ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ

  • Home
  • India
  • Kumta
  • ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ

ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ Its created for awareness of water and many other social works related to uttara kannada district, k.

19/01/2026
17/01/2026

#ಶಾಪವೋ_ವರವೋ?

ಅಕ್ಕ ಪಕ್ಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರಕನ್ನಡ ಜಿಲ್ಲೆಗೆ ಸೂಕ್ತ ನಾಯಕತ್ವ ಎನ್ನುವುದು ಪ್ರಶ್ನೆ ಆಗಿಯೇ ಉಳಿದಿದೆ! ರಾಜಕೀಯ ನಾಯಕರನ್ನು ಪ್ರಶ್ನೆ ಮಾಡುವ ಹಾಗೆಯೇ ಇಲ್ಲ! ಹಾಗಂತ ಅವರು ಪ್ರಶ್ನಾತೀತರೇ? ಗೊತ್ತಿಲ್ಲ. ಕೊಂಕಣ ರೈಲ್ವೆ ಇಂದ ಹಿಡಿದು, ಬೆಂಗಳೂರು, ಕಾರವಾರ ರೈಲ್ವೆ ತನಕ ಉತ್ತರ ಕನ್ನಡದ ರಾಜಕೀಯ ಧುರಿಣರಿಗಿಂತ ಪಕ್ಕದ ಜಿಲ್ಲೆಯ ನಾಯಕರ ಶ್ರಮದ ಪ್ರತೀಕವೇ ಹೆಚ್ಚಾಗಿ ಕಾಣುತ್ತದೆ ಅಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ ಎಂದು ಅನ್ನಿಸುತ್ತದೆ?

ಆಸ್ಪತ್ರೆ ವಿಚಾರವಾಗಲಿ ಅಥವಾ ಇನ್ಯಾವುದೇ ಅಭಿವೃದ್ಧಿ ವಿಚಾರವಾಗಿ ಮಾತನಾಡಿದರೆ ಯಾರದ್ದೋ ಯೋಜನೆಗೆ ಚಾಲನೆ ನೀಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರೇ ಹೆಚ್ಚಾಗಿ ಕಾಣುತ್ತ ಇರುವುದು ಸಾಮಾನ್ಯವಾಗಿ ಬಿಟ್ಟಿದೆ.

ಈಗ ಸದ್ಯಕ್ಕೆ ಪ್ರಚಲಿತದಲ್ಲಿ ಇರುವ 3 ನದಿಯ ವಿಚಾರವಾಗಿ ಮಾತಾಡಿದ್ರೆ ಈ ಯೋಜನೆ ಯಾರ ಕೊಡುಗೆ ಎಂದು ಹೇಳಿಕೊಳ್ಳಬಹುದು!! ಈ ಕುತೂಹಲ ನಮಗೆ ತೀವ್ರವಾಗಿ ಕಾಡುತ್ತಾ ಇದೆ. ಯೋಜನೆಗೆ ಯಾವುದೇ ವಿರೋಧ ವ್ಯಕ್ತವಾಗದೆ ಸುಲಲಿತವಾಗಿ ಮುಗಿದಿದ್ದರೆ ಬಹುಷಃ ಎಲ್ಲಾ ನಾಯಕರುಗಳ ಮಧ್ಯ ಪೈಪೋಟಿ ಬೀಳುತ್ತ ಇತ್ತೇನೋ ಇದು ನಮ್ಮ ಕೊಡುಗೆ ಇದು ನಮ್ಮ ಕೊಡುಗೆ ಎಂದು. ವಿರೋಧ ವ್ಯಕ್ತವಾದ ಮೇಲೆ ಕಾಟಚಾರಕ್ಕೆ ಆದರೂ ಇದನ್ನು ವಿರೋಧಿಸದೆ ಇದ್ದಲ್ಲಿ ಗತಿ ಇಲ್ಲ. ಯಾಕೆಂದರೆ ಮುಂದಿನ ಚುನಾವಣೆಯ ಭವಿಷ್ಯ ಇದರಲ್ಲಿ ಇರಬಹುದಲ್ಲ!!. ಅವರಿಗೂ ಗೊತ್ತು ಬಿಡಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನತೆ ಕೂಡ ಒಂದ್ ಅರ್ಥದಲ್ಲಿ ತಮ್ಮ ನಾಯಕರುಗಳಂತೆ ಸದಾ ಅರೇನಿದ್ರಾ ಅವಸ್ಥೆಯಲ್ಲೇ ಇರುತ್ತದೆ! ಬಹುಬೇಗ ಎಲ್ಲವನ್ನೂ ಮರೆತು ಮುಂದಿನ ಚುನಾವಣೆಗೆ ತಮ್ಮ ನಾಯಕರಿಗೆ ಜೈಕಾರ ಹಾಕಿಯೇ ಹಾಕುತ್ತಾರೆ. ಸರ್ವಂ ಕಾಂಚಾಣ ಮಯಂ!! ಇದೆ ಅಲ್ಲವೇ ಇಂದಿನ ರಾಜಕೀಯ ನೀತಿ? ( ಇದು ಪಕ್ಷತೀತವಾಗಿ ಹೇಳುತ್ತಾ ಇರುವುದು ).

