Tulu Nadu

Tulu Nadu Tulu Nadu is a Tulu-speaking region spread over parts of present Karnataka and Kerala States of India.

It consists of the Dakshina Kannada and Udupi districts of Karnataka and the northern parts of the Kasaragod district of Kerala up to the Payaswini River. Mangalore (Kudla), Udupi and Kasaragod are its important cities.

26/02/2026

Kiran Kumar Kodikal 👌👌

Kiran Kumar Kodikal
12/02/2026

Kiran Kumar Kodikal

28/10/2025

ನಾನು ಬೈದೆರುಗಳ ಬಗ್ಗೆ ಬರೆಯುವನಷ್ಟು ದೊಡ್ಡವನು ಖಂಡಿತವಲ್ಲ. ಆದರೆ ನಿನ್ನೆ ನನಗಾದ ಅನುಭವವನ್ನು ಬರೆಯದೆ ತಡೆ ಹಿಡಿಯಲು ನನ್ನಿಂದ ಆಗುತ್ತಲೂ ಇಲ್ಲ. ಲೇಖನ ಸ್ವಲ್ಪ ಉದ್ದವಾಗಬಹುದೇನೋ ಆದರೆ ಬೈದೆರುಗಳ ಭಕ್ತರು ಓದಿ ಅರ್ಥ ಮಾಡಿಕೊಂಡರೆ ಉತ್ತಮ. ಎಲ್ಲರೂ ಓದಿ ಎಂದು ನಾನು ಹೇಳುವುದಿಲ್ಲ ಅದು ಅವರ ವಿವೇಚನೆಗೆ ಬಿಟ್ಟದ್ದು.

ಬೈದೆರ್ಗಳೆಂದರೆ ವೀರ ಪುರುಷರು, ಸಾಮಾಜಿಕ ಹೋರಾಟಗಾರರು ಎನ್ನುತ್ತಾರೆ. ಅದರೊಂದಿಗೆ ತುಳುನಾಡಿನ ಮೂಲ ಪುರುಷರು ಎಂದೂ ಸೇರಿಸಿ ಹೇಳುತ್ತಾರೆ ಆದರೆ ಅವರ ಇತಿಹಾಸ 450-500 ವರ್ಷಗಳೆಂದು 'ಸಮ'ವಿಲ್ಲದ ಶೋಧಕರ ಸಿದ್ದ ಉತ್ತರ ಬರುತ್ತದೆ. 500 ವರ್ಷಗಳ ಇತಿಹಾಸವಾದರೆ ಅವರು ಮೂಲ ಪುರುಷರು ಹೇಗಾಗುತ್ತಾರೆ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲದ ನಾಮರ್ಧರು ನೀನು ಎಡಚರ, ಎಡ ಪಂತಿಯ ನಿನಗೇನು ಗೊತ್ತು ಎಂದವರು ವಯಕ್ತಿಕವಾಗಿ ಜರೆಯಲು ಶುರುವಿಡುತ್ತಾರೆ.ಹಾಗಾದರೆ ಬೈದೆರುಗಳು ಮೂಲ ಪುರುಷರಲ್ಲವೇ? ಖಂಡಿತ ಅವರು ಮೂಲ ಪುರುಷರೆ ಹೇಗೆಂದು ಗೊತ್ತಿಲ್ಲದೆ ಎಲ್ಲರೂ ಬಾಯಿ ಮಾತಿಗೆ ಮೂಲಪುರುಷರೆನ್ನುತ್ತಿದ್ದಾರೆ ಅಷ್ಟೆ. ಹೇಗೆಂದು ನಾನೂ ಹೇಳ ಹೋಗುವುದಿಲ್ಲ ಅದೂ ಇನ್ನೂ ಉದ್ದವಾಗಬಹುದು.

ಗರಡಿ ಆರಾಧನೆಯಲ್ಲಿ ಪೂ ಪೂಜಾನೆಯ ಪೂಜಾರಿಗೆ ಗೌರವ ಇಲ್ಲ, ಮರಿಯಾದೆ ಕೊಡುವುದಿಲ್ಲ ಎಂದು ಅಳುವವರೇ ಜಾಸ್ತಿ. ಆದರೆ ಎಷ್ಟು ಮಂದಿ ಗರಡಿ ಪೂಜಾರಿಗಳು ಬೈದೆರುಗಳಿಗೆ ಅದೇ ಗೌರವ ಕೊಟ್ಟು, ಅವರನ್ನು ಅರ್ಥೈಸಿಕೊಂಡು ಆರಾಧನೆ ಮಾಡಿದ್ದಾರೆ? ಎಂದರೆ ಉತ್ತರ ಶೂನ್ಯ... ಅಲ್ಲ ಆ ಶೂನ್ಯದ ದಾಖಲೆ ಮುರಿಯಲು ಹಿರಿಯ ಗರಡಿ ಪೂಜಾರಿಗಳನ್ನು ಮೀರಿ ಒಬ್ಬ ಕಿರಿಯ ಪೂ ಪೂಜಾನೆಯ ಪೂಜಾರಿ ಹುಟ್ಟಿಕೊಂಡಿದ್ದಾರೆ. ಹೌದು ಬೈಲಡ್ಕದ ವಿಷದ ಮಣ್ಣಿನಲ್ಲಿ ಬೆರ್ಮೆರ್ ಬೈದೆರುಗಳು ಓರ್ವ ಸಾಮಾನ್ಯ ಪೂಜಾರಿಗೆ ಒಲಿದ ರೀತಿ ಅಂತಹುದು. ಅದಕ್ಕೆ ಸಾಕ್ಷಿಯಾಗಿ ಬೆರ್ಮೆರ್ ಬೈದೆರ್ಲ್, ಗಾಳಿ ದೇವರ ಆದಿಯಾಗಿ ಇಂದು ನೊಂದು ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು, ಅದರಲ್ಲೂ ವಿಶೇಷವಾಗಿ ಆರೋಗ್ಯದ ಸಮಸ್ಯೆಗೆ "ಗಾಳಿ ದೇವರ" ಅರಿತು ಅವರು ಕೊಡುವ ಪ್ರಾರ್ಥನೆಯ ಗಂಧಕ್ಕೆ ಪರಿಮಳ ಹುಟ್ಟಿಸುವ ಕೆಲಸವನ್ನು ಗಾಳಿ ದೇವರ ಜೊತೆಗೆ ಬೆರ್ಮೆರ್ ಬೈದೆರುಗಳು ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ.

