Kudremukh

Kudremukh KUDREMUKH MADE IN HAVEN

ನಮ್ಮ ಕಳಸ
29/05/2021

ನಮ್ಮ ಕಳಸ

13/08/2020
17/08/2019

*ದಯವಿಟ್ಟು ಎಲ್ಲರೂ ಗಮನಿಸಿ* : ನಿರಾಶ್ರಿತ ನಮ್ಮವರ ನೆರವಿಗಾಗಿ ಹಲವು ಮಾಹಿತಿಗಳನ್ನು ಕಲೆಹಾಕುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಗ್ರೂಪಿನಲ್ಲಿ ಸಕ್ರಿಯರಾಗಿರುವ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಹಲವರನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗಿದ್ದು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಮೂಲಕ ಈ ಕೆಳಕಂಡಂತೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. 1.ನಿರಾಶ್ರಿತ ನಮ್ಮವರ ಸಂಪೂರ್ಣ ವಿವರ ಪಡೆಯಲು ಇನ್ನು ನಮಗೆ ಸ್ವಲ್ಪ ಸಮಯ ಬೇಕಾಗಿದ್ದು ನೆರವು ನೀಡಬಹುದಾದ ಸಂತ್ರಸ್ತರನ್ನು ಮುಂದಿನ ದಿನಗಳಲ್ಲಿ ಗುರುತಿಸಿ ವಿವರ ತಿಳಿಸುವುದು. 2.ಈಗಾಗಲೇ ನೆರೆ ಅನಾಹುತ ಸಂಭವಿಸಿ ಹಲವು ದಿನಗಳು ಕಳೆದಿದ್ದು ತುರ್ತಾಗಿ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಚರ್ಚಿಸಿ ನಮ್ಮ ಕೈಲಾದಷ್ಟು ಆರ್ಥಿಕ ಹಾಗೂ ಇತರೆ ಗೃಹ ಬಳಕೆ ಸಾಮಾಗ್ರಿಗಳ ನೆರವು ನೀಡುವುದು. 3.ಸಂಗ್ರಹಣೆಗಾಗಿ ಪ್ರಮುಖ ಸ್ಥಳಗಳಲ್ಲಿರುವ ಸಕ್ರಿಯರಾಗಿರುವ ನಮ್ಮವರಲ್ಲೊಬ್ಬರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವುದು. 4.ನೆರವಿನ ಸಂಗ್ರಹಣೆಗಾಗಿ ಅವರ ವೈಯಕ್ತಿಕ ಒಪ್ಪಿಗೆಯೊಂದಿಗೆ ಚೇತನ್ ಗುರುಪ್ರಸಾದ್ ಮೆಣಸಿನಹಾಡ್ಯ, ಪದ್ಮನಾಭ ಮೇಗೂರು, ವಾಸು ಯಡಗುಂದ, ಮಣಿಶೇಖರ್ ಬಳ್ಳಿಕೊಂಡ ಇವರನ್ನು ಗುರುತಿಸಲಾಗಿದೆ ಹಾಗೂ ಕಳಸ ಭಾಗದಲ್ಲಿರುವ ನಮ್ಮವರಲ್ಲಿ ಯಾರಾದರು ಈ ಬಗ್ಗೆ ಆಸಕ್ತಿ ತೋರಿದಲ್ಲಿ ಅವರನ್ನು ಸಹ ಹಾಗೂ ಇತರೆ ಯಾರಾದರೂ ನಮ್ಮೊಂದಿಗೆ ಸಹಕರಿಸುವ ಮನಸ್ಸಿದ್ದಲ್ಲಿ ಅವರನ್ನು ಸಹ ಸಂಗ್ರಹ ಕಾರ್ಯದಲ್ಲಿ ಬಳಸಿಕೊಳ್ಳುವುದು ( ಕಳಸ ಭಾಗದಲ್ಲಿಯೇ ಹೆಚ್ಚು ಅನಾಹುತವಾಗಿರುವುದರಿಂದ ಅಧಿಕೃತವಾಗಿ ಈ ಕುರಿತು ಸಂಗ್ರಹ ಸಂಬಂಧ ಸಂಪರ್ಕಿಸಿಲ್ಲ) 5.ಸಂಗ್ರಹ ಕಾರ್ಯಕ್ಕೆ ಈ ತಿಂಗಳ 30 ನೇ ತಾರೀಖಿಗೆ ಕೊನೆಯ ದಿನವೆಂದು ನಿಗಧಿಪಡಿಸಿದೆ ಹಾಗೂ ಸೆಪ್ಟೆಂಬರ್ 1 ರಂದು ಸಂಗ್ರಹವಾದ ಹಣ ಹಾಗೂ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವುದು. 6.ಮೇಲೆ ತಿಳಿಸಲಾದ ವ್ಯಕ್ತಿಗಳಿಗೆ ನಗದು ಅಥವಾ ವಸ್ತುಗಳನ್ನು ನೀಡಬಹುದು, ನೆರವು ನೀಡಿದವರ ಸಂಪೂರ್ಣ ವಿವರ ವಿಳಾಸಗಳನ್ನು ಪಡೆದುಕೊಂಡು ಗ್ರೂಪಿನಲ್ಲಿ ನಿಗಧಿತ ಸಮಯಗಳಲ್ಲಿ ಪ್ರಕಟಿಸಲಾಗುವುದು. 7.