01/09/2026
🎙️ಮಂಡ್ಯ ಸುದ್ದಿ...
ಮಂಡ್ಯ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ... 18 ಅಡಿ ಎತ್ತರದ ಭವ್ಯ #ಸ್ಮಶಾನಕಾಳಿ ಅಮ್ಮನವರ ದೇವಸ್ಥಾನ... ಲೋಕಾರ್ಪಣೆಗೆ ಸಜ್ಜಾಗಿದೆ!
ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕು, ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ... ಸರ್ಕಾರಿ ಪ್ರಾಥಮಿಕ ಶಾಲೆಯ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ 18 ಅಡಿ ಭವ್ಯ #ಸ್ಮಶಾನಕಾಳಿ ಅಮ್ಮನವರ ದೇವಸ್ಥಾನವು ಸೆಪ್ಟೆಂಬರ್ 24 ಮತ್ತು 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಯಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
20 ವರ್ಷಗಳ ಇತಿಹಾಸ ಹೊಂದಿರುವ #ಶಕ್ತಿಕ್ಷೇತ್ರ...
ಕಳೆದ ಸುಮಾರು 20 ವರ್ಷಗಳಿಂದ ಈ ಕ್ಷೇತ್ರವು ಗ್ರಾಮದಲ್ಲಿ ಧಾರ್ಮಿಕವಾಗಿ ಪ್ರಚಲಿತದಲ್ಲಿದೆ.
ಆರಂಭದಲ್ಲಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ಆರಾಧನಾ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದ ಈ ಸ್ಥಳವು... ಇದೀಗ ಭದ್ರಕಾಳಿ ಹಾಗೂ ಸ್ಮಶಾನಕಾಳಿ ಸ್ವರೂಪದ ಭವ್ಯ ಶಕ್ತಿಕ್ಷೇತ್ರವಾಗಿ ರೂಪುಗೊಂಡಿರುವುದು ವಿಶೇಷವಾಗಿದೆ.
#ಮಹಾಲಕ್ಷ್ಮಿ ಅಮ್ಮನವರ ಆರಾಧನೆಯಿಂದ ಪ್ರಾರಂಭವಾದ ಈ ಕ್ಷೇತ್ರ... ಇದೀಗ #ಭದ್ರಕಾಳಿ ಅವತಾರದೊಂದಿಗೆ 18 ಅಡಿ ಎತ್ತರದ #ಮಹಾಕಾಳಿ ಅಮ್ಮನವರ ಭವ್ಯ #ದೇವಸ್ಥಾನವಾಗಿ ಹೊರಹೊಮ್ಮಿರುವುದು ಭಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ಇನ್ನು ಈ ಕ್ಷೇತ್ರದ ವಿಶೇಷತೆ ಏನು?
ಈ ಶಕ್ತಿಕ್ಷೇತ್ರದಲ್ಲಿ ಶತ್ರು ಸಂಹಾರಕ ಪ್ರತ್ಯಂಗಿರಾ ದೇವಿ ಸಮೇತವಾಗಿ... 18 ಅಡಿ ಎತ್ತರದ ಭವ್ಯ ಸ್ಮಶಾನಕಾಳಿ ಅಮ್ಮನವರ ಮೂರ್ತಿ ಪ್ರಮುಖ ಆಕರ್ಷಣೆಯಾಗಿದೆ.
ಇದರ ಜೊತೆಗೆ ಗರ್ಭಗುಡಿಯಲ್ಲಿ 12 ಆಯುಧಗಳನ್ನು ಹೊಂದಿರುವ ಭದ್ರಕಾಳಿ ಅಮ್ಮನವರ ಸುಂದರ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ.
ವಿಶಿಷ್ಟ ದೇವತಾ ಸ್ವರೂಪಗಳು ಹಾಗೂ ಭವ್ಯ ಮೂರ್ತಿಗಳ ಮೂಲಕ ಈ ಕ್ಷೇತ್ರವು ಧಾರ್ಮಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
#ಅಪಪ್ರಚಾರಗಳಿಗೆ #ತೆರೆ... #ಶಕ್ತಿಕೇಂದ್ರವಾಗಿ ಹೊಸ ರೂಪ!
ಈ ಕ್ಷೇತ್ರವು ಹಿಂದೆ ವಿವಿಧ ರೀತಿಯ #ಮಾಟ-ಮಂತ್ರದ ಕುರಿತಾದ ಅಪಪ್ರಚಾರ, ಅವಮಾನ ಮತ್ತು ಅನುಮಾನಗಳನ್ನು ಎದುರಿಸಿತ್ತು.
ಆದರೆ ಅವುಗಳಿಗೆ ಯಾವುದೇ ಆಧಾರವಿಲ್ಲ ಎಂಬ ನಂಬಿಕೆಯೊಂದಿಗೆ... ಇದೀಗ ಈ ಸ್ಥಳವನ್ನು #ಶಕ್ತಿಯ ಕೇಂದ್ರಬಿಂದು ಎಂದು ಭಕ್ತರು ಕಾಣುತ್ತಿದ್ದಾರೆ.
ಕಾಲಕ್ರಮೇಣ ಕ್ಷೇತ್ರದ ಧಾರ್ಮಿಕ ಮಹತ್ವ ಹಾಗೂ ಭಕ್ತರ ನಂಬಿಕೆ ಮತ್ತಷ್ಟು ಹೆಚ್ಚುತ್ತಿದ್ದು... ವಿಶಿಷ್ಟ ರೀತಿಯಲ್ಲಿ ಈ ಕ್ಷೇತ್ರವು ಮತ್ತೆ ಪ್ರಚಲಿತಕ್ಕೆ ಬರುತ್ತಿರುವುದು #ದೇವಿಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಭಕ್ತರು ಅಭಿಪ್ರಾಯಪಡುತ್ತಾರೆ.
ಸೆಪ್ಟೆಂಬರ್ 24 ಮತ್ತು 25ರಂದು ನಡೆಯಲಿರುವ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನೂತನ ದೇವಸ್ಥಾನವನ್ನು ಭಕ್ತರಿಗೆ ಸಮರ್ಪಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಸ್ಥಳ: ಶ್ರೀ ಕ್ಷೇತ್ರ #ಚುಜ್ಜಲಕ್ಯಾತನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್. ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ.
#ಸ್ಮಶಾನಕಾಳಿದೇವಸ್ಥಾನ #ಚುಜ್ಜಲಕ್ಯಾತನಹಳ್ಳಿಗ್ರಾಮ #18ಆಡಿಎತ್ತರ #ಶ್ರೀಕ್ಷೇತ್ರ
New York Yankees Highlights