ಇದು ಬರಿ ಬಾಯಿ ಮಾತಿಗಲ್ಲ ಸಾಕ್ಷಿಯಾಗಿ ಅಲ್ಲಿ ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಕೊನೆಯ ಸ್ಟೇಜ್ನ ಕ್ಯಾನ್ಸರ್ ನಿಂದ ಹಿಡಿದು, ಬಾಯಿ ಬಾರದ ಮಗುವಿಗೂ ಮಾತು ಬರಿಸಿದ ಕೀರ್ತಿ ಬೈಲಡ್ಕ ಗರಡಿಯ ಮಣ್ಣಿಗಿದೆ. ಇದೆರೆಡಲ್ಲ ಇನ್ನೂ ಅನೇಕ ಸೋಜಿಗಗಳನ್ನು ಅಲ್ಲಿನ ಬೈದೆರುಗಳು ಮಾಡಿಕೊಂಡು ಬಂದಿದ್ದಾರೆ. ಇನ್ನೂ ಸಾಕ್ಷಿ ಬೇಕಾದರೆ cervical spondylosis ಆಗಿ ಏನೇನೋ ಮದ್ದು ಮಾಡಿ ಗುಣವಾಗದೆ ಇದ್ದ ನನಗೆ ದಿಕ್ಕು ತೋಚದ ಸ್ಥಿತಿಯಲ್ಲಿ ಇದ್ದಾಗ ದೈರ್ಯವಿತ್ತವರು ಅಲ್ಲಿನ ಆ ಶಕ್ತಿಗಳೇ.

ಯಾವ ಗರಡಿಯಲ್ಲೂ ಆಗದ್ದು ಇಲ್ಲಿ ಹೇಗೆ ಇಷ್ಟೆಲ್ಲಾ ಆಗುತ್ತಿದೆಯೆಂದರೆ ಅದಕ್ಕೆ ಕಾರಣ ಅಲ್ಲಿನ ಗರಡಿ ಪೂಜಾರಿ "ಶರತ್" ರವರು, ನಮ್ಮ ತುಳುವ ಆರಾಧನೆಯನ್ನು 'ಸಮವಿಲ್ಲದ ಶೋಧಕ'ರೆನಿಸಿಕೊಂಡವರು ಅವೈದಿಕ ಎಂದು ಸಿಕ್ಕ ಸಿಕ್ಕ ಸ್ಟೇಜ್ ನಲ್ಲಿ ಬೊಬ್ಬಿಡುತ್ತಾ ದಿಕ್ಕು ತಪ್ಪಿಸುತ್ತಿರುವಾಗ, ಗರಡಿ ಎಂದರೆ ಅಂಗಸಾಧನೆಯ ಕೇಂದ್ರ ಎಂದು ಬಾಂಗ್ ಇಡುವವರ ಮಧ್ಯ ಗರಡಿ ಶುದ್ಧ "ಪ್ರಣವ ತತ್ವ"ಧಾರಿತ ಪರಿಶುದ್ಧ ವೈದಿಕ ಆರಾಧನೆ ಎಂಬುದನ್ನು ಸಾರಿ ಸಾರಿ ಹೇಳಿ ಬ್ರಹ್ಮರ ಅರಿತು ಮಾಡುವ ನಿಜವಾದ "ಬ್ರಾಹ್ಮಣ" ನಾಗಿ ಕಂಡರೆ ಅತಿಶಯೋಕ್ತಿಯಲ್ಲ. ಸನಾತನ ಹೇಳಿದಂತೆ ವರ್ಣದಲ್ಲಿ ಅವರು "ನಿಜ ಬ್ರಾಹ್ಮಣ"ರೆ. ಇಲ್ಲಿ ಜಾತಿಯನ್ನು ನಡುವೆ ತಂದೆ ಎಂದು ನಂಜು ಕಾರುವವರಿಗೆ ನಾನಿಲ್ಲಿ ಜಾತಿಯನ್ನು ಹೇಳುತ್ತಿಲ್ಲ. ನನ್ನ ಉಲ್ಲಾಯರು ಬೆರ್ಮೆರ್ ಬೈದ್ಯರ ನುಡಿಯಂತೆ " ಜಾತಿಯಲ್ಲಿ ಬಿಲ್ಲವ ಕುಲದ ಜೋಕುಲ್ ನೀತಿಡ್ ನೂಲು ಪಾಡಿನಕುಲ್ " ಎಂಬ ಅವರ ವಾಕ್ಯದಂತೆ ಬೈಲಡ್ಕ ದ ಶರತ್ ಪೂಜಾರಿಯವರ ಉಲ್ಲೇಖವನ್ನು ಉದಾಹರಿಸುತ್ತಿದ್ದೇನಷ್ಟೆ.