ಸಮಸ್ಯೆ ಬಿದ್ದಾಗ ಪರಿಹಾರ ಹುಡುಕುವ ನಾವು ಎಲ್ಲೋ ಆಕ್ಸಿಡೆಂಟ್ ಆದಾಗ, ಅಥವಾ ನಮ್ಮ ಹತ್ತಿರದವರು ಚಿಕಿತ್ಸೆ ಸೂಕ್ತ ಸಮಯಕ್ಕೆ ಸಿಗದೇ ಹೋದಾಗ ಎಲ್ಲಿದ್ದಾರೆ ನಾಯಕರು? ಎಲ್ಲಿ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಎಂದು ಬೊಬ್ಬೆ ಹಾಕುತ್ತೇವೆ ಆ ಪಕ್ಷದವರು ಈ ಪಕ್ಷಕ್ಕೆ ಈ ಪಕ್ಷದವರು ಇನ್ನೊಂದು ಪಕ್ಷಕ್ಕೆ ವಾಗ್ವಾದ ನಡೆಸುವುದೇ ಬಂತು, ಬಡವರ ಹೊಟ್ಟೆ ಪಕ್ಷದ ಬಗ್ಗೆ ಅನುಕಂಪ ಸರ್ವತ ಇರುವುದಿಲ್ಲ. ಮತ್ತೆ ಆ ಘಟನೆಗಳು ಮನಸ್ಸಿನಿಂದ ಮಾಸಿದ ಮೇಲೆ ಮತ್ತೆ ನಮಗೆ ಎಚ್ಚರ ವಾಗಿ ಬೊಬ್ಬೆ ಇಡುವುದು ಮತ್ತೊಂದು ಘಟನೆ ನಡೆದ ಮೇಲೆಯೇ ಆಗಿದೆ!! ಇದೆ ಅಲ್ಲವೇ ನಮ್ಮ ನಾಯಕರುಗಳಿಗೆ ಬಂಡವಾಳ? ಸಾಧನೆ ಏನು ಮಾಡದೆ ಹೋದರು ನಮ್ಮ ಜನಗಳ ಮನಸ್ಸಿನ ಭಾವನೆಯನ್ನು ಮಾತ್ರ ಸರಿಯಾಗಿ ಅರ್ಥೈಸಿ ಕೊಂಡಿರುವುದಕ್ಕೆ ಭೇಷ್ ಎನ್ನಲೇ ಬೇಕು.

ಇದನ್ನ ಓದಿ ಎಷ್ಟು ಜನ ಎಚ್ಛೆತ್ತು ಕೊಳ್ಳುವರೋ ತಿಳಿಯದು, ಬರೆಯುವ ಉದ್ದೇಶ ಮಾತ್ರ ಒಂದೇ atleast ನನ್ನನ್ನೇ ನಾನು ಎಚ್ಚರ ಗೊಳಿಸಬೇಕು ಅಲ್ಲವೇ? ಸಾಧ್ಯವಾದರೆ ನೀವು ಎಚ್ಚರಗೊಳ್ಳಿ ನಿಮ್ಮಿಂದ ಮತ ಪಡೆದ ನಿಮ್ಮ ನಾಯಕರು, ನಿಮ್ಮ ಸೇವಕರು ಹೌದು ಎನ್ನುವುದನ್ನು ಮರೆಯದಿರಿ. ನಮಗೆ ಬೇಕಿರುವುದು ನ್ಯಾಯ, ನಾಶವಾಗುವ ಹೊಸ ಯೋಜನೆಗಳು ಅಲ್ಲಾ, ಶಾಶ್ವತವಾಗಿ ನಮ್ಮ ಆಸ್ತಿ ಆಗಬೇಕಿರುವ ಅಭಿವೃದ್ಧಿ ಕಾರ್ಯ. ಇದಕ್ಕೆ ಆಗಿರುವುದು ನಿಮ್ಮ ನಿಯೋಜನೆ. ತಡೆಯಿರಿ ಬೇಡದ ಯೋಜನೆ. ಆಗೋಲ್ಲ ಅಂದರೆ ಬಿಡಿ ನಿಮ್ಮ ಪಟ್ಟ. ಇದು ಜಿಲ್ಲೆಯ ಜನತೆಯ ಒಕ್ಕೊರಲ ಕೂಗು ಆಗಬೇಕು ಅಷ್ಟೇ.

