Netaji Brigade Kestur

Netaji Brigade Kestur Contact information, map and directions, contact form, opening hours, services, ratings, photos, videos and announcements from Netaji Brigade Kestur, Social service, Kestur, Tumkur Taluk, Maddur.

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆಭಕ್ತಿಪೂರ್ವಕ ನಮನಗಳು 🙏
01/04/2026

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ
ಭಕ್ತಿಪೂರ್ವಕ ನಮನಗಳು 🙏

23rd March — Martyrs’ Day 🇮🇳A tribute to the fearless souls who gave everything for the nation. Their sacrifice is our s...
23/03/2026

23rd March — Martyrs’ Day 🇮🇳

A tribute to the fearless souls who gave everything for the nation. Their sacrifice is our strength, their courage our inspiration.

We salute Bhagat Singh, Shivaram Rajguru, Sukhdev Thapar 🙏

21/03/2026

ಪರಮಪೂಜ್ಯ ಸ್ವಾಮೀಜಿಗಳ ದಿವ್ಯ ಸಂಕಲ್ಪ

ಭಕ್ತರ ಸಹಕಾರ

ಶಾಶ್ವತ ಸೇವೆಯ ಸುಂದರ ರೂಪ 🙏

#ಸಿದ್ದರಬೆಟ್ಟ

ತುಮಕೂರಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ, ಮಧ್ಯಭಾಗದಲ್ಲಿ ಮೆಟ್ಟಿಲುಗಳಿಲ್ಲದ ಕಾರಣ ಭಕ್ತಾದಿಗಳು ಬೆಟ್ಟ ಹತ್ತುವ ವೇಳೆ...
20/03/2026

ತುಮಕೂರಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ, ಮಧ್ಯಭಾಗದಲ್ಲಿ ಮೆಟ್ಟಿಲುಗಳಿಲ್ಲದ ಕಾರಣ ಭಕ್ತಾದಿಗಳು ಬೆಟ್ಟ ಹತ್ತುವ ವೇಳೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು.

ಈ ಸಮಸ್ಯೆಯನ್ನು ಮನಗಂಡು, ಭಕ್ತಾದಿಗಳು ಯಾವುದೇ ಅಡಚಣೆ ಇಲ್ಲದೆ ಕ್ಷೇತ್ರನಾಥ ಶ್ರೀ ಸಿದ್ದೇಶ್ವರರ ದರ್ಶನ ಪಡೆಯುವಂತೆ ಬೆಟ್ಟ ಹತ್ತಲು ಅನುಕೂಲವಾಗಬೇಕು ಎಂಬ ದಿವ್ಯ ಸಂಕಲ್ಪದೊಂದಿಗೆ,
ಪರಮಪೂಜ್ಯ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸುಮಾರು ಮೂರು ವರ್ಷಗಳ ಹಿಂದೆ ಈ ಮಹತ್ತರ ಕಾರ್ಯವನ್ನು ಆರಂಭಿಸಿದರು.

ನೂರಾರು ಭಕ್ತಾದಿಗಳ ಸಹಕಾರದೊಂದಿಗೆ, ಕಳೆದ 2–3 ವರ್ಷಗಳಿಂದ ನಿರಂತರವಾಗಿ ಮತ್ತು ಎಡಬಿಡದೆ ನಡೆದ ಈ ಮೆಟ್ಟಿಲು ನಿರ್ಮಾಣ ಕಾರ್ಯದ ಫಲವಾಗಿ, ಪ್ರಸ್ತುತ ಭಾಗಶಃ ಮೆಟ್ಟಿಲುಗಳ ನಿರ್ಮಾಣ ಪೂರ್ಣಗೊಂಡಿದ್ದು, ಜೊತೆಗೆ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ.

ಈ ಶಾಶ್ವತ ಪುಣ್ಯಕಾರ್ಯವನ್ನು ಸಂಕಲ್ಪಿಸಿ, ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವುದು ಸ್ವಾಮೀಜಿಯವರ ಧರ್ಮಮಾರ್ಗದ ಸಮಾಜಸೇವೆ, ದೃಢ ಸಂಕಲ್ಪ ಹಾಗೂ ದಿವ್ಯ ಚಿಂತನೆಗಳ ಪ್ರತೀಕವಾಗಿದೆ.

