Uday K M Kadaluru

Uday K M Kadaluru Official Page Of Uday K M
ಶಾಸಕರು, ಮದ್ದೂರು ವಿಧಾನಸಭಾ ಕ್ಷೇತ್ರ Official page of Uday K M
Founder of kadaluru uday charitable trust(r)

ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದ ಹಾರ್ದಿಕ ಶುಭಾಶಯಗಳು! 🏭ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಮಟ್ಟದ ಸ್ವಾವಲಂಬನೆಗೆ ಸಣ್ಣ ಕ...
30/08/2026

ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದ ಹಾರ್ದಿಕ ಶುಭಾಶಯಗಳು! 🏭

ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಮಟ್ಟದ ಸ್ವಾವಲಂಬನೆಗೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ. ನವೋದ್ಯಮ, ಪರಿಶ್ರಮ ಹಾಗೂ ಉದ್ಯಮಶೀಲತೆಯ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಿರುವ ಎಲ್ಲಾ ಸಣ್ಣ ಕೈಗಾರಿಕೋದ್ಯಮಿಗಳಿಗೆ ಈ ದಿನ ಸಮರ್ಪಿತವಾಗಿದೆ.

ನಮ್ಮ ಸಣ್ಣ ಕೈಗಾರಿಕೆಗಳು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ, ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿ, ಸ್ಥಳೀಯ ಪ್ರತಿಭೆ ಹಾಗೂ ಸಂಪನ್ಮೂಲಗಳಿಗೆ ಹೊಸ ಅವಕಾಶಗಳು ದೊರೆಯಲಿ.

ಪ್ರತಿಯೊಬ್ಬ ಉದ್ಯಮಿಯ ಕನಸು, ಪರಿಶ್ರಮ ಮತ್ತು ಸಂಕಲ್ಪಗಳು ಯಶಸ್ಸಿನ ಶಿಖರ ತಲುಪಲಿ ಎಂದು ಹಾರೈಸುತ್ತೇನೆ.

ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲಾ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕ ಬಂಧುಗಳಿಗೆ ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದ ಹಾರ್ದಿಕ ಶುಭಾಶಯಗಳು.

ಸಣ್ಣ ಕೈಗಾರಿಕೆಗಳ ಬೆಳವಣಿಗೆ — ದೇಶದ ಆರ್ಥಿಕ ಬಲವರ್ಧನೆ!

# ಉದ್ಯಮಶೀಲತೆ #ಸಣ್ಣಕೈಗಾರಿಕೆ #ಸ್ವಾವಲಂಬನೆ #ಉದ್ಯೋಗಸೃಷ್ಟಿ

🪔 ಮದ್ದೂರಿನಲ್ಲಿ ಅದ್ದೂರಿ ಗಣೇಶೋತ್ಸವ – 2026 🐘ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಗೌರಿ-ಗಣೇಶ ಹಬ್ಬದ ಪ...
30/08/2026

🪔 ಮದ್ದೂರಿನಲ್ಲಿ ಅದ್ದೂರಿ ಗಣೇಶೋತ್ಸವ – 2026 🐘

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮದ್ದೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 20, 2026ರವರೆಗೆ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗಣೇಶೋತ್ಸವದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಹಾಗೂ ಅಗತ್ಯ ವ್ಯವಸ್ಥೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು.

ನಾಡಿನ ಸಾಂಸ್ಕೃತಿಕ ಪರಂಪರೆ ಹಾಗೂ ಭಕ್ತಿ-ಭಾವವನ್ನು ಸಾರುವ ಈ ಗಣೇಶೋತ್ಸವವು ಮದ್ದೂರಿನ ಜನತೆಗೆ ಸಂಭ್ರಮದ ಕ್ಷಣಗಳನ್ನು ನೀಡುವುದರ ಜೊತೆಗೆ, ಸಾರ್ವಜನಿಕರ ಸಹಭಾಗಿತ್ವ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಹಬ್ಬವಾಗಿ ಯಶಸ್ವಿಯಾಗಲಿ ಎಂಬ ಆಶಯ ನಮ್ಮದು.