#ಅಘನಾಶಿನಿಉಳಿಸಿ #ಬೇಡ್ತಿಉಳಿಸಿ #ಶರಾವತಿಉಳಿಸಿ #ಪರಿಸರಉಳಿಸಿ #ಉತ್ತರಕನ್ನಡಜನತೆಯಬದುಕಲುಬಿಡಿ 🙏🏻..

ಅಘನಾಶಿನಿ ಉಳಿಸಿ ರೈತ ಹೋರಾಟ ಸಮೀತಿ, ಮೂರೂರು, ಕುಮಟಾ

16/01/2026

#ಉತ್ತರ_ಕನ್ನಡ ನಿನಗೆ ಈ ಹೋರಾಟಗಳು ಬೇಕೇ?

ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮರ ಸೃಷ್ಟಿಯಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ಬಹುಪಾಲು ಸೇರಿದೆ. ಆದಕಾರಣ ಈ ಭಾಗಕ್ಕೆ ಯಾವ ಕಾಲದಲ್ಲೂ ಆತಂಕ ಇಲ್ಲ ಎನ್ನುವ ಮಾತು ಬಹಳ ಹಿಂದಿನಿಂದನು ನಾವು ಕೇಳುತ್ತ ಬಂದಿದ್ದೇವೆ. ಇತ್ತೀಚಿನ ಬೆಳವಣಿಗೆಗಳಲ್ಲಿ ಎಲ್ಲಾ ಹೊಸ ಹೊಸ ಯೋಜನೆಗಳಿಗೆ ಬಲಿಪಶು ಆಗುತ್ತಾ ಇರುವುದು ಇದೆ ಉತ್ತರ ಕನ್ನಡ ಎನ್ನುವದು ಆತಂಕಕಾರಿ ಬೆಳವಣಿಗೆ ಆಗಿದೆ. ಇದಕ್ಕೆ ಕಾರಣ ಕೇಂದ್ರ, ಹಾಗೂ ರಾಜ್ಯಸರ್ಕಾರಗಳು ಅನುಷ್ಠಾನಕ್ಕೆ ತರುತ್ತ ಇರುವ 3 ಮಹತ್ವದ ಯೋಜನೆಗಳು :

1) ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (ಸಧ್ಯಕ್ಕೆ ತಡೆಯಲ್ ಪಟ್ಟ ಯೋಜನೆ )
2) ಬೇಡ್ತಿ- ವರದಾ ನದಿ ಜೋಡಣೆ ಯೋಜನೆ
3) ಅಘನಾಶಿನಿ- ವೇದಾವತಿ ನದಿ ಜೋಡಣೆ

ಇವು ಮೂರು ಯೋಜನೆಗಳಿಗೂ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇಲ್ಲಿಯವರೆಗೆ ಉತ್ತರ ಕನ್ನಡ ಏನನ್ನು ಕೊಟ್ಟಿದೆ, ಏನನ್ನು ಪಡೆದಿದೆ?

