09/05/2023
ಆತ್ಮೀಯ ಮತದಾರ ಬಂಧುಗಳೇ
ಪೆಟ್ರೋಲ್ ನ ಬೆಲೆ 101 ರುಪಾಯಿಯಾದರೆ 40% ಟ್ಯಾಕ್ಸ್ ಸರ್ಕಾರಕ್ಕೆ 40 ರೂಪಾಯಿ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತೇವೆ
ಒಂದು ಸಾಮಾನ್ಯ ಕೂಲಿ ಕಾರ್ಮಿಕನ 3 ರಿಂದ 4 ಜನ ಇರುವ ಕುಟುಂಬ ಉದಾಹರಣೆಗೆ ದಿನಕ್ಕೆ ಒಂದು ಲೀಟರ್ ಪೆಟ್ರೋಲ್ ಬಳಸಿದರೆ 40 ರೂಪಾಯಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾನೆ
* ಒಂದು ತಿಂಗಳಿಗೆ 40×30= 1200 ರೂಪಾಯಿ
* ಒಂದು ವರ್ಷಕ್ಕೆ 1200×12=14400 ರೂಪಾಯಿ
* ಐದು ವರ್ಷಗಳ ಒಬ್ಬ ಎಮ್ಎಲ್ಎ ಆಡಳಿತದ ಅವಧಿಗೆ 14400×5 =72000 ರೂಪಾಯಿ
ಆಲ್ಕೋಹಾಲ್ ಟ್ಯಾಕ್ಸ್ ಕುಡಿಯುವ ದುಶ್ಚಟಗಳನ್ನು ಅಳವಡಿಸಿಕೊಂಡಿರುವವರು ಉದಾಹರಣೆಗೆ ಸಾಮಾನ್ಯ ಕೂಲಿ ಮಾಡುವ ಕುಟುಂಬದ ಇಬ್ಬರು
ದಿನಕ್ಕೆ 200 ರೂಪಾಯಿ ಕುಡಿದರೆ 69% ಟ್ಯಾಕ್ಸ್
138 ರೂಪಾಯಿ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತಾರೆ
* ಒಂದು ತಿಂಗಳಿಗೆ 138×30=4140 ರೂಪಾಯಿ
* ಒಂದು ವರ್ಷಕ್ಕೆ 4140×12=49680 ರೂಪಾಯಿ
* ಐದು ವರ್ಷದ ಒಬ್ಬ ಎಂಎಲ್ಎ ಆಡಳಿತದ ಅವಧಿಗೆ 49680×5=248400 ರೂಪಾಯಿ
ಒಂದು ಸಾಮಾನ್ಯ ಮಿಡಲ್ ಕ್ಲಾಸ್ ಕುಟುಂಬ ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಗೆ ಇನ್ನಿತರ ಸಾಮಗ್ರಿಗಳ ಟ್ಯಾಕ್ಸ್ 18%
ಒಂದು ಮಿಡಲ್ ಕ್ಲಾಸ್ ಕುಟುಂಬ ಈ ಸಾಮಗ್ರಿಗಳಿಗೆ ತಿಂಗಳಿಗೆ 4000 ಖರ್ಚು ಮಾಡಿದರೆ
720 ರೂಪಾಯಿ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುತ್ತಾರೆ
ಒಂದು ತಿಂಗಳಿಗೆ 720 ರೂಪಾಯಿ
ಒಂದು ವರ್ಷಕ್ಕೆ 720×12 =8640 ರೂಪಾಯಿ
ಐದು ವರ್ಷಕ್ಕೆ 8640×5 = 43200 ರೂಪಾಯಿ
ಒಬ್ಬ ಮಿಡಲ್ ಕ್ಲಾಸ್ ಕುಟುಂಬದವರು ಕಾರು ಬೈಕು ಟಿಪ್ಪರ್ ಲಾರಿ ಖರೀದಿ ಮಾಡಿದರೆ 18% ಟ್ಯಾಕ್ಸ್ ಕಟ್ಟಿ ಖರೀದಿ ಮಾಡಬೇಕಾಗುತ್ತದೆ
ಉದಾಹರಣೆಗೆ ಒಂದು ಬೇಸಿಕ್ ಮಾಡೆಲ್ ಕಾರಿನ ಬೆಲೆ
5 ಲಕ್ಷ ಆದರೆ 18 % ಟ್ಯಾಕ್ಸ್ ಪೇ ಮಾಡಬೇಕು
* 90000 ಬೇಸಿಕ್ ಮಾಡೆಲ್ ಕಾರಿಗೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ
ನನ್ನ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಪ್ಲೇಯರ್ಸ್ ಕೂಲಿ ಕೆಲಸ ಮಾಡುವವರು ಮಿಡಲ್ ಕ್ಲಾಸ್ ಕುಟುಂಬದವರು
ಇಷ್ಟೆಲ್ಲ ಹಣ ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡುವ ನೀವು ಚುನಾವಣಾ ಸಂದರ್ಭದಲ್ಲಿ 2000 3000
ಹಣವನ್ನು ಕೊಟ್ಟು ನಿಮ್ಮ ನಿಮ್ಮ ಹಕ್ಕನ್ನು ಖರೀದಿ ಮಾಡಿ ನಿಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಚ್ಚೆತ್ತುಕೊಳ್ಳಿ ಜಾಗೃತರಾಗಿ
ಹಣ ಪಡೆಯದೆ ಮತ ಚಲಾಯಿಸಿ 🙏🏻
Vote Without Note..🙏🏻
ನಿಮ್ಮ : ತೇಜಸ್ ಮಾಲೂರು 🙏🏻