ಶರತರ ಮತ್ತು ಬೈದೆರುಗಳ ರೀತಿಯ ಒಡನಾಟವನ್ನು ಬೇರೆಯವರ ಬಾಯಲ್ಲಿ ಕೇಳಿದ್ದೆ ಬಿಟ್ಟರೆ ಕಂಡಿರಲಿಲ್ಲ. ಆದರೆ ನಿನ್ನೆ ಕಣ್ಣಾರೆ ಕಾಣುವ ಅವಕಾಶ ನನಗೆ ಒದಗಿ ಬಂದಿತು. ಒಂದು ಸಮಯದಲ್ಲಿ ಎಷ್ಟೋ ಗರಡಿಗಳನ್ನು ಸುತ್ತಿದ್ದ ನನಗೆ ಅಂತಹ ಗರಡಿ ಪೂಜಾರಿಗಳು ಎಲ್ಲೂ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕಂತು ಬೀಳುವ ಲಕ್ಷಣವೂ ಇಲ್ಲ ಬಿಡಿ. ಇವರಲ್ಲೇನು ಅಂತಹ ವಿಶೇಷ ಅಂದರೆ ಇವರು ಸ್ಟೇಜ್ನ ಬಾಂಗ್ ಇಡುವವರ ಮಾತಿಗೆ ಸೊಲ್ಲುಗೊಡಲಿಲ್ಲ. ಬೆರ್ಮೆರ್ ಬೈದೆರ್ಗಳನ್ನು ನಿಜವಾಗಿ ಯಾರೆಂಬುದಾಗಿ ಅರಿಯಲು ನಿಂತರು. ಸಾಮಾಜಿಕ ಶೋಷಣೆಯ ವಿರುದ್ಧ ಅಥವಾ ವೀರ ಪುರುಷರು ತುಳುನಾಡಿನಲ್ಲಿ ಸಹಸ್ರ ಸಂಖ್ಯೆಯಲ್ಲಿರುವಾಗ ಅವರಿಗೆ ಆರಾಧನೆ ದೊರೆಯದೆ ಇವರಿಗೆ ಹೇಗೆ ದೊರೆಯಿತು ಎಂಬ ಪ್ರಶ್ನೆಯನ್ನು ಬೈದೆರ್ಗಳಲ್ಲೇ ಕೇಳಲು ಶುರುವಿಟ್ಟುಕೊಂಡರು. ಅವರಿಗೆ ಬೈದೆರುಗಳು ಉತ್ತರಿಸದರು ಕೂಡ. ಅದು ಹೇಗೆಂದು ಅವರ ಬಾಯಲ್ಲಿ ಕೇಳಿದರೆ ಚೆಂದ.

ಇನ್ನು ನಿನ್ನೆಯ ಘಟನೆಗೆ ಬಂದು ಬಿಡುತ್ತೇನೆ. ನಿನ್ನೆಯ ದಿನ ಬೈಲಡ್ಕದ ಆನೆ ಕೆರೆ ಗರಡಿಯಲ್ಲಿ ಕಾರ್ತೀಕ ಮಾಸದ ದೀಪೋತ್ಸವ ನಡೆಯುವುದರಲ್ಲಿತ್ತು. ಬೆರ್ಮೆರ್ ಬೈದೆರುಗಳು ದರ್ಶನದಲ್ಲಿ ಓಲಗವಾಗುವುದರಲ್ಲಿದ್ದರು. ದರ್ಶನವೂ ಆರಂಭವಾಯಿತು. ಆಗ ಬೈದೆರ್ಗಳು ಶರತ್ ರವರೊಂದಿಗೆ ಮಾತಿಗೆ ಶುರುವಿಟ್ಟುಕೊಂಡಾಗ ಶರತರು ಬಾವೋದ್ಗಾವಕ್ಕೆ ಒಳಗಾಗುತ್ತಿದ್ದರು. ಅವರಿಗೆ ಬೈದೆರ್ಗಳಲ್ಲಿ ಮಾತನಾಡುವಾಗ ಆನಂದ ಬಾಷ್ಪ ಕಣ್ಣಿನ್ನಲ್ಲಿ ಉಕ್ಕುತ್ತಿತ್ತು. ಇದು ಮೊದಲಿಗೆ ನನಗೆ ಆಶ್ಚರ್ಯ ತಂದರೂ ನಂತರ ಬೈದೆರುಗಳು ಮತ್ತವರ ನಡುವಿನ ಪ್ರತಿ ನುಡಿಗಳನ್ನು ಗಮನವಿಟ್ಟು ಆಲಿಸಿದಾಗ ಅವರಿಗಿಂತಲೂ ಹೆಚ್ಚಾಗಿ ಅಳುವ ಸರದಿ ನನ್ನದಾಗಿತ್ತು. ಅಷ್ಟೂ ಜನವಿದ್ದರೂ, ನಾಚಿಕೆ ಬಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಸತ್ಯವಾಗಿ ಹೇಳುತ್ತೇನೆ ಬೈದೆರ್ಗಳನ್ನು ತಾಯಿಯಾಗಿ ಭಕ್ತನ ಮಗುವಾಗಿ ಕಂಡವ ನಾನು, ಆದರೆ ನಿನ್ನೆಯ ದಿನ ಮೊದಲ ಬಾರಿ ನಾ ಕಂಡದ್ದು ಆ ಗರಡಿ ಪೂಜಾರಿ ಶರತರ ಮುಂದೆ ಬೈದೆರುಗಳು ಮಕ್ಕಳಾಗಿದ್ದರು, ಶರತರು ತಾಯಿಯ ಸ್ಥಾನದಲ್ಲಿದ್ದರು. ಗರಡಿ ಪೂಜಾರಿ ಹೇಳಿದಂತೆ ಬೈದೆರುಗಳು ಇದ್ದರು, ನುಡಿಯನ್ನು ಸಹ ಬೈದೆರುಗಳು ಆ ಪೂಜಾರಿಯ ಮೀರಿ ಹೋಗಿರಲಿಲ್ಲ. ನಾ ಕಂಡದ್ದು ಒಬ್ಬ" ಭಕ್ತ ಮತ್ತು ದೇವರ" ಪ್ರೇಮದ ಪರಾಕಾಷ್ಟೆಯನ್ನು, ಅದು ಎಸ್ಟಿತ್ತೆಂದರೆ ಅದನ್ನು ಅಲ್ಲಿ ಬೈದೆರುಗಳ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತು.

