Team Utk Social Media

Team Utk Social Media Contact information, map and directions, contact form, opening hours, services, ratings, photos, videos and announcements from Team Utk Social Media, Political organisation, Ullal, Mangalore.

27/12/2024

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬಂದ ಭಕ್ತಾಧಿಗಳಿಗೆ ಕೆಸಿ ರೋಡ್ ಜಂಕ್ಷನ್ ನಲ್ಲಿ ತಂಪು ಪಾನೀಯ, ಹಣ್ಣು ವಿತರಣೆ ವ್ಯವಸ್ಥೆ ಮಾಡಿದ್ದ ನಾಗರಿಕ ಸೌಹಾರ್ದ ವೇದಿಕೆ, ಯುಟಿಕೆ ಅಭಿಮಾನಿ ಬಳಗ ಹಾಗೂ ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ಈ ಕಾರ್ಯಕ್ರಮದ ಬಗ್ಗೆ ಉಳ್ಳಾಲ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ಗಣ್ಯರ ಮಾತುಗಳು.

23/12/2024

ಕೋಟೆಕಾರ್ ವಿದ್ಯುತ್ ಸಬ್ ಸ್ಟೇಷನ್ ಉದ್ಘಾಟನೆ ಹಾಗೂ ಶಾಸಕ, ವಿಧಾನ ಸಭಾಧ್ಯಕ್ಷರಾದ *ಯು.ಟಿ ಖಾದರ್* ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪತ್ರಿಕಾಗೋಷ್ಠಿ.

*ಉಳ್ಳಾಲ ಕೋಟೆಪುರದಿಂದ ಮಂಗಳೂರು ಬೋಳಾರಕ್ಕೆ 200 ಕೋಟಿ ಮೊತ್ತದಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ. ಖಾದರ್ ಕ್ಷೇತ್ರದಲ್ಲಿ ನಾಗರೀಕರ ಸಂಭ್ರಮ...
10/12/2024

*ಉಳ್ಳಾಲ ಕೋಟೆಪುರದಿಂದ ಮಂಗಳೂರು ಬೋಳಾರಕ್ಕೆ 200 ಕೋಟಿ ಮೊತ್ತದಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ. ಖಾದರ್ ಕ್ಷೇತ್ರದಲ್ಲಿ ನಾಗರೀಕರ ಸಂಭ್ರಮಾಚಾರಣೆ.*

ಉಳ್ಳಾಲ (ಡಿಸೆಂಬರ್ 09): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ, 200₹ ಕೋಟಿ ರೂಪಾಯಿ ವೆಚ್ಚದಲ್ಲಿ ಉಳ್ಳಾಲದ ಕೋಟೆಪುರದಿಂದ ಮಂಗಳೂರಿನ ಬೋಳಾರದವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿಯಾದ ಮಾನ್ಯ ಶಾಸಕರಾದ ಸನ್ಮಾನ್ಯ ಸ್ಪೀಕರ್ ಯುಟಿ ಖಾದರ್ ರವರಿಗೆ ಕೃತಜ್ಞತೆ ಸಲ್ಲಿಕೆ ರೂಪದಲ್ಲಿ ಇಂದು ತಾರೀಕು 09/12/2024 ನಾಲ್ಕು ಗಂಟೆಗೆ ಸರಿಯಾಗಿ ಅಬ್ಬಕ ಸರ್ಕಲ್ ನಿಂದ ಕೋಟೆಪುರ ಬ್ರಿಡ್ಜ್ ಪಾಯಿಂಟ್ ತನಕ ಸಂಭ್ರಮಾಚರಣೆ ಮೆರವಣಿಗೆ ನಡೆಯಿತು.

ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಮೇಶ್ ಶೆಟ್ಟಿ ಬೋಳಿಯಾರ್ ಕ್ಷೇತ್ರದ ಅಭಿವೃದ್ಧಿಗೆ ಯು. ಟಿ ಖಾದರ್ ಹಲವು ಯೋಜನೆಗಳಿಗೆ ಮಂಜೂರಾತಿ ದೊರಕಿಸಿಕೊಟ್ಟಿದ್ದು ಉಳ್ಳಾಲವನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮಾತನಾಡಿ ಯು.ಟಿ ಖಾದರ್ ಪ್ರಯತ್ನದಿಂದ ರಚಿತವಾದ ನೂತನ ಉಳ್ಳಾಲ ತಾಲೂಕು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಹರೇಕಳ ಸೇತುವೆ ಮತ್ತು ಡ್ಯಾಮ್ ನಂತರ ಸಜಿಪ ಹಾಗೂ ಕೋಟೆಪುರಕ್ಕೆ ಎರಡು ಹೊಸ ಸೇತುವೆಗೆ ಮಂಜೂರಾತಿ ಸಿಕ್ಕಿದೆ. ತಾಲೂಕಿಗೆ ವಿದ್ಯುತ್ ಕೇಂದ್ರ, ಅಗ್ನಿಶಾಮಕ ಠಾಣೆ, ಡಯಾಲಿಸಿಸ್ ಕೇಂದ್ರ, ತೊಕ್ಕೊಟ್ಟು ಚಂಬುಗುಡ್ಡೆ ನಡುವೆ 6 ಪಥಗಳ ರಸ್ತೆ, ಕುಡಿಯುವ ನೀರು, ಪ್ರತೀ ಗ್ರಾಮಕ್ಕೆ ತಲಾ 1 ಕೋಟಿ ಅನುದಾನ ಹೀಗೆ ಹಲವಾರು ಯೋಜನೆಗಳನ್ನು ತಂದಿದ್ದಾರೆ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರು ಶ್ರೀಮತಿ ಮಮತಾ ಗಟ್ಟಿ, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಹಿರಿಯ ಕಾಂಗ್ರೆಸ್ ಮುಖಂಡರಾದ ಯೂಸುಫ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮುಸ್ತಫ ಅಬ್ದುಲ್ಲಾ, ಯುವ ಕಾಂಗ್ರೆಸ್ ಅಧ್ಯಕ್ಷ ರಶೀದ್ ಕೋಡಿ, ಮಾಜಿ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು, ಬ್ಲಾಕ್ ಕಾರ್ಯದರ್ಶಿ ಎಕೆ ಅಬ್ದುಲ್ ರಹಿಮಾನ್ ಕೋಡಿಜಾಲ್, ಮನ್ಸೂರ್ ಮಂಚಿಲ, ಅಯೂಬ್ ಮಂಚಿಲ ರಜಿಯಾ ಇಬ್ರಾಹಿಂ, ಸಫಿಯಾ ಪನೀರ್ ಮತ್ತಿತರರು ಉಪಸ್ಥಿತರಿದ್ದರು.

25/11/2024

24/11/2024

ಉಪಚುನಾವಣೆಯ ಫಲಿತಾಂಶ ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಪುನಾರಾವರ್ತನೆಯಾಗಲಿದೆ.

ಉಪ ಚುನಾವಣೆ ಗೆಲುವಿಗೆ ಖಾದರ್ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಭ್ರಮ.

23/11/2024

ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು. ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯಿಂದ ಕೆಸಿ ರೋಡ್ ಜಂಕ್ಷನ್ ನಲ್ಲಿ ವಿಜಯೋತ್ಸವ

*ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು. ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ*ತಲಪಾಡಿ ( ನ 23) : ಕರ್ನಾಟಕ ವ...
23/11/2024

*ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು. ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ*

ತಲಪಾಡಿ ( ನ 23) : ಕರ್ನಾಟಕ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ ಹಿನ್ನಲೆಯಲ್ಲಿ ತಲಪಾಡಿ ವಲಯ ಕಾಂಗ್ರೆಸ್ ವತಿಯಿಂದ ಇಂದು ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಕೆಸಿ ರೋಡ್ ನಿಂದ ಕೆಸಿ ನಗರದ ವರೆಗೆ ವಾದ್ಯಗೋಷ್ಠಿಗಳೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮೂರೂ ಕ್ಷೇತ್ರದ ಗೆಲುವು ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಗೆಲುವು. ಮೂಡ ಎಂಬ ಗುಮ್ಮ ತೋರಿಸಿ, ವಖ್ಫ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ವಿಭಜಿಸಿ ಮತ ಪಡೆಯಲು ಹೊಂಚುಹಾಕಿದ್ದ ಬಿಜೆಪಿಗೆ ಪ್ರಜ್ಞಾವಂತ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸುರೇಖಾ ಚಂದ್ರಹಾಸ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಸಲಾಂ ಕೆಸಿ ರೋಡ್, ಶಾಸಕರ ಆಪ್ತ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಗ್ರಾಪಂ ಸದಸ್ಯ ವೈಭವ್ ಶೆಟ್ಟಿ ತಲಪಾಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಸ್ಮಾನ್ ಕಲ್ಲಾಪು, ಜಿಯಾದ್ ಮುಕ್ಕಚ್ಚೇರಿ, ಇಬ್ರಾಹಿಂ ಟಿ. ಎಂ, ಸಲಾಂ ಪಿಲಿಕೂರು, ಕೋಟೆಕಾರ್ ಪಂಚಾಯತ್ ಕೌನ್ಸಿಲರ್ ಅಹಮದ್ ಅಜ್ಜಿನಡ್ಕ, ಇಸಾಕ್ ಕೋಟೆಕಾರ್, ವಲಯ ಉಪಾಧ್ಯಕ್ಷರಾದ ವಿನಯ್ ಕುಮಾರ್ ಶೆಟ್ಟಿ, ವಸಂತಿ ತಲಪಾಡಿ, ಕಾರ್ಯದರ್ಶಿಗಳಾದ ಅಬ್ಬಾಸ್ ಪಂಜಳ, ರಾಜೇಶ್ ಕೊಟ್ಟಾರಿ, ಬಿ. ಎಸ್ ಇಸ್ಮಾಯಿಲ್, ಕೋಶಾಧಿಕಾರಿ ಯಾಕೂಬ್ ಪಿಲಿಕೂರು. ಸಚ್ಚಿದಾನಂದ ಶೆಟ್ಟಿ, ಅಬ್ದುಲ್ ಖಾದರ್ ಮಕ್ಯಾರ್,ಲತಾ ವಿಶ್ವನಾಥ್, ಗೋಪಾಲ್ ತಚ್ಚಾನಿ, ರವೀಂದ್ರ ಟಿ. ಎಂ, ಬಶೀರ್ ಕೊಳಂಗರೆ ಮತ್ತಿತರರು ಭಾಗವಹಿಸಿದ್ದರು.

ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆಸಿ ರೋಡ್ ಆಯ್ಕೆ.ಉಳ್ಳಾಲ ( ನವೆಂವರ್ 9) : ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ನೂ...
11/11/2024

ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆಸಿ ರೋಡ್ ಆಯ್ಕೆ.

ಉಳ್ಳಾಲ ( ನವೆಂವರ್ 9) : ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಅಶ್ರಫ್ ಕೆಸಿ ರೋಡ್ ರವರನ್ನು ಉಳ್ಳಾಲ ಬ್ಲಾಕ್ ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಬೋಳಿಯಾರ್ ರವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ತಲಪಾಡಿ ಗ್ರಾಂಡ್ ವ್ಯೂ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ವಿನಯ್ ಕುಮಾರ್ ಶೆಟ್ಟಿ, ಅಬ್ದುಲ್ ಸಲಾಂ ಕೆಸಿ ರೋಡ್, ವಸಂತಿ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆಸಿ ರೋಡ್, ಕಾರ್ಯದರ್ಶಿ ಅಬ್ಬಾಸ್ ಪಂಜಳ, ರಾಜೇಶ್ ಕೊಟ್ಟಾರಿ, ಬಿ . ಎಸ್ ಇಸ್ಮಾಯಿಲ್ ಕೋಶಾಧಿಕಾರಿಯಾಗಿ ಯಾಕೂಬ್ ಪಿಲಿಕೂರ್ ರವರನ್ನು ಆಯ್ಕೆ ಮಾಡಲಾಯಿತು.

ತಲಪಾಡಿ ವಲಯದಿಂದ ಬ್ಲಾಕ್ ಪ್ರತಿನಿಧಿಗಳಾಗಿ ಸಚ್ಚಿದಾನಂದ ಶೆಟ್ಟಿ, ಹಸೈನಾರ್ ಕೆಸಿ ನಗರ, ಅಬ್ದುಲ್ ಖಾದರ್ ಮಕ್ಯಾರ್, ಲತಾ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರೂ, ಮಾಜಿ ತಾಪಂ ಸದಸ್ಯರಾದ ಸುರೇಖಾ ಚಂದ್ರಹಾಸ್, ಬ್ಲಾಕ್ ಕೋಶಾಧಿಕಾರಿ ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.

12/06/2023
10/06/2023

ನಾಳೆ ತೊಕ್ಕೊಟ್ಟುವಿನಲ್ಲಿ ಮಹಿಳೆಯರ ಉಚಿತ ಬಸ್ ಸಂಚಾರ ಯೋಜನೆ ( ಶಕ್ತಿ ) ಗೆ ಚಾಲನೆ.

ಮಂಗಳೂರು ( ಜೂ 10 ) : ದಿನಾಂಕ 11/06/2023 ನಾಳೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕರ್ನಾಟಕ ಸರ್ಕಾರ ಘೋಷಿಸಿದ ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ) ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ವ್ಯಾಪ್ತಿಯ ಎಲ್ಲಾ ಹಿರಿಯ, ಕಿರಿಯ ಕಾಂಗ್ರೆಸ್ ನಾಯಕರುಗಳು ಹಾಗೂ ಕಾರ್ಯಕರ್ತರುಗಳು, ಈ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ಹಾಗೂ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Address

Ullal
Mangalore

Website

Alerts

Be the first to know and let us send you an email when Team Utk Social Media posts news and promotions. Your email address will not be used for any other purpose, and you can unsubscribe at any time.

Share