ಇಂತಹ ಪವಿತ್ರ ಕಾರ್ಯಗಳ ದಿವ್ಯ ಚಿಂತನೆಯುಳ್ಳ ಸ್ವಾಮೀಜಿಗಳು ನಮ್ಮ ಭಾಗದಲ್ಲಿ ನೆಲೆಸಿರುವುದು ನಮ್ಮೆಲ್ಲರ ಮಹಾ ಭಾಗ್ಯವೆಂದು ಭಾವಿಸುತ್ತಾ,
🙏 ಪೂಜ್ಯ ಸ್ವಾಮೀಜಿಗಳ ಪಾದಪಂಕ್ತಿಗಳಲ್ಲಿ ಸಮಸ್ತ ಭಕ್ತಾದಿಗಳ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
Siddarabetta B Math

ನಿಮ್ಮ ಸಮಾಜಸೇವೆ ಮತ್ತು ದಿವ್ಯ ಚಿಂತನೆಗಳು, ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ಇನ್ನೂ ಅನೇಕ ಪುಣ್ಯಕಾರ್ಯಗಳು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

🌺 ಶ್ರೀಗಳ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ 🌺

— ನೇತಾಜಿ ಬ್ರಿಗೇಡ್, ಕೆಸ್ತೂರು

ಶಾಂತಿ, ಶಿಸ್ತು ಮತ್ತು ಸಂಸ್ಕಾರಗಳ ಬೆಳವಣಿಗೆಗೆ ಯೋಗ 🙏ಮಕ್ಕಳಲ್ಲಿ ಆರೋಗ್ಯ, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಸುಂದರ ಕ್ಷಣಗಳು 🌱🧘‍♂️ಸ....
10/01/2026

ಶಾಂತಿ, ಶಿಸ್ತು ಮತ್ತು ಸಂಸ್ಕಾರಗಳ ಬೆಳವಣಿಗೆಗೆ ಯೋಗ 🙏

ಮಕ್ಕಳಲ್ಲಿ ಆರೋಗ್ಯ, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಸುಂದರ ಕ್ಷಣಗಳು 🌱🧘‍♂️

ಸ. ಹಿ. ಪ್ರಾ. ಪಾಠ ಶಾಲೆ, ಕೆಸ್ತೂರು, ತುಮಕೂರು ತಾ.

ಕೆಸ್ತೂರು ಸರ್ಕಾರಿ ಶಾಲೆಯ ಶಿಕ್ಷಕರಿಂದ ಕಲ್ಪವೃಕ್ಷಗಳ ನಾಟಿ – ಫಲವನ್ನು ಮಕ್ಕಳ ಕಲ್ಯಾಣಕ್ಕೆ ಬಳಕೆ ಮಾಡುವ ಸಂಕಲ್ಪಇಂದು ಶಾಲಾ ಆವರಣದಲ್ಲಿ ಶಿಕ್ಷ...
04/12/2025

ಕೆಸ್ತೂರು ಸರ್ಕಾರಿ ಶಾಲೆಯ ಶಿಕ್ಷಕರಿಂದ ಕಲ್ಪವೃಕ್ಷಗಳ ನಾಟಿ – ಫಲವನ್ನು ಮಕ್ಕಳ ಕಲ್ಯಾಣಕ್ಕೆ ಬಳಕೆ ಮಾಡುವ ಸಂಕಲ್ಪ

ಇಂದು ಶಾಲಾ ಆವರಣದಲ್ಲಿ ಶಿಕ್ಷಕರು ಮತ್ತು SDMC ಸದಸ್ಯರು ಕಲ್ಪವೃಕ್ಷಗಳನ್ನು ನಾಟಿ ಮಾಡಿ, ಅವುಗಳನ್ನು ಆರೈಕೆ ಮಾಡುವ ಜವಾಬ್ದಾರಿ ಸಹ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಮರಗಳಿಂದ ದೊರೆಯುವ ಫಲಗಳನ್ನು ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಊಟದಲ್ಲಿ ಬಳಸುವ ಸಂಕಲ್ಪವನ್ನು ಮಾಡಿರುವ ಗೌರವಾನ್ವಿತ ಗುರುವೃಂದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.