ದುಂಬು ಮೊಗ ಪಾಲೆದ ಇತ್ತುಂಡ್ ಮನಸ್ ಬಂಗಾರ್ದ ಇತ್ತುಂಡ್, ಇತೆ ಮೊಗ ಬಂಗಾರ್ದ ಆತುಂಡ್ ಮನಸ್ ಪಾಲೆದ ಆತುಂಡು ಎಂದು ರಂಜಿಸುವ ಬಣ್ಣ ಬಣ್ಣದ ಮಾತುಗಳ ಆಡಿ ಚಪ್ಪಾಳೆ ತಟ್ಟಿಸಿಕೊಳ್ಳುವ, ಈಗ ಕಾರಣಿಕ ಕಮ್ಮಿ ಆಗಿದೆಯೆಂದು ಹೇಳುವ ಸ್ಟೇಜ್ ಆರಾಧಕರಿಗೆ ಹೇಳುವುದಿಷ್ಟೆ, 'ಭಕ್ತಿ ಇದ್ದರೆ ಶಕ್ತಿ' ಯಾವುದೂ ಕಡಿಮೆಯಾಗಿಲ್ಲ ನಾವು ಮಾಡುವುದ ಅರಿತು ಮಾಡಿದಾಗ ಅದ್ಭುತವೊಂದು ತಯಾರಾಗುತ್ತದೆ. ಅದನ್ನು ನಾನು ನಿನ್ನೆ ಬೈಲಡ್ಕದ ಮಣ್ಣಿನಲ್ಲಿ ಕಂಡೆ.

ಬೈದೆರುಗಳ ಭಕ್ತನಾಗಿ ಜನ್ಮ ಸಾರ್ಥಕ
ಧನ್ಯತ ಮನೋಭಾವ

ಈ ಅವಕಾಶ ಕಲ್ಪಿಸಿದ ನಿಜವಾದ "ಪೂ ಪೂಜಾನೆಯ ಪೂಜಾರಿ" ಶರತವರಿಗೂ ಧನ್ಯವಾದಗಳು...

ಬರಹ :- ಸಾಮಾಜಿಕ ಜಾಲತಾಣದಿಂದ.

09/10/2025

ನಕಲಿಗಳ ಮುಖ ಕಳಚಿ ಬಿದ್ದಂತಿದೆ.... ಯಾರು ಇರಬಹುದು ನಕಲಿ Olatagra???????????

07/10/2025

ಹೊಸ ಕಾಂತಾರ ಸಿನೆಮಾ ರಿಲೀಸ್ ಆದಾಗ ಒಂದು ವರ್ಗ ಈ ಸಲ ಕೂಡ ವಿರೋಧಿಸಿದೆ.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಸಿನೆಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದ್ರು ಕರ್ನಾಟಕದ ಅವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಕಡೆ ಮೆಚ್ಚಿಕೊಂಡಷ್ಟೇ ನಕಶಿಖಾಂತ ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಕಾಣಸಿಗ್ತಿವೆ.
ಅದಕ್ಕೆ ಪ್ರತ್ಯುತ್ತರವಾಗಿ ಒಂದಿಷ್ಟು ಜನ ಲಾಜಿಕ್ ಅನ್ಸರ್ ಕೂಡ ಕೊಟ್ಟಿದ್ದಾರೆ, ಕಾಂತಾರ ತಪ್ಪಾದರೆ ದೇವಿ ಮಹಾತ್ಮೆ ಯಕ್ಷಗಾನ, ದೈವದ ಹೆಸರಲ್ಲಿ ಮಾಡಿರುವಂತ ನಾಟಕಗಳೂ ತಪ್ಪು, ಒಂದಿಷ್ಟು ಮುಂದೆ ಹೋಗಿ ಕನ್ನಡಿಗರ ಆರಾಧ್ಯ ದೈವ ವರನಟ ಡಾ.ರಾಜ್ ಅವರ ಅಭಿನಯದ ಕೆಲವು ಚಿತ್ರಗಳನ್ನು ಕೂಡ ಪ್ರಸ್ತಾಪ ಮಾಡಿರ್ತಾರೆ.
ಕಾಂತಾರಾ ಸಿನಿಮಾ ಮೆಚ್ಚಿಕೊಂಡವರು obviously ಇಂತಹ ಉದಾಹರಣೆಗಳನ್ನು ಕೊಡ್ತಾ ಇದ್ದಾರೆ.
ಆದರೆ ದೇಶದ ಎಲ್ಲಾ ಕಡೆ ಕೊಂಡಾಡಲ್ಪಟ್ಟ ಚಿತ್ರವನ್ನು ಕರಾವಳಿ ಕರ್ನಾಟದಲ್ಲಿ ಬಹಳಷ್ಟು ಜನ ವಿರೋಧ ಮಾಡಲು ಕಾರಣ ಏನು??

