SDPI Kurdi

SDPI Kurdi SDPI Kurdi

13/09/2023
17/08/2023

77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2023

77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

11/08/2023

10/08/2023

ವಿಶ್ವ ಆದಿವಾಸಿ ಸ್ವಾಭಿಮಾನಿ ದಿನಾಚರಣೆಯ ಅಂಗವಾಗಿ, ಹುಬ್ಬಳ್ಳಿ - ದಾರವಾಡ ಜಿಲ್ಲಾ SDPI ವತಿಯಿಂದ ಹಮ್ಮಿಕೊಳ್ಳಲಾಗಿದ್ದ '"ಆದಿವಾಸಿಗಳ ಬದುಕು ಮತ್ತು ಸವಾಲುಗಳು ವಿಚಾರ ಸಂಕಿರಣ" ದಲ್ಲಿ ಸ್ಥಳೀಯ ಆದಿವಾಸಿ ಸಮುದಾಯಗಳಾದ ಸುಡಗಾಡ ಸಿದ್ದರು, ಬುಡಗ ಜಂಗಮ, ಹರಣಿ ಶಿಕಾರಿ, ದುರ್ಗಮುರ್ಗಿ ಸೇರಿದಂತೆ ಆದಿವಾಸಿ ಮುಖಂಡರನ್ನು ಸನ್ಮಾನಿಸಲಾಯಿತು.

ವಿಚಾರ ಸಂಕಿರಣ ದಲ್ಲಿ ಕೈಗೊಂಡ ನಿರ್ಣಯಗಳು

1. ಆದಿವಾಸಿಗಳ ವಿರುದ್ದದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ

ಆದಿವಾಸಿಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕಾನೂನು ಇರುವುದು ಎಷ್ಟು ನಿಜವೋ, ಆ ಕಾನೂನುಗಳಿಂದ ಆ ಸಮುದಾಯಕ್ಕೆ ನ್ಯಾಯ ಪ್ರಧಾನವಾಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ . ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಸಾವಿರದಷ್ಟು ಪ್ರಕರಣಗಳು ಆದಿವಾಸಿಗಳ ವಿರುದ್ಧ ನಡೆಸಲಾಗುವ ದೌರ್ಜನ್ಯದ ವಿಚಾರದಲ್ಲಿ ದಾಖಲಾಗುತ್ತವೆ. ಆದರೆ ಆ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಕೇವಲ 7% ಪ್ರಕರಣಗಳಲ್ಲಿ ಮಾತ್ರ. ಹೀಗಿರುವಾಗ ಆದಿವಾಸಿಗಳ ವಿರುದ್ಧ ದೌರ್ಜನ್ಯ ಎಸಗಲು ಮುಂದಾಗುವವರಿಗೆ ಕಾನೂನಿನ ಭಯ ಇರಲು ಸಾಧ್ಯವೆ? ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕು. ಈ ಪ್ರಕರಣ ಮತ್ತು ಶಿಕ್ಷೆ ಅನುಪಾತಕ್ಕೆ ಪೋಲಿಸ್, ನ್ಯಾಯ ವ್ಯವಸ್ಥೆ ಮತ್ತು ಅಧಿಕಾರಿ ವರ್ಗಗಳು ಎಡವುತ್ತಿರುವುದಕ್ಕೆ ಹೊಣೆಗಾರಿಕೆಯನ್ನು ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

2. ಧಾರವಾಡದ ಅಣ್ಣಿಗೇರಿಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಂತೆ ವಾಸಿಸುತ್ತಿರುವ ಅಲ್ಲಿನ 110 ಆದಿವಾಸಿ ಕುಟುಂಬಗಳಿಗೆ ತಕ್ಷಣ ಹಕ್ಕುಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

3. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್ಟಿಆರ್ಐ) ಹರಣ ಶಿಕಾರಿ ಬುಡಕಟ್ಟು ಜನಾಂಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

4. ಆದಿವಾಸಿಗಳ ನಿಖರ, ವೈಜ್ಞಾನಿಕ ಜನಗಣತಿ ನಡೆಸಬೇಕು. ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿಗಧಿ ಮಾಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.




ದಕ್ಷಿಣ ಕನ್ನಡ ಜಿಲ್ಲೆಯ 3 ಅತೀದೊಡ್ಡ A grade ಗ್ರಾಮ ಪಂಚಾಯತ್ ಗಳಲ್ಲಿ ಇನ್ನು ಮುಂದೆ SDPI ಆಡಳಿತಸತ್ಯಕ್ಕೆ ಜಯವಿದೆ.ಜಗದೊಢೆಯನಿಗೆ ಸರ್ವಸ್ತುತ...
10/08/2023

ದಕ್ಷಿಣ ಕನ್ನಡ ಜಿಲ್ಲೆಯ 3 ಅತೀದೊಡ್ಡ A grade ಗ್ರಾಮ ಪಂಚಾಯತ್ ಗಳಲ್ಲಿ ಇನ್ನು ಮುಂದೆ SDPI ಆಡಳಿತ

ಸತ್ಯಕ್ಕೆ ಜಯವಿದೆ.
ಜಗದೊಢೆಯನಿಗೆ ಸರ್ವಸ್ತುತಿಗಳು
🛺🛺🛺

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಕುರ್ಡಿ ಗ್ರಾಮ ಘಟಕ* ವತಿಯಿಂದ ಇಂದು ದಿನಾಂಕ : 06-08-202...
06/08/2023

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಕುರ್ಡಿ ಗ್ರಾಮ ಘಟಕ* ವತಿಯಿಂದ ಇಂದು ದಿನಾಂಕ : 06-08-2023 ರಂದು ಕುರ್ಡಿ ಗ್ರಾಮದ ಖಬರಸ್ತನ್ ದಲ್ಲಿ ಬೆಳೆದಿದ್ದ ಬೇಲಿ, ಮುಳ್ಳು ಕಂಟೆಯನ್ನು ತೆಗೆಯುವ ಮೂಲಕ ಸ್ವಚ್ಛ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕುರ್ಡಿ ಗ್ರಾಮ ಘಟಕ *ಅಧ್ಯಕ್ಷರಾದ ಮೆಹಬೂಬ್, ಉಪಾಧ್ಯಕ್ಷರಾದ ಸಯ್ಯದ್ ಮೆಹಬೂಬ್, ಕಾರ್ಯದರ್ಶಿಗಳಾದ ಸಯ್ಯದ್ ರಸೂಲ್, ಜಂಟಿ ಕಾರ್ಯದರ್ಶಿಗಳಾದ ಅಲ್ತಾಫ್ ಹಾಗೂ ಖಜಂಚಿಗಳಾದ ಸಯ್ಯದ್ ಹುಸೇನ್ ಬಾಷ* ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರು ಹಾಜರಿದ್ದರು.

Address

Kurdi
Manvi
584203

Website

Alerts

Be the first to know and let us send you an email when SDPI Kurdi posts news and promotions. Your email address will not be used for any other purpose, and you can unsubscribe at any time.

Share