1) ಈಗಾಗಲೇ ಕೈಗಾ ಅಣುಸ್ಥಾವರ ಘಟಕಕ್ಕೆ ಜಾಗ, ಜೀವ ಎಲ್ಲವನ್ನೂ ಕೊಟ್ಟಿದ್ದು ಆಗಿದೆ. ಇದರ ವ್ಯತಿರಿಕ್ತ ಪರಿಣಾಮ ಸುತ್ತಮುತ್ತಲಿನ ಪರಿಸರದ ಜನ ಅನುಭವಿಸುತ್ತ ಇರುವುದು ಅಲ್ಲದೆ, ಬಹಳಷ್ಟು ವಿರೋಧದ ನಡುವೆ ಆದ ಯೋಜನೆಯಿಂದ ಪರಿಸರ ಕೂಡ ಬಹಳ ಸಂಕಟ ಪಡುವಂತೆ ಆಗಿದೆ.
2) ಜಲ ವಿದ್ಯುತ್ ಯೋಜನೆಗಳಿಗೆ ಜಾಗವನ್ನು ಕೊಟ್ಟಿದ್ದು ಆಗಿದೆ. ಇದರಿಂದ ನಾವು ದೊಡ್ಡ ಪ್ರಮಾಣದ ಅರಣ್ಯ ಸಂಪತ್ತನ್ನು ಕಳೆದುಕೊಂಡದ್ದು ಆಗಿದೆ.
3) ಇನ್ನೂ ಚಿಕ್ಕಪುಟ್ಟ ಯೋಜನೆಗಳು ನಮ್ಮಲ್ಲಿ ಬಹಳಷ್ಟು ಆಗಿದ್ದು ಇದರಿಂದ ಇಲ್ಲಿನ ಜನಕ್ಕೆ ಆಗಿರುವ ಅನುಕೂಲ ಬಹಳ ಕಡಿಮೆ ಎಂದು ಹೇಳಬಹುದಾಗಿದೆ.

ಇನ್ನೂ ಉತ್ತರಕನ್ನಡ ಜಿಲ್ಲೆ ಪಡೆದಿದ್ದು ಏನು ಎಂದು ಕೇಳಿದರೆ:

1) ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವ ಈ ಜಿಲ್ಲೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಂದು ಉತ್ತಮ ಗುಣಮಟ್ಟದ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಇಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಬೇರೆ ಜಿಲ್ಲೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಭಾಗ್ಯ ಈ ಜಿಲ್ಲೆಯ ಜನತೆಯದ್ದು.
2) ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನ ಅದೆಷ್ಟೋ ವರ್ಷದಿಂದ ತೋರಿಸುತ್ತ ಇರುವ ಇಲ್ಲಿನ ಜನತೆಗೆ ಉನ್ನತ ವ್ಯಾಸಂಗಕ್ಕೆ ಕಾಲೇಜು ವ್ಯವಸ್ಥೆ ಇಲ್ಲ.
3) ಹೊರ ರಾಜ್ಯ, ಹೊರ ದೇಶದಲ್ಲೂ ವಾಸವಿರುವ ಈ ಜಿಲ್ಲೆಗೆ ಏರ್ಪೋರ್ಟ್ ವ್ಯವಸ್ಥೆ ಇಲ್ಲ.

ಇಂತಹ ಅನೇಕ ಬೇಡಿಕೆಗಳು ಇದುವರೆಗೂ ಯಾವ ಸರ್ಕಾರಕ್ಕೂ ಕಾಣಿಸಲೇ ಇಲ್ಲ ಎನ್ನುವುದು ದುರಂತ. 6 MLA ಗಳನ್ನು ಒಳಗೊಂಡ ಈ ಜಿಲ್ಲೆಯ ಯಾವ MLA ಗಳಿಗೂ ಇಲ್ಲಿನ ಜನರ ಕೂಗು ಇದುವರೆಗೂ ಕೇಳಿಸಿದಂತೆ ಅನ್ನಿಸುವುದೇ ಇಲ್ಲ. ಇನ್ನೂ ಜನರ ಕೂಗು ಕೇಳಿಸದಂತೆ ಕಿವಿ ಮುಚ್ಚಿ ಕುಳಿತುಕೊಂಡು ಅಧಿಕಾರ ಅನುಭವಿಸಿದ ಎಷ್ಟೋ ಎಂಪಿಗಳನ್ನು ಪಡೆದ ಹಿರಿಮೆ ನಮ್ಮ ಜಿಲ್ಲೆಯದ್ದು ಎಂದು ಹೇಳಬಹುದು. ಇವೆಲ್ಲವನ್ನು ಗಮನಿಸಿದರೆ ಉತ್ತರಕನ್ನಡಕ್ಕೆ ಈ ಹೋರಾಟ ಅಗತ್ಯವಿದೆ ಎಂದು ಅನ್ನಿಸುತ್ತದೆ.