ಮೊದಲನೆಯದಾಗಿ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ದೇವರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ದೈವಕ್ಕೆ ಕೂಡ ಅಷ್ಟೇ ಪ್ರಾಶಸ್ತ್ಯವಿದೆ, ತುಸು ಹೆಚ್ಚು ಇದೆ ಅಂದ್ರು ತಪ್ಪೇನಾಗಲ್ಲ.
ತುಳುವರು ಸಂಭೋದಿಸುವ ಸಂದರ್ಭದಲ್ಲಿ ಕೂಡ ದೈವ-ದೇವರು ಅನ್ನುತ್ತಾರೆಯೇ ಹೊರತು ದೇವರು ದೈವ ಅನ್ನಲ್ಲ, ಇದು ತುಳುನಾಡಿನಲ್ಲಿ ದೈವಕ್ಕೆ ಇರುವ ಮಹತ್ವ ಎಂತದ್ದು, ಯಾವ ರೀತಿಯಲ್ಲಿ ಜನರ ಭಾವನೆಯಲ್ಲಿ ಹಾಸುಹೊಕ್ಕಾಗಿದೆ ಎಂದು ಅರ್ಥೈಸಿಕೊಳ್ಳಬಹುದು.

ನಿಮ್ಮ ಗಮನಕ್ಕಿರಲಿ, ದೈವದ ವೇಷ ಭೂಷಣ ಹಾಕಿಕೊಳ್ಳುವುದು ಒತ್ತಟ್ಟಿಗಿರಲಿ, ಹೆಸರು ಎತ್ತೋದಿಕ್ಕೆ ಹೆದರುವ ಸ್ಥಿತಿ ಇದ್ದಿತ್ತು, ಈಗಲೂ ಆ ಭಯ ಇಲ್ಲ ಅನ್ನಕ್ಕಾಗಲ್ಲ , ಎಲ್ಲರೂ ದೇವರನ್ನು ಭಕ್ತಿಯಿಂದ ಕಾಣುತ್ತೆವೆ, ಆದ್ರೆ ದೈವದ ಮೇಲೆ ತುಳುನಾಡು ಭಾಗದ ಜನರಿಗೆ ಇರುವುದು "ಭಯ-ಭಕ್ತಿ".
ಹಾಗಂತ ಹೆಸರು ಕೇಳಿದ್ರೆ ಮೈಲು ದೂರ ಓಡಿ ಹೋಗ್ತಾರೆ ಅನ್ನೋದೂ ಅರ್ಥವಲ್ಲ, ದೈವಗಳಿಗೆ ಅವನು/ಅವಳು ಎಂದು ಕರೆಯುವಷ್ಟು ಪ್ರೀತಿ ಹೊಂದಿರುವ ಹಿರಿಯರನ್ನು ಇಂದಿಗೂ ನಾವು ಕಾಣ್ತೇವೆ, ಕೆಲವು ದೈವದ ಹೆಸರುಗಳನ್ನು ಎತ್ತಿದರೆ ಮೈ ರೋಮಗಳು ಸೆಟದು ನಿಲ್ಲುವುದು, ಕರಾವಳಿ ಕರ್ನಾಟದ ಜನ ದೈವದ ಬಗ್ಗೆ ಎಂತಹ ಪವಿತ್ರ ಭಾವನೆ ಹೊಂದಿದ್ದಾರೆ ಅನ್ನೋದು ಎಲ್ಲರಿಗೂ ಊಹೆ ಆಗುವಂತದ್ದು.

ಪ್ರತೀ ದೈವಗಳಿಗೂ ಅದರ ಪೋಷಾಕು ಧರಿಸಿ, ತಲೆಗೆ ಕಟ್ಟುವ ಪದ್ದೆಯಿ (ಕಿರೀಟ ಅಂತ ನೀವೇನು ಅಂದುಕೊಳ್ತೀರಿ ನೋಡಿ ಅದು ), ಕೈಲಿ ಹಿಡಿಯುವ ಖಡ್ಸಲೇ, ಮುಖಕ್ಕೆ ಹಚ್ಚುವ ಉರುಂದಲ ಇವೆಲ್ಲ ಧಾರಣೆ ಮಾಡಿ ಗಗ್ಗರ ಸೇವೆ ಕೊಡುವ ಪಂಗಡವೇ ಬೇರೆ ಇದೆ (ನೀವೇನು ಆ ವೇಷ ಧರಿಸಿ ಕುಣಿಯುವುದು ನೋಡ್ತಿರಿ ನೋಡಿ ಅದು ಸಾಮಾನ್ಯ ಅಲ್ಲ, ಅಥವಾ ಅದು ಕುಣಿತವು ಅಲ್ಲ ಅದಕ್ಕೆ ವಿಶೇಷವಾಗಿ ಗಗ್ಗರ ಸೇವೆ ಎಂದೇ ವ್ಯಾಖ್ಯಾನ ಮಾಡ್ತೇವೆ) , ಅವರು ಅದರ ಚಾಕಿರಿಯನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರ್ತಿದ್ದಾರೆ.