ಎಲ್ಲರ ಸಹಕಾರದೊಂದಿಗೆ ಗಣೇಶೋತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ವಿಘ್ನ ವಿನಾಶಕ ಶ್ರೀ ಗಣೇಶನ ಕೃಪೆ ಎಲ್ಲರ ಮೇಲೂ ಸದಾ ಇರಲಿ. 🙏🐘

#ಗಣೇಶೋತ್ಸವ2026 #ಮದ್ದೂರು #ಗೌರಿಗಣೇಶ #ವಿಘ್ನವಿನಾಯಕ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಹಾರ್ದಿಕ ಶುಭಾಶಯಗಳು .ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ, ಸದಾ ಸನ್ಮಾರ್ಗದ ಬೆಳಕನ್ನು ತ...
30/08/2026

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಹಾರ್ದಿಕ ಶುಭಾಶಯಗಳು .

ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ, ಸದಾ ಸನ್ಮಾರ್ಗದ ಬೆಳಕನ್ನು ತೋರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಅನುಗ್ರಹವು ಎಲ್ಲರ ಮೇಲೂ ಸದಾ ಇರಲಿ.

ಗುರುರಾಯರ ಕೃಪೆಯಿಂದ ಪ್ರತಿಯೊಂದು ಮನೆ-ಮನಗಳಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ. ಎಲ್ಲರ ಬದುಕಿನಲ್ಲಿ ಸಂತೋಷ ಹಾಗೂ ಸೌಹಾರ್ದತೆ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಿಗೆ ಭಕ್ತಿಪೂರ್ವಕ ನಮನಗಳು.

ಶ್ರೀ ಗುರು ರಾಘವೇಂದ್ರಾಯ ನಮಃ!

#ಆರಾಧನಾ_ಮಹೋತ್ಸವ #ಗುರುರಾಯರು #ರಾಯರ_ಕೃಪೆ

ಮನೆಮನಗಳಲ್ಲಿ ಗೃಹಲಕ್ಷ್ಮಿಯರ ಹರ್ಷೋಲ್ಲಾಸ! ನಾಡಿನ ಮಹಿಳೆಯರ ಬದುಕಿಗೆ ಆರ್ಥಿಕ ಆಸರೆಯಾಗಿ, ಕುಟುಂಬದ ನಿರ್ವಹಣೆಯಲ್ಲಿ ನೆರವಾಗುತ್ತಿರುವ ಗೃಹಲಕ್ಷ...
30/08/2026

ಮನೆಮನಗಳಲ್ಲಿ ಗೃಹಲಕ್ಷ್ಮಿಯರ ಹರ್ಷೋಲ್ಲಾಸ!

ನಾಡಿನ ಮಹಿಳೆಯರ ಬದುಕಿಗೆ ಆರ್ಥಿಕ ಆಸರೆಯಾಗಿ, ಕುಟುಂಬದ ನಿರ್ವಹಣೆಯಲ್ಲಿ ನೆರವಾಗುತ್ತಿರುವ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ.

ರಾಜ್ಯದ 1.2 ಕೋಟಿಗೂ ಅಧಿಕ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ಒದಗಿಸುವ ಮೂಲಕ, ಮಹಿಳೆಯರ ಸ್ವಾವಲಂಬನೆ ಹಾಗೂ ಸಬಲೀಕರಣಕ್ಕೆ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ. ಇದುವರೆಗೆ ₹76,500 ಕೋಟಿಗೂ ಅಧಿಕ ಆರ್ಥಿಕ ನೆರವು ನೀಡಲಾಗಿದ್ದು, ಕೋಟ್ಯಂತರ ಕುಟುಂಬಗಳ ಬದುಕಿಗೆ ಭದ್ರತೆಯ ಭರವಸೆ ನೀಡಿದೆ.

ಮಹಿಳೆಯರ ಕೈಗೆ ಆರ್ಥಿಕ ಶಕ್ತಿ ನೀಡಿದಾಗ ಕುಟುಂಬವೂ ಸಬಲವಾಗುತ್ತದೆ, ಸಮಾಜವೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ.

ಮಹಿಳಾ ಸಬಲೀಕರಣವೇ ಕುಟುಂಬದ ಸಬಲೀಕರಣ — ಗೃಹಲಕ್ಷ್ಮಿಯರ ಸಂತೋಷವೇ ನಮ್ಮ ಹೆಮ್ಮೆ!

#3ವರ್ಷ_ಗೃಹಲಕ್ಷ್ಮಿಯರ_ಹರ್ಷ #ಗೃಹಲಕ್ಷ್ಮಿ #ಮಹಿಳಾಸಬಲೀಕರಣ #ಕರ್ನಾಟಕ

30/08/2026

ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟದ ಸ್ಥಳಕ್ಕೆ ಭೇಟಿ ಹಾಗೂ ಸ್ಪಂದನೆ.

ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ, ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಕಳೆದ 251 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ 2ನೇ ಬಾರಿಗೆ ಭೇಟಿ ನೀಡಿ, ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಲಾಯಿತು.

ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಯಿಂದ ಕೈಬಿಡುವಂತೆ ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.

ಈ ಕುರಿತು ಮುಂದಿನ ಒಂದು ವಾರದೊಳಗೆ ವಿಧಾನಸೌಧದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖ ಹೋರಾಟಗಾರರೊಂದಿಗೆ ಸಭೆ ನಡೆಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯಾಗಿರಲಿ ಅಥವಾ ನಗರಸಭೆಯ ವ್ಯಾಪ್ತಿಗೆ ಬಂದಿರಲಿ, ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ನ್ಯಾಯಯುತ ಬೇಡಿಕೆಗಳಿಗೆ ಪರಿಹಾರ ಕಲ್ಪಿಸುವುದು ನನ್ನ ಜವಾಬ್ದಾರಿ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುನಂದ ಜಯರಾಮು, ಜಿ.ಹೆಚ್. ವೀರಪ್ಪ, ಗುರುಮೂರ್ತಿ, ಜಿ.ಟಿ. ಚಂದ್ರಶೇಖರ್, ಶಾಂತಮ್ಮ, ಗೌರಮ್ಮ, ಜಯಮ್ಮ, ಹೊನ್ನಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೆಜ್ಜಲಗೆರೆಯ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಆದ್ಯತೆ.

#ಮದ್ದೂರು #ಗೆಜ್ಜಲಗೆರೆ #ಮಂಡ್ಯ #ಅಭಿವೃದ್ಧಿ

ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟದ ಸ್ಥಳಕ್ಕೆ ಭೇಟಿ ಹಾಗೂ ಸ್ಪಂದನೆ.ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವು...

“ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಧ್ಯೇಯ”ಮದ್ದೂರು ನಗರಸಭೆ ವ್ಯಾಪ್ತಿಯ ಗೆಜ್ಜಲಗೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ₹20 ಲ...
30/08/2026

“ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಧ್ಯೇಯ”

ಮದ್ದೂರು ನಗರಸಭೆ ವ್ಯಾಪ್ತಿಯ ಗೆಜ್ಜಲಗೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ₹20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಈ ಅಭಿವೃದ್ಧಿ ಕಾಮಗಾರಿಯಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ. ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರ ಸಂಚಾರವನ್ನು ಸುಲಭವಾಗಿ ಕೈಗೊಳ್ಳುವುದರ ಜೊತೆಗೆ, ಉತ್ತಮ ಆರೋಗ್ಯಕ್ಕೆ ಉತ್ತೇಜನ ದೊರೆಯಲಿದೆ.

ಕ್ಷೇತ್ರದ ಅಭಿವೃದ್ಧಿ ಕೇವಲ ಮಾತಿನಲ್ಲಿ ಅಲ್ಲ, ಕಾರ್ಯರೂಪದಲ್ಲಿಯೂ ನಡೆಯುತ್ತಿದೆ ಎಂಬುದಕ್ಕೆ ಈ ಕಾಮಗಾರಿ ಮತ್ತೊಂದು ಸಾಕ್ಷಿಯಾಗಿದೆ. ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸಿ, ಅವರ ಬದುಕಿಗೆ ನೇರವಾಗಿ ಅನುಕೂಲವಾಗುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರವಾಗಿ ಆದ್ಯತೆ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಜನರ ಆಶಯಗಳಿಗೆ ಸ್ಪಂದಿಸುವ ಅಭಿವೃದ್ಧಿ ಕಾರ್ಯಗಳೇ ನನ್ನ ಆದ್ಯತೆ — ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದೇ ನನ್ನ ಧ್ಯೇಯ.