ಈಗ ಮೇಲೆ ಹೇಳಿದ ಹೊಸ 3 ಯೋಜನೆಯ ವಿರುದ್ಧ ಹೋರಾಟದ ಕುರಿತು ಹೇಳುವುದಾದರೆ, ಇದಕ್ಕೆ ಮೇಲ್ ನೋಟಕ್ಕೆ ಬಹಳಷ್ಟು ರಾಜಕಾರಣಿಗಳು ವಿರೋಧಿಸಿದ್ದರು, ಅನೇಕ ಪರಿಸರವಾದಿಗಳು, ಸ್ವಾಮೀಜಿಗಳು ಎಲ್ಲರೂ ಸೇರಿ ಹೋರಾಟ ನಡೆಸುತ್ತ ಇರುವುದು ಜನತೆಯ ಭಾಗ್ಯ ಮತ್ತೂ ಯೋಜನೆ ಅನುಷ್ಠಾನಕ್ಕೆ ಬಾರದಂತೆ ಆಗುವುದು ಎನ್ನುವ ಆಶಯ ಇಲ್ಲಿನ ಜನತೆಯದ್ದು. ಆದರೆ, ಈ ರಾಜಕಾರಣಿಗಳು, ಹೋರಾಟಗಾರರು, ಪರಿಸರವಾದಿಗಳು ಎಷ್ಟರ ಮಟ್ಟಿಗೆ ನಂಬಿಕೆಗೆ ಅರ್ಹರು ಎನ್ನುವುದು ಪ್ರಶ್ನೆಯಾಗಿ ಉಳಿಯುತ್ತದೆ? ಯಾಕಂದರೆ ಹಿಂದಿನ ಅನೇಕ ಹೋರಾಟಗಳಲ್ಲಿ ಇವರ ಭ್ರಷ್ಟತೆಯ ಕುರುಹು ಅಲ್ಲಲ್ಲಿ ಜನತೆಗೆ ಕಾಣಿಸಿದ್ದು ಇರುತ್ತದೆ.

ಇವರನ್ನು ನಂಬಿ ಹೋರಾಟಕ್ಕೆ ಬೀದಿಗೆ ಇಳಿಯಲು ಸಿದ್ದವಾಗಿರುವ ಜನತೆಯನ್ನೂ ನಡು ನೀರಿನಲ್ಲಿ ಕೈಬಿಟ್ಟು ತಾವು ಮಾತ್ರ ಎಲ್ಲಾ ಲಾಭಕ್ಕೂ ಪಾಲುಧಾರರಾಗಿ ಉಳಿಯದೆ ಈ ಯೋಜನೆಗಳನ್ನುತಡೆಯಲು ಸ್ವಾಮೀಜಿಗಳಂತೆ, ಜನಸಾಮಾನ್ಯರಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಈ ಎಲ್ಲಾ ಹೋರಾಟದ ನಾಯಕರುಗಳು ಎನ್ನುವ ಕಳಕಳಿಯೊಂದಿಗೆ ಈ ಬರಹ 🙏🏻..

ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ

#ಅಘನಾಶಿನಿಉಳಿಸಿ #ಶರಾವತಿಉಳಿಸಿ #ಬೇಡ್ತಿಉಳಿಸಿ
#ನಮ್ಮಉತ್ತರಕನ್ನಡಉಳಿಸಿ ಉತ್ತರ ಕನ್ನಡದ ಜನತೆಗೆ ಬದುಕಲು ಬಿಡಿ 🙏🏻...

30/10/2025

#ವಿಚಿತ್ರ ಅನ್ನಿಸಿದರು ಸತ್ಯ

ಅದೆಷ್ಟೋ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವಾಗ ಬಹಳ ವಿರೋಧ ಇರುತ್ತದೆ. ಹೆಚ್ಚಿನ ಯೋಜನೆಗಳು ಜನಮಾನಸಕ್ಕೆ (ಗಮನಕ್ಕೆ) ಬಾರದೆ, ಕನಿಷ್ಠ ಪಕ್ಷ ಆ ಭಾಗದ ಜನರ ಜೊತೆ ಚರ್ಚೆಯು ಮಾಡದೆ ಕಾರ್ಯರೂಪಕ್ಕೆ ತರುವ ಅಲ್ಲಾ ಜನರ ಮೇಲೆ ಹೇರುವ ಕಾರ್ಯ ಆಗಾಗ, ಅಲ್ಲಲ್ಲಿ ನಡೆಯುತ್ತಾ ಬರುವುದು ಸಾಮಾನ್ಯ ಆಗಿದೆ. ಆಮೇಲೆ ಹೋರಾಟ, ಜನರಿಂದನೇ ಆಯ್ಕೆ ಆದ ನಾಯಕರಿಂದಲೇ ಜನರ ಹೋರಾಟ ಹತ್ತಿಕ್ಕುವ ಪ್ರಯತ್ನ, ಇವೆಲ್ಲವೂ ನಮ್ಮ ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೆ ಸಾಮಾನ್ಯ ಅನ್ನಿಸಿ ಹೋಗಿದೆ.

