಶಗಳು ನಮ್ಮ ಜೀವನಕ್ಕೆ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಧರ್ಮ, ಸತ್ಯ ಮತ್ತು ಕರ್ಮದ ಮಹತ್ವವನ್ನು ಸಾರಿದ ಶ್ರೀಕೃಷ್ಣನ ದಿವ್ಯ ಸಂದೇಶಗಳು ನಮ್ಮ ಜೀವನಕ್ಕೆ ಸದಾ ದಾರಿದೀಪವಾಗಲಿ.

ಶ್ರೀಕೃಷ್ಣನ ಕೃಪೆಯಿಂದ ನಿಮ್ಮ ಬದುಕಿನಲ್ಲಿ
ಶಾಂತಿ, ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಸದಾ ನೆಲೆಸಿರಲಿ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಜೈ ಶ್ರೀಕೃಷ್ಣ! 💙

#ಶ್ರೀಕೃಷ್ಣ #ಕೃಷ್ಣಜನ್ಮಾಷ್ಟಮಿ #ಜನ್ಮಾಷ್ಟಮಿ #ಜೈಶ್ರೀಕೃಷ್ಣ #ಶುಭಾಶಯಗಳು

ಗ್ರಾಮೀಣ ಪ್ರದೇಶಗಳಲ್ಲಿ ಮೊಳಗಿದ ಜೆಡಿಎಸ್ ಕಹಳೆ! 💚💛ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಹಾಪುರ, ಕೆರೆಹಳ್ಳಿ, ಅಚಲಾಪುರ ಹಾಗೂ ಕಂಪಸಾಗರ ಭಾಗಗಳಲ್ಲಿ ಜ...
02/09/2026

ಗ್ರಾಮೀಣ ಪ್ರದೇಶಗಳಲ್ಲಿ ಮೊಳಗಿದ ಜೆಡಿಎಸ್ ಕಹಳೆ! 💚💛

ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಹಾಪುರ, ಕೆರೆಹಳ್ಳಿ, ಅಚಲಾಪುರ ಹಾಗೂ ಕಂಪಸಾಗರ ಭಾಗಗಳಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಪಕ್ಷದ ತತ್ವ, ಸಿದ್ಧಾಂತ ಹಾಗೂ ರೈತಪರ ಮತ್ತು ಗ್ರಾಮೀಣಾಭಿವೃದ್ಧಿಯ ನಿಲುವುಗಳನ್ನು ಜನರಿಗೆ ತಿಳಿಸಿ, ನೂತನ ಸದಸ್ಯರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಗ್ರಾಮೀಣ ಭಾಗದ ನೂರಾರು ಗ್ರಾಮಸ್ಥರು ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. 💚💛

ಜನರ ಧ್ವನಿ – ರೈತರ ಪರ ಜೆಡಿಎಸ್
ಗ್ರಾಮೀಣ ಅಭಿವೃದ್ಧಿಯೇ ನಮ್ಮ ಸಂಕಲ್ಪ!

#ಜನತಾದಳ #ಜೆಡಿಎಸ್ #ಗ್ರಾಮೀಣಅಭಿವೃದ್ಧಿ #ರೈತರಪರ

ಬುಧವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಹಪುರ, ಕೆರೇಹಳ್ಳಿ, ಅಚಲಾಪುರ, ಕಂಪಸಾಗರ ಭಾಗಗಳಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿ...
02/09/2026

ಬುಧವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಹಪುರ, ಕೆರೇಹಳ್ಳಿ, ಅಚಲಾಪುರ, ಕಂಪಸಾಗರ ಭಾಗಗಳಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿ ಜರುಗಿತು.