ಹಣವನ್ನು ಬ್ಯಾಂಕ್ ಟ್ರಾನ್ಸ್ಫರ್ ಅಥವಾ google pay ಮೂಲಕ ಪಾವತಿಸುವವರು ಈ ಕೆಳಕಂಡವರ ಖಾತೆಗೆ ಪಾವತಿಸಬಹುದಾಗಿದೆ. a) ಜಯಚಂದ್ರ ಕೆ ಸಿ ಕುಳುಗಾರು ಇವರ ಬ್ಯಾಂಕ್ ಖಾತೆ ಸಂಖ್ಯೆ 54062157562. SBI Jayapura Branch.. IFSC CODE : SBIN0041020. (ಇತರೆ ಯಾರಾದರೂ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದಲ್ಲಿ ಅಂತಹ ಆಸಕ್ತರನ್ನು ಬಳಸಿಕೊಳ್ಳುವುದು) 8.ಎಲ್ಲಾ ಮುಲಗಳಿಂದಲೂ ಸಂಗ್ರಹವಾದ ಹಣ ಹಾಗೂ ದಿನಬಳಕೆಯ ವಸ್ತುಗಳನ್ನು ಒಂದು ಕಡೆ ಸಂಗ್ರಹಿಸಿ, ಗ್ರೂಪಿನಲ್ಲಿ ಮತ್ತೊಮ್ಮೆ ಈ ಕುರಿತು ನೆರವು ನೀಡಿದವರ ವಿವರ ಹಾಗೂ ಸಂಗ್ರಹವಾದ ಹಣ ಹಾಗೂ ಇತರೆ ವಿವರಗಳನ್ನು ಪ್ರಚುರಪಡಿಸಿ, ಪೂರ್ಣ ನೆರವನ್ನು ನಮ್ಮವರೆಲ್ಲರ ಪರವಾಗಿ ಖುದ್ದು ತೀವ್ರ ಸಂಕಷ್ಟದಲ್ಲಿರುವ ನಮ್ಮವರ ಕುಟುಂಬಗಳನ್ನು ಗುರುತಿಸಿ ನಿಗಧಿತ ದಿನಾಂಕದಂದು ತಲುಪಿಸುವುದು. 9.ಗುರುತಿಸಲಾದ ಸಂತಸ್ತರ ವಿವರಗಳನ್ನು ಹಾಗೂ ಅವರಿಗೆ ನೀಡಲಾದ ನೆರವಿನ ವಿವರಗಳನ್ನು ಹಾಗೂ ನೆರವು ನೀಡಿದ ಪ್ರತಿಯೊಬ್ಬರ ವಿವರಗಳನ್ನು ಗ್ರೂಪಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಹೀಗೆ ಹಲವು ತೀರ್ಮಾನಗಳನ್ನು ಮಾಡಲಾಗಿದ್ದು ದಯವಿಟ್ಟು ನಮ್ಮವರೆಲ್ಲರು ನಮ್ಮೊಂದಿಗೆ ಕೈಜೋಡಿಸಬೇಕಾಗಿ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಗ್ರೂಪಿನಲ್ಲಿ ಇಲ್ಲದೇ ಇರುವ ಅಥವಾ ಕರೆಂಟ್, ನೆಟ್ವರ್ಕ್ ಸಮಸ್ಯೆಯಿಂದಾಗಿ ನಮ್ಮ ಈ ಪ್ರಯತ್ನ ನಮ್ಮವರೆಲ್ಲರನ್ನು ತಲುಪಲು ಸಾಧ್ಯವಾಗದೆ ಇರುವುದರಿಂದ ದಯವಿಟ್ಟು ಗ್ರೂಪಿನಲ್ಲಿ ಸಕ್ರಿಯರಾಗಿರುವ ನಮ್ಮವರೆಲ್ಲರು ತಮ್ಮ ತಮ್ಮ ಊರುಗಳಲ್ಲಿ ಈ ಬಗ್ಗೆ ಸಹಾಯ ಮಾಡುವ ಮನಸ್ಸಿರುವ ನಮ್ಮವರಿಗೆ ಈ ವಿಷಯವನ್ನು ತಿಳಿಸಿ ನಮ್ಮೊಂದಿಗೆ ಸಹಕರಿಸಿ ಹೆಚ್ಚಿನ ನೆರವಿಗೆ ನಮ್ಮೊಂದಿಗೆ ಕೈಜೋಡಿಸಿ. ನಿಮ್ಮ ಚಿಕ್ಕ ನೆರವೂ ಅತ್ಯಮೂಲ್ಯ. ಮತ್ತೊಮ್ಮೆ ಇಲ್ಲಿ ಯಾರಿಗೂ ಯಾವುದೇ ಬಲವಂತವಿಲ್ಲ ಕಡ್ಡಾಯವಿಲ್ಲ, ಹಾಗೆ ಸ್ವಾರ್ಥ ವೈಯಕ್ತಿಕ ಹಿತಾಸಕ್ತಿ ರಾಜಕೀಯ ದುರುದ್ಧೇಶಗಳಿಲ್ಲ... ನಮ್ಮ ಉದ್ಧೇಶ ಒಂದೇ ಅದು *ನಮ್ಮಿಂದ ನಮಗಾಗಿ ನಮಗೋಸ್ಕರ.*🙏🏻🙏🏻🙏🏻 ಹೊಸ ಪ್ರಯತ್ನದ ಯಶಸ್ಸಿನ ನಿರೀಕ್ಷೆಯಲ್ಲಿ ನಮ್ಮವರು ತಂಡ🙏🏻🙏🏻🙏🏻

06/07/2019
Old is gold
25/01/2019

Old is gold

02/06/2017

Address

Mudigere
577142

Website

Alerts

Be the first to know and let us send you an email when Kudremukh posts news and promotions. Your email address will not be used for any other purpose, and you can unsubscribe at any time.

Share