07/01/2022
*ಕೈ ಬೀಸಿ ಕರೆಯುತ್ತಿದೆ ಜಾಮಿಅ ಯಮಾನಿಯ್ಯ....*
*ಹೌದು ಕಲ್ಲಿಕೋಟೆಯಿಂದ ಸುಮಾರು ಹತ್ತು* *ಕಿಲೋಮೀಟರ್ ದೂರದ ಕುಟ್ಟಿಕಾಟೂರು ಎಂಬ* *ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ* *ವಿದ್ಯಾಗೋಪುರವಾಗಿದೆ ಶಂಸುಲ್ ಉಲಮಾ ಸ್ಮಾರಕ* *ಇಸ್ಲಾಮಿಕ್ ಸೆಂಟರ್,ಜಾಮಿಅ ಯಮಾನಿಯ್ಯ ಅರೆಬಿಕ್* *ಕಾಲೇಜು.*
*ಹಲವಾರು ವಿದ್ವಾಂಸರು ದರ್ಸ್ ನಡೆಸಿದ ಊರು, ದಿನೇ ದಿನೇ ಅಭಿವೃದ್ಧಿ ಪಡೆಯುತ್ತಿರುವ ಪ್ರದೇಶ.*
*ಶೈಕ್ಷಣಿಕ ಸಂಸ್ಥೆಗಳ ಸಂಗಮ ಭೂಮಿ ಎಂದರೆ ತಪ್ಪಾಗಲಾರದು...*
*ಯಮಾನಿಯ್ಯ ಕಾಲೇಜಿನ ಉಗಮದ ಹಿನ್ನೆಲೆಯಲ್ಲಿಯೇ ಅದ್ಭುತವಿದೆ.ಅದೇನೆಂದರೆ ಸುನ್ನೀ ಸಾಮ್ರಾಜ್ಯದ ಅಮರ ನಾಯಕ ಶೈಖುನಾ ಶಂಸುಲ್ ಉಲಮಾ (ಖ.ಸಿ) ಮಹಾನುಭಾವರ ಅಭಿಲಾಷೆಯನ್ನು ತನ್ನವರೊಂದಿಗೆ ಹೇಳಿಕೊಂಡಿದ್ದರಂತೆ.*
*ಕಲ್ಲಿಕೋಟೆ ನಗರದ ಸಮೀಪ ಬಿರುದು ನೀಡುವ ಒಂದು ಕಾಲೇಜು ಬೇಕೆಂದು.* *ಶೈಖುನಾ ರವರ ವಫಾತಿನ ಬಳಿಕ ಶಿಷ್ಯಂದಿರು ಸಭೆ ಸೇರಿ ಆ ಅಭಿಲಾಷೆಯನ್ನು ಹೀಡೇರಿಸುವ ಸಲುವಾಗಿ ಸ್ಥಾಪನೆಯ ಕನಸನ್ನು ನನಸಾಗಿಸುವ ಬೃಹತ್ ಕಾಯಕಕ್ಕೆ ಕೈ ಹಾಕಿದರು. ಹಲವು ಸ್ಥಳಗಳು ತಮ್ಮ ಅರಿವಿಗೆ ಬಂದರೂ ಅವೆಲ್ಲವನ್ನು ನಯವಾಗಿ ತಿರಸ್ಕರಿಸಿ , ಶೈಖುನಾ ಶಂಸುಲ್ ಉಲಮಾ ತನ್ನ ವಫಾತಿನ ಎರಡು ವರ್ಷಗಳ ಮುಂಚೆ ವಾಸ್ತವ್ಯವಿದ್ದ ಮಗಳ ಮನೆಯ ಸಮೀಪದ ಸ್ಥಳವನ್ನು ಆಯ್ಕೆ ಮಾಡಿ ಮರ್ಹೂಂ ಪಾಣಕ್ಕಾಡ್ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್ ರವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಿಸಿ ಆ ಮಹಾನರು ನಾಮ ನಿರ್ದೇಶನ ಮಾಡಿದರು.* *ಶೈಖುನಾ ಶಂಸುಲ್ ಉಲಮಾ ರವರ ಕುಟುಂಬ ಯಮನೀ ಪರಂಪರೆಯಾಗಿ ದ್ದರಿಂದ ಅದೇ ನಾಮದಿಂದ ಕಾಲೇಜು ಜನ್ಮತಾಳಿತು.*