ಪಕ್ಷದ ತತ್ವ ಮತ್ತು ಸಿದ್ದಾಂತಗಳ ಕುರಿತು ವಿವರವಾಗಿ ಹೇಳಿ ನೂತನ ಸದಸ್ಯರನ್ನು ಪಕ್ಷಕ್ಕೆ ಆಹ್ವಾನಿಸಲಾಯಿತು. ಜೆಡಿಎಸ್ ರೈತರ ಪರವಾದ ಪಕ್ಷ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ಕೊಡುತ್ತದೆ. ಆದ್ದರಿಂದ ನಾವು ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡುತ್ತೇವೆ ಎಂದು ನೂರಾರು ಗ್ರಾಮಸ್ಥರು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ವಿರೇಶಗೌಡ್ರು ದಳಪತಿ ಪ್ರಮುಖರಾದ ಸುನಿಲ್ ಯಲ್ಲಾಪುರ, ರಮೇಶ ದೇವಲಾಪುರ, ವೀರೇಶ, ಭೀರಪ್ಪ, ಗುರುರಾಜ್ ಬೋವಿ, ವಸಂತ ಕೆರೇಹಳ್ಳಿ, ಯಮನೂರಪ್ಪ, ಕೃಷ್ಣಪ್ಪ ಲಮಾಣಿ, ಮುದಿಯಪ್ಪ ಪೂಜಾರ, ನಾರಾಯಣ ಕಂಪಸಾಗರ, ಭರತ್ ಕೊಪ್ಪಳ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಮ್ಮ ಸಿವಿಸಿ

ಗ್ರಾಮೀಣ ಭಾಗದಲ್ಲಿಪ್ರಬಲವಾಗುತ್ತಿದೆ ಜೆಡಿಎಸ್‌ಜೆಡಿಎಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೊಪ್ಪಳ ವಿಧಾನಸ...
01/09/2026

ಗ್ರಾಮೀಣ ಭಾಗದಲ್ಲಿ
ಪ್ರಬಲವಾಗುತ್ತಿದೆ ಜೆಡಿಎಸ್‌

ಜೆಡಿಎಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ವೇಗ ದೊರೆತಿದೆ.

ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮದಿಂದ ಗ್ರಾಮಕ್ಕೆ ತೆರಳಿ ಜನರನ್ನು ಪಕ್ಷದೊಂದಿಗೆ ಕೈಜೋಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಭೂಮರಡ್ಡಿ ಅವರ ಮಾರ್ಗದರ್ಶನದಂತೆ ಮಂಗಳವಾರ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಗುನ್ನಳ್ಳಿ ಹಾಗೂ ಹೊರತಟ್ನಾಳ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಉತ್ಸಾಹದಿಂದ ನಡೆಸಲಾಯಿತು.

ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ವಿರೇಶಗೌಡ್ರು ದಳಪತಿ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಪಕ್ಷದ ಸಿದ್ಧಾಂತ, ಜನಪರ ಚಿಂತನೆ ಹಾಗೂ ಸಂಘಟನೆಯ ಉದ್ದೇಶಗಳನ್ನು ಜನರಿಗೆ ತಿಳಿಸಲಾಯಿತು.

ಯುವಕರು, ಹಿರಿಯರು ಹಾಗೂ ಪಕ್ಷದ ಅಭಿಮಾನಿಗಳು ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಪಕ್ಷದ ನಿಜವಾದ ಶಕ್ತಿ ಗ್ರಾಮೀಣ ಕಾರ್ಯಕರ್ತರು. ಕಾರ್ಯಕರ್ತರು. ಸಂಘಟನಾತ್ಮಕವಾಗಿ ಗಟ್ಟಿಯಾದಾಗ ಮಾತ್ರ ಪಕ್ಷ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂಬ ಆಶಯದೊಂದಿಗೆ
ಪಕ್ಷದ ಸಂಘಟನೆಯನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಭಿಯಾನದಲ್ಲಿ ಬಸವನಗೌಡ ಕೋಳೂರು, ಮಂಜುನಾಥ, ಪ್ರಭು, ಮಹಾಂತೇಶ, ಹನುಮಂತಪ್ಪ ಕರೆಕುರಿ, ದೇವೇಗೌಡ ಕಾಟ್ರಳ್ಳಿ, ಕನಕಪ್ಪ, ಮುದಕಪ್ಪ, ವಿರೇಶ, ಯಶವಂತರೆಡ್ಡಿ, ಗವಿಸಿದ್ದಯ್ಯ, ಹನುಮೇಶ, ಕನಕಪ್ಪ, ಭರತ್ ಕೊಪ್ಪಳ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದಲೇ ಬಲಪಡಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಸದಸ್ಯತ್ವ ನೋಂದಣಿ ಅಭಿಯಾನ, ಗ್ರಾಮಸಭೆಗಳು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ದೊರೆಯುತ್ತಿರುವ ಸ್ಪಂದನೆ ಸಂಘಟನೆಗೆ ಬಲ ನೀಡಿದೆ.