ತಲೆ ಮೇಲಿಂದ ಕಾಲಬುಡದ ವರೆಗೆ ತೊಡುವ ಪ್ರತೀ ವಿಷಯಕ್ಕೆ ಕೂಡ ಅದರದೇ ಆದ ಮಹತ್ವ ಇದೆ, ಪ್ರತಿಯೊಂದನ್ನು ತೊಡುವ ಮುನ್ನ ವಿಶಿಷ್ಟವಾದ ಪುನಸ್ಕಾರಗಳನ್ನು ಮಾಡಿ, ಅಪ್ಪಣೆ ಪಡೆದ ನಂತರವೇ ಅವುಗಳನ್ನು ತೊಡುವುದು.

ಇಲ್ಲಿ ವಿರೋಧ ಅನ್ನೋದು ಅವಿರ್ಭವ ಆಗಿರೋದು ಯಾವುದೊ ಸಿನೆಮಾ ಬಂದು ದುಡ್ಡು ಮಾಡ್ತಾ ಇದೆ ಅಂತಲ್ಲ, ನಮ್ಮ ಭಾವನೆ, ನಮ್ಮ ಸಂಸ್ಕೃತಿ ಸಿನೆಮದ ಮೂಲಕ ಎಲ್ಲಾ ಕಡೆ ಹರಡಿರುವುದನ್ನು ಜನ ವರ್ಜ್ಯ ಮಾಡ್ಕೋತ ಇಲ್ಲ ಅನ್ನೋದು ಅದರರ್ಥ ಅಲ್ಲ.
ಇಷ್ಟೊಂದು ಜತನದಿಂದ ಮಾಡಿಕೊಂಡು ಬಂದ ಆಚರಣೆಯನ್ನು ಚಪ್ಪರ ಹಾಕಿ ಸಗಣಿ ಸಾರಿಸಿ ವಿವಿಧ rule and regulation, rituals ಮೂಲಕ ಅದರದ್ದೇ ಆದ ಜಾಗದಲ್ಲಿ ಮಾಡ್ತಿದ್ದ ಒಂದು ಭಯಭಕ್ತಿ ಮಿಶ್ರಿತ ಸಂಸ್ಕೃತಿಯ ಆಚರಣೆಯನ್ನು ಯಾವುದೇ ರೀತಿಯ ಕಟ್ಟು ಪಾಡು ಇಲ್ಲದೆ, ಶುದ್ಧಚಾರ ಇಲ್ಲದೆ ಕಾಲಿಗೆ ಗೆಜ್ಜೆ ಹಾಕಿ ( ಗಗ್ಗರ ಕಟ್ಟುವುದು ಕಾಲಿಗೆ, ಅದರ ಮುನ್ನ ಬಹಳ ಕಟ್ಟುಪಾಡು ಇದೆ ಅವೆಲ್ಲ ಆದ ನಂತರವಷ್ಟೇ ಗಗ್ಗರವನ್ನು ದೈವನರ್ತಕ ಕಾಲಿಗೆ ಕಟ್ಟುತ್ತಾರೆ ) ಮುಖಕ್ಕೆ ಬಣ್ಣ ಹಾಕಿ, ಕೈಲಿ ತಲವಾರ ಹಿಡಿದು, ಯಾವುದೋ ಹೋಲಿಕೆ ಆಗುವ ಬಟ್ಟೆ ಹಾಕಿ, ತಲೆಗೆ ವಿಚಿತ್ರ ಕಿರೀಟ ಹಾಕಿ ತಿಯೇಟರ್ ಮದ್ಯೆ ಕುಣಿದಾಗ,
ಕಷ್ಟ ಅಂತ ಅಂದಾಗ ಸಾವಿರದಲ್ಲಿ ಒಂದು ಬಾರಿ ಮಾತ್ರ ನಿಟ್ಟುಸಿರಿನಲ್ಲಿ ದೈವದ ಹೆಸರನ್ನು ಉಸುರುವ ಜನರ ನಂಬಿಕೆಗೆ, ಭಾವನೆಗೆ ದಕ್ಕೆ ಆಯ್ತು ಅನ್ನದೆ ಇನ್ನೇನು ಹೇಳ್ತಾರೆ?

ರೋಡಲ್ಲಿ ಆವೇಶ ತೋರ್ಸೋದು, ಚಿತ್ರಮಂದಿರದಲ್ಲಿ ಆವಾಹನೆ ಆದ ರೀತಿ ವರ್ತನೆ, ದೈವದ ಅನುಕರಣೆ ಮಾಡುವ ಕೂಗು, ಇವೆಲ್ಲ ಖಂಡಿತವಾಗಿಯೂ ಸಂಪ್ರದಾಯಸ್ಥ, ದೈವಭಕ್ತ ತುಳುವರ ನಂಬಿಕೆಯ ಮೇಲೆ ಆಗುತ್ತಿರುವ ಬಲವಾದ ಪ್ರಹಾರ.