ಇಂತಹ ಒಂದು ಅವೈಜ್ಞಾನಿಕ ಕಾಮಗಾರಿ jjm ಸ್ಕೀಮ್ ಇಂದ ಬಂದಾಗ ಹುಟ್ಟಿಕೊಂಡ ಸಂಘಟನೆ ಅಘನಾಶಿನಿ ಉಳಿಸಿ ಹೋರಾಟ ಸಮಿತಿ. ಇಂದು ಅಘನಾಶಿನಿ ಮೇಲೆ ಮತ್ತೆ ಒಂದು ಹೊಸ ಯೋಜನೆ ಬಂದಿರುವುದು ಮತ್ತೆ ನಮ್ಮ ಸಂಘಟನೆ ಹೋರಾಟಕ್ಕೆ ಸಜ್ಜಾಗ ಬೇಕಾಗ ಬಹುದೇನೋ ಅನ್ನಿಸುತ್ತದೆ. ಆದರೆ, ಈ ಬಾರಿ ಹೋರಾಟದಲ್ಲಿ ಕೆಲವು ಒಳ ಒಪ್ಪಂದದ ಹೋರಾಟಗಾರರನ್ನು ದೂರವಿಟ್ಟು ಕೇವಲ ಸಮಾನ ಮನಸ್ಕರು, ರೈತರು, ಮತ್ತೂ ನಿಸ್ವಾರ್ಥ ಸಮಾಜ ಸೇವಕರು, ಮತ್ತೆ ನಾಯಕರುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದು ಉತ್ತಮ ಸಂಘಟನೆ ಮತ್ತೆ ಆಗಬೇಕು ಎನ್ನುವ ಸಂಕಲ್ಪ. ಶೀಘ್ರದಲ್ಲೇ ಈ ಬಗ್ಗೆ ಚಿಂತನೆ ನಡೆಸುತ್ತೇವೆ.

ಅವೈಜ್ಞಾನಿಕ ಮತ್ತೂ ನಿರಂತರ ಉತ್ತರಕನ್ನಡ ಜಿಲ್ಲೆಗೆ ಕೊಡುತ್ತಿರುವ ಸರ್ಕಾರಿ ಯೋಜನೆಗಳ ಕಾಟವನ್ನು ತಪ್ಪಿಸಲೇ ಬೇಕಾಗಿದೆ. ಬಹು ಬೇಡಿಕೆಯ ಆಸ್ಪತ್ರೆ ಕಟ್ಟಿಸುವ, ಒಳ್ಳೊಳ್ಳೆ ವಿದ್ಯಾಸಂಸ್ಥೆ ತರುವಲ್ಲಿ ನಮ್ಮ ಚುನಾಯಿತ ನಾಯಕರುಗಳು ವಿಫಲ ಆಗುತ್ತಿರುವುದು ಸ್ಪಷ್ಟವಾಗಿ ಗೋಚರ ಆಗುತ್ತಾ ಇದೆ.

ಪ್ರಸ್ತುತ ಸಮಸ್ಯೆ ಇಂದ ಕೂಡಿರುವ ಯೋಜನೆಗಳು :
1) JJM ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಅಘನಾಶಿನಿ ನದಿ)
2) ಶರಾವತಿ PROJECT (ಶರಾವತಿ ನದಿ)
3) ಅಘನಾಶಿನಿ- ವೇದಾವತಿ ನದಿ ಜೋಡಣೆ (ಅಘನಾಶಿನಿ ನದಿಯ ಮೇಲೆ ಇನ್ನೊಂದು ಪ್ರಹಾರ)

ಇನ್ನಾದರೂ ಜನರು ಎಚ್ಚರಗೊಳ್ಳದಿದ್ದಲ್ಲಿ ಮುಂದಿನ ದಿನಗಳು ದುಸ್ತರ..

ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ

Bhaskar Patgar Suraj Naik Soni Uttara Kannada Satwadhara Newsline Uttara Kannada Ananthamurthy Hegde Abhimani Balaga Vistara News

18/09/2025


#ಶರಾವತಿಉಳಿಸಿ

ನಾವು ಇತ್ತೀಚಿನ ಕೆಲವು ದಿನಗಳಿಂದ ಕೇಳುತ್ತ ಇರಬಹುದು ಶರಾವತಿ ಯೋಜನೆಯ ಬಗ್ಗೆ ಮತ್ತೂ ಅದರ ತೀವ್ರತೆ, ಹೋರಾಟ ಮುಂತಾದ ವಿಚಾರವನ್ನು ಮಾಧ್ಯಮ, ಸೋಶಿಯಲ್ ಮೀಡಿಯಾ ಎಲ್ಲಕಡೆ ನೋಡುತ್ತಾ ಇದ್ದೇವೆ. ನಿಜವಾಗಿ ಇದು ಬೇಕಾ? ಈ ಯೋಜನೆ ಅವಶ್ಯಕತೆ ಇದೆಯಾ? ನಿರಂತರವಾಗಿ ನಮ್ಮ ಉತ್ತರಕನ್ನಡ ಜಿಲ್ಲೆ ಈ ಸರ್ಕಾರಗಳ ಯೋಜನೆಗಳಿಂದ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇದೆ ಎಂದು ಅನ್ನಿಸುವುದಿಲ್ಲವೇ? ಇಲ್ಲಿಯತನಕ ನಾವು ಕೊಟ್ಟಿರುವುದು ಎಷ್ಟು? ಕಾರವಾರದ ಕೈಗಾ ಇಂದ ಹಿಡಿದು, ಶರಾವತಿಯ ಮೇಲೆ ವಿವಿಧ ಯೋಜನೆಗಳ ತನಕ ನೀಡುತ್ತಲೇ ಬಂದಿದ್ದರೂ ಕೂಡ ಮತ್ತೆ ಮತ್ತೆ ಈ ಹೇರಿಕೆ ನಮ್ಮ ಮೇಲೆ ಯಾಕೆ? ಸಂಪೂರ್ಣ ಉತ್ತರಕನ್ನಡ ನಾಶಮಾಡುವ ಹುನ್ನಾರವೇ? ಹೇಗೆ ಬದುಕಬೇಕು? ನಾವು ಮನುಷ್ಯರಲ್ಲವೇ? ತೀವ್ರ ಅವಶ್ಯಕತೆ ಇರುವ ಒಂದು ಮಲ್ಟಿಸ್ಪೆಷಲಿಟಿ ಹಾಸ್ಪಿಟಲ್ ನಮಗೆ ನೀಡಲು ಈ ಸರ್ಕಾರಗಳಿಗೆ ಆಗಲಿಲ್ಲ, ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ನೀಡಲು ಇವರಿಗೆ ಉತ್ತರಕನ್ನಡ ಕಾಣಲೇ ಇಲ್ಲ. ವಿವಿಧ ಉದ್ಯಮಗಳ ಸ್ಥಾಪನೆ ಮಾಡಲು ನಮ್ಮ ಜಿಲ್ಲೆ ಇವರಿಗೆ ದೂರ ಆಯಿತು. ಇಂತಹ ಪರಿಸರ, ಜೀವಿಗಳ ನಾಶ, ಜನ ಜೀವನದ ಮೇಲೆ ಒತ್ತಡ, ಹೇರಿಕೆ ನೀಡುವ ವಿಚಾರಗಳಿಗೆ ಮಾತ್ರ ಉತ್ತರಕನ್ನಡ ಕಾಣುವುದೇ ಎನ್ನುವುದೇ ದೊಡ್ಡ ಪ್ರಶ್ನೆ.