#ಮದ್ದೂರು #ಮಂಡ್ಯ #ಅಭಿವೃದ್ಧಿ

30/08/2026

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಮದ್ದೂರು ನಗರಸಭೆ ವ್ಯಾಪ್ತಿಯ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮಗಳಲ್ಲಿ ರಸ್ತೆ ಮತ್ತು ನಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜು ₹3.30 ಕೋಟಿ ವೆಚ್ಚದಲ್ಲಿ ಮುಖಂಡರೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಮದ್ದೂರು ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಉಪ ಲೋಕಾಯುಕ್ತರು ಪರಿಶೀಲನೆ ನಡೆಸಿ, ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸುಮೋಟೋ ಪ್ರಕರಣಗಳನ್ನು ದಾಖಲಿಸಿರುವುದು ಗಮನಕ್ಕೆ ಬಂದಿದೆ. ತಪ್ಪಿತಸ್ಥರು ಕಂಡುಬಂದಲ್ಲಿ ಕೇವಲ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.

ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡರೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ. ಕೆಲವೊಮ್ಮೆ ಸಾರ್ವಜನಿಕರೂ ತಮ್ಮ ತುರ್ತು ಕೆಲಸಗಳನ್ನು ಶೀಘ್ರವಾಗಿ ಮಾಡಿಸಿಕೊಳ್ಳುವ ಉದ್ದೇಶದಿಂದ ಲಂಚದ ಆಮಿಷ ನೀಡುತ್ತಿರುವುದು ಕಂಡುಬರುತ್ತದೆ.

ಆದ್ದರಿಂದ ಸಾರ್ವಜನಿಕರು ಕೂಡ ಯಾವುದೇ ಕೆಲಸಕ್ಕಾಗಿ ಲಂಚ ನೀಡದೆ, ತಮ್ಮ ಹಕ್ಕಿನ ಕೆಲಸಗಳನ್ನು ನ್ಯಾಯಯುತವಾಗಿ ಪಡೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ಲಂಚ ಸ್ವೀಕರಿಸದಿರುವುದು ಎಷ್ಟು ಮುಖ್ಯವೋ, ಸಾರ್ವಜನಿಕರು ಲಂಚ ನೀಡದಿರುವುದೂ ಅಷ್ಟೇ ಮುಖ್ಯ. ಈ ಮೂಲಕ ಮಾತ್ರ ಲಂಚಮುಕ್ತ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ.

ಲೋಕಾಯುಕ್ತ ಅಧಿಕಾರಿಗಳು ಕೆಲವು ಕಡೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಸೂಳೆಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ಕಳಪೆ ಕಾಮಗಾರಿ ನಡೆಯುತ್ತಿಲ್ಲ. ನಾನೂ ಸಹ ಆಗಾಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ.

ಕೆರೆ ಏರಿ ನಿರ್ಮಾಣಕ್ಕೆ ಕೆರೆಯ ಮಣ್ಣನ್ನೇ ಬಳಸಲಾಗಿದೆ. ಸದ್ಯ ಮಳೆಗಾಲವಾಗಿರುವುದರಿಂದ ಅಲ್ಲಲ್ಲಿ ಕೆರೆಯ ಮಣ್ಣು ಸ್ವಲ್ಪ ಕುಸಿದಿರುವುದು ಕಂಡುಬಂದಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಗುಣಮಟ್ಟವನ್ನು ಯಾರೇ ಆಗಲಿ ಪರಿಶೀಲಿಸಬಹುದು.

ಸಚಿವ ನಾಗೇಂದ್ರ ಅವರು ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬ ಉದ್ದೇಶದಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಪಕ್ಷಗಳ ಹೋರಾಟಕ್ಕೆ ಮಣಿದು ಅವರು ರಾಜೀನಾಮೆ ನೀಡಿಲ್ಲ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಹೈಕಮಾಂಡ್ ಕೂಡ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿಲ್ಲ. ಅವರು ತಮ್ಮ ಸ್ವಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ. ಸಂದರ್ಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹರೀಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಶಂಕರೇಗೌಡ, ಮುಖಂಡರಾದ ಮಧುಕುಮಾರ್, ರಾಘವ, ಪ್ರದೀಪ್, ಹಿತೇಶ್, ಮಹದೇವಯ್ಯ, ಮರಿದೇವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮದ್ದೂರು ನಗರಸಭೆ ವ್ಯಾಪ್ತಿಯ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮಗಳಲ್...

ರಾಷ್ಟ್ರೀಯ ಕ್ರೀಡಾ ದಿನನಾಡಿನ ಸಮಸ್ತ ಕ್ರೀಡಾಪ್ರಿಯರಿಗೆ ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ...
29/08/2026

ರಾಷ್ಟ್ರೀಯ ಕ್ರೀಡಾ ದಿನ

ನಾಡಿನ ಸಮಸ್ತ ಕ್ರೀಡಾಪ್ರಿಯರಿಗೆ ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ‘ರಾಷ್ಟ್ರೀಯ ಕ್ರೀಡಾ ದಿನ’ದ ಹಾರ್ದಿಕ ಶುಭಾಶಯಗಳು.

