04/03/2026
ದಿನಾಂಕ 04-03-2026ರಂದು ಸೋಮವಾರಪೇಟೆ ಕ್ಷೇತ್ರದ ಮಾನ್ಯ ವಿಧಾನಸಬಾ ಸದಸ್ಯರು ಮಂತರ್ ಗೌಡ ರವರು ಅರಣ್ಯ ಭವನ ಮಡಿಕೇರಿಯಲ್ಲಿ ಇರುವ ಜಿಲ್ಲಾ ಅರಣ್ಯ ಕಮಾಂಡ್ & ಕಂಟ್ರೋಲ್ ರೂಂಗೆ ಬೇಟಿ ನೀಡಿ ಕಂಟ್ರೋಲ್ ರೂಂ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು,ನಂತರ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಹಾಗು ವನ್ಯಪ್ರಾಣಿಗಳು ಗ್ರಾಮ ಪದೇಶಗಳಲ್ಲಿ ಇರುವಿಕೆಯ ಚಲನ ವಲನಗಳು ಕಂಡುಬಂದ ಕೂಡಲೆ ಸಂಬಂದಿಸಿದ ಗ್ರಾಮಗಳ ಸಾರ್ವಜನಿಕರಿಗೆ,ತೋಟದ ಮಾಲಿಕರಿಗೆ ಎಚ್ಚರಿಕೆಯ ಮೊಬೈಲ್ ಸಂದೇಶಗಳನ್ನು ತ್ವರಿತವಾಗಿ ರವಾನಿಸಬೇಕು ಎಂದು ತಿಳಿಸಿದರು. ಮುಂದುವರೆದು ಕೊಡಗು ಜಿಲ್ಲೆಯಲ್ಲಿ ಮಾನವ ಸಂಘರ್ಷ ತಡೆಯಲು ನಿರಂತರ ಗಸ್ತನ್ನು ನಿರ್ವಹಿಸಲು ಸೂಚಿಸಿರುತ್ತಾರೆ. ಉಪರಣ್ಯಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ ರವರು ಮಾನ್ಯ ವಿಧಾನಸಬಾ ಸದಸ್ಯರು ಮಂತರ್ ಗೌಡ ರವರಿಗೆ ಕಂಟ್ರೋಲ್ ರೂಂ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಸಿದರು. ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೋಮವಾರಪೇಟೆ ಉಪವಿಭಾಗ ರವರು ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ವಿವರಿಸಿದರು.ಉಪವಲಯ ಅರಣ್ಯಧಿಕಾರಿ ಕಂಟ್ರೋಲ್ ರೂಂ ಮಯೂರು ರವರು ಕಂಟ್ರೋಲ್ ರೂಂ ನಿರ್ವಹಣೆಯ ಪ್ರತ್ಯಕ್ಷತೆಯನ್ನು ವಿವರಿಸಿದರು. ಸದರಿ ಸಂದರ್ಭದಲ್ಲಿ ಉಪವಲಯ ಅರಣ್ಯಧಾಕಾರಿಗಳು ಕಂಟ್ರೋಲ್ ರೂಂ,ಇಲಾಖಾ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು. Karnataka Forest Department Mantar Gowda Chief Minister of Karnataka Ministry of Environment, Forest & Climate Change, Government of India Kodagu News Kodagu Channel Kodagu Special Eshwar Khandre