ನಿಮ್ಮ ಸಹಕಾರ, ಹಾರೈಕೆ, ಆಶೀರ್ವಾದ ಹಾಗೂ ಬೆಂಬಲ ಸದಾ ಹೀಗೆ ಇರಲಿ.

ನಿಮ್ಮ ಸಿವಿಸಿ

ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡಿಸ...
01/09/2026

ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ವಿರೇಶಗೌಡ್ರು ದಳಪತಿ ಪ್ರಮುಖರಾದ ಬಸವನಗೌಡ ಕೋಳೂರ, ಮಂಜುನಾಥ, ಪ್ರಭು, ಮಹಾಂತೇಶ, ಹನುಮಂತಪ್ಪ ಕರೆಕುರಿ, ದೇವೇಗೌಡ ಕಾಟ್ರಳ್ಳಿ, ಕನಕಪ್ಪ, ಮುದಕಪ್ಪ, ವಿರೇಶ, ಯಶವಂತರೆಡ್ಡಿ, ಗವಿಸಿದ್ದಯ್ಯ, ಹನುಮೇಶ, ಕನಕಪ್ಪ, ಭರತ್ ಕೊಪ್ಪಳ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು..

ನಿಮ್ಮ ಸಿವಿಸಿ

ಇಂದು ಕೊಪ್ಪಳ ನಗರದ ರಾಯರ ಮಠದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಹಾಗೂ ಆರಾಧನಾ ಕಾರ್ಯಕ್ರಮದಲ್ಲಿ l ಭಾಗವಹಿಸಿ ಶ್ರೀ ಗುರುರಾಯರ ದ...
31/08/2026

ಇಂದು ಕೊಪ್ಪಳ ನಗರದ ರಾಯರ ಮಠದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಹಾಗೂ ಆರಾಧನಾ ಕಾರ್ಯಕ್ರಮದಲ್ಲಿ l ಭಾಗವಹಿಸಿ ಶ್ರೀ ಗುರುರಾಯರ ದರ್ಶನ ಪಡೆಯಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ಶ್ರೀ ಮೂರ್ತಪ್ಪ ಹಿಟ್ನಾಳ ಹಾಗೂ ಕೊಪ್ಪಳ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶಿವಕುಮಾರ ಏಣಿಗಿ ಅವರು ಉಪಸ್ಥಿತರಿದ್ದರು.

ನಿಮ್ಮ ಸಿವಿಸಿ

ರವಿವಾರ ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಪತ್ತಾರ ಬಂಧುಗಳ ಮದುವೆ ಕಾರ್ಯಕ್ರಮ, ಭಾಗ್ಯನಗರದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಸನಹಳ್ಳಿ...
30/08/2026

ರವಿವಾರ ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಪತ್ತಾರ ಬಂಧುಗಳ ಮದುವೆ ಕಾರ್ಯಕ್ರಮ, ಭಾಗ್ಯನಗರದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಸನಹಳ್ಳಿ ಬಂದುಗಳ ಮದುವೆಯ ಕಾರ್ಯಕ್ರಮ ಹಾಗೂ ವಾಸವಿ ಕಲ್ಯಾಣ ಮಂಟಪದಲ್ಲಿ ಅಳವoಡಿ ಕುಟುಂಬದ ಶ್ರೀಮತಿ ಅಕ್ಷತಾ ಸಂತೋಷ ರೆಡ್ಡಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು.