ರಾಷ್ಟ್ರೀಯ ಕ್ರೀಡಾ ದಿನದಂದು ಹಾಕಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆಗೈದು, ತಮ್ಮ ಅದ್ಭುತ ಪ್ರತಿಭೆ, ಶಿಸ್ತು ಹಾಗೂ ಸಮರ್ಪಣೆಯ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದ ಮೇಜರ್ ಧ್ಯಾನ್‌ಚಂದ್ ಅವರಿಗೆ ಗೌರವಪೂರ್ವಕ ನಮನಗಳು. ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತೀಯ ಹಾಕಿಯ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ಅವರ ಸಾಧನೆ ನಮ್ಮ ಕ್ರೀಡಾ ಇತಿಹಾಸದ ಹೆಮ್ಮೆಯ ಅಧ್ಯಾಯವಾಗಿದೆ.

ಕ್ರೀಡೆ ನಮ್ಮಲ್ಲಿ ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ, ನಿರ್ಣಯಶಕ್ತಿ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುತ್ತದೆ. ಗೆಲುವು–ಸೋಲಿಗಿಂತಲೂ ಕ್ರೀಡೆಯಲ್ಲಿ ಭಾಗವಹಿಸುವ ಸಂತೋಷ, ಸ್ಪರ್ಧಾತ್ಮಕ ಮನೋಭಾವ ಹಾಗೂ ನಮ್ಮ ಶಕ್ತಿಮೀರಿ ಉತ್ತಮ ಸಾಧನೆ ಮಾಡಲು ಮಾಡುವ ಪ್ರಯತ್ನವೇ ಕ್ರೀಡೆಯ ನಿಜವಾದ ಸ್ಫೂರ್ತಿ.

ಕರ್ನಾಟಕವು ಅಪಾರ ಕ್ರೀಡಾ ಪ್ರತಿಭೆಗಳ ತವರೂರು. ರಾಜ್ಯದ ಪ್ರತಿಯೊಂದು ಭಾಗದಲ್ಲಿರುವ ಯುವ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ, ಉತ್ತಮ ಮೂಲಸೌಕರ್ಯ ಹಾಗೂ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಯುವ ಪ್ರತಿಭೆಗಳಿಗೆ ಅಗತ್ಯ ಬೆಂಬಲ ಹಾಗೂ ವೇದಿಕೆ ಒದಗಿಸುವ ಮೂಲಕ ಬಲಿಷ್ಠ ಕ್ರೀಡಾ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಶ್ರಮಿಸೋಣ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಕನಸು ಕಾಣುತ್ತಿರುವ ಪ್ರತಿಯೊಬ್ಬ ಯುವ ಕ್ರೀಡಾಪಟುವಿಗೂ ನನ್ನ ಹಾರೈಕೆಗಳು — ಗುರಿಯತ್ತ ಬದ್ಧತೆಯಿಂದ ಮುನ್ನಡೆಯಿರಿ, ಪ್ರತಿಯೊಂದು ಸವಾಲನ್ನು ಅವಕಾಶವಾಗಿ ಸ್ವೀಕರಿಸಿ, ಶ್ರೇಷ್ಠತೆಯತ್ತ ನಿರಂತರವಾಗಿ ಶ್ರಮಿಸಿ. ನಿಮ್ಮ ಪಯಣ ಕರ್ನಾಟಕದ ಕ್ರೀಡಾಂಗಣದಿಂದ ಆರಂಭವಾಗಿರಬಹುದು; ಆದರೆ ನಿಮ್ಮ ಪರಿಶ್ರಮ ಮತ್ತು ಸಂಕಲ್ಪಕ್ಕೆ ಯಾವುದೇ ಮಿತಿಯಿಲ್ಲ.

ಎಲ್ಲರಿಗೂ ರಾಷ್ಟ್ರೀಯ ಕ್ರೀಡಾ ದಿನದ ಹಾರ್ದಿಕ ಶುಭಾಶಯಗಳು! 🏅🏆

Address

Maddur
571429

Telephone

+917411544919

Website

Alerts

Be the first to know and let us send you an email when Uday K M Kadaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Uday K M Kadaluru:

Shortcuts

Share