-ನೇತಾಜಿ ಬ್ರಿಗೇಡ್

‘ವೃಕ್ಷಮಾತೆ’ ಪದ್ಮಶ್ರೀ ಸಾಲುಮರದ ತಿಮ್ಮಕ್ಕ  ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #ಸಾಲುಮರದತಿಮ್ಮಕ್ಕ
14/11/2025

‘ವೃಕ್ಷಮಾತೆ’ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

#ಸಾಲುಮರದತಿಮ್ಮಕ್ಕ

02/11/2025
ಡಮರುಗ ಉಮೇಶ್ ರವರು ಹಾಗೂ ಕೋರಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಧುಸೂದನ್ ರಾವ್ ರವರ ಸಹಕಾರದಿಂದ, ಮಾಸ್ತಿ ವೆಂಕಟೇಶ ಐಯ್ಯಂಗಾರ್ ಜೀವನ ಕಾರ್ಯಾ...
01/11/2025

ಡಮರುಗ ಉಮೇಶ್ ರವರು ಹಾಗೂ ಕೋರಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಧುಸೂದನ್ ರಾವ್ ರವರ ಸಹಕಾರದಿಂದ, ಮಾಸ್ತಿ ವೆಂಕಟೇಶ ಐಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್ ವತಿಯಿಂದ ನೀಡಲಾದ ಮಾಸ್ತಿ ರವರ ಬಹುತೇಕ ಪುಸ್ತಕಗಳು ಮತ್ತು ಕಾದಂಬರಿಗಳನ್ನು ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಶಾಲೆಯ ಗ್ರಂಥಾಲಯಕ್ಕೆ ವರ್ಗಾಯಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಮರುಗ ಉಮೇಶ್ ರವರು, SDMC ಅಧ್ಯಕ್ಷ ಶ್ರೀ ಕಾಂತರಾಜು, ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುನೀತಾ, ಮುಖ್ಯೋಪಾಧ್ಯಾಯರು, SDMC ಸದಸ್ಯರು, ಪೋಷಕರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಹಾಜರಿದ್ದರು.

ನಮ್ಮ ಶಾಲೆಗೆ ಪುಸ್ತಕಗಳನ್ನು ನೀಡುವಂತೆ ವಿನಂತಿಸಿದ ಡಮರುಗ ಉಮೇಶ್ ರವರಿಗೆ, ಹಾಗೂ ಬೆಂಗಳೂರಿನಿಂದ ಪುಸ್ತಕಗಳನ್ನು ನಮ್ಮ ಶಾಲೆಗೆ ತಲುಪಿಸಿದ ಕೋರಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಧುಸೂದನ್ ರಾವ್ ಸರ್ ರವರಿಗೆ ನೇತಾಜಿ ಬ್ರಿಗೇಡ್ ಮತ್ತು ಗ್ರಾಮಸ್ಥರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. 💛❤️

01/11/2025

ಕೋರಾ ಹೋಬಳಿ ವ್ಯಾಪ್ತಿಯ ಪದವೀಧರರ ಚಿಂತನಾ–ಸಭೆ

ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ, ಕೋರಾ ಹೋಬಳಿ ವ್ಯಾಪ್ತಿಯಲ್ಲಿರುವ ಎಲ್ಲಾ ಪದವೀಧರರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಹಾಗೂ ಆ ಸಮಸ್ಯೆಗಳ ಪರಿಹಾರಕ್ಕಾಗಿ, ಜೊತೆಗೆ ಪದವೀಧರರ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿ ಇಟ್ಟುಕೊಂಡು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಮ್ಮ ಬೇಡಿಕೆಗಳನ್ನು, ಅವಶ್ಯಕತೆಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಲು ನಾವು ಒಂದೆಡೆ ಸೇರುವುದು, ಸಂಘಟಿತರಾಗುವುದು ಅಗತ್ಯವಾಗಿದೆ.