ಇದೇನು ನಿಲ್ಲಲ್ಲ, ಯಾಕಂದ್ರೆ ಸಿನೆಮಾದಲ್ಲಿ ಮಾಡಿದ್ದಾರೆ, ನಾವು ಮಾಡಿದ್ರೇನು ಅನ್ನುವ ಮನಸ್ಥಿತಿ ಜನರಿಗೆ ಬಂದು ಬಿಟ್ಟಿದೆ, ಆರಾಧನಾ ಪದ್ಧತಿ ಸಿನೆಮಾದಲ್ಲಿ ದೈವವನ್ನು ತೋರಿಸಿದ ನಂತರ ಸಹಜವಾಗಿ ಅದರ ನೈಜ್ಯ ತಿಳುವಳಿಕೆ ಇಲ್ಲದ ಜನರಿಗೆ ಮನೋರಂಜನೆ ಅನ್ನಿಸಿಬಿಟ್ಟಿದೆ.
ಖಂಡಿತವಾಗಿಯೂ ಗಗ್ಗರ ಸೇವೆ ಮನೋರಂಜನೆ ಅಲ್ಲ, ಅದನ್ನು ವರ್ಷಾವಧಿ ನೇಮ, (ನೇಮ ಅಂದ್ರೆ ಕೋಲ, ಕೋಲ ಅಂದ್ರೆ ಗಗ್ಗರ ಸೇವೆ ಎಲ್ಲಾ ಒಂದೇ ಅರ್ಥದಲ್ಲಿ ಇರುವಂತವು) ಹರಕೆಯ ನೇಮ ಈತರ ಮಾಡಿಕೊಂಡು ಬರುವ ಪವಿತ್ರ ಆಚರಣೆ, ಸ್ಟೇಜ್, ಬೀದಿ, ಸ್ಕ್ರೀನಲ್ಲಿ ನೋಡುವ ವಿಚಾರ ಅದಲ್ಲ.

ಜನ ಯಾಕೆ ಈ ಸಿನೆಮಾ ವಿರೋಧ ಮಾಡಿದ್ರು, ಮಾಡ್ತಾ ಇದ್ದಾರೆ ಅನ್ನೋದು ಹೇಳೋದಿಕ್ಕೆ ನಾನು ದೈವದ ಕೊಡಿಯಡಿಯ ವಿವಿಧ ಕಟ್ಟುಪಾಡುಗಳನ್ನು ಎಳ್ಳಷ್ಟೂ ತಿಳಿಸಿಲ್ಲ, ನನ್ನ ತಿಳುವಳಿಕೆ ಇಷ್ಟೇ ಇರೋದು, ಇದನ್ನು ಮೀರಿ ಇರೋದು ಬಹಳಷ್ಟಿವೆ.

ಸಿನೆಮಾ ನೋಡಿ ದೈವವನ್ನು ಅನುಕರಣೆ ಮಾಡುವ ಗೋಜಿಗೆ ಯಾರೂ ಹೋಗಬಾರದು, ದೈವದ ನರ್ತನ ಖಂಡಿತವಾಗಿಯೂ ತಮಾಷೆ, ಮನರಂಜನೆಯ ವಿಚಾರ ಅಲ್ಲ, ಕರಾವಳಿ ಕನ್ನಡಿಗರ ಈ ಪವಿತ್ರ ಸಂಸ್ಕೃತಿಯ ಆಚರಣೆಯನ್ನು ದಯವಿಟ್ಟು ಗೌರವಿಸಿ ಅನ್ನುವುದು ಈ ಲೇಖನದ ಉದ್ದೇಶ.
Credit
Akshaya VP

ತುಳುನಾಡು Kudorli ಗೋಕರ್ಣನಾಥ ಶಾರದಾ .Pic Credit Daya Kukkaje
02/10/2025

ತುಳುನಾಡು Kudorli ಗೋಕರ್ಣನಾಥ ಶಾರದಾ .
Pic Credit Daya Kukkaje

ಇದು ವ್ಯಕ್ತಿ ಆದಷ್ಟು ಬೇಗ ತುಳುನಾಡು ಬಂದು ದೈವದ ಕಾಲಿಗೆ ಬಿದ್ದು ಕ್ಷಮೆ ಕೇಳುವ ದಿನ ಬಂದೆ ಬರುತ್ತೆ ಆದರೂ ಬೇಗ ಇವನ ಮಾನಸಿಕ ರೋಗಕ್ಕೆ ಮದ್ದು ಸ...
02/10/2025

ಇದು ವ್ಯಕ್ತಿ ಆದಷ್ಟು ಬೇಗ ತುಳುನಾಡು ಬಂದು ದೈವದ ಕಾಲಿಗೆ ಬಿದ್ದು ಕ್ಷಮೆ ಕೇಳುವ ದಿನ ಬಂದೆ ಬರುತ್ತೆ ಆದರೂ ಬೇಗ ಇವನ ಮಾನಸಿಕ ರೋಗಕ್ಕೆ ಮದ್ದು ಸಿಗಲ್ಲ.