ಒಮ್ಮೆ ಯೋಚಿಸಿ, ಪ್ರತಿಯೊಬ್ಬರಿಗೂ ವಿದ್ಯುತ್ ಬೇಕು ಒಪ್ಪೋಣ, ಅದಕ್ಕೆ ಇಂತಹ ಯೋಜನೆಗಳೇ ಬೇಕು ಎನ್ನುವುದು ಇಲ್ಲವಲ್ಲ?!! ಈಗಾಗಲೇ ಕೇಂದ್ರ ಸರ್ಕಾರ ಸೂರ್ಯಘರ್ ಅಂತ ಉತ್ತಮ ಯೋಜನೆಯನ್ನು ಕೊಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿಯನ್ನೂ ಯಾವ ವಿಳಂಬ ಮಾಡದೆ ನೀಡುತ್ತಾ ಇದೆ. ಮನೆ ಮನೆಗೂ ಸೌರ ಶಕ್ತಿಯ ಬಳಕೆಯ ದ್ಯೇಯವನ್ನೂ ಇದು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಬಹಳ ಕಡಿಮೆ ಬಡ್ಡಿದರಲ್ಲಿ ಅಳವಡಿಸುವ ಆಸಕ್ತಿ ಉಳ್ಳವರಿಗ ಸಾಲ ಸೌಲಭ್ಯವನ್ನು ನೀಡುತ್ತಾ ಬಂದಿದೆ. ಹೀಗಿರುವಾಗ ಈ ಯೋಜನೆಗೆ ಯಾಕೆ ರಾಜ್ಯಸರ್ಕಾರ ಕೈಜೋಡಿಸಬಾರದು? ಕೇಂದ್ರದ ಸಬ್ಸಿಡಿ ಜೊತೆ ರಾಜ್ಯದ ಸಬ್ಸಿಡಿ ಮೊತ್ತವನ್ನು ಸೇರಿಸಿದರೆ ಅಳವಡಿಸಿ ಕೊಳ್ಳುವವರ ಸಂಖ್ಯೆ ಬಹಳ ದೊಡ್ಡ ಮಟ್ಟದಲ್ಲಿ ಏರಿಕೆ ಆಗುವುದಿಲ್ಲವೇ? ಆಗ ಸ್ವಭಾವಿಕವಾಗಿ ವಿದ್ಯುತ್ ಸಮಸ್ಯೆ ಬಗೆಹರಿಯುವುದಿಲ್ಲವೇ?

ಒಂದು ಸಾಮಾನ್ಯ ಮನೆಗೆ ಒಂದು ದಿನಕ್ಕೆ ಬೇಕಾಗುವ ವಿದ್ಯುತ್ ಪ್ರಮಾಣ 5 ರಿಂದ 10 ಯೂನಿಟ್. ಒಂದು 3kw ಸೋಲಾರ್ ವಿದ್ಯುತ್ ಘಟಕ ಆರಂಭಿಸಿದರೆ 12 ರಿಂದ 15 ಯೂನಿಟ್ ತನಕ ವಿದ್ಯುತ್ ಉತ್ಪಾದನೆ ಆಗುತ್ತದೆ. ಅಂದರೆ ಇಂತಹ ಒಂದು ಸಣ್ಣ ಘಟಕದಿಂದ 2 ಸಾಮಾನ್ಯ ಮನೆಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದನೆ ಆಗುತ್ತದೆ. ಇಂತಹ ಯೋಜನೆಗಳನ್ನು ಉತ್ತೇಜಸುವುದನ್ನ ಬಿಟ್ಟು ಅವೈಜ್ಞಾನಿಕ, ಪರಿಸರ ಹಾನಿ ಮಾಡುವ ಯೋಜನೆ ಕೈಗೆತ್ತುಕೊಳ್ಳುವುದು ಸಮಂಜಸವೇ? ಸೋಲಾರ್ ಅಳವಡಿಕೆಗೆ ಹೆಚ್ಚಿನ ಆದ್ಯತೆ, ಪ್ರೋತ್ಸಾಹ ನೀಡಿ, ಹೆಚ್ಚು ಇಂತಹ ಯೋಜನೆ ಅಳವಡಿಸಿ ಕೊಳ್ಳುವ ಊರಿಗೆ ಸರ್ಕಾರದಿಂದ ವಿಶೇಷ ಹೆಚ್ಚೀನ ಅನುದಾನ ನೀಡಿ, ಜನರು ಅವರ ಪಾಲಿನ ಹಣವನ್ನು ಹಾಕಿ ಇದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಇಂತಹ ಯೋಜನೆಗಳ ಅವಶ್ಯಕತೆ ತಾನೆ ಎಲ್ಲಿರುವದು?

ದಯಮಾಡಿ ಯೋಚಿಸಿ.. 🙏🏻 ಜನರು ಇದನ್ನು ಯೋಚಿಸುವ ಅನಿವಾರ್ಯತೆ ಇದೆ.

Address

Muroor
Kumta
581343

Website

Alerts

Be the first to know and let us send you an email when ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ posts news and promotions. Your email address will not be used for any other purpose, and you can unsubscribe at any time.

Shortcuts

Share

Category