ಮಹಾಮಹಿಮ ಶ್ರೀ ಗವಿಸಿದ್ದೇಶ್ವರರ ಕೃಪೆ ಆ ಕುಟುಂಬಗಳ ಮೇಲೆ ಇರಲಿ.

ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕ್ಷಣಗಳು

ನಿಮ್ಮ ಸಿವಿಸಿ

ರವಿವಾರ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ದಿವಂಗತ ಶ್ರೀ ಕರಿಯಣ್ಣ ಸಂಗಟಿ ಅವರ ಕುಟುಂಬದಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್...
30/08/2026

ರವಿವಾರ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ದಿವಂಗತ ಶ್ರೀ ಕರಿಯಣ್ಣ ಸಂಗಟಿ ಅವರ ಕುಟುಂಬದಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರ ಮಗಳು ಮತ್ತು ಅಳಿಯ
ಕವಿತಾ-ಮಹೇಶ ಅವರ ಮಗುವಿನ ನಾಮಕರಣ ಕಾರ್ಯಕ್ರಮ ಗದಗ ರಸ್ತೆಯಲ್ಲಿರುವ ಅವರ ಶೈಕ್ಷಣಿಕ ಸಂಸ್ಥೆಯಲ್ಲಿ ಜರಗಿತು.
ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

ಭಗವಂತ ಆ ಮಗುವಿಗೆ ಉತ್ತಮ ಆರೋಗ್ಯ, ಆಯಸ್ಸು ಮತ್ತು ಯಶಸ್ಸನ್ನು ದೊರಕಿಸಿ ಕೊಡಲಿ. ತಂದೆ - ತಾಯಿಗಳಿಗೂ ಹಾಗೂ ಕುಟುಂಬದ ವರ್ಗಕ್ಕೂ ಒಳಿತಾಗಲಿ ಪ್ರಾರ್ಥಿಸಲಾಯಿತು ಎಂಬ ಪ್ರಾರ್ಥನೆ.

ನಿಮ್ಮ ಸಿವಿಸಿ

ಕೊಪ್ಪಳ ನಗರದ ವಿವಿಧ ವಾರ್ಡ್ ಗಳಿಂದ ಯುವಕರು ನಮ್ಮ ಪಕ್ಷ ಸೇರ್ಪಡೆಗೊಂಡರು.ನಮ್ಮ ಪಕ್ಷದ ತತ್ವ ಮತ್ತು ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ದುಡಿಯಲ...
30/08/2026

ಕೊಪ್ಪಳ ನಗರದ ವಿವಿಧ ವಾರ್ಡ್ ಗಳಿಂದ ಯುವಕರು ನಮ್ಮ ಪಕ್ಷ ಸೇರ್ಪಡೆಗೊಂಡರು.

ನಮ್ಮ ಪಕ್ಷದ ತತ್ವ ಮತ್ತು ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ದುಡಿಯಲು ನಿರ್ಧರಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಯುವ ಪಡೆ ಶೀಘ್ರದಲ್ಲಿಯೇ ನಮ್ಮ ಪಕ್ಷ ಸೇರಲಿದ್ದಾರೆ.

ಆ ಕಾರ್ಯಕ್ರಮದ ವರದಿ ಪತ್ರಿಕಗಳಲ್ಲಿ ಪ್ರಕಟಗೊಂಡಿದೆ. ಪ್ರಕಟಿಸಿದ ಸಂಪಾದಕೀಯ ಬಳಗಕ್ಕೆ ಧನ್ಯವಾದಗಳು. ಪ್ರಕಟಿತ ತುಣುಕುಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸಿವಿಸಿ

Address

Cvc Farm House Next To Padkhi Township Kustagi Road Koppal
Koppal
583231

Website

Alerts

Be the first to know and let us send you an email when CV Chandrashekar posts news and promotions. Your email address will not be used for any other purpose, and you can unsubscribe at any time.

Contact The Organization

Send a message to CV Chandrashekar:

Shortcuts

Share

Category