ಆದ್ದರಿಂದ, ಕೋರ ಹೋಬಳಿಯ ಎಲ್ಲಾ ಪದವೀಧರರು (ಯಾವುದೇ ಪದವಿ ಹೊಂದಿದವರು) ಈ ಸಭೆಗೆ ತಪ್ಪದೇ ಹಾಜರಾಗಬೇಕಾಗಿ ಕೋರುತ್ತೇವೆ.

ಬನ್ನಿ ನಮ್ಮ ಹಕ್ಕುಗಳಿಗಾಗಿ, ನಮ್ಮ ಸಮಸ್ಯೆಗಳಿಗಾಗಿ, ನಮ್ಮ ಒಳಿತಿಗಾಗಿ ಒಂದೆಡೆ ಸೇರೋಣ..!

🗓️ ದಿನಾಂಕ: 02-11-2025, ಭಾನುವಾರ
🕥 ಸಮಯ: ಮಧ್ಯಾನ್ಹ 2.00 ಗಂಟೆಗೆ
📍 ಸ್ಥಳ: ಪ್ರಾಥಮಿಕ ಪಾಠ ಶಾಲೆಯ ಆವರಣ, ಕೆಸ್ತೂರು.

📄 ಪ್ರಮುಖ ಸೂಚನೆ

(2022ರ ನವೆಂಬರ್ 1ರೊಳಗೆ ಪದವಿ ಪಡೆದವರು)
ಪದವೀಧರರ ಚುನಾವಣಾ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಮತದಾನದ ಹಕ್ಕನ್ನು ಪಡೆಯಲು, ಸಭೆಗೆ ಬರುವಾಗ ಕೆಳಗಿನ ದಾಖಲೆಗಳನ್ನು ತರುವಂತೆ ಕೋರಿದೆ.

1️⃣ 3 ಪಾಸ್‌ಪೋರ್ಟ್ ಸೈಜ್ ಫೋಟೋ
2️⃣ ಆಧಾರ್ ಕಾರ್ಡ್ ನಕಲು
3️⃣ ಮತದಾರರ ಗುರುತಿನ ಚೀಟಿ (Voter ID)
4️⃣ ಪದವೀಧರ ಪ್ರಮಾಣಪತ್ರ (Convocation Certificate)
5️⃣ SSLC ಅಂಕಪಟ್ಟಿ ನಕಲು

ಆಯೋಜನೆ : ನೇತಾಜಿ ಬ್ರಿಗೇಡ್, ಕೆಸ್ತೂರು.

ನಮ್ಮ ಹಿಂದಿನ ಪೋಸ್ಟ್ ನಲ್ಲಿ ತಿಳಿಸಿದ್ದ ರಸ್ತೆಯ ಬಗ್ಗೆ ಮಾನ್ಯ ಗೃಹ ಸಚಿವರ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಸದ್ಯದಲ್ಲೇ ಈ ರಸ್ತೆ ಕಾಮಗಾರ...
20/09/2025

ನಮ್ಮ ಹಿಂದಿನ ಪೋಸ್ಟ್ ನಲ್ಲಿ ತಿಳಿಸಿದ್ದ ರಸ್ತೆಯ ಬಗ್ಗೆ ಮಾನ್ಯ ಗೃಹ ಸಚಿವರ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಸದ್ಯದಲ್ಲೇ ಈ ರಸ್ತೆ ಕಾಮಗಾರಿ ಪ್ರಾರಂಭವಾಗುವುದಾಗಿ ತಿಳಿಸಿರುತ್ತಾರೆ.

ಧನ್ಯವಾದಗಳು...🙏

Address

Kestur, Tumkur Taluk
Maddur
572138

Telephone

+916361082484

Website

Alerts

Be the first to know and let us send you an email when Netaji Brigade Kestur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Netaji Brigade Kestur:

Share

Category