*ಶೈಖುನಾ ಪಾರನ್ನೂರು ಉಸ್ತಾದ್,ಅರಿಪ್ರ ಕುಞಿಮುಹಮ್ಮದ್ ಮುಸ್ಲಿಯಾರ್ , ಶೈಖುನಾ ಎಂ.ಟಿ ಉಸ್ತಾದ್ ಸಹಿತ ಹಲವು ಉನ್ನತ ವಿದ್ವಾಂಸರು ಈ ಸ್ಥಾಪನೆಯಲ್ಲಿ ಸೇವೆಗೈದಿದ್ದಾರೆ.* *ಶೈಖುನಾ ಶಂಸುಲ್ ಉಲಮಾ ರವರ ಸೇವಕನಾಗಿ (ಖಾದಿಂ)ದ್ದ ಆರ್.ವಿ.ಕುಟ್ಟಿ ಹಸನ್ ದಾರಿಮಿಯವರ ಅವಿಶ್ರಾಂತ ಪ್ರಯತ್ನದ ಫಲವಾಗಿ ಇಂದು ಯಮಾನಿಯ್ಯ ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ.ಪ್ರಸ್ತುತ ಕಾಲೇಜಿಗೆ ಸ್ಥಾಯಿ ವರಮಾನಗಳಿಲ್ಲದಿದ್ದರೂ ಶೈಖುನಾ ರವರ ಮುಹಿಬ್ಬ್ ಗಳ ಸಹಕಾರದಿಂದ ಮುಂದುವರಿಯುತ್ತಿದೆ.*
*ಯಮಾನಿಯ್ಯ ಕಾಲೇಜಿನಿಂದ ಪದವಿ ಪಡೆದ ಯಮಾನಿ ಪಂಡಿತರುಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ.ಮುದರ್ರಿಸ್, ಖತೀಬ್, ಖಾಝಿ, ಪ್ರೊಫೆಸರ್, ವಾಗ್ಮಿ, ಬರಹಗಾರರಲ್ಲದೆ ಸಂಘಟನಾ ಚತುರರಾಗಿ ಮಿಂಚುತ್ತಿದ್ದಾರೆ.* *ಶರೀಅತ್ ಕಾಲೇಜು, ದಹ್ ವಾ ಇಸ್ಲಾಮಿಕ್ ಅಕಾಡೆಮಿ,ಯತೀಂ ಖಾನ, ಹಿಪ್ಲುಲ್ ಖುರಾನ್,ಯಮಾನಿಯ ಜೂನಿಯರ್ ಕಾಲೇಜು ಇತ್ಯಾದಿ ಧಾರ್ಮಿಕ ವಿದ್ಯಾಭ್ಯಾಸ ಸ್ಥಾಪನೆಗಳು ಇಂದು ಯಮಾನಿಯ್ಯ ಅರೇಬಿಕ್ ಕಾಲೇಜಿನ ಅಧೀನದಲ್ಲಿ ನಡೆಯುತ್ತಿದೆ.*
*ಶೂನ್ಯದಿಂದ ಆರಂಭಗೊಂಡ ಈ ವಿದ್ಯಾಸಂಸ್ಥೆಯು ಆರಂಭ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಲ್ಹಮ್ದುಲಿಲ್ಲಾಹ್ ಇದೀಗ ಪದವಿ ಪಡೆದು ಸೇವಾ ಕಾರ್ಯದಲ್ಲಿ ನಿರತರಾಗಿರುವ ಯಮಾನಿಗಳ ಸಹಕಾರ ಸ್ಥಾಪನೆಗೆ ಆನೆಬಲ ಇದ್ದಂತಾಗಿದೆ.*
*ತನ್ನ ಇಪ್ಪತ್ತೆರಡನೇ ಜೈತ್ರಯಾತ್ರೆಯನ್ನು ಪೂರೈಸುವಾಗ ಸಂಸ್ಥೆಗೆ ಸಹಾಯ ಸಹಕಾರ ನೀಡಿದ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲ.ಅಲ್ಲಾಹನು ಎಲ್ಲರಿಗೂ ಅರ್ಹವಾದ ಪ್ರತಿಫಲ ನೀಡಲಿ....*
*22ನೇ ವಾರ್ಷಿಕ ಹಾಗೂ 7ನೇ ಸನದು ದಾನ ಸಮ್ಮೇಳನವು ಜನವರಿ 7,8,9 ಎಂಬೀ ದಿನಾಂಕಗಳಲ್ಲಿ ನಡೆಯುವಾಗ 225 ಯಮಾನಿ ಯುವ ವಿದ್ವಾಂಸರನ್ನು ಸಮುದಾಯಕ್ಕೆ ಸಮರ್ಪಿಸುತ್ತಿದೆ.*
*ಸಮಸ್ತದ ಅಧ್ಯಕ್ಷರೂ, ಮುಸ್ಲಿಂ ಉಮ್ಮತಿನ ಅಂತಿಮ ಶಬ್ದ ಸಯ್ಯಿದುಲ್ ಉಲಮಾ ಶೈಖುನಾ ಅಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಪ್ರಾಂಶುಪಾಲರಾಗಿಯೂ, ಶೈಖುನಾ ವಳವಣ್ಣ ಉಸ್ತಾದ್ ಉಪ ಪ್ರಾಂಶುಪಾಲರಾಗಿಯೂ ಜಾಮಿಅ ಯಮಾನಿಯ್ಯ ಮುನ್ನುಗ್ಗುತ್ತಿದೆ.*
*🖋️ಅಬ್ದುಸ್ಸಲಾಂ ಅಲ್ ಯಮಾನಿ ತುಂಬೆ*