21/07/2026
*"ಮಳೆಗಾಗಿ ಪ್ರಾರ್ಥನೆ ಮತ್ತು ಪ್ರಾರ್ಥನಾ ಯಾತ್ರೆ"*
_ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ-ಕುಕನೂರು ವತಿಯಿಂದ 2ನೇ ಹಂತದ “ಮಳೆಗಾಗಿ ಪ್ರಾರ್ಥನೆ ಹಾಗು ಪ್ರಾರ್ಥನಾ ಯಾತ್ರೆ “ ಗ್ರಾಮಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ._
ಯಲಬುರ್ಗಾ ಮತ್ತು ಕುಕುನೂರ ತಾಲೂಕುಗಳಲ್ಲಿ ಮಳೆ ಯಾಗದೆ ತೀವ್ರ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ, ಅನ್ನದಾತನ ಬದುಕು ಉಳಿಸಲು *"ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ-ಕುಕನೂರು"* ವತಿಯಿಂದ 2ನೇ ಹಂತದಲ್ಲಿ ಮಳೆಗಾಗಿ ಪ್ರಾರ್ಥನೆ ಮತ್ತು ಪ್ರಾರ್ಥನಾ ಯಾತ್ರೆ"* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದಿನಾಂಕ: 20/07/2026 ರಂದು ಕೆಳಕಂಡ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು:
*ಯಲಬುರ್ಗಾ ಹಜರತ್ ಅಶ್ರಫ್ ಅಲಿ ದರ್ಗಾದಲ್ಲಿ ಫಾತೇಹ ಹಾಗು ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಪ್ರಾರ್ಥನಾ ಯಾತ್ರೆಗೆ ಚಾಲನೆ ನೀಡಲಾಯಿತು .
*ಬಳುಟಗಿ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಹಾಗು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
*ಬಂಡಿ ಶ್ರೀ ಶರಣ ಬಸವೇಶ್ವರ ದೇವಸ್ಥಾನ.
*ಜುಲಕಟ್ಟಿ ಶ್ರೀ ದುರ್ಗಾದೇವಿ ದೇವಸ್ಥಾನ
*ವಜ್ರಬಂಡಿ ಶ್ರೀ ಶರಣ ಬಸವೇಶ್ವರ ದೇವಸ್ಥಾನ.
*ಹಿರೇ ಅರಳಿಹಳ್ಳಿ ಶ್ರೀ ಈಶ್ವರ ದೇವಸ್ಥಾನ ಹಾಗು ಶ್ರೀ ಶರಣ ಬಸವೇಶ್ವರ ದೇವಸ್ಥಾನ.
*ಚಿಕ್ಕ ವಂಕಲಕುಂಟ ಶ್ರೀ ಮಾರುತೇಶ್ವರ ದೇವಸ್ಥಾನ
*ಗುನ್ನಾಳ ಶ್ರೀ ಈಶ್ವರ ದೇವಸ್ಥಾನ.
*ಬೇವೂರ ಶ್ರೀ ಕೊಂಡದ ಮಲ್ಲೇಶ್ವರ ದೇವಸ್ಥಾನ.
*ರಾವಣಕಿ ಶ್ರೀ ಈರಣ್ಣ ದೇವಸ್ಥಾನ.
* ಬೂದಗುಂಪ ಶ್ರೀ ಶರಣ ಬಸವೇಶ್ವರ ದೇವಸ್ಥಾನ.
*ಬಳಗೇರಿ ಶ್ರೀ ಬಳ್ಳೆಶ್ವರ ದೇವಸ್ಥಾನ
*ಯಡಿಯಾಪುರ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ
*ಬೆಣಕಲ್ ಶ್ರೀ ಅನ್ನದಾನೇಶ್ವರ ಮಠ ದೇವಸ್ಥಾನ
*ನಿಟ್ಟಾಲಿ ಶ್ರೀ ದುರ್ಗಾದೇವಿ ದೇವಸ್ಥಾನ
ಈ ಪವಿತ್ರ ಕಾರ್ಯಕ್ರಮದಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ಎಲ್ಲಾ ರೈತ ಬಾಂಧವರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು
_"ಮಳೆ ಬಂದರೆ ಬೆಳೆ ಬರುತ್ತದೆ, ಬೆಳೆ ಬಂದರೆ ರೈತ ಬದುಕುತ್ತಾನೆ"_
*ಪ್ರಕಟಣೆ:*
*ರೈತ ಸಂರಕ್ಷಣಾ ಸಮಿತಿ*
*ಯಲಬುರ್ಗಾ-ಕುಕನೂರು .