02/10/2025

ಎಚ್ಚರ ಕಾಂತಾರ ನೋಡಿ ಅದರಲ್ಲಿ ಬರುವ ದೈವ ದೃಶ್ಯ ವನ್ನು ಯಾರಾದರೂ ಅನುಕರಣೆ ಮಾಡಬೇಡಿ ತುಳುನಾಡು ಆಚಾರ ವಿಚಾರಕ್ಕೆ ದಕ್ಕೆ ತರಬೇಡಿ

#ಕಾಂತಾರ

02/10/2025

ನಮ್ಮ ಸಂಸ್ಕೃತಿ ನಮ್ಮ ಜವಾಬ್ದಾರಿ

ನಮ್ಮ ಸಂಸ್ಕೃತಿ ಸೋಶಿಯಲ್ ಮೀಡಿಯಾ ಸಂಸ್ಕೃತಿ ಅಲ್ಲ.. ಸ್ವಯಂಘೋಷಿತ _______ ಗಳಿಗೆ ಅರ್ಪಣೆ

01/10/2025

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ದೈವಾರಾಧನೆಗೆ ಸಂಬಂಧಿಸಿದಂತೆ ಹಲವಾರು ಪೋಸ್ಟ್‌ಗಳು ಹರಿದುಬರುತ್ತಿವೆ. ಕೆಲವರು ದೈವಾರಾಧನೆ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು “ಗುತ್ತಿಗೆ ಪಡೆದವರಂತೆ” ಪ್ರತಿದಿನ ಹಂಚಿಕೊಂಡು, ಅಸಂಬದ್ಧವಾದ ಅರ್ಥಗಳನ್ನು ಕೊಡುತ್ತಿದ್ದಾರೆ.
ಇಂತಹ ಪೋಸ್ಟ್‌ಗಳ ಹಿಂದಿರುವ ನಿಜವಾದ ಉದ್ದೇಶವೇನು?
ಅವರು ನಿಜವಾಗಿಯೂ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಾರೆಯೇ, ಅಥವಾ ಕೇವಲ ವೈಯಕ್ತಿಕ ಲಾಭಕ್ಕಾಗಿ ನಾಟಕವಾಡುತ್ತಿದ್ದಾರೆ? ಎಂಬ ಪ್ರಶ್ನೆ ಮೂಡುತ್ತದೆ.ಜನರಲ್ಲಿ ಪ್ರಶ್ನೆಗಳು ಎದ್ದಾಗ, ಸಮರ್ಥನೆಯೊಂದಿಗೆ ಉತ್ತರಿಸುವ ಬದಲು, ಬ್ಲಾಕ್ ಮಾಡುವುದೋ, ಕಾಮೆಂಟ್ ಅಳಿಸುವುದೋ ಇವರ ಕ್ರಮ. ಇಂತಹ ವರ್ತನೆ ಸ್ವತಃ ಸಂಶಯ ಹುಟ್ಟಿಸುತ್ತದೆ.ತುಳುನಾಡು ಜನರಿಗೆ ಇಲ್ಲಿ ಒಂದು ವಿನಂತಿ:
ಅಂತಹವರ ಹಿಂದೆ ಅಂಧವಾಗಿ ಹೋಗಬೇಡಿ. ಅವರ ಹೇಳಿಕೆಯನ್ನೇ ಸತ್ಯವೆಂದು ಒಪ್ಪಿಕೊಂಡು ತಲೆ ಅಲ್ಲಾಡಿಸಬೇಡಿ. ಯೋಚಿಸಿ, ಪರಿಶೀಲಿಸಿ, ನಂತರವೇ ನಂಬಿ. ನಮ್ಮ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಪ್ರತಿಯೊಬ್ಬರ ಮೇಲಿದೆ.

29/09/2025

Dhanush shetty ಅವರೇ ತಾವು ನಿನ್ನೆ ಫೇಸ್ಬುಕ್ ಪೇಜ್ ನಲ್ಲಿ ಹಾಕಿದ ಪೋಸ್ಟ್ಗೆ ಬಂದಿರುವ ಎಲ್ಲಾ ಕಾಮೆಂಟ್ಸ್ ಡಿಲೀಟ್ ಮಾಡಿರುತೀರ. ನಿಮ್ಮ ಉತ್ತರ ಬೇಕಿದೆ ಪ್ರಶ್ನೆಗೆ ನಿಮ್ಮ Facebook ಪೇಜ್ ನಲ್ಲಿರುವ ಪೋಸ್ಟ್ ಹಾಕಿದ ಕಾಮೆಂಟ್ಸ್ screenshot ಇದೆ.... ವೈಧಿಕ ಅವೈದಿಕ ಅಂಥ ಹೇಳೋ ನೀವ್ಪ್ರಶ್ನೆ ಉತ್ತರ ಕೊಡದೆ ನಮ್ಮನ್ನು ಬ್ಲಾಕ್ ಮಾಡಿದ್ರಿ.. ತುಳುವ ಜನರನ್ನು ನಿಮ್ಮ ಉತ್ತರ ಕೊಡದೆ ಕಾಮೆಂಟ್ಸ್ ಡಿಲೀಟ್ ಮಾಡಿದರಂತೆ ಮಂಗ ಮಾಡಲು ಸಾಧ್ಯವಿಲ್ಲ.. ಉತ್ತರ ಕೊಡಿ.. ಪೋಸ್ಟ್ ಕನ್ನಡಲ್ಲಿ ಇದೆ ಎಲ್ಲರೂ ತಿಳಿಯಲಿ.ನಿಮ್ಮ ಉತ್ತರದ ನಿರೀಕ್ಷೆಯಲ್ಲಿ....

Address

Mangalore
575008

Website

Alerts

Be the first to know and let us send you an email when Tulu Nadu posts news and promotions. Your email address will not be used for any other purpose, and you can unsubscribe at any time.

Share